ಸ್ಮಾರ್ಟ್‌ಫೋನಲ್ಲೇ ಆಹಾರದ ಸಂಪೂರ್ಣ‌ ಮಾಹಿತಿ!

By Ashwath
|

ಮನೆಯಲ್ಲಿ ಯಾರಾದರೂ ಡಯಟಿಂಗ್‌ ಮಾಡುವ ವ್ಯಕ್ತಿಗಳಿದ್ದರೆ ಸಾಕು.ಅವರಿಗೆ ಯಾವ ಆಹಾರವನ್ನು ಕೊಡಬೇಕು,ಯಾವ ಆಹಾರವನ್ನು ಕೊಡಬಾರದು ಎನ್ನುವುದೇ ದೊಡ್ಡ ಸಮಸ್ಯೆ.ಆದರೆ ಇನ್ನು ಮುಂದೆ ನೀವು ಡಯಟಿಂಗ್‌ ಮಾಡುವ ವ್ಯಕ್ತಿಗಳಿಗೆ ಸರಿಯಾದ ಆಹಾರವನ್ನು ನೀಡಬಹುದು.

ಹೌದು.ಇನ್ನು ಮುಂದೆ ಸೇವಿಸುವ ಆಹಾರದಲ್ಲಿ ಎಷ್ಟು ಪ್ರಮಾಣ ಕ್ಯಾಲೋರಿ ಇದೆ,ಯಾವ ಪದಾರ್ಥ‌ಗಳು ಹೇಗೆ ತಯಾರಾಗುತ್ತವೆ.ಆಹಾರದಲ್ಲಿ ಯಾವೆಲ್ಲಾ ವಿಟಮಿನ್‌ ಇದೆ ಎಲ್ಲಾ ಮಾಹಿತಿಗಳನ್ನು ಸುಲಭವಾಗಿ ನಿಮ್ಮ ಸ್ಮಾರ್ಟ್‌ಫೋನಲ್ಲೇ ತಿಳಿಯಬಹುದು.

ಕೆನಡಾ ಮೂಲದ ಕಂಪೆನಿಯೊಂದು ಹೊಸ ಆಹಾರದ ಪೋಷಕಾಂಶಗಳ ಮಾಹಿತಿಯನ್ನು ಪತ್ತೆ ಮಾಡುವ ಮಿನಿ ಗ್ಯಾಜೆಟ್‌ನ್ನು ಅಭಿವೃದ್ಧಿಪಡಿಸಿದೆ.ನೋಡಲು ಮೌಸ್‌ನಂತಿರುವ ಟೆಲ್‌ಸ್ಪೆ(TellSpe) ಹೆಸರಿನ ಗ್ಯಾಜೆಟ್‌ ಆಹಾರ ಪದಾರ್ಥ‌ಗಳನ್ನು ಕ್ಷಣದಲ್ಲೇ ಸ್ಕ್ಯಾನ್‌ ಮಾಡಿ ಆ ಆಹಾರದಲ್ಲಿರುವ ಎಲ್ಲಾ ವಿಟಮಿನ್‌ಗಳ ಮಾಹಿತಿಯನ್ನು ನಿಮ್ಮ ಸ್ಮಾರ್ಟ್‌‌ಫೋನಲ್ಲಿ ತೋರಿಸುತ್ತದೆ.

ಈ ಪುಟ್ಟ ಸಾಧನ 80 ಗ್ರಾಂ ತೂಕವಿದ್ದು ಸ್ಪೆಕ್ಟ್ರೋಮೀಟರ್‌ ಸ್ಕ್ಯಾನರ್‌ ಹೊಂದಿದೆ. ಈ ಸಾಧನ ಆಹಾರವನ್ನು ಸ್ಕ್ಯಾನ್‌ ಮಾಡಿ ಬ್ಲೂಟೂತ್‌ ಮೂಲಕ ಸ್ಮಾರ್ಟ್‌ಫೋನ್‌ನಲ್ಲಿರುವ ಆಪ್‌ಗೆ ಮಾಹಿತಿಯನ್ನು ಕಳುಹಿಸುತ್ತದೆ.ಆಂಡ್ರಾಯ್ಡ್‌ ಮತ್ತು ಐಓಎಸ್‌ನಲ್ಲಿನಲ್ಲಿ ಕೆಲಸ ಮಾಡುವ ಈ ಗ್ಯಾಜೆಟ್‌ ಇನ್ನೂ ಪೂರ್ಣ‌ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿಲ್ಲ. ಸದ್ಯದಲ್ಲೇ ಈ ಗ್ಯಾಜೆಟ್‌ ಉತ್ಪಾದನೆ ಆರಂಭಿಸಲಾಗುವುದು ಎಂದು ಕಂಪೆನಿ ತಿಳಿಸಿದೆ.

ಹೀಗಾಗಿ ಇಲ್ಲಿ ಈ ಸಾಧನ ಹೇಗಿದೆ ಮತ್ತು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತೋರಿಸುವ ಚಿತ್ರ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

 ಸ್ಮಾರ್ಟ್‌ಫೋನಲ್ಲೇ ಆಹಾರದ ಸಂಪೂರ್ಣ‌ ಮಾಹಿತಿ!

ಸ್ಮಾರ್ಟ್‌ಫೋನಲ್ಲೇ ಆಹಾರದ ಸಂಪೂರ್ಣ‌ ಮಾಹಿತಿ!


ಟೆಲ್‌ಸ್ಪೆ(TellSpe) ಗ್ಯಾಜೆಟ್‌

ಸ್ಮಾರ್ಟ್‌ಫೋನಲ್ಲೇ ಆಹಾರದ ಸಂಪೂರ್ಣ‌ ಮಾಹಿತಿ!

ಸ್ಮಾರ್ಟ್‌ಫೋನಲ್ಲೇ ಆಹಾರದ ಸಂಪೂರ್ಣ‌ ಮಾಹಿತಿ!


ಟೆಲ್‌ಸ್ಪೆ(TellSpe) ಗ್ಯಾಜೆಟ್‌

 ಸ್ಮಾರ್ಟ್‌ಫೋನಲ್ಲೇ ಆಹಾರದ ಸಂಪೂರ್ಣ‌ ಮಾಹಿತಿ!

ಸ್ಮಾರ್ಟ್‌ಫೋನಲ್ಲೇ ಆಹಾರದ ಸಂಪೂರ್ಣ‌ ಮಾಹಿತಿ!

ಟೆಲ್‌ಸ್ಪೆ(TellSpe) ಗ್ಯಾಜೆಟ್‌

 ಸ್ಮಾರ್ಟ್‌ಫೋನಲ್ಲೇ ಆಹಾರದ ಸಂಪೂರ್ಣ‌ ಮಾಹಿತಿ!

ಸ್ಮಾರ್ಟ್‌ಫೋನಲ್ಲೇ ಆಹಾರದ ಸಂಪೂರ್ಣ‌ ಮಾಹಿತಿ!

ಟೆಲ್‌ಸ್ಪೆ(TellSpe) ಗ್ಯಾಜೆಟ್‌

 ಸ್ಮಾರ್ಟ್‌ಫೋನಲ್ಲೇ ಆಹಾರದ ಸಂಪೂರ್ಣ‌ ಮಾಹಿತಿ!

ಸ್ಮಾರ್ಟ್‌ಫೋನಲ್ಲೇ ಆಹಾರದ ಸಂಪೂರ್ಣ‌ ಮಾಹಿತಿ!

ಟೆಲ್‌ಸ್ಪೆ(TellSpe) ಗ್ಯಾಜೆಟ್‌

 ಸ್ಮಾರ್ಟ್‌ಫೋನಲ್ಲೇ ಆಹಾರದ ಸಂಪೂರ್ಣ‌ ಮಾಹಿತಿ!

ಸ್ಮಾರ್ಟ್‌ಫೋನಲ್ಲೇ ಆಹಾರದ ಸಂಪೂರ್ಣ‌ ಮಾಹಿತಿ!

ಟೆಲ್‌ಸ್ಪೆ(TellSpe) ಗ್ಯಾಜೆಟ್‌

ಮಾಹಿತಿ:www.tellspec.com

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X