ಫೈಲ್‌ ಗಾತ್ರದ ಮಿತಿಯನ್ನು 2GBಗೆ ಹೆಚ್ಚಿಸಿದ ಟೆಲಿಗ್ರಾಮ್‌!

|

ಜನಪ್ರಿಯ ಮೆಸೇಜಿಂಗ್‌ ಆಪ್‌ಗಳಲ್ಲಿ ಒಂದಾಗಿರುವ ಟೆಲಿಗ್ರಾಮ್ ತನ್ನ ಅಪ್ಲಿಕೇಶನ್‌ನಲ್ಲಿ ಹೊಸ ಆಪ್ಡೇಟ್‌ ಅನ್ನು ಬಿಡುಗಡೆ ಮಾಡಿದೆ. ಸದ್ಯ ವಾಟ್ಸಾಪ್‌ಗೆ ಸೆಡ್ಡು ಹೊಡೆಯಲು ಹೊಸ ಹೊಸ ಫೀಚರ್ಸ್‌ಗಳನ್ನ ಪರಿಚಯಿಸುವ ಟೆಲಿಗ್ರಾಮ್‌ ಈ ಬಾರಿ ಹಲವಾರು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದೀಗ ಟೆಲಿಗ್ರಾಮ್‌ ತನ್ನ ಬಳಕೆದಾರರು 2GB ವರೆಗೆ BIG ಫೈಲ್‌ಗಳನ್ನು ಕಳುಹಿಸಬಹುದಾದ ಮತ್ತು ಸ್ವೀಕರಿಸಬಹುದಾದ ಫೀಚರ್ಸ್‌ ಅನ್ನು ಪರಿಚಯಿಸಿದೆ. ಅಲ್ಲದೆ ವೀಡಿಯೊವನ್ನು ಪ್ರೊಫೈಲ್ ಆಗಿ ಸೆಟ್‌ ಮಾಡುವುದಕ್ಕೂ ಅವಕಾಶವನ್ನು ನೀಡಿದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ತನ್ನ ಅಪ್ಲಿಕೇಶನ್‌ ಅನ್ನ ಆಪ್ಡೇಟ್‌ ಮಾಡಿದ್ದು, ಬಳಕೆದಾರರಿಗೆ ಹೊಸ ಫೀಚರ್ಸ್‌ಗಳನ್ನ ಪರಿಚಯಿಸಿದೆ. ದೊಡ್ಡ ಮಟ್ಟದ ಫೈಲ್‌ಗಳ ವರ್ಗಾವಣೆ, ವೀಡಿಯೋ ಪ್ರೊಫೈಲ್‌ ಸೆಟ್ಟಿಂಗ್, ಫೈಲ್‌ ರಿಸೀವ್‌, ಮಾಡಿಕೊಳ್ಳಲು ಅವಕಾಶ ನಿಡಿದೆ. ಈ ಹೊಸ ಸೇರ್ಪಡೆಗಳು ವೀಡಿಯೊ ಎಡಿಟಿಂಗ್‌, ಪ್ಲಾಟ್‌ಫಾರ್ಮ್‌ನಲ್ಲಿಯೇ ಇರಲಿವೆ. ಸದ್ಯ ಟೆಲಿಗ್ರಾಮ್‌ ಬಳಕೆದಾರರಿಗೆ ಇನ್ನಷ್ಟು ಹತ್ತಿರವಾಗುವ ಹಾಗೂ ಇನ್ನಷ್ಟು ಆಪ್‌ಗ್ರೇಡ್‌ ಆಗುವ ಪ್ರಯತ್ನವನ್ನು ಮಾಡುತ್ತಿದೆ. ಇನ್ನುಳಿದಂತೆ ಟೆಲಿಗ್ರಾಮ್‌ ಪರಿಚಯಿಸಿರುವ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೆಸೇಜಿಂಗ್

ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್‌ ತನ್ನ ಗರಿಷ್ಠ ಫೈಲ್ ಗಾತ್ರದ ಮಿತಿಯನ್ನು ಹೆಚ್ಚಿಸುತ್ತಿದೆ. ವೀಡಿಯೊಗಳು, ಡಾಕ್ಯುಮೆಂಟ್‌ಗಳು ಮತ್ತು ಇತರ ಫೈಲ್‌ಗಳಿಗಾಗಿ 2014 ರಿಂದ ಬಳಕೆದಾರರು 1.5GB ವರೆಗಿನ ಫೈಲ್‌ಗಳನ್ನು ಮಾತ್ರ ಹಂಚಿಕೊಳ್ಳಲು ಸಾಧ್ಯವಾಗಿತ್ತು. ಆದರೆ ಇದೀಗ ಟೆಲಿಗ್ರಾಮ್ ಫೈಲ್‌ ಗಾತ್ರದ ಮಿತಿಯನ್ನು 2GBಗೆ ಹೆಚ್ಚಿಸಿದೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ 100MB ವರೆಗೆ ಮಿಡೀಯಾವನ್ನು ವರ್ಗಾವಣೆ ಮಾಡಲು ಅನುಮತಿಸುತ್ತದೆ.

ವೀಡಿಯೊದ

ಇದಲ್ಲದೆ ಟೆಲಿಗ್ರಾಮ್‌ನಲ್ಲಿ ವೀಡಿಯೊದ ಮೂಲಕ ಪ್ರೊಫೈಲ್ ಫೋಟೋವನ್ನು ಬದಲಾಯಿಸುವ ಸಾಧ್ಯತೆಯು ಮತ್ತೊಂದು ಸೇರ್ಪಡೆಯಾಗಿದೆ. ಈಗ ಬಳಕೆದಾರರು ವೀಡಿಯೊವನ್ನು ಅಪ್‌ಲೋಡ್ ಮಾಡಬಹುದು, ಫೋಟೋವಾಗಿ ಬಳಸಲು ನಿರ್ದಿಷ್ಟ ಫ್ರೇಮ್ ಅನ್ನು ಆರಿಸಿಕೊಳ್ಳಬಹುದು. ಪ್ರೊಫೈಲ್ ವೀಕ್ಷಿಸಲು ಯಾರಾದರೂ ಕ್ಲಿಕ್ ಮಾಡಿದಾಗ, ವೀಡಿಯೊ ಪ್ಲೇ ಆಗುತ್ತದೆ. ಅಲ್ಲದೆ ಈ ಆಪ್ಡೇಟ್‌ ಸೆಲ್ಫಿ ಕ್ಯಾಮೆರಾದಲ್ಲಿ ಫೋಟೋ ಮತ್ತು ವೀಡಿಯೊ ಎಡಿಟರ್‌ ಅನ್ನು ಪರಿಚಯಿಸಿದೆ. ಜೊತೆಗೆ ಬಳಕೆದಾರರು ಅಪೂರ್ಣತೆಗಳನ್ನು ಮರೆಮಾಡಲು ಬಯಸಿದರೆ ಸ್ಕಿನ್‌ ಅನ್ನು ಸುಗಮಗೊಳಿಸಬಹುದಾಗಿದೆ.

ಡಿಸ್‌ಪ್ಲೇ

ಇನ್ನು ಚಾಟ್ ಪಟ್ಟಿಯು ಸಹ ಅನೇಕ ಮಾರ್ಪಾಡುಗಳನ್ನ ಹೊಂದಿದೆ. ಇದರಲ್ಲಿ ಥಂಬ್‌ನೇಲ್‌ಗಳನ್ನು ಆಯ್ಕೆ ಮಾಡಲು ಸಾಧ್ಯವಿದ್ದು, ಅಧಿಸೂಚನೆಯನ್ನು ಕಳುಹಿಸಿದಾಗ ಆಯ್ದ ಐಕಾನ್ ಅನ್ನು ಡಿಸ್‌ಪ್ಲೇ ಮಾಡಲಾಗುತ್ತದೆ. ಈ ಆಪ್ಡೇಟ್‌ ಹೆಚ್ಚು ಅನಿಮೇಟೆಡ್ ಎಮೋಟಿಕಾನ್‌ಗಳನ್ನು ಸಹ ಸೇರಿಸುತ್ತದೆ. ಅಲ್ಲದೆ ಈ ಹೊಸ ಟೆಲಿಗ್ರಾಮ್ ಅಪ್ಲಿಕೇಶನ್ people nearby ಫೀಚರ್ಸ್‌ ಅನ್ನು ಸಹ ನೀಡಿದೆ. ಇದು ನಿಮ್ಮ ಸ್ಥಳಕ್ಕೆ ಹತ್ತಿರವಿರುವ ಜನರ ದೂರವನ್ನು ಸೂಚಿಸುತ್ತದೆ. ತಮ್ಮ ಸಂಪರ್ಕ ಪಟ್ಟಿಯಲ್ಲಿಲ್ಲದ ಜನರಿಂದ ಸಂದೇಶಗಳನ್ನು ಸ್ವೀಕರಿಸಲು ಇಚ್ಚಿಸದ ಬಳಕೆದಾರರು ಹಾಗೆ ಮಾಡಬಹುದು.

ಅಪ್‌ಡೇಟ್‌ನಲ್ಲಿ

ಈ ಅಪ್‌ಡೇಟ್‌ನಲ್ಲಿ ಲಭ್ಯವಿರುವ ಇತರ ಬದಲಾವಣೆಗಳು 500 ಕ್ಕೂ ಹೆಚ್ಚು ಸದಸ್ಯರ ಗುಂಪುಗಳಿಗೆ ಉತ್ತಮ ಅಂಕಿಅಂಶಗಳು ಮತ್ತು ವಿಸ್ತರಿಸಬಹುದಾದ ಟ್ರ್ಯಾಕ್‌ಲಿಸ್ಟ್ ಹೊಂದಿರುವ ಆಂಡ್ರಾಯ್ಡ್‌ಗಾಗಿ ನವೀಕರಿಸಿದ ಮ್ಯೂಸಿಕ್ ಪ್ಲೇಯರ್ ಅನ್ನು ನೀಡಿದೆ. ಇದು ವೀಡಿಯೊ ಕ್ರಾಪಿಂಗ್ ಮತ್ತು ತಿರುಗುವಿಕೆಯನ್ನು ಸಹ ಪರಿಚಯಿಸಿದೆ, ಮತ್ತು ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ಬಹು ಖಾತೆಗಳಿಗೆ ಬೆಂಬಲ ನೀಡುತ್ತದೆ. ಸದ್ಯ ಈ 6.3 ಟೆಲಿಗ್ರಾಮ್ ನವೀಕರಣವು ಈಗ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಲು ಅವಕಾಶ ನೀಡಿದೆ.

Best Mobiles in India

Read more about:
English summary
The latest Telegram update allows users to share files up to 2GB size, and add profile videos. It is now available to download on the Google Play Store and Apple app store get and more details.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X