ಬಳಕೆದಾರರಿಗೆ ಹೊಸ ಫೀಚರ್ಸ್ ಅನ್ನು ಪರಿಚಯಿಸಿದ ಟೆಲಿಗ್ರಾಮ್ ಮೆಸೆಂಜರ್!
ವಾಟ್ಸಾಪ್‌ನ ಪ್ರತಿಸ್ಪರ್ಧಿ ಅಂತಾನೇ ಗುರುತಿಸಿಕೊಂಡಿರುವ ಟೆಲಿಗ್ರಾಮ್ ತನ್ನ ವಿಭಿನ್ನ ಫೀಚರ್ಸ್‌ಗಳಿಂದ ಬಳಕೆದಾರರ ನೆಚ್ಚಿನ ಮೆಸೇಜಿಂಗ್ ಆಪ್ ಆಗಿ ಗುರುತಿಸಿಕೊಂಡಿದೆ. ಈಗಾಗಲೇ ತನ್ನ ಬಳಕೆದಾರರಿಗೆ ವಿಶೇಷ ಫೀಚರ್ಸ್‌ಗಳನ್ನ ಪರಿಚಯಿಸಿ ವಾಟ್ಸಾಪ್‌ಗೆ ಸೆಡ್ಡು ಹೊಡೆದಿರುವ ಟೆಲಿಗ್ರಾಮ್ ತನ್ನ ಜನಪ್ರಿಯತೆಯನ್ನ ಗಳಿಸಿಕೊಂಡಿದೆ. ಇನ್ನು ಬಳಕೆದಾರರಿಗಾಗಿ ಹಂತಹಂತವಾಗಿ ಹಲವು ಫೀಚರ್ಸ್‌ಗಳನ್ನ ಪರಿಚಯಿಸುತ್ತಾ ಬಂದಿರುವ ಟೆಲಿಗ್ರಾಮ್ ಇದೀಗ ಮತ್ತೊಂದು ಹೊಸ ಫೀಚರ್ಸ್ ಅನ್ನು ಪರಿಚಯಿಸಿದೆ.

ಹೌದು, ಟೆಲಿಗ್ರಾಮ್ ತನ್ನ ಬಳಕೆದಾರರಿಗಾಗಿ ಮತ್ತೊಂದು ಹೊಸ ಅಪ್‌ಡೇಟ್ ಅನ್ನು ಮಾಡಿದ್ದು, ಸದ್ಯ ಹೊಸದಾಗಿ ವೀಡಿಯೊ ಎಡಿಟರ್ ಅನ್ನು ಪರಿಚಯಿಸಿದೆ. ಇನ್ನು ಈಗಾಗಲೇ ಟೆಲಿಗ್ರಾಮ್ ವೀಡಿಯೊ ಫೀಚರ್ಸ್ ಅನ್ನು ಪರಿಚಯಿಸಿದ್ದು, ಇದರ ಮುಂದುವರೆದ ಭಾಗವಾಗಿ ವಿಡಿಯೋ ಎಡಿಟರ್ ಅನ್ನು ನೀಡಲಾಗಿದೆ. ಈ ಫೀಚರ್ಸ್ ಡ್ರಾಯಿಂಗ್ ಮಾಡುವಾಗ ಜೂಮ್-ಇನ್ ಆಯ್ಕೆಯೊಂದಿಗೆ ಸ್ಯಾಚುರೇಶನ್, ಬ್ರೈಟ್‌ನೆಸ್ ಮುಂತಾದ ವೀಡಿಯೊಗಳನ್ನು ಕೇವಲ ಎರಡು ಟ್ಯಾಪ್‌ಗಳಲ್ಲಿ ತಿರುಚಲು ಅನುವು ಮಾಡಿಕೊಡುತ್ತದೆ. ಅಷ್ಟಕ್ಕೂ ಈ ವಿಡಿಯೋ ಎಡಿಟರ್ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸದ್ಯ ವಾಟ್ಸಾಪ್‌ನ ಪ್ರತಿಸ್ಪರ್ಧಿ ಎಂದು ಗುರುತಿಸಿಕೊಂಡಿರುವ ಟೆಲಿಗ್ರಾಮ್ ಈಗ ವಿಡಿಯೋ ಎಡಿಟರ್ ಜೊತೆಗೆ ಎರಡು-ಹಂತದ ಪರಿಶೀಲನೆ, ಅನಿಮೇಟೆಡ್ ಸ್ಟಿಕ್ಕರ್‌ಗಳು, ಮಾತನಾಡುವ ಜಿಐಎಫ್‌ಗಳು ಮತ್ತು ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಯಾವುದೇ ಒಂದು ವಿಡಿಯೊವನ್ನ ಸಂಪಾದಿಸುವಾಗ ಬಳಕೆದಾರರು ಫೋಟೋಗಳು ಮತ್ತು ವೀಡಿಯೊಗಳಿಗೆ ಅನಿಮೇಟೆಡ್ ಸ್ಟಿಕ್ಕರ್‌ಗಳನ್ನು ಸೇರಿಸಬಹುದಾಗಿದೆ. ಅಲ್ಲದೆ ಜಿಐಎಫ್‌ಗಳಾಗಿ ಬದಲಾಗಿಸಬಹುದಾಗಿದೆ. ಜೊತೆಗೆ ಬಳಕೆದಾರ ಚಾಟ್ ಅನುಭವವನ್ನ ಉತ್ತಮಗೊಳಿಸಲಿದೆ.

ಇನ್ನು ಟೆಲಿಗ್ರಾಮ್ ಅಪ್ಲಿಕೇಶನ್ ಹೊಸ ಮಾದರಿಯ ಆಕರ್ಷಕವಾಗಿರುವ ಮಾತನಾಡುವ GIF ಗಳನ್ನು ಸಹ ಪರಿಚಯಿಸಿದೆ. ಇದಲ್ಲದೆ ಡೇಟಾ ಸುರಕ್ಷತಾ ದೃಷ್ಟಿಕೋನದಿಂದ, ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಕಂಪನಿಯು ತಮ್ಮ ಬಳಕೆದಾರರಿಗಾಗಿ ಎರಡು-ಹಂತದ ಪರಿಶೀಲನೆಯನ್ನು ಪರಿಚಯಿಸಿದೆ. ಅಲ್ಲದೆ ಈ ಎರಡು-ಹಂತದ ಪರಿಶೀಲನೆ ಭದ್ರತಾ ಲಾಕ್ ಅನ್ನು ಸಕ್ರಿಯಗೊಳಿಸಲು ಅವರು ಈಗ ‘ಗೌಪ್ಯತೆ ಮತ್ತು ಭದ್ರತೆ' ಆಯ್ಕೆಯನ್ನು ಕ್ಲಿಕ್ ಮಾಡಬಹುದಾಗಿದೆ. ಪಾಸ್‌ವಾರ್ಡ್ ಮೂಲಕ ಅನುಸರಿಸಿ ಬಳಕೆದಾರರು ಹೊಸ ಪಾಸ್‌ವಾರ್ಡ್ ಅನ್ನು ಎರಡು ಬಾರಿ ನಮೂದಿಸುವ ಮೂಲಕ ಅದನ್ನು ಹೊಂದಿಸಬೇಕಾಗಿದೆ.

ಇದಲ್ಲದೆ ಟೆಲಿಗ್ರಾಮ್ ನಿರ್ದಿಷ್ಟ ಖಾತೆಯಲ್ಲಿ ಈ ಎರಡು-ಹಂತದ ದೃಡೀಕರಣ ಪಾಸ್‌ವರ್ಡ್ ಅನ್ನು ಒಮ್ಮೆ ಸಕ್ರಿಯಗೊಳಿಸಿದ ನಂತರ, ಹೊಸ ಡಿವೈಸ್‌ನಿಂದ ಲಾಗ್-ಇನ್ ಮಾಡಲು ಪ್ರಯತ್ನಿಸುವ ಯಾರಾದರೂ ಪಾಸ್‌ವರ್ಡ್ ಅನ್ನು ತಿಳಿದುಕೊಳ್ಳಬೇಕು ಮತ್ತು ಅವರು ಒಟಿಪಿಯನ್ನು ನಮೂದಿಸಬೇಕಾಗುತ್ತದೆ. ಇನ್ನು ಟೆಲಿಗ್ರಾಮ್ ಮೆಸೆಂಜರ್ ಹೊಸ ಸಂಗ್ರಹ ಮೆಮೊರಿ ನಿರ್ವಹಣಾ ಸಾಧನವನ್ನು ಸಹ ಒದಗಿಸಿದೆ. ಇದಲ್ಲದೆ ಟೆಲಿಗ್ರಾಮ್‌ನಲ್ಲಿನ ಫೈಲ್‌ಗಳು ಎಷ್ಟು ಸಂಗ್ರಹಣೆಯನ್ನು ಬಳಸುತ್ತವೆ ಎಂಬುದನ್ನು ನೋಡಲು ಬಳಕೆದಾರರು ಸೆಟ್ಟಿಂಗ್‌ಗಳು> ಡೇಟಾ ಮತ್ತು ಸಂಗ್ರಹಣೆ> ಶೇಖರಣಾ ಬಳಕೆಗೆ ಹೋಗಬೇಕಾಗುತ್ತದೆ.


Click it and Unblock the Notifications








