ಹೊಸ ಅಪ್ಡೇಟ್‌ನಲ್ಲಿ ಅಚ್ಚರಿಯ ಫೀಚರ್ಸ್‌ಗಳನ್ನು ಅನಾವರಣ ಮಾಡಿದ ಟೆಲಿಗ್ರಾಮ್‌!

|

ಪ್ರಸ್ತುತ ದಿನಗಳಲ್ಲಿ ಟೆಲಿಗ್ರಾಮ್‌ ಅಪ್ಲಿಕೇಶನ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಒಂದೆನಿಸಿಕೊಂಡಿದೆ. ವಾಟ್ಸಾಪ್‌ಗೆ ಪ್ರಬಲವಾಗಿ ಪೈಪೋಟಿ ನೀಡುವ ಸಲುವಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಟೆಲಿಗ್ರಾಮ್‌ ಅಪ್ಲಿಕೇಶನ್‌ ಬಳಕೆದಾರರ ಅನುಕೂಲಕ್ಕಾಗಿ ಕಾಲಕ್ಕೆ ಅನುಗುಣವಾಗಿ ಅನೇಕ ಅಪ್ಡೇಟ್‌ಗಳನ್ನು ನೀಡುತ್ತಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ ನಲ್ಲಿ ಹೊಸ ಅಪ್ಡೇಟ್‌ ಮಾಡಿದೆ. ಈ ಅಪ್ಡೇಟ್‌ನಲ್ಲಿ ಹಲವು ಆಕರ್ಷಕ ಫೀಚರ್ಸ್‌ಗಳು ಟೆಲಿಗ್ರಾಮ್‌ ಪ್ಲಾಟ್‌ಫಾರ್ಮ್‌ ಸೇರಿವೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ಅಪ್ಲಿಕೇಶನ್‌ ಹೊಸ ಅಪ್ಡೇಟ್‌ನಲ್ಲಿ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಡೌನ್‌ಲೋಡ್ ಮ್ಯಾನೇಜರ್, ನ್ಯೂ ಅಟ್ಯಾಚಮೆಂಟ್‌ ಮೆನು, ರಿ ಡಿಸೈನ್ಡ್‌ ಲಾಗಿನ್ ಫ್ಲೋ, ಇತರ ಅಪ್ಲಿಕೇಶನ್‌ಗಳ ಮೂಲಕ ಲೈವ್ ಪ್ರಸಾರಗಳಿಗೆ ಬೆಂಬಲ ಸೇರಿದಂತೆ ಅನೇಕ ಫೀಚರ್ಸ್‌ಗಳು ಸೇರ್ಪಡೆಯಾಗಿವೆ. ಇನ್ನು ಈ ಹೊಸ ಫೀಚರ್ಸ್‌ಗಳ ಮೂಲಕ ಟೆಲಿಗ್ರಾಮ್‌ ಬಳಕೆದಾರರಿಗೆ ಹೊಸ ಅನುಭವ ನೀಡಲು ಮುಂದಾಗಿದೆ. ಹಾಗಾದ್ರೆ ಟೆಲಿಗ್ರಾಮ್‌ ಅಪ್ಲಿಕೇಶನ್‌ ಸೇರಿದ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡೌನ್‌ಲೋಡ್ ಮ್ಯಾನೇಜರ್

ಡೌನ್‌ಲೋಡ್ ಮ್ಯಾನೇಜರ್

ಟೆಲಿಗ್ರಾಮ್ ಈಗಾಗಲೇ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರಿಗೆ ಯಾವುದೇ ಡಿವೈಸ್‌ನಿಂದ 2GB ವರೆಗಿನ ಸ್ಟೋರೇಜ್‌ ಸ್ಪೇಸ್‌ ಫೈಲ್‌ಗಳನ್ನು ಶೇರ್‌ ಮಾಡಲು ಅನುವು ಮಾಡಿಕೊಟ್ಟಿದೆ. ಫೈಲ್‌ಗಳು ಡೌನ್‌ಲೋಡ್ ಆಗುವಾಗ ಬಳಕೆದಾರರು ಈಗ ಸರ್ಚ್‌ ಬಾರ್‌ನಲ್ಲಿ ಹೊಸ ಐಕಾನ್ ಕಾಣಬಹುದಾಗಿದೆ. ಈ ಐಕಾನ್ ಬಳಕೆದಾರರಿಗೆ ಡೌನ್‌ಲೋಡ್ ಮ್ಯಾನೇಜರ್‌ಗೆ ಪ್ರವೇಶವನ್ನು ನೀಡುತ್ತದೆ. ಇದರ ಮೂಲಕ ಡೌನ್‌ಲೋಡ್ ಆಗುತ್ತಿರುವ ಎಲ್ಲಾ ಫೈಲ್‌ಗಳನ್ನು ವೀಕ್ಷಿಸಲು ಸಾಧ್ಯವಾಗಲಿದೆ. ಆದರೆ ಬಳಕೆದಾರರು ಪ್ರತಿ ಫೈಲ್‌ನ ಡೌನ್‌ಲೋಡ್‌ನ ಪ್ರಗತಿಯನ್ನು ನೋಡುವುದಿಲ್ಲ. ಬದಲಿದೆ ಅವರು ಇತರ ವಿಷಯಗಳ ನಡುವೆ ಡೌನ್‌ಲೋಡ್ ಮಾಡಲು ಬಯಸುವ ಫೈಲ್‌ಗೆ ಆದ್ಯತೆ ನೀಡಲು ಸಾಧ್ಯವಾಗುತ್ತದೆ.

ನ್ಯೂ ಅಟ್ಯಾಚ್‌ಮೆಂಟ್‌ ಮೆನು

ನ್ಯೂ ಅಟ್ಯಾಚ್‌ಮೆಂಟ್‌ ಮೆನು

ಇನ್ನು ಟೆಲಿಗ್ರಾಮ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ನ್ಯೂ ಮೆನು ಪರಿಚಯಿಸಿದೆ. ಇದರಿಂದ ಬಳಕೆದಾರರು ಮಲ್ಟಿ ಫೈಲ್‌ಗಳನ್ನು ಸುಲಭವಾಗಿ ಆಯ್ಕೆ ಮಾಡಲು ಮತ್ತು ಶೇರ್‌ ಮಾಡಲು ಅನುವು ಮಾಡಿಕೊಡಲಿದೆ. ಚಾಟ್‌ನಲ್ಲಿರುವ ಆಲ್ಬಮ್ ಅನ್ನು ಕಳುಹಿಸಿದಾಗ ಅದು ಹೇಗೆ ಕಾಣುತ್ತದೆ ಎಂಬುದನ್ನು ಪ್ರಿವ್ಯೂ ಮಾಡುವುದಕ್ಕೆ ಪ್ಯಾನೆಲ್‌ನ ಮೇಲ್ಭಾಗದಲ್ಲಿ '... ಆಯ್ಕೆ' ಟ್ಯಾಪ್ ಮಾಡುವ ಮೂಲಕ ಮೆನುವನ್ನು ಪ್ರವೇಶಿಸಬಹುದು. ಇಲ್ಲಿ ಬಳಕೆದಾರರು ಆಯ್ಕೆಮಾಡಿದ ಮೀಡಿಯಾವನ್ನು ಸರಿ ಪಡಿಸಲು ಅಥವಾ ತೆಗೆದುಹಾಕಲು ಅವಕಾಶ ಸಿಗಲಿದೆ. ಅಪ್ಡೇಟ್‌ ಫೈಲ್‌ಗಳ ಟ್ಯಾಬ್ ಇತ್ತೀಚೆಗೆ ಸೆಂಡ್‌ ಮಾಡಿದ ಫೈಲ್‌ಗಳನ್ನು ಸಹ ತೋರಿಸುತ್ತದೆ. ಇದರಿಂದ ಬಳಕೆದಾರರು ತಾವು ಸೆಂಡ್‌ ಮಾಡಿರುವ ಫೈಲ್‌ಗಳನ್ನು ಸರ್ಚ್‌ ಮಾಡುವುದಕ್ಕೆ ಅವಕಾಶ ಸಿಗಲಿದೆ.

ರಿ ಡಿಸೈನ್‌ ಲಾಗಿನ್ ಫ್ಲೋ

ರಿ ಡಿಸೈನ್‌ ಲಾಗಿನ್ ಫ್ಲೋ

ಟೆಲಿಗ್ರಾಮ್‌ ತನ್ನ ಆಂಡ್ರಾಯ್ಡ್‌ ಮತ್ತು ಮ್ಯಾಕ್‌OS ಆಧಾರಿತ ಅಪ್ಲಿಕೇಶನ್‌ಗಾಗಿ ಲಾಗಿನ್ ಫ್ಲೋವನ್ನು ರಿ ಡಿಸೈನ್‌ ಮಾಡಿದೆ. ಇದರಲ್ಲಿ ಬಳಕೆದಾರರ ಲಾಗಿನ್ ಕೋಡ್‌ನಿಂದ ಅಂಕೆಗಳು ಆಂಡ್ರಾಯ್ಡ್‌ನಲ್ಲಿ ಸ್ಥಳಾಂತರಗೊಳ್ಳುತ್ತವೆ ಎಂದು ತೋರಿಸುತ್ತದೆ. MacOS ನಲ್ಲಿ, ಮ್ಯಾಟ್ರಿಕ್ಸ್ ಕೋಡ್ QR ಕೋಡ್ ಲಾಗಿನ್ ಸ್ಕ್ರೀನ್‌ನಲ್ಲಿ ಬೀಳುತ್ತದೆ ಎಂದು ಹೇಳಲಾಗಿದೆ.

ಫೋನ್ ನಂಬರ್‌ ಲಿಂಕ್ಸ್‌

ಫೋನ್ ನಂಬರ್‌ ಲಿಂಕ್ಸ್‌

ಇದಲ್ಲದೆ, ಈಗ ಬಳಕೆದಾರರು ತಮ್ಮ ಪ್ರೊಫೈಲ್‌ಗಳಿಗೆ ಸೆಟ್ಟಿಂಗ್ಸ್‌ ಪೇಜ್‌ ಮೂಲಕ ಯೂನಿಕ್‌ ನೇಮ್‌ ಕ್ರಿಯೆಟ್‌ ಮಾಡಲು ಸಾಧ್ಯವಾಗುತ್ತದೆ. ಈ ಯೂನಿಕ್‌ ಯೂಸರ್‌ ನೇಮ್‌ ಅನ್ನು ಪ್ಲಾಟ್‌ಫಾರ್ಮ್‌ನಲ್ಲಿರುವ ಇತರ ಜನರು ತಮ್ಮ ಫೋನ್ ಸಂಖ್ಯೆಗಳನ್ನು ಶೇರ್‌ ಮಾಡದೆ, ಸರ್ಚ್‌ ಅಥವಾ ಅವರ ‘t.me/username' ಮೂಲಕ ಸಂಪರ್ಕಿಸಲು ಬಳಸಬಹುದು. ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳು ನಿಮ್ಮ ಫೋನ್ ಸಂಖ್ಯೆಯ ಮೂಲಕ ನಿಮ್ಮನ್ನು ಹುಡುಕಲು ಇತರರಿಗೆ ಅವಕಾಶ ನೀಡಿದರೆ ಮಾತ್ರ ಲಿಂಕ್ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ.

ಇತರ ಅಪ್ಲಿಕೇಶನ್‌ಗಳೊಂದಿಗೆ ಲೈವ್ ಸ್ಟ್ರೀಮಿಂಗ್

ಇತರ ಅಪ್ಲಿಕೇಶನ್‌ಗಳೊಂದಿಗೆ ಲೈವ್ ಸ್ಟ್ರೀಮಿಂಗ್

ಟೆಲಿಗ್ರಾಮ್ ಈಗಾಗಲೇ ಅನಿಯಮಿತ ಜನರೊಂದಿಗೆ ಲೈವ್ ಸ್ಟ್ರೀಮಿಂಗ್ ಅನ್ನು ಬೆಂಬಲಿಸುತ್ತದೆ. ಇದೀಗ ಹೊಸ ಅಪ್ಡೇಟ್‌ನಲ್ಲಿ ಬಳಕೆದಾರರು OBS ಸ್ಟುಡಿಯೋ ಮತ್ತು XSplit ಬ್ರಾಡ್‌ಕಾಸ್ಟರ್‌ನಂತಹ ಸ್ಟ್ರೀಮಿಂಗ್ ಪರಿಕರಗಳಿಂದ ಬ್ರಾಡ್‌ಕಾಸ್ಟ್‌ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ ಓವರ್‌ಲೇಗಳು ಮತ್ತು ಮಲ್ಟಿ-ಸ್ಕ್ರೀನ್ ಲೇಔಟ್‌ಗಳನ್ನು ಸುಲಭವಾಗಿ ಸೇರಿಸಬಹುದಾಗಿದೆ. ಈ ಫೀಚರ್ಸ್‌ ಅನ್ನು ಬಳಸಲು, ಬಳಕೆದಾರರು 'ಸ್ಟಾರ್ಟ್ ವಿತ್' ಬಟನ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ. ಇದರಲ್ಲಿ ಕಂಡುಬರುವ ಮಾಹಿತಿಯನ್ನು ತಮ್ಮ ಸ್ಟ್ರೀಮಿಂಗ್ ಟೂಲ್‌ಗೆ ನಮೂದಿಸಬೇಕು ಎಂದು ಹೇಳಲಾಗಿದೆ.

Best Mobiles in India

Read more about:
English summary
Telegram now supports download manager and a new attachment menu

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X