Home
ಸುದ್ದಿಜಾಲ

ಶುಭ ಸುದ್ದಿ! ನಿರುದ್ಯೋಗಿಗಳಿಗೆ ಎಲಾನ್‌ ಮಸ್ಕ್‌ ಬಿಗ್ ಆಫರ್‌.. ಈಗಲೇ ಅರ್ಜಿ ಸಲ್ಲಿಸಿ!

ಎಲಾನ್‌ ಮಸ್ಕ್‌ ಭಾರತೀಯರಿಗೆ ಸಿಹಿಸುದ್ದಿ ನೀಡಿದ್ದಾರೆ. ಟೆಸ್ಲಾ (Tesla) ಕಾರು ಭಾರತಕ್ಕೆ ಬರಲು ಸಜ್ಜಾಗಿದೆ. ಇದರೊಂದಿಗೆ ಪ್ರಮುಖ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೌದು, ಎಲಾನ್‌ ಮಸ್ಕ್‌ (Elon Musk) ಮತ್ತು ಪ್ರಧಾನಿ ನರೇಂದ್ರ ಮೋದಿ ಭೇಟಿ ಬೆನ್ನಲ್ಲೇ ನೇಮಕಾತಿ ಆರಂಭವಾಗಿದೆ. ಟೆಸ್ಲಾ ಇಂಡಿಯಾ ಕಂಪನಿಗೆ ವಿವಿಧ ಜಾಬ್‌ಗಳಿಗೆ ನೇಮಕಾತಿ ಪ್ರಕ್ರಿಯೆ ಶುರು ಮಾಡಿದೆ. ಟೆಸ್ಲಾ ಇಂಡಿಯಾದಲ್ಲಿ (Tesla India) ಯಾವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ? ಟೆಸ್ಲಾದಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಇನ್ನಿತರ ಸಂಪೂರ್ಣ ಮಾಹಿತಿ ಇಲ್ಲಿದೆ.

ಟೆಸ್ಲಾದಲ್ಲಿ ಕೆಲಸ ಮಾಡಬೇಕೆಂಬ ಆಸೆ ಇದ್ದವರಿಗೆ ಇದು ಶುಭ ಸುದ್ದಿ. ಟೆಸ್ಲಾ ಇಂಕ್ ಎಲಾನ್ ಮಸ್ಕ್ ಅವರ ಎಲೆಕ್ಟ್ರಿಕ್ ವಾಹನ (EV) ಕಂಪನಿಯಾಗಿದೆ. ಇದೀಗ ಭಾರತದಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದೆ. ವಾಹನ ಸೇವಾ ವಲಯ, ಮಾರಾಟ ಮತ್ತು ಗ್ರಾಹಕ ಬೆಂಬಲ ಮಾರಾಟ ಮತ್ತು ಗ್ರಾಹಕ ಬೆಂಬಲ, ಕಾರ್ಯಾಚರಣೆ ಮತ್ತು ವ್ಯಾಪಾರ ಬೆಂಬಲ, ಮಾರಾಟ ಮತ್ತು ನಿಶ್ಚಿತಾರ್ಥ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಟೆಸ್ಲಾ ಇಂಡಿಯಾ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ತಿಳಿಯಲು ಮುಂದೆ ಓದಿ.

ಶುಭ ಸುದ್ದಿ! ನಿರುದ್ಯೋಗಿಗಳಿಗೆ Tesla ಬಿಗ್ ಆಫರ್‌.. ಈಗಲೇ ಅರ್ಜಿ ಸಲ್ಲಿಸಿ!

ಮೋದಿ-ಮಸ್ಕ್ ಭೇಟಿ ನಂತರ ನೇಮಕಾತಿ ಶುರು!

ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯ ಬಳಿಕ ಟೆಸ್ಲಾ ಭಾರತದಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದೆ. ಎಲಾನ್ ಮಸ್ಕ್ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನಿ ಮೋದಿ ಅವರು ಭೇಟಿಯಾಗಿದ್ದರು. ಶೀಘ್ರದಲ್ಲೇ ಕಂಪನಿಯು ಭಾರತದಲ್ಲಿ ತನ್ನ ಉತ್ಪಾದನೆ ಮತ್ತು ಕಾರ್ಯಾಚರಣೆಗಳನ್ನು ಶುರು ಮಾಡಬಹುದು ಎನ್ನುವುದಕ್ಕೆ ಇದು ಪುಷ್ಟಿ ನೀಡುತ್ತಿದೆ.

ಯಾವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ?

ಟೆಸ್ಲಾ ಮುಂಬೈನಲ್ಲಿ (ಮಹಾರಾಷ್ಟ್ರ) ಹಲವು ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಕೆಲವು ಪ್ರಮುಖ ಹುದ್ದೆಗಳನ್ನು ಈ ಕೆಳಗಿನಂತೆ ನೋಡಬಹುದು.

1. ಸರ್ವೀಸ್ ಅಡ್ವೈಸರ್
2. ಪಾರ್ಟ್ಸ್ ಅಡ್ವೈಸರ್
3. ಸರ್ವೀಸ್ ಟೆಕ್ನೀಷಿಯನ್
4. ಸರ್ವೀಸ್ ಮ್ಯಾನೇಜರ್
5. ಟೆಸ್ಲಾ ಅಡ್ವೈಸರ್
6. ಸ್ಟೋರ್ ಮ್ಯಾನೇಜರ್
7. ಬ್ಯುಸಿನೆಸ್ ಆಪರೇಷನ್ ಅನಾಲಿಸ್ಟ್
8. ಕಸ್ಟಮರ್ ಸಪೋರ್ಟ್ ಸೂಪರ್​ವೈಸರ್
9. ಕಸ್ಟಮರ್ ಸಪೋರ್ಟ್ ಸ್ಪೆಷಲಿಸ್ಟ್
10. ಡೆಲಿವರಿ ಆಪರೇಷನ್ಸ್ ಸ್ಪೆಷಲಿಸ್ಟ್
11. ಆರ್ಡರ್ ಆಪರೇಷನ್ಸ್ ಸ್ಪೆಷಲಿಸ್ಟ್
12. ಇನ್​ಸೈಡ್ ಸೇಲ್ಸ್ ಅಡ್ವೈಸರ್
13. ಕನ್​ಸ್ಯೂಮರ್ ಎಂಗೇಜ್ಮೆಂಟ್ ಮ್ಯಾನೇಜರ್

* ವಾಹನ ಸೇವಾ ವಲಯ: ಸೇವಾ ಸಲಹೆಗಾರ, ಭಾಗಗಳ ಸಲಹೆಗಾರ, ಸೇವಾ ತಂತ್ರಜ್ಞ, ಸೇವಾ ವ್ಯವಸ್ಥಾಪಕ
* ಮಾರಾಟ ಮತ್ತು ಗ್ರಾಹಕ ಬೆಂಬಲ: ಟೆಸ್ಲಾ ಸಲಹೆಗಾರ, ಅಂಗಡಿ ವ್ಯವಸ್ಥಾಪಕ, ಗ್ರಾಹಕ ಬೆಂಬಲ ಮೇಲ್ವಿಚಾರಕ, ಗ್ರಾಹಕ ಬೆಂಬಲ ತಜ್ಞ
* ಕಾರ್ಯಾಚರಣೆ ಮತ್ತು ವ್ಯಾಪಾರ ಬೆಂಬಲ: ವ್ಯಾಪಾರ ಕಾರ್ಯಾಚರಣೆ ವಿಶ್ಲೇಷಕ, ವಿತರಣಾ ಕಾರ್ಯಾಚರಣೆ ತಜ್ಞ, ಆದೇಶ ಕಾರ್ಯಾಚರಣೆ ತಜ್ಞ
* ಮಾರಾಟ ಮತ್ತು ನಿಶ್ಚಿತಾರ್ಥ: ಒಳಗಿನ ಮಾರಾಟ ಸಲಹೆಗಾರ, ಗ್ರಾಹಕ ನಿಶ್ಚಿತಾರ್ಥ ವ್ಯವಸ್ಥಾಪಕ

ಶುಭ ಸುದ್ದಿ! ನಿರುದ್ಯೋಗಿಗಳಿಗೆ Tesla ಬಿಗ್ ಆಫರ್‌.. ಈಗಲೇ ಅರ್ಜಿ ಸಲ್ಲಿಸಿ!

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಟೆಸ್ಲಾ ಇಂಡಿಯಾ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಸುಲಭ ವಿಧಾನಗಳನ್ನು ಅನುಸರಿಸಬಹುದು.

ಹಂತ 1: ಮೊದಲಿಗೆ ಟೆಸ್ಲಾ ಅಧಿಕೃತ ವೆಬ್‌ಸೈಟ್‌ಗೆ (tesla.com) ಭೇಟಿ ನೀಡಿ.
ಹಂತ 2: ಆಗ ಮುಖಪುಟ ಓಪನ್ ಆಗುತ್ತದೆ. ಅಲ್ಲಿ Careers ವಿಭಾಗವನ್ನು ಕ್ಲಿಕ್ ಮಾಡಿ.
ಹಂತ 3: ಸ್ಥಳದಲ್ಲಿ India ಆಯ್ಕೆ ಮಾಡಿ.
ಹಂತ 4: ನಿಮಗೆ ಬೇಕಾದ ಹುದ್ದೆಯ ಪ್ರೊಫೈಲ್ ಆಯ್ಕೆ ಮಾಡಿ. (ಆ ಹುದ್ದೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ)
ಹಂತ 5: ಬಳಿಕ Apply ಬಟನ್ ಕ್ಲಿಕ್ ಮಾಡಿ.
ಹಂತ 6: ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
ಹಂತ 7: ಒಮ್ಮೆ ವಿವರಗಳನ್ನು ಓದಿ, ನಂತರ Submit ಆಯ್ಕೆ ಕ್ಲಿಕ್ಕಿಸಿ.
ಹಂತ 8: ಅರ್ಜಿ ಸಲ್ಲಿಕೆಯಾದ ಬಳಿಕ ದೃಢೀಕರಣ ಪೇಜ್‌ ಡೌನ್‌ಲೋಡ್ ಮಾಡಿಕೊಳ್ಳಿ. (ಪ್ರಿಂಟ್‌ಔಟ್ ತೆಗೆದುಕೊಳ್ಳಿ).

Best Mobiles in India

English summary
Tesla seeks applications for 13 roles in India: know where, how to apply here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+