ಮೆಸೇಜ್‌ ಮಾಡಿ 15 ಜನರ ಪ್ರಾಣ ಕಾಪಾಡಿದ 7 ವರ್ಷದ ಬಾಲಕ

By Suneel
|

ಕೇವಲ 7 ವರ್ಷದ ಆಫ್ಘಾನ್ ಹುಡುಗನೊಬ್ಬನು ಸಹಾಯ ಕೇಳಿ ಮಸೇಜ್‌ ಕಳುಹಿಸಿ 15 ಕ್ಕೂ ಹೆಚ್ಚು ಜನರ ಪ್ರಾಣ ಉಳಿಸಿದ್ದಾನೆ. ಅಂದಹಾಗೆ ಪ್ರಾಣ ಉಳಿಸಿಕೊಂಡ 15 ಜನರನ್ನು ಮತ್ತು ಮೆಸೇಜ್‌ ಮಾಡಿದ ಹುಡುಗನನ್ನು ಬ್ರಿಟನ್‌ಗೆ ಕಳ್ಳಸಾಗಣೆ ಮಾಡಲಾಗುತ್ತಿತ್ತಂತೆ. ಈ ಸಂದರ್ಭದಲ್ಲಿ ಸಮಾಜ ಕಾರ್ಯಕರ್ತೆಯೊಬ್ಬರು ಸಹಾಯ ಮಾಡಿದ್ದಾರೆ. ಆ ಏಳು ವರ್ಷದ ಬಾಲಕ ಯಾರು, ಆತ ಮಾಡಿದ ಸಾಧನೆಯಾದರೂ ಏನು ಎಂಬುದನ್ನು ಸ್ಲೈಡರ್‌ನಲ್ಲಿ ಓದಿರಿ.

 15 ಜನರ ಪ್ರಾಣ ಕಾಪಾಡಿದ ಹುಡುಗ

15 ಜನರ ಪ್ರಾಣ ಕಾಪಾಡಿದ ಹುಡುಗ

ಕೇವಲ 7 ವರ್ಷದ ಆಫ್ಘಾನ್ ಹುಡುಗನೊಬ್ಬನು ಸಹಾಯ ಕೇಳಿ ಮಸೇಜ್‌ ಕಳುಹಿಸಿ 15 ಕ್ಕೂ ಹೆಚ್ಚು ಜನರ ಪ್ರಾಣ ಉಳಿಸಿದ್ದಾನೆ. ಅಂದಹಾಗೆ ಪ್ರಾಣ ಉಳಿಸಿಕೊಂಡ 15 ಜನರನ್ನು ಮತ್ತು ಮೆಸೇಜ್‌ ಮಾಡಿದ ಹುಡುಗನನ್ನು ಬ್ರಿಟನ್‌ಗೆ ಕಳ್ಳಸಾಗಣೆ ಮಾಡಲಾಗುತ್ತಿತ್ತಂತೆ. ಈ ಸಂದರ್ಭದಲ್ಲಿ ಸಮಾಜ ಕಾರ್ಯಕರ್ತೆಯೊಬ್ಬರು ಸಹಾಯ ಮಾಡಿದ್ದಾರೆ. ಆ ಏಳು ವರ್ಷದ ಬಾಲಕ ಯಾರು, ಆತ ಮಾಡಿದ ಸಾಧನೆಯಾದರೂ ಏನು ಎಂಬುದನ್ನು ಸ್ಲೈಡರ್‌ನಲ್ಲಿ ಓದಿರಿ.

 6 ಅಥವಾ 7 ವರ್ಷದ ಹುಡುಗ

6 ಅಥವಾ 7 ವರ್ಷದ ಹುಡುಗ

ಅಂದಹಾಗೆ ಮೆಸೇಜ್‌ ಮಾಡಿದ ಹುಡುಗ 6 ಅಥವಾ 7 ವರ್ಷದವನು. ಆತನ ಹೆಸರು ಅಹ್ಮದ್. ಅಹ್ಮದ್‌'ಗೆ ಬ್ರಿಟಿಷ್‌ ಮೂಲದ ಸೇವಾ ಕಾರ್ಯಕರ್ತರೊಬ್ಬರು ಫ್ರೆಂಚ್ ವಲಸೆ ಶಿಬಿರದಲ್ಲಿ ಮೊಬೈಲ್‌ ನೀಡಿ ತಪ್ಪಿಸಿಕೊಳ್ಳಲು ಎಚ್ಚರ ನೀಡಿದ್ದರಂತೆ.

  ಜನರನ್ನು ರಕ್ಷಿಸಿದ ಇಂಕಾ ಸೊರೆಲ್‌

ಜನರನ್ನು ರಕ್ಷಿಸಿದ ಇಂಕಾ ಸೊರೆಲ್‌

ಏಳು ವರ್ಷದ ಮಗುವಿನಿಂದ ಮೆಸೇಜ್‌ ಸ್ವೀಕರಿಸಿ 15 ಜನರನ್ನು ಕಾಪಾಡಿದವರು ಸ್ವಯಂ ಸೇವಕರಾದ ಇಂಕಾ ಸೊರೆಲ್‌. ಇವರು ಮೆಸೇಜ್‌ ಸ್ವೀಕರಿಸಿದಾಗ ನ್ಯೂಯಾರ್ಕ್‌ನ ಕಾನ್ಫರೆನ್ಸ್‌ನಲ್ಲಿದ್ದರು. ಮೆಸೇಜ್‌ ಸ್ವೀಕರಿಸಿದ ತಕ್ಷಣ ಬ್ರಿಟನ್‌'ನ ತನ್ನ ಸಹೋದ್ಯೋಗಿ ತಾನ್ಯಾ ಫ್ರೀಡ್ಮನ್'ರನ್ನು ಸಂಪರ್ಕಿಸಿದರು. ನಂತರ ಇವರು ಪೋಲಿಸರಿಗೆ ಮಾಹಿತಿ ನೀಡಿ ಸಂದೇಶ ಕಳುಹಿಸಿದ್ದ ಮೊಬೈಲ್‌ ಜಾಡು ಹಿಡಿದು ಜನರು ತೆರಳುತ್ತಿದ್ದ ಟ್ರಕ್‌ ಅನ್ನು ನಿಲ್ಲಿಸಿ, ಟ್ರಕ್‌ನಲ್ಲಿದ್ದ ಅಷ್ಟು ಜನರನ್ನು ವಲಸೆ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ.
ಚಿತ್ರ ಕೃಪೆ:telegraph.co.uk

 ಅಸಾಮಾನ್ಯ ಕಥೆ

ಅಸಾಮಾನ್ಯ ಕಥೆ

ಇದೊಂದು ಅಸಾಮಾನ್ಯ ಕಥೆಯಾಗಿದ್ದು, ಸಹಾಯ ಹಸ್ತ ನೀಡಲು ಒಂದಾಗುವ ಜನರ ಜಾಗತಿಕ ಸಂಪರ್ಕವು ಏಳು ವರ್ಷದ ಹುಡುಗನಿಂದ ಜರುಗಿದೆ. ತಾನ್ಯಾ ಫ್ರೀಡ್ಮನ್‌ ಎಂಬುವವರು "British charity Help Refugees" ನಲ್ಲಿ ಕೆಲಸ ನಿರ್ವಹಿಸುತ್ತಿದ್ದು 'ಏಜೆನ್ಸಿ ಫ್ರಾನ್ಸ್‌ ಪ್ರೆಸ್‌ಗೆ ಹೇಳಿದ್ದಾರೆ.

ಸೋರೆಲ್‌

ಸೋರೆಲ್‌

ಅಂದಹಾಗೆ ಸೊರೆಲ್, ಅಹ್ಮದ್‌'ನನ್ನು ಕಾಲಿಸ್‌ ಫ್ರೆಂಚ್‌ ಪೋರ್ಟ್‌ನ 'ದಿ ಜಂಗಲ್‌' ವಲಸೆ ಶಿಬಿರದ ಮಕ್ಕಳ ಕೇಂದ್ರದಲ್ಲಿ ಬೇಟಿ ಮಾಡಿದ್ದರು. ಅಂದಹಾಗೆ ಈ ಪ್ರದೇಶವು ಸಾವಿರಾರು ನಿರಾಶ್ರಿತರು ಕಾನೂನು ಬಾಹಿರವಾಗಿ ಬ್ರಿಟನ್‌ಗೆ ಹೋಗಲು ತಂಗಿದ್ದ ಸ್ಥಳವಾಗಿತ್ತು.

ಮೊಬೈಲ್‌

ಮೊಬೈಲ್‌

ಕಳೆದ ತಿಂಗಳು ನಿರಾಶ್ರಿತರಿದ್ದ ಕಾಲಿಸ್‌ ಪ್ರದೇಶವನ್ನು ತೆರವು ಮಾಡಲಾಗಿತ್ತು. ಆ ಸಮಯದಲ್ಲಿ ಸೊರೆಲ್‌'ರವರು ಏಳು ವರ್ಷದ ಅಹ್ಮದ್‌'ಗೆ ಮೊಬೈಲ್‌ ನೀಡಿ ಅವರ ಪೋನ್‌ ನಂಬರ್ ಸಹ ನೀಡಿ, ಮತ್ತೆ ಏನಾದರೂ ನೀನು ಅಪಾಯಕ್ಕೆ ಸಿಲುಕಿದರೆ ಕರೆ ಮಾಡುವಂತೆ ತಿಳಿಸಿದ್ದರು.

ಅಹ್ಮದ್ ಕಳುಹಿಸಿದ ಮೆಸೇಜ್‌

ಅಹ್ಮದ್ ಕಳುಹಿಸಿದ ಮೆಸೇಜ್‌

ಸೊರೆಲ್‌ರವರಿಗೆ ಅಹ್ಮದ್‌, 'ತನ್ನನ್ನು ಇಂಗ್ಲೆಂಡ್‌'ಗೆ ಕರೆದೊಯ್ಯುತ್ತಿರುವ ಬಗ್ಗೆ ಮೆಸೇಜ್‌ ಕಳುಹಿಸಿದ್ದನಂತೆ. ಈ ಬಗ್ಗೆ ಸೊರೆಲ್‌ ತಾವಿದ್ದ ಕಾನ್ಫರೆನ್ಸ್‌ ಪ್ರತಿನಿಧಿಗಳಿಗೆ ತಿಳಿಸಿದ್ದರಂತೆ.

ಮೆಸೇಜ್‌ನಲ್ಲಿ ತಿಳಿಸಿದ್ದು ಏನು?

ಮೆಸೇಜ್‌ನಲ್ಲಿ ತಿಳಿಸಿದ್ದು ಏನು?

ಏಳು ವರ್ಷದ ಬಾಲಕ ಸಂದೇಶದಲ್ಲಿ "ತನ್ನನ್ನು ಲಾರಿಯ ಒಳಗೆ ಕೂಡಿಹಾಕಲಾಗಿದೆ. (ಜೊತೆಯಲ್ಲಿ ಇತರ 14 ಜನರು ಇದ್ದರು) ಚಾಲಕ ಲಾರಿ ನಿಲ್ಲಿಸುತ್ತಿಲ್ಲ. ಒಳಗೆ ಅಧಿಕವಾದ ತಂಪು ಕಾಡುತ್ತಿದೆ. ಹೇಗೆ ಹೊರಬರಬೇಕೆಂದು ತಿಳಿಯುತ್ತಿಲ್ಲ" ಎಂದು ಹೇಳಿದ್ದನಂತೆ.

ಅಹ್ಮದ್ ಇಂಗ್ಲೀಷ್‌ನಲ್ಲಿ ಟೈಪಿಸಿದ್ದು ಹೇಗಿತ್ತು ಗೊತ್ತಾ?

ಅಹ್ಮದ್ ಇಂಗ್ಲೀಷ್‌ನಲ್ಲಿ ಟೈಪಿಸಿದ್ದು ಹೇಗಿತ್ತು ಗೊತ್ತಾ?

ಮೆಸೇಜ್‌ ಟೈಪಿಸಿದ್ದು : "I ned halp darivar no stap car no oksijan in the car no sagnal iam in the cantenar. Iam no jokan valla."
ಮೆಸೇಜ್‌ ಅರ್ಥ:"I need help, driver no stop car, no oxygen in the car, no signal, I am in the container. I am not joking, Wallah (I promise)."

ಪೊಲೀಸ್‌ ಅಧಿಕಾರಿ ಹೇಳಿದ್ದೇನು?

ಪೊಲೀಸ್‌ ಅಧಿಕಾರಿ ಹೇಳಿದ್ದೇನು?

ಪೊಲೀಸ್‌ ಅಧಿಕಾರಿಯೊಬ್ಬರು " ಇಂಗ್ಲೆಂಡ್‌ ಕೇಂದ್ರದ ಲೀಸೆಸ್ಟರ್ಷೈರ್ ಮಾಟಾರು ದಾರಿಯ ಸರ್ವೀಸ್‌ ಕೇಂದ್ರ ಸ್ಥಳದಲ್ಲಿ ಸಂಶಯಾಸ್ಪದ 14 ನಿರಾಶ್ರಿತರನ್ನು ಬಂದಿಸಲಾಗಿದೆ. ಇವರಲ್ಲಿ ಒಬ್ಬರನ್ನು ಬ್ರಿಟನ್‌ಗೆ ನಿರಾಶ್ರಿತರನ್ನು ಕಳ್ಳಸಾಗಣೆ ಮಾಡುತ್ತಿದ್ದ ಆಧಾರದಲ್ಲಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಅಹ್ಮದ್ ತನ್ನ 20 ವರ್ಷದ ಸಹೋದರನೊಂದಿಗೆ ಪ್ರಯಾಣಿಸುತ್ತಿದ್ದ ಎಂದು ಊಹಿಸಲಾಗಿದೆ.
ಚಿತ್ರ ಕೃಪೆ:abc.net.au

ಗಿಜ್‌ಬಾಟ್‌

ಗಿಜ್‌ಬಾಟ್‌

ವಿಜ್ಞಾನ ಲೋಕವನ್ನೇ ಬೆಚ್ಚಿ ಬೀಳಿಸಿದ ಅಸಾಮಾನ್ಯ ವ್ಯಕ್ತಿಗಳುವಿಜ್ಞಾನ ಲೋಕವನ್ನೇ ಬೆಚ್ಚಿ ಬೀಳಿಸಿದ ಅಸಾಮಾನ್ಯ ವ್ಯಕ್ತಿಗಳು

ಎಲ್ಲೇ ಇದ್ದರೂ, ಸ್ಮಾರ್ಟ್‌ಫೋನ್‌ನಿಂದ ಕಂಪ್ಯೂಟರ್‌ ಶಟ್‌ಡೌನ್‌ ಹೇಗೆ?ಎಲ್ಲೇ ಇದ್ದರೂ, ಸ್ಮಾರ್ಟ್‌ಫೋನ್‌ನಿಂದ ಕಂಪ್ಯೂಟರ್‌ ಶಟ್‌ಡೌನ್‌ ಹೇಗೆ?

ಪಾಕ್‌ ಪ್ರಧಾನಿ ನವಾಜ್‌ ಷರೀಫ್ eBay'ನಲ್ಲಿ ಮಾರಾಟ: ಬೆಲೆ 62 ಲಕ್ಷಪಾಕ್‌ ಪ್ರಧಾನಿ ನವಾಜ್‌ ಷರೀಫ್ eBay'ನಲ್ಲಿ ಮಾರಾಟ: ಬೆಲೆ 62 ಲಕ್ಷ

ಡೆಸ್ಕ್‌ಟಾಪ್‌ ಸ್ಕ್ರೀನ್‌ ಕಾರ್ಯಗಳನ್ನು ಯೂಟ್ಯೂಬ್‌ನೊಂದಿಗೆ ರೆಕಾರ್ಡ್‌ ಹೇಗೆ?ಡೆಸ್ಕ್‌ಟಾಪ್‌ ಸ್ಕ್ರೀನ್‌ ಕಾರ್ಯಗಳನ್ನು ಯೂಟ್ಯೂಬ್‌ನೊಂದಿಗೆ ರೆಕಾರ್ಡ್‌ ಹೇಗೆ?

ಗಿಜ್‌ಬಾಟ್‌

ಗಿಜ್‌ಬಾಟ್‌

ಟೆಕ್ನಾಲಜಿ ಬಗೆಗಿನ ನಿರಂತರ ಸುದ್ದಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Text Message of a Seven Year Old Kid Saved The Lives of 15 Persons. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X