Home
ಸುದ್ದಿಜಾಲ

ಬಳಕೆದಾರರಿಗೆ ವಾಯ್ಸ್‌ ಚಾಟ್‌ ಪರಿಚಯಿಸಿದ ಟೆಲಿಗ್ರಾಮ್! ಇದನ್ನು ಬಳಸುವುದು ಹೇಗೆ?

ಇತ್ತೀಚಿನ ದಿನಗಳಲ್ಲಿ ಇನ್ಸಟಂಟ್‌ ಮೆಸೇಜಿಂಗ್‌ ಅಪ್ಲಿಕೇಶನ್‌ ಟೆಲಿಗ್ರಾಮ್‌ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ವಾಟ್ಸಾಪ್‌ನ ಹೊಸ ಸೇವಾ ವಿವಾದದ ನಂತರ ಟೆಲಿಗ್ರಾಮ್‌ ಕೂಡ ಹೆಚ್ಚಿನ ಬಳಕೆದಾರರನ್ನು ಆಕರ್ಷಿಸಿದೆ. ಇದೇ ಕಾರಣಕ್ಕೆ ಹಲವು ಹೊಸ ಮಾದರಿಯ ಫಿಚರ್ಸ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ಟೆಲಿಗ್ರಾಮ್ ಚಾನೆಲ್‌ಗಳಲ್ಲಿ ವಾಯ್ಸ್‌ ಚಾಟ್‌ಗಳನ್ನು ಪ್ರಾರಂಭಿಸಿದೆ. ಇನ್ನು ಟೆಲಿಗ್ರಾಮ್‌ ಚಾನೆಲ್‌ಗಳಲ್ಲಿನ ವಾಯ್ಸ್‌ ಚಾಟ್‌ಗಳು ಭಾಗವಹಿಸುವವರಿಗೆ ಯಾವುದೇ ಮಿತಿಗಳನ್ನು ಹೊಂದಿರುವುದಿಲ್ಲ ಎಂದು ಟೆಲಿಗ್ರಾಮ್‌ ಹೇಳಿದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ತನ್ನ ಬಳಕೆದಾರರಿಗೆ ವಾಯ್ಸ್‌ ಚಾಟ್‌ಗಳನ್ನು ಪರಿಚಯಿಸಿದೆ. ಈ ಹೊಸ ಅಪ್ಡೇಟ್‌ನಲ್ಲಿ ರೆಕಾರ್ಡ್ ಮಾಡಬಹುದಾದ ವಾಯ್ಸ್‌ ಚಾಟ್‌ಗಳು, ಭಾಗವಹಿಸುವವರ ರಿಚ್‌ ಲಿಸ್ಟ್ಸ್‌, ಹ್ಯಾಂಡ್‌ ಮೆಕಾನಿಕ್ಸ್‌ ಅನ್ನು ಹೆಚ್ಚಿಸುವುದು, ಸ್ಪೀಕರ್‌ಗಳು ಮತ್ತು ಕೇಳುಗರಿಗೆ ಲಿಂಕ್‌ಗಳನ್ನು ಇನ್ವೈಟ್ ಮಾಡುವುದು, ವಾಯ್ಸ್‌ಚಾಟ್ ಶೀರ್ಷಿಕೆಗಳು ಮತ್ತು ಸಾರ್ವಜನಿಕ ವ್ಯಕ್ತಿಗಳು ತಮ್ಮ ಚಾನೆಲ್‌ಗಳಾಗಿ ಧ್ವನಿ ಚಾಟ್‌ಗಳಿಗೆ ಸೇರಲು ಒಂದು ಮಾರ್ಗವನ್ನು ಸಹ ತರುತ್ತದೆ. ಹಾಗಾದ್ರೆ ಟೆಲಿಗ್ರಾಮ್‌ ಚಾನಲ್‌ಗಳಲ್ಲಿ ವಾಯ್ಸ್‌ ಚಾಟ್‌ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೆಕಾರ್ಡೆಡ್ ಚಾಟ್ಸ್

ರೆಕಾರ್ಡೆಡ್ ಚಾಟ್ಸ್

ಟೆಲಿಗ್ರಾಮ್‌ ಪರಿಚಯಿಸಿರುವ ವಾಯ್ಸ್‌ ಚಾಟ್‌ ಫೀಚರ್ಸ್‌ಗಳಲ್ಲಿ ರೆಕಾರ್ಡೆಡ್‌ ಚಾಟ್ಸ್‌ ಕೂಡ ಒಂದು. ಇದು ಮಾತುಕತೆಗಳನ್ನು ಉಳಿಸಲು ಮತ್ತು ಲೈವ್ ಈವೆಂಟ್ ಅನ್ನು ತಪ್ಪಿಸಿಕೊಂಡ ಅನುಯಾಯಿಗಳಿಗಾಗಿ ಅಡ್ಮಿನ್‌ ವಾಯ್ಸ್‌ ಚಾಟ್‌ಗಳಿಂದ ಆಡಿಯೊವನ್ನು ರೆಕಾರ್ಡ್ ಮಾಡಬಹುದು. ನೀವು ರೆಕಾರ್ಡಿಂಗ್ ಮುಗಿಸಿದ ನಂತರ, ಸೇವ್‌ ಮಾಡಿದ ಮೆಸೇಜ್‌ಗಳಲ್ಲಿ ಆಡಿಯೊ ಫೈಲ್ ತಕ್ಷಣ ಲಭ್ಯವಾಗುತ್ತದೆ. ರೆಕಾರ್ಡ್ ಮಾಡಲಾಗುತ್ತಿರುವ ಚಾಟ್‌ಗಳನ್ನು ಕೂಡ ಸೇವ್‌ ಮಾಡಬಹುದಾಗಿದೆ.

ರೈಸ್ ಹ್ಯಾಂಡ್

ರೈಸ್ ಹ್ಯಾಂಡ್

ಇನ್ನು ಟೆಲಿಗ್ರಾಮ್‌ ನಲ್ಲಿ ವಾಯ್ಸ್‌ ಚಾಟ್‌ನಲ್ಲಿ ಭಾಗವಹಿಸುವವರನ್ನು ಮ್ಯೂಟ್ ಮಾಡಿದ ಚಾಟ್‌ಗಳಲ್ಲಿ, ಕೇಳುಗರು ಹ್ಯಾಡ್‌ ರೈಸ್‌ ಮಾಡುವಂತೆ ಟಚ್‌ ಮಾಡಬಹುದು. ಅವರು ಮಾತನಾಡಲು ಬಯಸುವ ಅಡ್ಮಿನ್‌ ಅನ್ನು ಎಚ್ಚರಿಸಬಹುದು. ಭಾಗವಹಿಸುವವರ ಪಟ್ಟಿಯಲ್ಲಿ ಬಳಕೆದಾರರ Biological text ಗೋಚರಿಸುತ್ತದೆ. ಇದನ್ನು ಪರಿಣತಿ, ಆಸಕ್ತಿಗಳು ಅಥವಾ ನಿಮ್ಮ ಬಗ್ಗೆ ಸ್ವಲ್ಪ ವಿವರಿಸಲು ಬಳಸಬಹುದು. ನಿಮ್ಮ ಪ್ರಶ್ನೆಗಳು ಅಥವಾ ಕಾಮೆಂಟ್‌ಗಳಿಗೆ ಉತ್ತಮ ಸ್ಲಾಟ್ ಹುಡುಕಲು ಈ ಮಾಹಿತಿಯು ಅಡ್ಮಿನ್‌ಗೆ ಸಹಾಯ ಮಾಡುತ್ತದೆ.

ಸ್ಪೀಕರ್ ಅಂಡ್ ಲಿಸನರ್ ಲಿಂಕ್ಸ್

ಸ್ಪೀಕರ್ ಅಂಡ್ ಲಿಸನರ್ ಲಿಂಕ್ಸ್

ಪಬ್ಲಿಕ್‌ ಗ್ರೂಪ್ಸ್‌ ಮತ್ತು ಚಾನಲ್‌ಗಳ ಅಡ್ಮಿನ್‌ ತಕ್ಷಣವೇ ವಾಯ್ಸ್‌ ಚಾಟ್ ತೆರೆಯುವ ಇನ್ವೈಟ್‌ ಲಿಂಕ್‌ಗಳನ್ನು ಕ್ರಿಯೆಟ್‌ ಮಾಡಬಹುದು. ಸ್ಪೀಕರ್‌ಗಳು ಮತ್ತು ಕೇಳುಗರಿಗೆ ಪ್ರತ್ಯೇಕ ಲಿಂಕ್‌ಗಳನ್ನು ಮಾಡಬಹುದು. ಈ ರೀತಿಯಾಗಿ ಬಳಕೆದಾರರು ಸೇರಿದಾಗ ಪ್ರಮುಖ ಗೆಸ್ಟ್‌ಗಳನ್ನು ಅನ್‌ಮ್ಯೂಟ್ ಮಾಡುವ ಅಗತ್ಯವಿಲ್ಲ. ಅಲ್ಲದೆ ಮುಂಬರುವ ಚಾಟ್ ಅನ್ನು ತಮ್ಮ ಕಮ್ಯೂನಿಟಿಗಳಿಗೆ ಉತ್ತೇಜಿಸಲು ಅವರು ಬೇರೆ ಲಿಂಕ್ ಅನ್ನು ಬಳಸಬಹುದು. ವಾಯ್ಸ್‌ ಚಾಟ್‌ಗಳು ಐಚ್ಛಿಕ ಶೀರ್ಷಿಕೆಗಳನ್ನು ಸಹ ಹೊಂದಿವೆ. ಇದು ಬಳಕೆದಾರರು ಸೇರುವ ಮೊದಲು ಸಂಭಾಷಣೆಯ ವಿಷಯವನ್ನು ನೋಡಲು ಸಹಾಯ ಮಾಡುತ್ತದೆ. ಚಾನಲ್‌ನಲ್ಲಿ ವಾಯ್ಸ್‌ ಚಾಟ್ ಅನ್ನು ನಮೂದಿಸುವಾಗ, ಬಳಕೆದಾರರು ತಮ್ಮ ವೈಯಕ್ತಿಕ ಖಾತೆಯೊಂದಿಗೆ ಸೇರಲು ಅಥವಾ ಅವರ ಚಾನಲ್‌ಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ.

ಗೆಸ್ಟರ್ಸ್‌

ಗೆಸ್ಟರ್ಸ್‌

ಇದರ ಮೂಲಕ ಚಾಟ್ ಪಟ್ಟಿಯಲ್ಲಿ ಎಡಕ್ಕೆ ಸ್ವೈಪ್ ಮಾಡಲು ಯಾವ ಕ್ರಿಯೆಯನ್ನು ನಿಯೋಜಿಸಲಾಗಿದೆ ಎಂಬುದನ್ನು ಆಂಡ್ರಾಯ್ಡ್ ಬಳಕೆದಾರರು ಆಯ್ಕೆ ಮಾಡಬಹುದು. ಚಾಟ್‌ಗಳನ್ನು ಆರ್ಕೈವ್ ಮಾಡುವುದು, ಪಿನ್ ಮಾಡುವುದು, ಮ್ಯೂಟ್ ಮಾಡುವುದು, ಡಿಲೀಟ್‌ ಮಾಡಿದಂತೆ ಅಥವಾ ಅವುಗಳನ್ನು ಓದಿದಂತೆ ಗುರುತಿಸುವುದಕ್ಕೆ ಇದು ತುಂಬಾನೆ ಸಹಾಯಕವಾಗಿದೆ.

Best Mobiles in India

English summary
telegram launches voice chat feature.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+