ವಾಟ್ಸಾಪ್‌ಗೆ ಸೆಡ್ಡು ಹೊಡೆಯುವ ಫೀಚರ್ಸ್‌ ಪರಿಚಯಿಸಿದ ಟೆಲಿಗ್ರಾಮ್‌!

|

ಜನಪ್ರಿಯ ಮೆಸೇಜಿಂಗ್‌ ಆಪ್‌ಗಳಲ್ಲಿ ಟೆಲಿಗ್ರಾಮ್‌ ಕೂಡ ಒಂದಾಗಿದೆ. ತನ್ನ ಬಳಕೆದಾರರಿಗೆ ಹಲವು ಆಕರ್ಷಕ ಫೀಚರ್ಸ್‌ಗಳನ್ನ ಪರಿಚಯಿಸಿರುವ ಟೆಲಿಗ್ರಾಮ್‌ ವಾಟ್ಸಾಪ್‌ಗೆ ಸೆಡ್ಡು ಹೊಡೆಯುವ ಪ್ರಯತ್ನವನ್ನ ಮಾಡುತ್ತಲೇ ಇದೆ. ಸದ್ಯ ಇದೀಗ ಬಳಕೆದಾರರಿಗೆ ಹೊಸ ಗ್ರೂಪ್‌ ವಾಯ್ಸ್‌ ಚಾಟ್ಸ್‌ ಫೀಚರ್ಸ್‌ ಅನ್ನು ಹೊರತರುತ್ತಿದೆ. ಇದು ಡಿಸ್ಕಾರ್ಡ್ ಕೋಣೆಗಳಿಗೆ ಹೋಲುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಗ್ರೂಪ್‌ ಕಾಲ್‌ ಪ್ರಾರಂಬಿಸದೆ ಜನರು ಟೆಲಿಗ್ರಾಮ್ ಗ್ರೂಪಿನ ಭಾಗವಾಗಿರುವ ಸ್ನೇಹಿತರು ಅಥವಾ ಕುಟುಂಬದೊಂದಿಗೆ ನೇರವಾಗಿ ಮಾತನಾಡಲು ಇದು ಅನುಮತಿಸುತ್ತದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ಬಳಕೆದಾರರಿಗೆ ಗ್ರೂಪ್‌ ವಾಯ್ಸ್‌ ಚಾಟ್ಸ್‌ ಫೀಚರ್ಸ್‌ ಪರಿಚಯಿಸಿದೆ. ಇದಕ್ಕಾಗಿ ಗ್ರೂಪ್‌ ಅಡ್ಮಿನ್‌ ಗುಂಪು ಸೆಟ್ಟಿಂಗ್ಸ್‌ಗಳಿಂದ ಹೊಸ ಫೀಚರ್ಸ್‌ ಅನ್ನು ಹಸ್ತಚಾಲಿತವಾಗಿ ಸಕ್ರಿಯಗೊಳಿಸಬೇಕಾಗುತ್ತದೆ. ಆದಾಗ್ಯೂ, ಇದನ್ನು ಸಕ್ರಿಯಗೊಳಿಸಿದ ನಂತರ, ಗುಂಪಿನ ಎಲ್ಲ ಸದಸ್ಯರು ಡಿಸ್ಕಾರ್ಡ್ ರೂಮ್ ಚಾಟ್‌ಗಳಂತೆ ಅವರು ಬಯಸಿದಾಗಲೆಲ್ಲಾ ವಾಯ್ಸ್‌ ಚಾಟ್‌ಗಳಲ್ಲಿ ಭಾಗವಹಿಸಲು ಮತ್ತು ಔಟ್‌ ಆಗಲು ಸಾಧ್ಯವಾಗಲಿದೆ. ಇನ್ನುಳಿದಂತೆ ಈ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟೆಲಿಗ್ರಾಮ್‌

ಟೆಲಿಗ್ರಾಮ್‌ ಪರಿಚಯಿಸಿರುವ ಗ್ರೂಪ್‌ ವಾಯ್ಸ್‌ ಚಾಟ್ಸ್‌ ಗ್ರೂಪ್‌ ಪೇಜ್‌ನ ಮೇಲ್ಭಾಗದಲ್ಲಿರುವ ವಾಯ್ಸ್‌ ಚಾಟ್ ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ ಸದಸ್ಯರು ಈ ವಾಯ್ಸ್‌ ಚಾಟ್‌ಗಳಲ್ಲಿ ಹೊರಗೆ ಹೋಗಬಹುದು. ವಿಂಡೋಸ್ ಮತ್ತು ಮ್ಯಾಕ್‌ನಲ್ಲಿನ ಟೆಲಿಗ್ರಾಮ್ ಬಳಕೆದಾರರಿಗಾಗಿ, ಅವರ ಮೈಕ್ರೊಫೋನ್ ಇನ್‌ಪುಟ್ ಅನ್ನು ನಿಯಂತ್ರಿಸಲು ವಾಯ್ಸ್‌ ಚಾಟ್ಸ್‌ಗಾಗಿ ಅವರು ಪುಶ್-ಟು-ಟಾಕ್ ಕೀಲಿಯನ್ನು ಪಡೆದುಕೊಳ್ಳಲಿದ್ದಾರೆ. ಅಲ್ಲದೆ ಆಂಡ್ರಾಯ್ಡ್ ಬಳಕೆದಾರರು ವಾಯ್ಸ್‌ ಚಾಟ್ ಓವರ್‌ಲೇ ಅನ್ನು ಸಹ ಪಡೆಯಲಿದ್ದಾರೆ. ಇದರ ಮೂಲಕ ಯಾರು ಮಾತನಾಡುತ್ತಿದ್ದಾರೆ ಎಂಬುದನ್ನು ತಿಳಿಯಬಹುದಾಗಿದೆ.

ಅಪ್ಲಿಕೇಶನ್

ಇನ್ನು ಅಪ್ಲಿಕೇಶನ್ ಬ್ಯಾಕ್‌ಗ್ರೌಂಡ್‌ ಚಾಲನೆಯಲ್ಲಿರುವಾಗ ಬಳಕೆದಾರರು ತಮ್ಮ ಮೈಕ್ರೊಫೋನ್ ಅನ್ನು ನಿರ್ವಹಿಸಲು ಮತ್ತು ಮ್ಯೂಟ್ ಮಾಡಲು ಸಹ ಇದು ಅನುಮತಿಸುತ್ತದೆ. ಈ ಫೀಚರ್ಸ್‌ ಒಂದು ಸಮಯದಲ್ಲಿ "ಕೆಲವು ಸಾವಿರ ಭಾಗವಹಿಸುವವರನ್ನು" ಬೆಂಬಲಿಸುತ್ತದೆ ಎಂದು ಕಂಪನಿ ಘೋಷಿಸಿದೆ. ಇದರರ್ಥ ಇನ್ನೂ ದೊಡ್ಡ ಗುಂಪುಗಳು ಸಹ ಈ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಬಹುದಾಗಿದೆ. ಇನ್ನು ಶೀಘ್ರದಲ್ಲೇ ವಾಯ್ಸ್‌ ಮತ್ತು ಚಾಟ್ ಶೇರ್‌ ಫೀಚರ್ಸ್‌ ಗಳನ್ನು ವಾಯ್ಸ್‌ ಚಾಟ್ ಫೀಚರ್ಸ್‌ಗೆ ಸೇರಿಸುವುದಾಗಿ ಕಂಪನಿ ಪ್ರಕಟಿಸಿದೆ.

Best Mobiles in India

English summary
Telegram is currently rolling out a new group voice chats feature, which will work in a similar fashion to Discord rooms.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X