Home
ಸುದ್ದಿಜಾಲ

ಟೆಲಿಗ್ರಾಮ್‌ ಸ್ಟೋರೀಸ್‌ನಲ್ಲಿ ಹೊಸ ಅಪ್ಡೇಟ್‌! ವಾಟ್ಸಾಪ್‌ಗೆ ಒಂದು ಹೆಜ್ಜೆ ಮುಂದೆ !

ಜನಪ್ರಿಯ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಟೆಲಿಗ್ರಾಮ್‌ ಕೂಡ ಒಂದಾಗಿದೆ. ವಾಟ್ಸಾಪ್‌ಗೆ ಪ್ರಬಲ ಪೈಪೋಟಿ ನೀಡುವ ಸಲುವಾಗಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸೇರ್ಪಡೆ ಮಾಡುತ್ತಾ ಬಂದಿದೆ. ಇದೀಗ ಟೆಲಿಗ್ರಾಮ್‌ ಸ್ಟೋರೀಸ್‌ನಲ್ಲಿ ಮ್ಯೂಸಿಕ್‌ ಮತ್ತು ರಿಯಾಕ್ಷನ್‌ ಸ್ಟಿಕ್ಕರ್‌ ಸೇರ್ಪಡೆ ಮಾಡುವುದಕ್ಕೆ ಅವಕಾಶ ನೀಡಿದೆ.

ಹೌದು, ಟೆಲಿಗ್ರಾಮ್‌ ಸ್ಟೋರೀಸ್‌ನಲ್ಲಿ ಹೊಸ ಆಯ್ಕೆಗಳನ್ನು ಬಿಡುಗಡೆ ಮಾಡಿದೆ. ಇದರಿಂದ ಬಳಕೆದಾರರು ಇನ್ಮುಂದೆ ಸ್ಟೋರಿಸ್‌ನಲ್ಲಿ ಮ್ಯೂಸಿಕ್‌ ಅನ್ನು ಸೇರ್ಪಡೆ ಮಾಡುವುದಕ್ಕೆ ಅನುವು ಮಾಡಿಕೊಟ್ಟಿದೆ. ಇದಲ್ಲದೆ ಬಳಕೆದಾರರು ನೇರವಾಗಿ ವ್ಯೂ ಒನ್ಸ್‌ ಮೋಡ್‌ನಲ್ಲಿ ಮೀಡಿಯಾವನ್ನು ಸೆಂಡ್‌ ಮಾಡಬಹುದಾಗಿದೆ. ಜೊತೆಗೆ ಶೇರ್‌ ಕೂಡ ಮಾಡಬಹುದು ಎಂದು ಟೆಲಿಗ್ರಾಮ್‌ ಹೇಳಿಕೊಂಡಿದೆ. ಹಾಗಾದ್ರೆ ಟೆಲಿಗ್ರಾಮ್‌ ಸೇರಿರುವ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಲಿಗ್ರಾಮ್‌ ಸ್ಟೋರೀಸ್‌ನಲ್ಲಿ ಹೊಸ ಅಪ್ಡೇಟ್‌! ವಾಟ್ಸಾಪ್‌ಗೆ ಒಂದು ಹೆಜ್ಜೆ ಮುಂದೆ

ಟೆಲಿಗ್ರಾಮ್ ಚಾನೆಲ್‌ಗಳಿಗೆ ಸ್ಟೋರಿಯನ್ನು ಪೋಸ್ಟ್‌ ಮಾಡುವ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸಿದೆ. ಕೇವಲ ವೀಡಿಯೊ ಮಾತ್ರವಲ್ಲದೆ ಮ್ಯೂಸಿಕ್‌ ಮತ್ತು ರಿಯಾಕ್ಷನ್‌ ಸ್ಟಿಕ್ಕರ್‌ಗಳನ್ನು ಕೂಡ ಶೇರ್‌ ಮಾಡುವುದಕ್ಕೆ ಅವಕಾಶ ನೀಡಿದೆ. ಇದಕ್ಕಾಗಿ ಬಳಕೆದಾರರಿಂದ ಬೂಟ್‌ಗಳನ್ನು ಸ್ವೀಕರಿಸಬೇಕಾಗುತ್ತದೆ. ಇದು ಥೇಟ್‌ ಇನ್‌ಸ್ಟಾಗ್ರಾಮ್‌ ಸ್ಟೋರೀಸ್‌ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ. ಅದರಂತೆ ಬಳಕೆದಾರರಿಗೆ 6, 12, 24 ಅಥವಾ 48 ಗಂಟೆಗಳ ಕಾಲ ಸ್ಟೋರೀಸ್‌ಗಳನ್ನು ಹಾಕಲು ಅನುಮತಿಸುತ್ತದೆ.

ಆದರೆ ಟೆಲಿಗ್ರಾಮ್‌ ಬಳಕೆದಾರರು ಮ್ಯೂಸಿಕ್‌ ಶೇರ್‌ ಮಾಡಬೇಕಾದರೆ ಪ್ರೀಮಿಯಂ ಬಳಕೆದಾರರಿಂದ ಉತ್ತೇಜನವನ್ನು ಅವಲಂಬಿಸಿರುತ್ತಾರೆ. ಅಂದರೆ ಟೆಲಿಗ್ರಾಮ್ ಪ್ರೀಮಿಯಂ ಯಾವುದೇ ಚಾನಲ್‌ಗೆ ನೀಡಬಹುದಾದ ಪ್ರತಿ ಬಳಕೆದಾರರಿಗೆ ಒಂದು ವರ್ಧಕವನ್ನು ಒದಗಿಸುತ್ತದೆ. ಚಾನಲ್ ಅಡ್ಮಿನ್‌ ದಿನಕ್ಕೆ ಹೆಚ್ಚುವರಿ ಕಥೆಯನ್ನು ಪೋಸ್ಟ್ ಮಾಡಬಹುದು. ಬಳಕೆದಾರರು ಕಥೆಗಳನ್ನು ನೋಡಲು ಬಯಸುವ ಚಾನಲ್‌ಗಳನ್ನು ನಿರ್ಧರಿಸಬಹುದಾಗಿದೆ.

ಇನ್ನು ಟೆಲಿಗ್ರಾಮ್‌ ನ ಮತ್ತೊಂದು ಹೊಸ ಅಪ್ಡೇಟ್‌ ಎಂದರೆ ಅದು ಸ್ಟೋರಿಸ್‌ಗೆ ರಿಯಾಕ್ಷನ್‌ ಸ್ಟಿಕ್ಕರ್‌ಗಳು. ಅಲ್ಲದೆ ಮ್ಯೂಸಿಕ್‌ ಅನ್ನು ಸೇರಿಸುವ ಆಯ್ಕೆ ನೀಡಿರುವುದು. ಇದರಿಂದ ಬಳಕೆದಾರರು ಚಾನೆಲ್‌ಗಳಲ್ಲಿ ರಿಯಾಕ್ಷನ್‌ ಸ್ಟಿಕ್ಕರ್‌ಗಳನ್ನು ಹಾಕಬಹುದು. ಹಾಗೆಯೇ ವೀಕ್ಷಕರು ಸಿಂಗಲ್‌ ಟ್ಯಾಪ್‌ನಲ್ಲಿ ಅವುಗಳಿಗೆ ಪ್ರತಿಕ್ರಿಯಿಸಬಹುದು. ರಿಯಾಕ್ಷನ್‌ ಸ್ಟಿಕ್ಕರ್ ಅನ್ನು ಸೇರಿಸಲು, ಬಳಕೆದಾರರು ಸ್ಟಿಕ್ಕರ್ ಪ್ಯಾನೆಲ್‌ನಲ್ಲಿರುವ ಐಕಾನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇದರಲ್ಲಿ ಲಭ್ಯವಿರುವ ಆಯ್ಕೆಗಳಿಂದ ಯಾವುದೇ ಎಮೋಜಿಯನ್ನು ಆಯ್ಕೆ ಮಾಡಬಹುದಾಗಿದೆ.

ಟೆಲಿಗ್ರಾಮ್‌ ಪ್ರೀಮಿಯಂ ಬಳಕೆದಾರರು ಪ್ರತಿ ಸ್ಟೋರಿಗೆ 5 ರಿಯಾಕ್ಷನ್‌ ಸ್ಟಿಕ್ಕರ್‌ಗಳನ್ನು ಸೇರಿಸಬಹುದಾಗಿದೆ. ಆದರೆ ಇತರ ಬಳಕೆದಾರರಿಗೆ ಪ್ರತಿ ಕಥೆಗೆ ಒಂದು ರಿಯಾಕ್ಷನ್‌ ಸ್ಟಿಕ್ಕರ್ ಅನ್ನು ಮಾತ್ರ ಅನುಮತಿಸಲಾಗುತ್ತದೆ. ಇನ್ನು ಬಳಕೆದಾರರು ಆಡಿಯೋ > ಫೈಲ್ ಆಯ್ಕೆ ಮಾಡಿ > ಟ್ರ್ಯಾಕ್ ಅನ್ನು ಹೊಂದಿಸಿ ಹೋಗುವ ಮೂಲಕ ತಮ್ಮ ಸ್ಟೋರಿಗಳಿಗೆ ಮ್ಯೂಸಿಕ್‌ ಅನ್ನು ಆಡ್‌ ಮಾಡಬಹುದಾಗಿದೆ. ಇದಕ್ಕಾಗಿ ಅವರು ಮೂಲ ಆಡಿಯೊವನ್ನು ಇರಿಸಿಕೊಳ್ಳಲು ಸಹ ಆಯ್ಕೆ ಮಾಡಬಹುದು.

ಇದಲ್ಲದೆ ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್‌ನಂತೆಯೇ ಟೆಲಿಗ್ರಾಮ್‌ನಲ್ಲಿ ಕೂಡ ಇದೀಗ ವ್ಯೂ-ಒನ್ಸ್ ಮೋಡ್‌ನೊಂದಿಗೆ ಮೀಡಿಯಾ ಫೈಲ್‌ ಸೆಂಡ್‌ ಮಾಡಬಹುದು. ಅಲ್ಲದೆ ವ್ಯೂ ಇನ್ಸ್‌ ಮೋಡ್‌ ಅನ್ನು 30-ಸೆಕೆಂಡ್ ಡಿಸ್‌ಪ್ಲೇ ಮೋಡ್ ನಡುವೆ ಬದಲಾಯಿಸಬಹುದಾಗಿದೆ. ವ್ಯೂ ಒನ್ಸ್‌-ಒನ್ಸ್‌ ಮೋಡ್ ತೆರೆದ ನಂತರ ಮೀಡಿಯಾ ಫೈಲ್ ಅನ್ನು ಶಾಶ್ವತವಾಗಿ ಡಿಲೀಟ್‌ ಮಾಡಲಿದೆ. ವೀಕ್ಷಕರು ಅದನ್ನು ಉಳಿಸಲು ಅಥವಾ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳುವುದಕ್ಕೆ ಕೂಡ ಸಾಧ್ಯವಾಗುವುದಿಲ್ಲ.

ಇನ್ನು ಟೆಲಿಗ್ರಾಮ್ ಬಳಕೆದಾರರು ಹೊಸ ಡಿವೈಸ್‌ನಿಂದ ಲಾಗ್ ಇನ್ ಮಾಡಿದಾಗಲೆಲ್ಲಾ ಅವರಿಗೆ ಲಾಗಿನ್ ಎಚ್ಚರಿಕೆಯನ್ನು ಕಳುಹಿಸುತ್ತದೆ. ಇದರಿಂದ ಬಳಕೆದಾರರು ತಮ್ಮದಲ್ಲದ ಡಿವೈಸ್‌ನಲ್ಲಿ ಬೇರೆಯವರು ತಮ್ಮ ಟೆಲಿಗ್ರಾಮ್‌ ಅಕೌಂಟ್‌ ಬಳಸುವುದಕ್ಕೆ ಪ್ರಯತ್ನಿಸುತ್ತಿದ್ದರೆ ಅದರ ಬಗ್ಗೆ ಎಚ್ಚರಿಕೆ ವಹಿಸುವುದಕ್ಕೆ ಸಾಧ್ಯವಾಗಲಿದೆ.

Best Mobiles in India

English summary
Telegram Now allowing users to add music and reaction stickers to the stories
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+