Home
ಸುದ್ದಿಜಾಲ

Nano Banana Pro: ಫೋಟೋದಲ್ಲಿನ ಕೈಬರಹದ ಪ್ರಶ್ನೆಗೆ ಅದೇ ರೀತಿ ಉತ್ತರ!

ಗೂಗಲ್ ಇತ್ತೀಚಿಗಷ್ಟೇ ತನ್ನ ಹೊಸದಾದ ಮತ್ತು ಅತ್ಯಾಧುನಿಕವಾದ AI ಆಧಾರಿತ ಇಮೇಜ್ ಜನರೇಟರ್ ಟೂಲ್ Nano Banana Pro ಮಾದರಿಯನ್ನು ಪರಿಚಯಿಸಿತ್ತು. ಇದರ ಸಾಮರ್ಥ್ಯವನ್ನು ಪರೀಕ್ಷಿಸಿದ ವ್ಯಕ್ತಿಯೋರ್ವರು ಆಶ್ಚರ್ಯಗೊಂಡಿದ್ದಾರೆ. ನೋಟ್‌ಬುಕ್‌ನಲ್ಲಿದ್ದ ಕೈಬರಹದ ಪ್ರಶ್ನೆಯ ಫೋಟೋವನ್ನು ಮಾದರಿಗೆ ನೀಡಿದಾಗ, Nano Banana Pro ಚಿತ್ರವನ್ನು ವಿಶ್ಲೇಷಿಸಿ ಪ್ರಶ್ನೆಯನ್ನು ಸರಿಯಾಗಿ ಬಗೆಹರಿಸಿದೆ. ಅದಕ್ಕಿಂತ ವಿಶಿಷ್ಟವಾದ ವಿಷಯ ಎಂದರೆ, Nano Banana Pro ಮಾದರಿಯು ಉತ್ತರವನ್ನು ಅವರ ಕೈಬರಹದಂತೆ ಪುನರಾವರ್ತಿಸಿದೆ.!

ಹೌದು, ಎಕ್ಸ್‌ನಲ್ಲಿ sid (@immasiddx) ಎಂಬುವವರು ಈ ಕುರಿತು ಒಂದು ಪೋಸ್ಟ್ ಪ್ರಕಟಿಸಿದ್ದಾರೆ. ಇದರಲ್ಲಿ ಅವರು ತನ್ನ ನೋಟ್‌ಬುಕ್‌ನಲ್ಲಿದ್ದ ಕೈಬರಹದ ಪ್ರಶ್ನೆಯ ಫೋಟೋವನ್ನು ಮಾದರಿಗೆ ನೀಡಿದಾಗ, Nano Banana Pro ಟೂಲ್ ಆ ಚಿತ್ರವನ್ನು ವಿಶ್ಲೇಷಿಸಿ ಪ್ರಶ್ನೆಯನ್ನು ಸರಿಯಾಗಿ ಬಗೆಹರಿಸಿದೆ. ಇದರಿಂದ ಆಶ್ಚರ್ಯಗೊಂಡ ಅವರು, "ಚಿತ್ರವನ್ನು ಕೊಟ್ಟ ತಕ್ಷಣ ಅದು ಸರಿಯಾಗಿ ಉತ್ತರ ಬರೆದಿತು. ನನ್ನದೇ ಕೈಬರಹದಲ್ಲಿ ಉತ್ತರ ಬಂದಿದ್ದು ಬೆರಗುಗೊಳಿಸಿತು. ವಿದ್ಯಾರ್ಥಿಗಳಿಗೆ ಇದು ಬಹಳ ಉಪಯೋಗವಾಗಬಹುದು." ಎಂದಿದ್ದಾರೆ. ಇದು ಈಗ ವೈರಲ್ ಆಗಿದೆ.

ಏನಿದು Nano Banana Pro?
Nano Banana Pro ಒಂದು ಮುಂದಿನ ತಲೆಮಾರಿನ ಇಮೇಜ್ ಜನರೇಟರ್ ಟೂಲ್ ಆಗಿದೆ. ಬಳಕೆದಾರರು ಏನು ಬೇಕೆಂದು ಬರೆಯುವುದರಿಂದಲೇ ಇದು ಚಿತ್ರವನ್ನು ಸೃಷ್ಟಿಸಬಹುದು. ಇದರಲ್ಲಿ,
ಹೊಸ ಚಿತ್ರಗಳನ್ನು ರಚಿಸುವುದು
ಇರುವ ಚಿತ್ರಗಳನ್ನು ಎಡಿಟ್ ಮಾಡುವುದು
ಚಿತ್ರಗಳಲ್ಲಿ ಪಠ್ಯವನ್ನೂ ಸ್ಪಷ್ಟವಾಗಿ ಸೇರಿಸುವುದು
ಈ ಎಲ್ಲ ಕಾರ್ಯಗಳನ್ನು ಇದು ಹೆಚ್ಚು ನಿಖರವಾಗಿ ನಡೆಸುತ್ತದೆ.
Gemini 3 Pro ತಂತ್ರಜ್ಞಾನವನ್ನು ಆಧಾರಿಸಿದ ಕಾರಣ, ಇದು ಹಿಂದಿನ Nano Banana ಮಾದರಿಗಿಂತ ವೇಗವಾದ, ನಿಖರವಾದ ಮತ್ತು ಹೆಚ್ಚು ಸೃಜನಶೀಲವಾಗಿದೆ.

Nano Banana Pro: ಫೋಟೋದಲ್ಲಿನ ಕೈಬರಹದ ಪ್ರಶ್ನೆಗೆ ಅದೇ ರೀತಿ ಉತ್ತರ!

Nano Banana Pro ಅನ್ನು ಹೇಗೆ ಬಳಸಬೇಕು?
Nano Banana Pro ಸಾಧನವನ್ನು ಬಳಸಲು ಹಲವಾರು ಆಯ್ಕೆಗಳಿವೆ. ಇವುಗಳಲ್ಲಿ,
ಸಾಮಾನ್ಯ ಬಳಕೆದಾರರಿಗೆ: Gemini ಆಪ್‌ನಲ್ಲಿ ಚಿತ್ರ ರಚನೆ ವೈಶಿಷ್ಟ್ಯ ಲಭ್ಯ. ಉಚಿತ ಬಳಕೆದಾರರಿಗೆ ಕೆಲವು ಮಿತಿಗಳು ಇವೆ.
ಪ್ರೋ/ಅಲ್ಟ್ರಾ ಬಳಕೆದಾರರಿಗೆ (US): Google Search ನಲ್ಲಿ AI ಮೋಡ್ ಮೂಲಕ ನೇರವಾಗಿ ಚಿತ್ರಗಳನ್ನು ತಯಾರಿಸಬಹುದು.
ಲೇಖಕರು/ಶೋಧಕರಿಗೆ: NotebookLM ನಲ್ಲಿ ಇದನ್ನು ಬಳಸಬಹುದು.
ವೃತ್ತಿಪರರಿಗೆ: Google Ads, Slides, Vids ಮತ್ತು Workspace ಆಪ್‌ಗಳಲ್ಲಿ ಇದು ಒಳಗೊಂಡಿದೆ.
ಡೆವಲಪರ್‌ಗಳಿಗೆ: Gemini API ಮತ್ತು Google AI Studio ಮೂಲಕ. Enterprise ಬಳಕೆದಾರರಿಗೆ Vertex AI ನಲ್ಲಿ ಲಭ್ಯ.

2. ವಿವರವಾದ ಪ್ರಾಂಪ್ಟ್ ಬಳಸಿ ಚಿತ್ರ ರಚನೆ
Nano Banana Pro ಟೂಲ್ ಈಗ ಸಂಕೀರ್ಣವಾದ ಸೂಚನೆಗಳನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತದೆ. ನೀವು ಬಯಸುವ ಚಿತ್ರವನ್ನು ವಿವರವಾಗಿ ವಿವರಿಸಿ, ಸ್ಪಷ್ಟವಾಗಿ ಬರೆದು ಉತ್ತಮ ಚಿತ್ರ ಪಡೆಯಲು ಸಾಧ್ಯ. ಉದಾಹರಣೆಗೆ,
ಉದಾಹರಣೆ 1: "ಸಂಜೆ ಸೂರ್ಯಾಸ್ತದ ಹೊತ್ತಿನಲ್ಲಿ ಬ್ಲೂಸ್ಕಾರ್ಫ್ ಧರಿಸಿದ ಗೋಲ್ಡನ್ ರಿಟ್ರೀವರ್ ನಾಯಿಯ 4K ಫೋಟೋ."ಪಠ್ಯ ಸೇರಿಸುವ ಸಂದರ್ಭ: ಪೋಸ್ಟರ್ ಅಥವಾ ಬ್ಯಾನರ್‌ಗಳಿಗೆ ಬಳಸುವ ಪಠ್ಯವನ್ನು ಸ್ಪಷ್ಟವಾಗಿ ತಿಳಿಸಿ.
ಉದಾಹರಣೆ 2: "ಕಾಫಿ ಶಾಪ್‌ಗೆ 'Daily Grind' ಎಂದು ಬೋಲ್ಡ್ ಸ್ಕ್ರಿಪ್ಟ್ ಫಾಂಟ್‌ನಲ್ಲಿ ಇರುವ ವಿನ್ಟೇಜ್ ಪೋಸ್ಟರ್."ಕ್ಯಾಮೆರಾ ಆಂಗಲ್, ಲೈಟಿಂಗ್, ಫೋಕಸ್ ಇತ್ಯಾದಿಗಳನ್ನು ಸಹ ನೈಸರ್ಗಿಕ ಭಾಷೆಯಲ್ಲಿ ತಿಳಿಸಬಹುದು.

3. ಫೋಟೊ ಎಡಿಟ್ ಮತ್ತು ಸರಣಿ ದೃಶ್ಯಗಳಲ್ಲಿನ ಬದಲಾವಣೆಗಳು
ಒಂದು ವೇಳೆ ನೀವು ಪ್ರಸ್ತುತ ಇರುವ ಚಿತ್ರಗಳನ್ನು ಬದಲಾಯಿಸಲು: ಒಂದು ಫೋಟೋ ಅಪ್ಲೋಡ್ ಮಾಡಿ, "ಹಿನ್ನೆಲೆಯನ್ನು ಬದಲಿಸಿ", "ಒಂದು ವಸ್ತುವನ್ನು ತೆಗೆದುಹಾಕಿ" ಎಂಬಂತೆ ಸೂಚನೆ ನೀಡಿ.
ಒಂದೇ ಮಾದರಿ ಇರುವ ಚಿತ್ರಗಳ ಸರಣಿಯಲ್ಲಿ 14 ಚಿತ್ರಗಳನ್ನು ಸೇರಿಸಿ ಒಂದು ಸಂಕೀರ್ಣ ದೃಶ್ಯ ರಚಿಸಬಹುದು ಮತ್ತು 5 ಜನರ ಮುಖದ/ವ್ಯಕ್ತಿತ್ವದ ಸಾದೃಶ್ಯವನ್ನು ನಿರಂತರವಾಗಿ ನಿಖರವಾಗಿ ಉಳಿಸಬಹುದು.

4. AI ರಚಿಸಿದ ಚಿತ್ರಗಳ ನೈಜತೆಯನ್ನು ಪರಿಶೀಲಿಸುವುದು
Google ಜಾರಿಗೆ ತಂದಿರುವ ಎರಡು ಪ್ರಮುಖ ವೈಶಿಷ್ಟ್ಯಗಳು ಗಮನಾರ್ಹವಾಗಿವೆ. ಇವುಗಳಲ್ಲಿ
ಸ್ಪಾರ್ಕಲ್ ವಾಟರ್‍ಮಾರ್ಕ್: ಉಚಿತ ಮತ್ತು ಪ್ರೋ ಬಳಕೆದಾರರು ರಚಿಸಿದ ಚಿತ್ರಗಳಲ್ಲಿ ಸಣ್ಣ "Gemini Sparkle" ಗುರುತು ಇರುತ್ತದೆ.
SynthID: ಎಲ್ಲ ಚಿತ್ರಗಳಲ್ಲೂ ಕಾಣದ ಡಿಜಿಟಲ್ ಗುರುತು ಇಡಲಾಗುತ್ತದೆ. Gemini ಆಪ್‌ಗೆ ಚಿತ್ರವನ್ನು ಅಪ್ಲೋಡ್ ಮಾಡಿ ಅದು AI ನಿಂದ ರಚಿಸಲ್ಪಟ್ಟಿದೆಯೇ ಎಂದು ಪರಿಶೀಲಿಸಬಹುದು.
Ultra ಬಳಕೆದಾರರು ಮತ್ತು API ಬಳಕೆದಾರರು ಕಾಣುವ ವಾಟರ್‌ಮಾರ್ಕ್ ಇಲ್ಲದ ಚಿತ್ರಗಳನ್ನು ರಚಿಸಬಹುದು, ಆದರೆ SynthID ಗುರುತು ಸದಾ ಉಳಿಯುತ್ತದೆ.

ಹೊಸ Nano Banana Pro ಟೂಲ್ ಅನ್ನು ಸಾಮಾನ್ಯ ಬಳಕೆದಾರರಿಂದ ಹಿಡಿದು ವೃತ್ತಿಪರರ ತನಕಎಲ್ಲರಿಗೂ ಸೂಕ್ತವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಪಠ್ಯ ಆಧಾರಿತ ಫೋಟೋ ಎಡಿಟಿಂಗ್, ನಿಖರ ಎಡಿಟಿಂಗ್, ಪಠ್ಯದ ಸ್ಪಷ್ಟತೆ ಹಾಗೂ ದೃಶ್ಯಗಳ ಸರಣಿಯಲ್ಲಿ ಒಂದೇ ತರದ ವಿನ್ಯಾಸ, ಇವುಗಳೆಲ್ಲ ಇದನ್ನು ಇನ್ನಷ್ಟು ಪ್ರಬಲ ಸಾಧನವಾಗಿಸುತ್ತವೆ. ಇದರಿಂದ Google ನ ಹೊಸ AI ಪ್ಲ್ಯಾಟ್‌ಫಾರ್ಮ್ ಬಳಕೆದಾರರಿಗೆ ಹೆಚ್ಚು ಸೃಜನಶೀಲ, ಹೆಚ್ಚು ನಿಖರ ಮತ್ತು ಸುಲಭವಾದ ಚಿತ್ರ ನಿರ್ಮಾಣ ಅನುಭವವನ್ನು ನೀಡಲಿದೆ.

Best Mobiles in India

English summary
A tester was amazed when Nano Banana Pro solved a handwritten question from a photo and even reproduced the answer exactly in the same handwriting style. here is the all details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+