Subscribe to Gizbot

ಇಂಟ್ರಾ ಸರ್ಕಲ್ ರೋಮಿಂಗ್ ಗಾಗಿ ಏರ್ಟೆಲ್ ಜೊತೆ ಕೈಜೋಡಿಸಿದ ಟೆಲಿನಾರ್

Posted By: Tejaswini P G

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಇಂಟ್ರಾ-ಸರ್ಕಲ್ ರೋಮಿಂಗ್ ವ್ಯವಸ್ಥೆಗಾಗಿ ಏರ್ಟೆಲ್ ಜೊತೆ ಕೈಜೋಡಿಸಿರುವುದಾಗಿ ಟೆಲಿನಾರ್ ಇಂಡಿಯಾ ತಿಳಿಸಿದೆ. ಈ ಹೊಸ ವ್ಯವಸ್ಥೆಯಿಂದ ಟೆಲಿನಾರ್ ಗ್ರಾಹಕರು ಈ ರಾಜ್ಯಗಳೊಳಗೆ 3G ಸೇವೆಗಳು, ಹೆಚ್ಚು ಕವರೇಜ್ನೊಂದಿಗೆ 4G ಸೇವೆಗಳು ಮತ್ತು ಹೈ-ಸ್ಪೀಡ್ ಇಂಟರ್ನೆಟ್ ಅನ್ನು ಅನುಭವಿಸಬಹುದಾಗಿದೆ.

ಇಂಟ್ರಾ ಸರ್ಕಲ್ ರೋಮಿಂಗ್ ಗಾಗಿ ಏರ್ಟೆಲ್ ಜೊತೆ ಕೈಜೋಡಿಸಿದ ಟೆಲಿನಾರ್

ಈ ಸಂದರ್ಭದಲ್ಲಿ ಮಾತನಾಡಿದ ಟೆಲಿನಾರ್ ಇಂಡಿಯಾದ ಆಂಧ್ರಪ್ರದೇಶ ಮತ್ತು ತೆಲಂಗಾಣದ ಸರ್ಕಲ್ ಬಿಸ್ನೆಸ್ ಹೆಡ್ ಆಗಿರುವ ಶ್ರೀನಾಥ್ ಕೋಟಿಯಾನ್ ಅವರು "ಗ್ರಾಹಕರೇ ಮೊದಲ ಆದ್ಯತೆ ಎಂದು ನಂಬಿರುವ ನಮ್ಮ ಸಂಸ್ಥೆ ಉತ್ತಮ ನೆಟ್ವರ್ಕ್ ನೀಡುವುದರ ಜೊತೆಗೆ ಅಗ್ಗದ ಉತ್ಪನ್ನಗಳೊಂದಿಗೆ ಜನರನ್ನು ಬೆಸೆಯುವ ಗುರಿಯನ್ನು ಹೊಂದಿದೆ" ಎಂದು ಹೇಳಿದ್ದಾರೆ.

"ಗ್ರಾಹಕರು ಕೇವಲ 3G ಅಥವಾ 4G ಸಾಮರ್ಥ್ಯವಿರುವ ಫೋನ್ ಹೊಂದುವ ಮೂಲಕ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಉದ್ದಗಲಕ್ಕೂ ಹೈ-ಸ್ಪೀಡ್ ಡೇಟಾದ ಅನುಭವವನ್ನು ಪಡೆಯಬಹುದು.ಈ ಹೊಸ ಹೆಜ್ಜೆಯಂದಿಗೆ, ನಾವು ನಮ್ಮ ವಾಯ್ಸ್ ಮತ್ತು ಡೇಟಾ ಕವರೇಜ್ ಅನ್ನು ಸದೃಢಗೊಳಿಸುವ ಮೂಲಕ ಈ ರಾಜ್ಯಗಳ ಒಳಗೆ ರೋಮಿಂಗ್ನಲ್ಲಿರುವಾಗ ಗ್ರಾಹಕರಿಗೆ ಸಂತೃಪ್ತಿದಾಯಕ ಅನುಭವವನ್ನು ನೀಡಲಿದ್ದೇವೆ." ಎಂದು ಕೋಟಿಯಾನ್ ತಿಳಿಸಿದ್ದಾರೆ.

ಟೆಲಿನಾರ್ ಇಂಡಿಯಾ ಆಂಧ್ರ ಮತ್ತು ತೆಲಂಗಾಣ ಸರ್ಕಲ್ಗಳಲ್ಲಿ LTE ತಂತ್ರಜ್ಞಾನ ಬಳಸಿ 13 ಪಟ್ಟಣಗಳಲ್ಲಿ 2G ಮತ್ತು 4G ಸೇವೆಗಳನ್ನು ನೀಡುತ್ತಿದೆ. ಏರ್ಟೆಲ್ ನೊಂದಿಗಿನ ಈ ಹೊಸ ಸಹಭಾಗಿತ್ವದೊಂದಿಗೆ ಟೆಲಿನಾರ್ ಗ್ರಾಹಕರಿಗೆ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಹೆಚ್ಚು ವಿಸ್ತಾರವಾದ ನೆಟ್ವರ್ಕ್ ಕವರೇಜ್ ಸಿಗಲಿದೆ ಮಾತ್ರವಲ್ಲದೆ ಹೆಚ್ಚಿನ 14,254 ಹಳ್ಳಿ ಮತ್ತು ಪಟ್ಟಣಗಳಲ್ಲಿ ಕೈಗೆಟಕುವ ದರದಲ್ಲಿ ಹೈ-ಸ್ಪೀಡ್ ಡೇಟಾ ಸೌಲಭ್ಯ ದೊರೆಯಲಿದೆ.

ಅಪಘಾತಗಳು-2016..ಚಾಲನೆಯಲ್ಲಿ ಮೊಬೈಲ್ ಬಳಸಿ 2,100 ಸಾವು!!.

ರಾಜ್ಯಾದ್ಯಂತ ಉತ್ತಮ ನೆಟ್ವರ್ಕ್ ಕವರೇಜ್ ಪಡೆಯಲು ಗ್ರಾಹಕರು 3G/4G ಸಾಮರ್ಥ್ಯವುಳ್ಳ ಮೊಬೈಲ್ ಹೊಂದಿರಬೇಕು. ಜೊತೆಗೆ 4G ಸ್ಪೀಡ್ಗೆ 4G ಸಿಮ್ ಅಥವ 3G ಸ್ಪೀಡ್ಗೆ 2G ಸಿಮ್ ಹೊಂದಿರಬೇಕು.ಗ್ರಾಹಕರು ಈಗ ಕೈಗೆಟಕುವ ದರದ STVಗಳೊಂದಿಗೆ ಉತ್ತಮ ಕವರೇಜ್, ಉತ್ತಮ ಗುಣಮಟ್ಟದ ವಾಯ್ಸ್ ಕರೆಗಳು ಹಾಗೂ ಹೈ-ಸ್ಪೀಡ್ ಇಂಟರ್ನೆಟ್ ಸೇವೆಗಳನ್ನು ಪಡೆಯಬಹುದು. ಟೆಲಿನಾರ್ ನ ಟ್ಯಾರಿಫ್ ವೌಚರ್ಗಳು ರೂ 9 ರಿಂದ ರೂ 349ರ ಶ್ರೇಣಿಯಲ್ಲಿದ್ದು, ಪ್ರತೀ ತಿಂಗಳು 28GB ಡೇಟಾವನ್ನು ನೀಡುತ್ತದೆ. 7 ದಿನಗಳಿಗೆ 200 MB ಡೇಟಾ ನೀಡುವ ರೂ 28ರ ಪ್ಯಾಕ್ ಮಾರುಕಟ್ಟೆಯಲ್ಲಿ ಲಭ್ಯವಿರು ಕೈಗೆಟಕುವ ಬೆಲೆಯ ಪ್ಯಾಕ್ಗಳಲ್ಲಿ ಒಂದಾಗಿದೆ.

ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಗ್ರಾಹಕರು ಹತ್ತಿರದ ಟೆಲಿನಾರ್ ರೀಟೈಲರ್ಗಳು ಅಥವ ಟೆಲಿನಾರ್ ಸ್ಟೋರ್ಗಳಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು ಅಥವಾ ಹೊಸ ಟ್ಯಾರಿಫ್ ಪ್ಯಾನ್ಗಳ ಕುರಿತು ತಿಳಿದುಕೊಳ್ಳಬಹುದು. ಟೆಲಿನಾರ್ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ 299 ವಿತರಕರು, 222 ಎಕ್ಸ್ಕ್ಲೂಸಿವ್ ಸ್ಟೋರ್ಗಳು ಹಾಗೂ 47000 ಪಾಯಿಂಟ್ ಆಫ್ ಸೇಲ್ಗಳನ್ನು ಹೊಂದಿದ್ದು, ಅಂದಾಜು 3.8 ಮಿಲಿಯನ್ ಗ್ರಾಹಕರನ್ನು ಹೊಂದಿದೆ.

English summary
The new arrangement will allow Telenor subscribers will be able to enjoy 3G services and a wider coverage of 4G services and high-speed Internet.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot