ವಾಟ್ಸಾಪ್‌ನಲ್ಲೂ ಇಲ್ಲದ ಈ ಫೀಚರ್ಸ್‌ ಇದೀಗ ಟೆಲಿಗ್ರಾಮ್‌ನಲ್ಲಿ ಲಭ್ಯವಿದೆ!

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಟೆಲಿಗ್ರಾಮ್‌ ಹೊಸ ವರ್ಷಕ್ಕೂ ಮುನ್ನ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಅಪ್ಡೇಟ್‌ ಅನ್ನು ತಂದಿದೆ. ಹೊಸ ಅಪ್ಡೇಟ್‌ ಮೂಲಕ ಹೊಸ ವರ್ಷಕ್ಕೆ ತನ್ನ ಬಳಕೆದಾರರಿಗೆ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇನ್ನು ಈ ಹೊಸ ಫೀಚರ್ಸ್‌ಗಳಲ್ಲಿ ಹಲವು ಅಚ್ಚರಿಯ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಸದ್ಯ ಟೆಲಿಗ್ರಾಮ್‌ ಸೇರಿರುವ ಹೊಸ ಫೀಚರ್ಸ್‌ಗಳಲ್ಲಿ ರಿಯಾಕ್ಟ್‌ ಎಮೋಜಿ ಫೀಚರ್ಸ್‌ ಸಾಕಷ್ಟು ಆಸಕ್ತಿದಾಯಕವಾಗಿದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ಅಪ್ಲಿಕೇಶನ್ 2021ರ ಕೊನೆಯ ದಿನವಾದ ಇಂದು ಹಲವು ಆಸಕ್ತಿದಾಯಕ ಫೀಚರ್ಸ್‌ಗಳನ್ನು ಹೊರತಂದಿದೆ. ಇದರಲ್ಲಿ ಸ್ಪಾಯ್ಲರ್‌, ಮೆಸೇಜ್‌ ಟ್ರಾನ್ಸಲೇಶನ್‌ ಫೀಚರ್ಸ್‌ ಪ್ರಮುಖವಾಗಿದೆ. ಇದರಿಂದ ಟೆಲಿಗ್ರಾಮ್‌ನಲ್ಲಿ ಸಂದೇಶ ಕಳುಹಿಸುವ ನಿಮ್ಮ ಅನುಭವ ಇನ್ನಷ್ಟು ಉತ್ತಮವಾಗಿರಲಿದೆ ಎಂದು ಟೆಲಿಗ್ರಾಮ್‌ ಹೇಳಿದೆ. ಅದರಲ್ಲೂ ಮೆಸೇಜ್‌ ಟ್ರಾನ್ಸಲೇಶನ್‌ ಫೀಚರ್ಸ್‌ ವಾಟ್ಸಾಪ್, ಸಿಗ್ನಲ್ ಸೇರಿದಂತೆ ಯಾವುದೇ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲೂ ಲಭ್ಯವಿಲ್ಲ. ಹಾಗಾದ್ರೆ ಟೆಲಿಗ್ರಾಮ್‌ ಪರಿಚಯಿಸಿರುವ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೆಸೇಜ್‌ ರಿಯಾಕ್ಷನ್ಸ್‌

ಮೆಸೇಜ್‌ ರಿಯಾಕ್ಷನ್ಸ್‌

ಟೆಲಿಗ್ರಾಮ್ ಬಳಕೆದಾರರು ಈಗ ಸಂದೇಶಗಳಿಗೆ ಎಮೋಜಿಗಳ ಮೂಲಕ ರಿಯಾಕ್ಟ್‌ ಮಾಡಲು ಅವಕಾಶ ನೀಡಲಾಗಿದೆ. ಈ ಫೀಚರ್ಸ್‌ ಈಗಾಗಲೇ ಐಮೆಸೇಜ್‌, ಫೇಸ್‌ಬುಕ್‌ ಮೆಸೆಂಜರ್‌, ಇನ್‌ಸ್ಟಾಗ್ರಾಮ್‌ನಲ್ಲಿ ಲಭ್ಯವಿದೆ. ಇದೀಗ ಟೆಲಿಗ್ರಾಮ್‌ ಕೂಡ ತನ್ನ ಬಳಕೆದಾರರಿಗೆ ರಿಯಾಕ್ಟ್‌ ಎಮೋಜಿ ಫೀಚರ್ಸ್‌ ಪರಿಚಯಿಸಿದೆ. ಈ ಮೂಲಕ ಟೆಲಿಗ್ರಾಮ್ ಅನಿಮೇಟೆಡ್ ಮತ್ತು ಇಂಟರ್‌ ಆಕ್ಟಿವ್‌ ಎಮೋಜಿಗಳನ್ನು ಪರಿಚಯಿಸಿರುವ ಮೊದಲ ಮೆಸೇಜಿಂಗ್‌ ಅಪ್ಲಿಕೇಶನ್ ಎನಿಸಿಕೊಂಡಿದೆ. ಇನ್ಮುಂದೆ ಎಮೋಜಿಯನ್ನು ಬಳಸಿಕೊಂಡು ಮೆಸೇಜ್‌ಗಳಿಗೆ ರಿಯಾಕ್ಟ್‌ ಮಾಡಬಹುದು. ಥಂಬ್ಸ್‌ ಆಪ್‌ ರಿಯಾಕ್ಟ್‌ ಅನ್ನು ಸಹ ಕಳುಹಿಸಬಹುದು. ಇದಕ್ಕಾಗಿ ನೀವು ಸಂದೇಶ ಕಳುಹಿಸಲು ಬಯಸುವ ಎಮೋಜಿಗಳನ್ನು ಪಟ್ಟಿಯಿಂದ ಆಯ್ಕೆ ಮಾಡಬಹುದಾಗಿದೆ.

ಸ್ಪಾಯ್ಲರ್

ಸ್ಪಾಯ್ಲರ್

ಇನ್ನು ಸ್ಪಾಯ್ಲರ್‌ ಫೀಚರ್ಸ್‌ ಬಳಸಿಕೊಂಡು ಬಳಕೆದಾರರು ಟೈಪ್‌ ಮಾಡುವಾಗ ಯಾವುದೇ ಟೆಕ್ಸ್ಟ್‌ ಭಾಗವನ್ನು ಹೈಡ್‌ ಮಾಡುವ ಆಯ್ಕೆ ನೀಡಲಾಗಿದೆ. ಅಂದರೆ ಇದರಲ್ಲಿ ನೀವು ಹೊಸ 'ಸ್ಪಾಯ್ಲರ್' ಫಾರ್ಮ್ಯಾಟಿಂಗ್ ಅನ್ನು ಆಯ್ಕೆ ಮಾಡಬಹುದು. ನೀವು ಸ್ಪಾಯ್ಲರ್ ಆಯ್ಕೆಯನ್ನು ಆರಿಸಿದಾಗ, ಸಂದೇಶದ ಆಯ್ದ ಭಾಗವನ್ನು ಚಾಟ್‌ನಲ್ಲಿ, ಹಾಗೆಯೇ ಚಾಟ್ ಪಟ್ಟಿ ಮತ್ತು ಅಧಿಸೂಚನೆಗಳಲ್ಲಿ ಹೈಡ್‌ ಮಾಡಬಹುದು.

ಮೆಸೇಜ್‌ ಟ್ರಾನ್ಸಲೇಶನ್‌

ಮೆಸೇಜ್‌ ಟ್ರಾನ್ಸಲೇಶನ್‌

ಇನ್ನು ಟೆಲಿಗ್ರಾಮ್‌ ಪ್ಲಾಟ್‌ಫಾರ್ಮ್‌ ಸೇರಿರುವ ಪ್ರಮುಖ ಫೀಚರ್ಸ್‌ಗಳಲ್ಲಿ ಮೆಸೇಜ್‌ ರಿಯಾಕ್ಷನ್‌ ಫೀಚರ್ಸ್‌ ಕೂಡ ಒಂದಾಗಿದೆ. ಇದರ ಮೂಲಕ ನೀವು ಯಾವುದೇ ಸಂದೇಶವನ್ನು ಟೆಲಿಗ್ರಾಮ್‌ನಲ್ಲಿ ಬೇರೆ ಭಾಷೆಗೆ ಅನುವಾದ ಮಾಡಬಹುದು. ಇದರಿಂದ ನಿಮಗೆ ತಿಳಿದಿಲ್ಲದ ಭಾಷೆಯ ಸಂದೇಶವನ್ನು ನಿಮ್ಮ ಭಾಷೆಯಲ್ಲಿ ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿದೆ. ಇದಕ್ಕಾಗಿ ನೀವು ಟೆಲಿಗ್ರಾಮ್‌ ಸೆಟ್ಟಿಂಗ್ಸ್‌>ಭಾಷೆಗಳಲ್ಲಿ ಅನುವಾದವನ್ನು ಸಕ್ರಿಯಗೊಳಿಸಬಹುದು. ಸಂದೇಶವನ್ನು ಆಯ್ಕೆಮಾಡುವಾಗ ಸಂದರ್ಭ ಮೆನುಗೆ ಹೊಸ ಅನುವಾದ ಬಟನ್ ಅನ್ನು ಸೇರಿಸಲಾಗುತ್ತದೆ. ಬಳಕೆದಾರರು ನಿರರ್ಗಳವಾಗಿ ಮಾತನಾಡುವ ಯಾವುದೇ ಭಾಷೆಗಳನ್ನು ಸಹ ಹೊರಗಿಡಬಹುದು ಅದು ಆ ಸಂದೇಶಗಳಿಗೆ ಅನುವಾದ ಬಟನ್ ಅನ್ನು ಹೈಡ್‌ಮಾಡುತ್ತದೆ. ಟೆಲಿಗ್ರಾಮ್ ಅನ್ನು ಬೆಂಬಲಿಸುವ ಎಲ್ಲಾ ಆಂಡ್ರಾಯ್ಡ್‌ ಸಾಧನಗಳಲ್ಲಿ ಅನುವಾದ ಲಭ್ಯವಿದೆ. ಲಭ್ಯವಿರುವ ಭಾಷೆಗಳ ಪಟ್ಟಿಯು ನಿಮ್ಮ ಫೋನ್‌ನ ಆಪರೇಟಿಂಗ್ ಸಿಸ್ಟಮ್ ಅನ್ನು ಅವಲಂಬಿಸಿರುತ್ತದೆ.

ಟೆಲಿಗ್ರಾಮ್‌

ಇದಲ್ಲದೆ ಟೆಲಿಗ್ರಾಮ್‌ ಈ ಹಿಂದಿನ ಅಪ್‌ಡೇಟ್‌ನಲ್ಲಿ ಪರಿಚಯಿಸಿದ್ದ ಎಂಟು ಹೊಸ ಚಾಟ್ ಥೀಮ್‌ಗಳು ಈಗ iOS ಡಿವೈಸ್‌ನಲ್ಲಿಯೂ ಕೂಡ ಲಭ್ಯವಾಗಲಿದೆ. ಪ್ರತಿಯೊಂದು ಹೊಸ ಥೀಮ್ಸ್‌ ಡೇ ಮತ್ತು ನೈಟ್ ಮೋಡ್, ಅನಿಮೇಟೆಡ್ ಬ್ಯಾಕ್‌ಗ್ರೌಂಡ್‌ ಮತ್ತು ಗ್ರೇಡಿಯಂಟ್ ಮೆಸೇಜ್‌ ಬಬಲ್ಸ್‌ ಅನ್ನು ಕಾಣಬಹುದಾಗಿದೆ. ಇದು ಶೀಘ್ರದಲ್ಲೇ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಇನ್ನು ಚಾಟ್‌ನಲ್ಲಿ ಹಂಚಿಕೊಂಡ ಸ್ಥಳವನ್ನು ಟ್ಯಾಪ್ ಮಾಡುವ ಮೂಲಕ, ಬಳಕೆದಾರರು ಕಾಲ್ನಡಿಗೆ, ಕಾರು ಅಥವಾ ಸಾರ್ವಜನಿಕ ಸಾರಿಗೆಯ ಮೂಲಕ ಅಲ್ಲಿಗೆ ಹೋಗಲು ಎಷ್ಟು ಸಮಯ ಹಿಡಿಯಲಿದೆ ಅನ್ನೊದನ್ನ ಸಹ ತಿಳಿಯಬಹುದಾಗಿದೆ.

ಟೆಲಿಗ್ರಾಮ್‌

ಇನ್ನು ಟೆಲಿಗ್ರಾಮ್‌ನ ಹೊಸ ಅಪ್‌ಡೇಟ್‌ನಲ್ಲಿ ಬಳಕೆದಾರರು ಮೀಡಿಯಾ ಫೈಲ್‌ ಅನ್ನು ಸೆಂಡ್‌ ಮಾಡಿದಾಗ ಮೆಸೇಜ್‌ ಬಾರ್‌ನಲ್ಲಿ ಟೈಪ್‌ ಮಾಡಿದ ಟೆಕ್ಸ್ಟ್ ಅನ್ನು ಕ್ಯಾಪ್ಶನ್‌ಗೆ ಕನ್ವರ್ಟ್‌ ಮಾಡಲಿದೆ. ಇದರಲ್ಲಿರುವ ಕ್ಲೌಡ್ ಡ್ರಾಫ್ಟ್‌ಗಳು ಬಳಕೆದಾರರಿಗೆ ಕಂಪ್ಯೂಟರ್‌ನಲ್ಲಿ ಸಂದೇಶವನ್ನು ಟೈಪ್ ಮಾಡಲು ಅನುಮತಿಸುತ್ತದೆ. ನಂತರ ಫೋನ್‌ನಿಂದ ಫೋಟೋವನ್ನು ಲಗತ್ತಿಸಿ ಮತ್ತು ಎಲ್ಲವನ್ನೂ ಒಟ್ಟಿಗೆ ಕಳುಹಿಸಬಹುದಾಗಿದೆ. ಇದಲ್ಲದೆ ಫುಲ್‌ಸ್ಕ್ರೀನ್ ಎಫೆಕ್ಟ್‌ಗಳೊಂದಿಗೆ ಬಳಕೆದಾರರು ಹೊಸ ಸಂವಾದಾತ್ಮಕ ಎಮೋಜಿಗಳನ್ನು ಸಹ ಪಡೆದುಕೊಳ್ಳಲಿದ್ದಾರೆ.

ಟೆಲಿಗ್ರಾಮ್‌ನಲ್ಲಿ ಲಾಸ್ಟ್‌ ಸೀನ್ ಹೈಡ್ ಮಾಡಲು ಹೀಗೆ ಮಾಡಿ!

ಟೆಲಿಗ್ರಾಮ್‌ನಲ್ಲಿ ಲಾಸ್ಟ್‌ ಸೀನ್ ಹೈಡ್ ಮಾಡಲು ಹೀಗೆ ಮಾಡಿ!

ಇನ್ನು ಟೆಲಿಗ್ರಾಂ ಬಳಕೆದಾರರು ತಮ್ಮ ಕಾಂಟ್ಯಾಕ್ಟ್‌ನಲ್ಲಿರುವವರಿಗೆ ತಮ್ಮ ಲಾಸ್ಟ್‌ ಸೀನ್ ಹೈಡ್ ಮಾಡಲು ಅವಕಾಶವಿದೆ. ಆದಾಗ್ಯೂ, ಬಳಕೆದಾರರು ಲಾಸ್ಟ್‌ ಸೀನ್ ಹೈಡ್ ಮಾಡುವುದರಿಂದ ಅವರಿಗೂ ಇತರ ಬಳಕೆದಾರರ ಲಾಸ್ಟ್ ಸೀನ್ ಕಾಣಿಸುವುದಿಲ್ಲ ಎಂಬುದನ್ನು ಗಮನಿಸಬೇಕಿದೆ.

* ಟೆಲಿಗ್ರಾಂ ಆಪ್ ತೆರೆಯಿರಿ.
* ನಂತರ ಮೇಲಿನ ಎಡ ಭಾಗದಲ್ಲಿರುವ ಮೂರು ಸಾಲುಗಳ ಮೇಲೆ ಒತ್ತಿರಿ.
* ಬಳಿಕ ಗೌಪ್ಯತೆ ಮತ್ತು ಭದ್ರತೆಯನ್ನು ಆಯ್ಕೆ ಮಾಡಿ.
* ಆ ನಂತರ ಲಾಸ್ಟ್‌ ಸೀನ್ ಮತ್ತು ಆನ್‌ಲೈನ್ ಆಯ್ಕೆಮಾಡಿ.
* ಅಲ್ಲಿ ಕಾಣಿಸುವ ಆಯ್ಕೆಗಳಲ್ಲಿ Nobody ಆಯ್ಕೆ ಸೆಲೆಕ್ಟ್ ಮಾಡಿ.

ಪ್ರೈವಸಿ ಸೆಟ್ಟಿಂಗ್‌ಗಳನ್ನು ಬದಲಿಸಲು ಈ ಕ್ರಮಗಳನ್ನು ಅನುಸರಿಸಿ.

ಪ್ರೈವಸಿ ಸೆಟ್ಟಿಂಗ್‌ಗಳನ್ನು ಬದಲಿಸಲು ಈ ಕ್ರಮಗಳನ್ನು ಅನುಸರಿಸಿ.

ನಿಮ್ಮ ಕಾಂಟ್ಯಾಕ್ಟ್‌ ಮತ್ತು ಪ್ರೊಫೈಲ್ ಫೋಟೊವನ್ನು ಹೈಡ್‌ ಮಾಡಲು, ಮೊದಲು ಟೆಲಿಗ್ರಾಮ್ ಅಪ್ಲಿಕೇಶನ್ ತೆರೆಯಿರಿ ಮತ್ತು ಗೌಪ್ಯತೆ ಮತ್ತು ಸುರಕ್ಷತೆಗೆ(privacy and security) ಹೋಗಿ. ಫೋನ್ ಸಂಖ್ಯೆ ಆಯ್ಕೆಯನ್ನು ಆರಿಸಿ, ನಂತರ my contacts ಆಯ್ಕೆಯನ್ನು ಆರಿಸಿ ಅಥವಾ ನೀವು ಅದನ್ನು ಸಂಪೂರ್ಣವಾಗಿ ಮರೆ ಮಾಡಲು ಬಯಸಿದರೆ 'ಯಾರೂ ಇಲ್ಲ'. ಬಳಕೆದಾರ ಹೆಸರನ್ನು ಹೊಂದಿಸಲು, ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ಬಳಕೆದಾರ ಹೆಸರು ಆಯ್ಕೆಯನ್ನು ಆರಿಸಿ. ನಿಮ್ಮ ಆಯ್ಕೆಯ ಬಳಕೆದಾರ ಹೆಸರನ್ನು ಟೈಪ್ ಮಾಡಿ. ತದನಂತರ ಖಚಿತಪಡಿಸಲು ಟಿಕ್ ಗುರುತು ಆಯ್ಕೆಮಾಡಿ.

Best Mobiles in India

Read more about:
English summary
Telegram has not got an iMessage-like reactions feature along with an interesting feature to hide some parts of a text. The feature has been named Spoiler.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X