ಟೆಲಿಗ್ರಾಮ್‌ನಲ್ಲಿ ಹೊಸ ಅಪ್ಡೇಟ್: ವಾಟ್ಸಾಪ್ ಅನ್ನು ಮೀರಿಸುವ ಅತ್ಯಾಕರ್ಷಕ ಫೀಚರ್ಸ್!
ವಾಟ್ಸಾಪ್‌ಗೆ ಪ್ರಬಲ ಪೈಪೋಟಿ ನೀಡುತ್ತಿರುವ ಟೆಲಿಗ್ರಾಮ್ ಇದೀಗ ಹೊಸ ಅಪ್ಡೇಟ್ ಪರಿಚಯಿಸಿದೆ. ಹೊಸ ಅಪ್ಡೇಟ್ ಮೂಲಕ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದೆ. ಇದರಲ್ಲಿ ಉಳಿಸಿದ ಸಂದೇಶಗಳಿಗೆ ವರ್ಧನೆಗಳು, ಒನ್-ಟೈಂ ವಾಯ್ಸ್ ಮತ್ತು ವೀಡಿಯೊ ಸಂದೇಶಗಳು, ಡಿಟೈಲ್ಡ್ ರೀಡ್ ರೆಸಿಪ್ಟ್ ನಂತಹ ಫೀಚರ್ಸ್‌ಗಳು ಸೇರಿವೆ.
ಹೌದು, ಟೆಲಿಗ್ರಾಮ್(Telegram) ನಲ್ಲಿ ಹೊಸ ಅಪ್ಡೇಟ್ ಮಾಡಲಾಗಿದ್ದು, ಹಲವು ಆಕರ್ಷಕ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಇದರಿಂದ ಬಳಕೆದಾರರಿಗೆ ಇನ್ನಷ್ಟು ಅತ್ಯುತ್ತಮವಾದ ಅನುಭವ ದೊರೆಯಲಿದೆ ಎಂದು ಹೇಳಲಾಗಿದೆ. ಹಾಗಾದ್ರೆ ಟೆಲಿಗ್ರಾಮ್ ಸೇರಿರುವ ಹೊಸ ಫೀಚರ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಸೇವ್ಡ್ ಮೆಸೇಜಸ್ 2.0
ಟೆಲಿಗ್ರಾಮ್ ಹೊಸ ಅಪ್ಡೇಟ್ ಮೂಲಕ ಸೇರಿರುವ ಹೊಸ ಸೇವ್ಡ್ ಮೆಸೇಜಸ್ 2.0 ಫೀಚರ್ಸ್ ಸಾಕಷ್ಟು ಹೊಸತನದಿಂದ ಕೂಡಿದೆ. ಇದರಲ್ಲಿ ಲಿಂಕ್‌ಗಳು, ಮಾಧ್ಯಮ ಮತ್ತು ಬುಕ್‌ಮಾರ್ಕ್‌ಗಳಿಗಾಗಿ ದೃಢವಾದ ಶೇಖರಣಾ ವ್ಯವಸ್ಥೆಯನ್ನು ನೀಡಲಾಗಿದೆ. ಬಳಕೆದಾರರು ಚಾಟ್ ಮೂಲಕ ಸೇವ್ ಮಾಡಿದ ಮೆಸೇಜ್‌ಗಳನ್ನು ಸಂಘಟಿಸುವುದಕ್ಕೆ ಕೂಡ ಅವಕಾಶವಿದೆ. ಅಂದರೆ ಸಂದೇಶಗಳನ್ನು ವರ್ಗೀಕರಣ ಮಾಡುವುದಕ್ಕಾಗಿ ಟ್ಯಾಗ್‌ಗಳನ್ನು ಬಳಸಬಹುದು. ಅಲ್ಲದೆ ಶೇರ್ ಮಾಡಿದ ಮೀಡಿಯಾದಲ್ಲಿ ಹೊಸ 'ಸೇವ್ಡ್' ಟ್ಯಾಬ್ ಮೂಲಕ ಅವುಗಳನ್ನು ನಿಮಿಷ್ಟದಂತೆ ಪ್ರವೇಶಿಸುವುದಕ್ಕೆ ಅವಕಾಶ ಸಿಗಲಿದೆ.
ಚಾಟ್ ಮೂಲಕ ಉಳಿಸಿದ ಸಂದೇಶಗಳನ್ನು ವೀಕ್ಷಿಸಿ
ಟೆಲಿಗ್ರಾಮ್‌ನಲ್ಲಿ ಹೊಸ 'View as Chats' ಮೋಡ್ ಅನ್ನು ನೀಡಲಾಗಿದೆ. ಇದರ ಮೂಲಕ ಸಂದೇಶಗಳನ್ನು ಫಾರ್ವರ್ಡ್ ಮಾಡಲಾದ ಖಾಸಗಿ ಚಾಟ್‌ಗಳು, ಗುಂಪುಗಳು ಮತ್ತು ಚಾನಲ್‌ಗಳ ಪಟ್ಟಿಯನ್ನು ನೋಡಲು ಸಾಧ್ಯವಾಗಲಿದೆ. ಇನ್ನು ಈ ಫೀಚರ್ಸ್ ಮೂಲಕ ಬಳಕೆದಾರರು ಆದ್ಯತೆಯ ಚಾಟ್‌ಗಳನ್ನು ಮೇಲಕ್ಕೆ ಪಿನ್ ಮಾಡಬಹುದಾಗಿದೆ.

ಉಳಿಸಿದ ಸಂದೇಶಗಳಿಗಾಗಿ ಟ್ಯಾಗ್‌ಗಳು
ಟೆಲಿಗ್ರಾಮ್‌ನಲ್ಲಿ ಹೊಸದಾಗಿ ಸೇವ್ ಮಾಡಿದ ಸಂದೇಶಗಳಿಗೆ ಟ್ಯಾಗ್ ಮಾಡುವುದಕ್ಕೆ ಅವಕಾಶ ನೀಡಿದೆ. ಅದರಂತೆ ಸಂಘಟನೆಯನ್ನು ವರ್ಧಿಸಲು, ಎಮೋಜಿಗಳ ಆಧಾರದ ಮೇಲೆ ಮಲ್ಟಿ ಟ್ಯಾಗ್‌ಗಳನ್ನು ಉಳಿಸಿದ ಸಂದೇಶಗಳಿಗೆ ಸೇರಿಸಬಹುದು. ಪ್ರೀಮಿಯಂ ಬಳಕೆದಾರರು ಟ್ಯಾಗ್‌ಗಳನ್ನು ಬಳಸಬಹುದು, ನಿರ್ದಿಷ್ಟ ಸಂದೇಶಗಳನ್ನು ಫಿಲ್ಟರ್ ಮಾಡಲು ಮತ್ತು ಹುಡುಕಲು ಅವಕಾಶ ನೀಡಲಿದೆ.
Saved Messages in Shared Media
ಟೆಲಿಗ್ರಾಮ್ ಚಾಟ್‌ಗಳು, ಗುಂಪುಗಳು ಮತ್ತು ಚಾನೆಲ್‌ಗಳು ಈಗ ಶೇರ್ ಮೀಡಿಯಾ ವಿಭಾಗದಲ್ಲಿ 'ಸೇವ್ಡ್' ಟ್ಯಾಬ್ ಅನ್ನು ಪರಿಚಯಿಸಿದೆ. ಇದರಿಂದ ನೀವು ಸೇವ್ಡ್ ಮಾಡಿದ ಸಂದೇಶಗಳನ್ನು ನಿರ್ದಿಷ್ಟ ಚಾಟ್‌ನಿಂದ ಫಾರ್ವರ್ಡ್ ಮಾಡಲಾದ ಸಂದೇಶಳಿಗೆ ಪ್ರವೇಶಿಸಲು ಸಾಧ್ಯವಾಗಲಿದೆ.
ಸರ್ಚ್‌ನಲ್ಲಿ ಹೊಸ ಅಪ್‌ಗ್ರೇಡ್
ಸರ್ಚ್‌ನಲ್ಲಿ ಹೊಸ ಅಪ್‌ಗ್ರೇಡ್ ಅನ್ನು ಮಾಡಲಾಗಿದೆ. ಇದರಿಂದ ಸರ್ಚಿಂಗ್ ರಿಸಲ್ಟ್‌ಗಳನ್ನು ನ್ಯಾವಿಗೇಟ್ ಮಾಡಲು ಸಾಧ್ಯವಾಗಲಿದೆ. ಅಲ್ಲದೆ ಅವುಗಳನ್ನು ಕಾಂಪ್ಯಾಕ್ಟ್ ಪಟ್ಟಿಯಂತೆ ವೀಕ್ಷಿಸಲು ಸುಲಭವಾಗಲಿದೆ.
ಇನ್-ಟೈಂ ವಾಯ್ಸ್ ಮತ್ತು ವೀಡಿಯೊ ಸಂದೇಶಗಳು
ಇನ್ನು ಟೆಲಿಗ್ರಾಮ್‌ನಲ್ಲಿ ಇದೀಗ ವಾಯ್ಸ್‌ಮತ್ತು ವೀಡಿಯೊ ಸಂದೇಶಗಳಿಗಾಗಿ ವ್ಯೂ-ಒನ್ಸ್ ಸೆಟ್ಟಿಂಗ್ ಪರಿಚಯಿಸಲಾಗಿದೆ. ಇದು ಒಮ್ಮೆ ಸಂದೇಶವನ್ನು ನೋಡಿದ ನಂತರ ಆಟೋಮ್ಯಾಟಿಕ್ ಆಗಿ ಡಿಲೀಟ್ ಮಾಡಲಿದೆ. ಅಂದರೆ ಆಟೋಮ್ಯಾಟಿಕ್ ಡಿಲೀಟ್ ಆಗುವ ಮೊದಲು ಅವುಗಳನ್ನು ಒಮ್ಮೆ ಮಾತ್ರ ಪ್ಲೇ ಮಾಡಲು ಅನುಮತಿಸುತ್ತದೆ.

ರೆಕಾರ್ಡಿಂಗ್ ಅನ್ನು ವಿರಾಮಗೊಳಿಸಿ ಮತ್ತು ಪುನರಾರಂಭಿಸಿ
ಟೆಲಿಗ್ರಾಮ್‌ನಲ್ಲಿ ವಾಯ್ಸ್ ಅಥವಾ ವೀಡಿಯೊ ಸಂದೇಶಗಳನ್ನು ರೆಕಾರ್ಡಿಂಗ್ ಮಾಡಬಹುದು ಮತ್ತು ಪಾಸ್ ಕೊಡಬಹುದು. ಇದರಿಂದ ಹಲವು ಸಂದೇಶಗಳನ್ನು ಕಳುಹಿಸುವ ಅಗತ್ಯವನ್ನು ತೆಗೆದುಹಾಕಲಿದೆ.
ಖಾಸಗಿ ಚಾಟ್‌ಗಳಲ್ಲಿ ಸಮಯವನ್ನು ಓದಿರಿ
1-ಆನ್-1 ಚಾಟ್‌ಗಳಲ್ಲಿ, ಬಳಕೆದಾರರು ತಮ್ಮ ಸಂದೇಶಗಳನ್ನು ತೆರೆದಾಗ ನಿಖರವಾದ ಸಮಯವನ್ನು ನೋಡಬಹುದು. ಓದುವ ಸಮಯಗಳು ಕೊನೆಯದಾಗಿ ನೋಡಿದ ಸ್ಥಿತಿಯನ್ನು ಆಧರಿಸಿ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಹೊಂದಿವೆ ಮತ್ತು ಅಳಿಸುವ ಮೊದಲು 7 ದಿನಗಳವರೆಗೆ ಗೋಚರಿಸುತ್ತವೆ ಎಂದು ಹೇಳಲಾಗಿದೆ.


Click it and Unblock the Notifications








