ಪ್ರಾಚೀನ ಕಾಲದ ಅದ್ಭುತ ತಂತ್ರಜ್ಞಾನಗಳು ಈಗ ಹೇಗಿವೆ

By Suneel
|

ಪ್ರಾಚೀನ ಕಾಲದ ತಂತ್ರಜ್ಞಾನಗಳು ಇಂದಿನ ಕಾಲದ ತಂತ್ರಜ್ಞಾನ ಅಭಿವೃದ್ದಿಗೆ ಅಡಿಪಾಯ ಎಂಬುದನ್ನು ಯಾರೂ ಸಹ ಮರೆಯೋಹಾಗಿಲ್ಲಾ. ಹೌದು, ಅವರು ಹಾಕಿಕೊಟ್ಟ ತಂತ್ರಗಾರಿಕೆಯ ತಳಹದಿ ಇಂದು ತಂತ್ರಜ್ಞಾನ ಅಭಿವೃದ್ದಿಯನ್ನು ಮುಂದುವರೆಸಲು ಸಹಕಾರಿಯಾಗಿದೆ. ವಿಶ್ವದ ಪ್ರಬಲ ನಾಗರಿಕತೆಗಳು ಬೆಳವಣಿಗೊಳ್ಳಲು ಅಂದು ಅವರು ವಿಜ್ಞಾನ ಕ್ಷೇತ್ರದಲ್ಲಿ ಆವಿಷ್ಕರಿಸಿದ ಸಂಶೋಧನೆಗಳು, ಇಂಜಿನಿಯಿರಿಂಗ್‌ ಕ್ಷೇತ್ರದಲ್ಲಿನ ಅಭಿವೃದ್ದಿಯೇ ಕಾರಣ.

ಹಿಂದಿನ ಯುಗದ ಮಾನವರು ಸಹ ತಮ್ಮ ಆವಿಷ್ಕಾರಗಳಿಂದ ಜೀವನ ಶೈಲಿಯನ್ನು ಹೊಸತನವಾಗಿ ರೂಢಿಸಿಕೊಂಡರು. ಹೊಸ ವ್ಯವಸ್ಥೆಗಳನ್ನು ಕಟ್ಟಿಕೊಂಡಿದ್ದರು. ಆದರೆ ಆ ಅನ್ವೇಷಣೆಗಳು ಇತಿಹಾಸದ ಪುಟಗಳಿಗೆ ಮರೆತುಹೋಗಿದ್ದವು. ಶತಮಾನಗಳ ನಂತರದಲ್ಲಿ ಆ ಅನ್ವೇಷಣೆಗಳು ಪುನಃ ಅನ್ವೇಷಣೆಗಳಾದವು. ಹಾಗಾದರೆ ಪ್ರಾಚೀನ ಕಾಲದ ನಮ್ಮ ಪೂರ್ವಜ್ಜರ ಜಾಣ್ಮೆ ಪ್ರದರ್ಶಿಸುವ ಅಂತಹ ತಂತ್ರಜ್ಞಾನಗಳು ಮತ್ತು ಅನ್ವೇಷಣೆಗಳು ಯಾವುವು ಎಂಬ ಕುತೂಹಲ ನಿಮಗೆ ಖಂಡಿತ ಇರುತ್ತದೆ. ಹಾಗಾದರೆ ತಡಮಾಡದೆ ಈ ಲೇಖನವನ್ನು ಓದಿ ಪ್ರಾಚೀನ ಕಾಲದ ಅದ್ಭುತ ಟೆಕ್ನಾಲಜಿಗಳು ಯಾವುವು ಎಂಬುದನ್ನು ತಿಳಿಯಿರಿ.

ಉಗಿ ಎಂಜಿನ್‌

ಉಗಿ ಎಂಜಿನ್‌

ಗ್ರೀಕ್‌ ನ ಮೊದಲನೇ ಶತಮಾನದ ಗಣಿತಶಾಸ್ತ್ರಜ್ಞ ಮತ್ತು ಇಂಜಿನಿಯರ್‌ 'ಅಲೆಕ್ಸಾಂಡರ್‌' ಮೊಟ್ಟ ಮೊದಲ ಉಗಿ ಎಂಜಿನ್‌ನ ಅನ್ವೇಷಣೆಗಾರ. ಆತ ಕಂಡುಹಿಡಿದ ಉಗಿ ಎಂಜಿನ್‌ ಅನ್ನು ಮೊದಲು aeolipile ಎಂದು ಕರೆಯಲಾಯಿತು. ನಂತರದಲ್ಲಿ Aiolos ಹೆಸರನ್ನು ಇಡಲಾಯಿತು.

 2,000 ವರ್ಷಗಳ ಹಿಂದಿನ ಭೂಕಂಪನ ಡಿಟೆಕ್ಟರ್‌

2,000 ವರ್ಷಗಳ ಹಿಂದಿನ ಭೂಕಂಪನ ಡಿಟೆಕ್ಟರ್‌

ಇಂದಿಗೂ ಸಹ ನಾವು ಭೂಕಂಪನವನ್ನು ಪತ್ತೆ ಹಚ್ಚಲು ನಿರ್ಧಿಷ್ಟವಾಗಿ ಆಗುತ್ತಿಲ್ಲ. ಆದರೆ ಚೀನಾದ ಖಗೋಳಶಾಸ್ತ್ರಜ್ಞ, ಗಣಿತಶಾಸ್ತ್ರಜ್ಞ, ಇಂಜಿನಿಯರ್ ಹಾಗು ಅನ್ವೇಷಣೆಗಾರ "ಜಾಂಗ್ ('ಚಾಂಗ್') ಹೆಂಗ್ " ಎಂಬಾತ 2,000 ವರ್ಷಗಳ ಹಿಂದೆಯೇ ಭೂಕಂಪನ ಪತ್ತೆ ಮಾಡಲಿಕ್ಕೆ ನೀವು ಫೋಟೋದಲ್ಲಿ ನೋಡುತ್ತಿರುವ ಡಿವೈಸ್‌ಅನ್ನು ಬಳಸುತ್ತಿದ್ದನಂತೆ.

ಬಾಗ್ದಾದ್ ಬ್ಯಾಟರಿಗಳು

ಬಾಗ್ದಾದ್ ಬ್ಯಾಟರಿಗಳು

ಪಾರ್ಥಿಯನ್‌ ಬ್ಯಾಟರಿಗಳು ಎಂದು ಸಹ ಬಾಗ್ದಾದ್‌ ಬ್ಯಾಟರಿಗಳನ್ನು ಕರೆಯಲಾಗುತ್ತದೆ. ತಾಮ್ರದ ಸಿಲಿಂಡರ್‌ ಮಣ್ಣಿನ ಮಡಕೆಇಂದ ಅವರಿಸಿರುತ್ತದೆ. ಈ ಬ್ಯಾಟರಿಯನ್ನು 1936ರಲ್ಲಿ ಬಾಗ್ದಾದ್‌ನ 'ಖುಜುತ್‌ ರಬು' ಎಂಬ 2000 ವರ್ಷಗಳ ಹಿಂದಿನ ಹಳ್ಳಿಯಲ್ಲಿ ಪತ್ತೆ ಮಾಡಲಾಯಿತು. ಈ ಬ್ಯಾಟರಿಯನ್ನು ಪಾರ್ಥಿಯನ್‌ ಕಾಲದಲ್ಲಿ ಅನ್ವೇಷಣೆ ಮಾಡಲಾಗಿತ್ತು. ಇದು ಕಾಫರ್‌ ಸಿಲಿಂಡರ್‌ ನಿಂದ ಆಧಾರವಾಗಿತ್ತು.

ಪ್ರಾಚೀನ ಕಾಲದ

ಪ್ರಾಚೀನ ಕಾಲದ "ಪೌರಾಣಿಕ ಸನ್‌ಸ್ಟೋನ್‌"ಸಮುದ್ರಯಾನ ಸಾಧನ

ಪುರಾಣಕ್ಕೆ ಬಹುಶಃ ಇದು ಸಾಕ್ಷಿ ಎನ್ನಬಹುದು. ಸನ್‌ಸ್ಟೋನ್‌ ಎಂಬ ಈ ಸಾಧನವು ಸಮುದ್ರಯಾನಕ್ಕೆ ಬಳಕೆಯಾಗುತ್ತಿತ್ತು ಎಂದು 2013 ರಲ್ಲಿ ವಿಜ್ಞಾನಿಗಳ ತಂಡವೊಂದು ಚಾನಲ್‌ ದ್ವೀಪದ ಎಲಿಜಬೆತ್‌ ಹಡಗಿನ ಪಳೆಯುಳಿಕೆಯಲ್ಲಿ ದೊರೆತ ಈ ಸಾಧನವನ್ನು ಕುರಿತು ಹೇಳಿದ್ದಾರೆ.

ಅಸಿರಿಯನ್ ನಿಮ್ರುಡ್ ಲೆನ್ಸ್

ಅಸಿರಿಯನ್ ನಿಮ್ರುಡ್ ಲೆನ್ಸ್

3,000 ವರ್ಷಗಳ ಹಿಂದಿನ ಶಿಲಾ ಸ್ಫಟಿಕದ ನಿಮ್ರುಡ್‌ ಲೆನ್ಸ್‌ (ದೂರದರ್ಶಕ) ಅನ್ನು 1850 ರಲ್ಲಿ ಅಸಿರಿಯಾದ ಅರಮನೆಯಲ್ಲಿ ಸರ್‌ ಜಾನ್‌ ಲಯರ್ಡ್‌ ಅನ್ವೇಷಣೆಗೊಳಿಸಿದನು. ಆಧುನಿಕ ಯುಗದಲ್ಲಿ ಇದು ಇರಾಕ್‌ ಆಗಿದೆ.

 ಸ್ಕಾಟ್‌ಲ್ಯಾಂಡ್‌ನ ಹಳೆಯ ಕ್ಯಾಲೆಂಡರ್‌

ಸ್ಕಾಟ್‌ಲ್ಯಾಂಡ್‌ನ ಹಳೆಯ ಕ್ಯಾಲೆಂಡರ್‌

ಜಗತ್ತಿನಲ್ಲಿ ಅತಿ ಹಳೆಯ ಕ್ಯಾಲೆಂಡರ್‌ ಯಾವುದು ಎಂದರೆ ಸ್ಕಾಟ್‌ಲೆಂಡ್‌ ಕ್ಯಾಲೆಂಡರ್‌. ಸ್ಕಾಟ್‌ಲ್ಯಾಂಡ್‌ ರಾಷ್ಟ್ರೀಯ ಟ್ರಸ್ಟ್‌ನ ಪ್ರಾಚೀನ ಸೈಟ್‌ ಮೇಲೆ ನಡೆಸಿದ ಸಂಶೋಧನೆಯಲ್ಲಿ ಅತಿ ಸಂಕೀರ್ಣವಾದ 10,000 ವರ್ಷಗಳ ಹಿಂದಿನ ಕ್ಯಾಲೆಂಡರ್‌ ಪತ್ತೆಯಾಗಿತ್ತು. ವಿಶ್ವದಲ್ಲೇ ಅನ್ವೇಷಣೆಯಲ್ಲಿ ದೊರೆತ ಮೊಟ್ಟ ಮೊದಲ ಅತಿ ಹಳೆಯ ಕ್ಯಾಲೆಂಡರ್‌ ಇದು.

 1,600 ವರ್ಷಗಳ ಹಿಂದಿನ ಪಾನಪಾತ್ರೆ

1,600 ವರ್ಷಗಳ ಹಿಂದಿನ ಪಾನಪಾತ್ರೆ

1,600 ವರ್ಷಗಳ ಹಿಂದಿನ ಪಾನಪಾತ್ರೆಯು ರೋಮನ್ನರು ನ್ಯಾನೋ ಟೆಕ್ನಾಲಜಿಯನ್ನು ಬಳಕೆಮಾಡುತ್ತಿದ್ದರು ಎಂಬುದನ್ನು ತೋರಿಸುತ್ತದೆ. ಈ ಪಾನಪಾತ್ರೆಯು ಬೆಳಕಿನ ದಿಕ್ಕಿಗೆ ತಕ್ಕನಾಗಿ ಬಣ್ಣವನ್ನು ಬದಲಾಯಿಸುತ್ತದೆ. ಗಾಜಿನ ಪಾನಪಾತ್ರೆಯಾದ ಇದನ್ನು ರೋಮನ್‌ ರಾಜ ಲಿಕರ್ಗಸ್‌ ಕಾಲದಲ್ಲಿ ಅನ್ವೇಷಣೆ ಮಾಡಲಾಗಿತ್ತು.

2000 ವರ್ಷಗಳ ಹಳೆಯ ಲೋಹದ ಲೇಪನ

2000 ವರ್ಷಗಳ ಹಳೆಯ ಲೋಹದ ಲೇಪನ

2,000 ವರ್ಷಗಳ ಹಿಂದಿನ ಕುಶಲಕರ್ಮಿಗಳು, ಪ್ರಸ್ತುತದಲ್ಲಿ ಡಿವಿಡಿ, ಸೋಲಾರ್‌ ಕೋಶಗಳು, ಇಲೆಕ್ಟ್ರಾನಿಕ್ ಡಿವೈಸ್‌ಗಳಿಗೆ ಅತ್ಯುತ್ತಮವಾದ ಲೋಹ ಲೇಪನ ಎಂದು ಏನನ್ನು ಬಳಸುತ್ತಿವೋ ಅಂತಹ ಲೋಹದ ಲೇಪನವನ್ನು ಅವರು ಅಂದಿನ ಪ್ರತಿಮೆಗಳಿಗೆ ಬಳಸುತ್ತಿದ್ದರು ಎಂದು ಸಂಶೋಧನೆ ಹೇಳಿದೆ.

ರೋಮನ್‌ ಕಾಂಕ್ರೀಟ್‌

ರೋಮನ್‌ ಕಾಂಕ್ರೀಟ್‌

ವಿಜ್ಞಾನಿಗಳು ರೋಮನ್‌ ಕಾಂಕ್ರೀಟ್‌ ಸಂಯೋಜನೆಯನ್ನು ಅಧ್ಯಯನ ಮಾಡಿದಾಗ 2,000 ವರ್ಷಗಳ ಹಿಂದೆ ಮೆಡಿಟರೇನಿಯನ್‌ ಸಮುದ್ರದಲ್ಲಿ ಸಿಕ್ಕ ರೋಮನ್‌ ಕಾಂಕ್ರೀಟ್‌ ಇಂದಿನ ಉನ್ನತ ಮಟ್ಟದ ಕಾಂಕ್ರೀಟ್‌ಗೆ ಯೋಗ್ಯವಾಗಿದೆ. ಹಾಗೂ ನಿಸರ್ಗಕ್ಕೆ ಹಾನಿಕಾರಕವಲ್ಲದ ಗುಣವನ್ನು ಹೊಂದಿದೆ ಎಂದು ಹೇಳಿದ್ದಾರೆ. ವೈಜ್ಞಾನಿಕ ಆಧಾರಿತವಾದ ಕಾಂಕ್ರೀಟ್‌ ಎಂದು ಹೇಳಲಾಗಿದೆ.

ಪ್ರಾಚೀನ ಆಂಟಿಕಿಥೆರಾ ಯಾಂತ್ರಿಕತೆ

ಪ್ರಾಚೀನ ಆಂಟಿಕಿಥೆರಾ ಯಾಂತ್ರಿಕತೆ

1900 ನೇ ಇಸವಿಯಲ್ಲಿ ಗ್ರೀಕ್‌ ದ್ವೀಪದಲ್ಲಿ ಹಡಗಿನ ಅವಶೇಷಗಳನ್ನು ಪತ್ತೆಮಾಡಿದಾಗ ಈ ಆಂಟಿಕಿಥೆರಾ ಮೆಕಾನಿಸಂ ಬೆಳಕಿಗೆ ಬಂದಿದೆ. ಇದು ಮೆಟಾಲಿಕ್‌ ಡಿವೈಸ್ ಆಗಿದ್ದು, ಗೇರ್‌ಗಳ ಸಂಯೋಜನೆ ಹೊಂದಿದೆ. ಪ್ರಾಚೀನ ಕಾಲದ ಅದ್ಭುತ ಮೆಕಾನಿಕಲ್‌ ಡಿವೈಸ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಗಿಜ್‌ಬಾಟ್

ಗಿಜ್‌ಬಾಟ್

ಜಪಾನ್‌ನ ಈ ಅನ್ವೇಷಣೆಗಳು ನಮ್ಮ ನೆಲದಲ್ಲೂ ಸೂಪರ್ ಹಿಟ್ಜಪಾನ್‌ನ ಈ ಅನ್ವೇಷಣೆಗಳು ನಮ್ಮ ನೆಲದಲ್ಲೂ ಸೂಪರ್ ಹಿಟ್

ಜಗತ್ತಿನ ವೇಗದ ಕ್ಯಾಮೆರಾದ ಅನ್ವೇಷಣೆಜಗತ್ತಿನ ವೇಗದ ಕ್ಯಾಮೆರಾದ ಅನ್ವೇಷಣೆ

ಫ್ರಿಡ್ಜ್ ಇಲ್ಲದೆಯೇ ಆಹಾರ ತಾಜಾ ಆಗಿರಬೇಕೇ? ಇಲ್ಲಿದೆ ಪರಿಹಾರಫ್ರಿಡ್ಜ್ ಇಲ್ಲದೆಯೇ ಆಹಾರ ತಾಜಾ ಆಗಿರಬೇಕೇ? ಇಲ್ಲಿದೆ ಪರಿಹಾರ

Most Read Articles
Best Mobiles in India

English summary
Ten amazing inventions from ancient times. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X