ಭಾರತದಲ್ಲಿ Tesla Model Y ಬೆಲೆ ಮತ್ತು Tessie ಆ್ಯಪ್ ಚಂದಾದಾರಿಕೆ ಘೋಷಣೆ!
ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರ ಒಡೆತನದ 'ಟೆಸ್ಲಾ (Tesla)' ಭಾರತ ಇವಿ ಮಾರುಕಟ್ಟೆಗೆ ಇದೀಗ ಪ್ರವೇಶಿಸಿದೆ. ಅಮೆರಿಕ ಮೂಲದ ಆಟೋಮೋಟಿವ್ ಕಂಪನಿಯು ದೇಶದಲ್ಲಿ ಮಾರಾಟ ಮಾಡಲಿರುವ ಮೊದಲ ಇವಿ ಮಾದರಿಯಾಗಿ Tesla Model Y ಬಿಡುಗಡೆಯಾಗಿದೆ. ಇದರ ಜೊತೆಗೆ ದೇಶದಲ್ಲಿ, Tesla ಮಾಲೀಕರಿಗೆ ನಿರ್ವಹಣಾ ವೇದಿಕೆಯಾಗಿ 'ಟೆಸ್ಸಿ ಅಪ್ಲಿಕೇಶನ್' ಅನ್ನು ಸಹ ಪ್ರಾರಂಭಿಸಲಾಗಿದೆ. ಹಾಗಾದರೆ, ದೇಶದಲ್ಲಿ Tesla Model Y ರಿಯರ್-ವೀಲ್ ಡ್ರೈವ್ (RWD) ಬೆಲೆ ಎಷ್ಟು?, ಅಪ್ಲಿಕೇಶನ್ ಬಳಕೆ ಮತ್ತು ಚಂದಾದಾರಿಕೆ ಎಷ್ಟು ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.
Tesla ಸಂಸ್ಥೆಯು ಮುಂಬೈನಲ್ಲಿ ಎಕ್ಸ್‌ಪೀರಿಯೆನ್ಸ್ ಸೆಂಟರ್ ತೆರೆಯುವುದರೊಂದಿಗೆ ಭಾರತದ ಇವಿ ಮಾರುಕಟ್ಟೆಯನ್ನು ಅಧಿಕೃತವಾಗಿ ಪ್ರವೇಶಿಸಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC) ನಲ್ಲಿರುವ ಮೇಕರ್ ಮ್ಯಾಕ್ಸಿಟಿಯಲ್ಲಿರುವ ಹೊಸ Tesla ಎಕ್ಸ್‌ಪೀರಿಯೆನ್ಸ್ ಸೆಂಟರ್‌ನಲ್ಲಿ ಗ್ರಾಹಕರು EV ಅನ್ನು ಬಳಸಿ ಎಕ್ಸ್‌ಪೀರಿಯನ್ಸ್ ಮಾಡಬಹುದು. ಕಂಪನಿಯ ಪ್ರಕಾರ, ಪ್ರಸ್ತುತ ದೆಹಲಿ, ಗುರುಗ್ರಾಮ್ ಮತ್ತು ಮುಂಬೈನಲ್ಲಿ Tesla Model Y ಖರೀದಿ ಮತ್ತು ನೋಂದಣಿ ಮಾಡಿಕೊಳ್ಳಬಹುದು. ಮತ್ತು ಗ್ರಾಹಕರು ಈ ವರ್ಷದ ಮೂರನೇ ತ್ರೈ ಮಾಸಿಕದ ವೇಳೆ( Q3 2025) ವೇಳೆಗೆ ವಿತರಣೆ ಪಡೆಯಲಿದ್ದಾರೆ.
ಭಾರತದಲ್ಲಿ Tesla Model Y ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Tesla Model Y ಬೆಲೆಯನ್ನು ರಿಯರ್-ವೀಲ್ ಡ್ರೈವ್ (RWD) ಮಾದರಿಗೆ ರೂ. 59.89 ಲಕ್ಷ (ಎಕ್ಸ್-ಶೋರೂಂ) ಎಂದು ನಿಗದಿಪಡಿಸಲಾಗಿದೆ. ಇದರ ಲಾಂಗ್ ರೇಂಜ್ RWD ಮಾದರಿಯು ರೂ. 67.89 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದೆ. Tesla Model Y ಕಪ್ಪು ಒಳಾಂಗಣದೊಂದಿಗೆ ಸ್ಟೆಲ್ತ್ ಗ್ರೇ ಔಟ್ ಫಿನೀಶ್‌ನಲ್ಲಿ ಬರುತ್ತದೆ. ಇತರ ಬಾಹ್ಯ ಬಣ್ಣ ಆಯ್ಕೆಗಳನ್ನು ಪಡೆಯಲು 95,000 ರಿಂದ 1.85 ಲಕ್ಷ ರೂ.ಗಳ ವರೆಗೆ ಶುಲ್ಕಗಳಿವೆ.

Tesla ಕಂಪನಿಯ ಪ್ರಕಾರ, Tesla Model Y ಮಾದರಿಯ ಸಂಪೂರ್ಣ ಸ್ವಯಂ-ಚಾಲನಾ ಸಾಮರ್ಥ್ಯಗಳನ್ನು (FSD) ಅನ್‌ಲಾಕ್ ಮಾಡಲು 6 ರೂ. ಲಕ್ಷ ವೆಚ್ಚವಾಗುತ್ತದೆ. Tesla Model Y ನ ಸಂಪೂರ್ಣ ಸ್ವಯಂ-ಚಾಲನಾ ಸಾಮರ್ಥ್ಯಗಳಲ್ಲಿ, ನ್ಯಾವಿಗೇಟ್ ಆನ್ ಆಟೋಪೈಲಟ್, ಆಟೋಪಾರ್ಕ್, ಸಮ್ಮನ್ ಮತ್ತು ಟ್ರಾಫಿಕ್ ಮತ್ತು ಸ್ಟಾಪ್ ಸೈನ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳು ಸೇರಿವೆ.
ಟೆಸ್ಸಿ ಅಪ್ಲಿಕೇಶನ್ ಪ್ರಾರಂಭ
ಭಾರತದಲ್ಲಿ Tesla Model Y ಬಿಡುಗಡೆಗೆ ಪೂರಕವಾಗಿ, ಕಂಪನಿಯು ಟೆಸ್ಸಿ (Tessie ) ಅಪ್ಲಿಕೇಶನ್ ಅನ್ನು ಸಹ ಬಿಡುಗಡೆ ಮಾಡಿದೆ. ಇದು ಪ್ರಸ್ತುತ iOS ನಲ್ಲಿ ಮಾತ್ರ ಲಭ್ಯವಿದ್ದು, ಈ ಅಪ್ಲಿಕೇಶನ್ ಅನ್ನು Tesla ಮಾಲೀಕರಿಗೆ ನಿರ್ವಹಣಾ ವೇದಿಕೆಯಾಗಿ ಪ್ರಚಾರ ಮಾಡಲಾಗಿದೆ. ಈ ಟೆಸ್ಸಿ ಅಪ್ಲಿಕೇಶನ್ ಮೂಲಕ, ಬಳಕೆದಾರರು ಪ್ರತಿ ಟ್ರಿಪ್, ಬ್ಯಾಟರಿ ಮತ್ತು ಅದನ್ನು ಇತರರೊಂದಿಗೆ ಹೋಲಿಸಬಹುದು ಮತ್ತು ಚಾರ್ಜಿಂಗ್ ಸ್ಥಿತಿ ಮತ್ತು ಫ್ಯಾಂಟಮ್ ಡ್ರೈನ್ ಅನ್ನು ಟ್ರ್ಯಾಕ್ ಮಾಡಬಹುದು.
ಇದಲ್ಲದೆ, ಟೆಸ್ಸಿ ಅಪ್ಲಿಕೇಶನ್ ಮೂಲಕ ಆಪಲ್ ವಾಚ್ ಬಳಸಿ ತಮ್ಮ ಟೆಸ್ಲಾವನ್ನು ನಿಯಂತ್ರಿಸಲು ಸಾಧ್ಯ. ಪರ್ಯಾಯವಾಗಿ, ಮ್ಯಾಕ್ ಕಂಪ್ಯೂಟರ್ ಅಥವಾ ವಿಂಡೋಸ್-ಆಧಾರಿತ ಪಿಸಿಯಲ್ಲಿ ವೆಬ್ ಬ್ರೌಸರ್ ಬಳಸಿ ನಿಯಂತ್ರಿಸಬಹುದು. ಇದು ಸೆಂಟ್ರಿ ಈವೆಂಟ್‌ಗಳನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ, ಹಠಾತ್ ಚಲನೆಗಳು ಪತ್ತೆಯಾದರೆ ಅಥವಾ ಯಾರಾದರೂ EV ಯ ಬಾಗಿಲು ಅಥವಾ ಟ್ರಂಕ್ ಅನ್ನು ತೆರೆಯಲು ಪ್ರಯತ್ನಿಸಿದರೆ ಅಲಾರಾಂ ಕೂಗುತ್ತದೆ.
ಈ ಟೆಸ್ಸಿ ಅಪ್ಲಿಕೇಶನ್ ಅನ್ನು ಬಳಸಲು ಚಂದಾದಾರಿಕೆ ಅಗತ್ಯವಿದೆ. ಟೆಸ್ಸಿ ಅಪ್ಲಿಕೇಶನ್ ಚಂದಾದಾರಿಕೆಯ ಬೇಸಿಕ್ ಯೋಜನೆಗೆ ತಿಂಗಳಿಗೆ 499 ರೂ. ಪಾವತಿಸಬೇಕಾಗುತ್ತದೆ. ಇದರಲ್ಲಿನ ಪ್ರೊ ಯೋಜನೆಗೆ ತಿಂಗಳಿಗೆ 1,499 ರೂ. ಪಾವತಿಸಬೇಕು. Tesla ಮಾಲೀಕರು ವಾರ್ಷಿಕ ಚಂದಾದಾರಿಕೆ ಅಥವಾ ಜೀವಿತಾವಧಿಯ ಚಂದಾದಾರಿಕೆಯನ್ನು ಸಹ ಖರೀದಿಸಬಹುದು, ಇದರ ಬೇಸಿಕ್ ಯೋಜನೆಗೆ ತಿಂಗಳಿಗೆ 19,900 ರೂ. ಮತ್ತು ಪ್ರೊ ಯೋಜನೆಗೆ 29,900 ರೂ. ಬೆಲೆಯಿದೆ.


Click it and Unblock the Notifications








