ಭೂಲೋಕದ ಸ್ವರ್ಗ ನಿಮ್ಮ ಕಾಲಬುಡದಲ್ಲೇ!!!

  By Shwetha
  |

  ನಾವು ಅತ್ಯುತ್ತಮವಾಗಿ ಕೆಲಸ ಮಾಡಬೇಕು ಎಂದಾದಲ್ಲಿ ಉದ್ಯೋಗ ವರಮಾನ ಪ್ರಾಮುಖ್ಯತೆ ವಹಿಸುವಂತೆಯೇ ಕಚೇರಿ ವಾತಾವರಣ ಕೂಡ ಪ್ರಮುಖವಾಗಿದೆ. ಗೂಗಲ್, ಟ್ವಿಟ್ಟರ್ ಮೊದಲಾದ ಭರ್ಜರಿ ಆದಾಯ ಮತ್ತು ಉದ್ಯೋಗವನ್ನು ಒದಗಿಸುವ ಟೆಕ್ ಸಂಸ್ಥೆಗಳು ಉತ್ತಮ ಉದ್ಯೋಗ ವಾತಾವರಣವನ್ನು ಸೃಷ್ಟಿಸಿವೆ ಎಂದರೆ ನೀವು ಮೂಗಿನ ಮೇಲೆ ಬೆರಳಿಟ್ಟುಕೊಳ್ಳಲೇಬೇಕು.

  ಹೌದು ವಿಸ್ಮಯಕಾರಿ ಪೇಂಟಿಂಗ್‌ಗಳು, ಆರ್ಟ್ ವರ್ಕ್, ಪ್ರಶಾಂತವಾಗಿ ಕೆಲಸ ಮಾಡಲು ಅನುವು ಮಾಡಿಕೊಡುವ ಆಸನಗಳು, ದಣಿದ ದೇಹಕ್ಕೆ ಮುದ ನೀಡಲು ಮನರಂಜನಾ ಆಟಗಳು ಹೀಗೆ ಒಂದೇ ಎರಡೇ ವಿಭಿನ್ನವಾಗಿ ನಿಮ್ಮ ಮನಸ್ಸನ್ನು ಆಕರ್ಷಿಸುವ ಈ ಕಚೇರಿ ತಾಣಗಳು ನಿಜಕ್ಕೂ ಸ್ವರ್ಗ ಲೋಕದ ಅನುಭವವನ್ನು ನಮ್ಮ ಮುಂದೆ ಉಂಟುಮಾಡುತ್ತದೆ.

  ಬನ್ನಿ ನಿಮ್ಮ ಕುತೂಹಲವನ್ನು ತಣಿಸುವ ಟಾಪ್ 10 ಟೆಕ್ ಕಚೇರಿಗಳ ಮಾಹಿತಿಗಳನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಜಾಹೀರಾತು ಕಂಪೆನಿ

  ಪೋರ್ಟ್‌ಲ್ಯಾಂಡ್‌ನಲ್ಲಿರುವ ಜಾಹೀರಾತು ಕಂಪೆನಿ ನಿಜಕ್ಕೂ ಕ್ರಿಯಾತ್ಮಕ ಕಚೇರಿ ವಾತಾವರಣವನ್ನು ತನ್ನ ಸಿಬ್ಬಂದಿಗಳಿಗೆ ನೀಡಿದೆ.

  ಕೋರಸ್ ಕ್ವೇ

  500,000 ಸ್ಕ್ವೇರ್ ಫೀಟ್ ಉಳ್ಳ ಕಚೇರಿ ಸ್ಥಳವು ಕ್ರಿಯಾತ್ಮಕ ಕಲೆಗಳಿಂದ ಸಮೃದ್ಧವಾಗಿದೆ. ಮಲ್ಟಿಪಲ್ ಟಿವಿ ಸ್ಟುಡಿಯೋ, ಲಾಂಜ್ ಏರಿಯಾವನ್ನು ಇದು ಒಳಗೊಂಡಿದೆ.

  ಆಲ್ ಪಾಲ್ ಆಲ್ಟೊ

  ಸ್ಟುಡಿಯೋವನ್ನು ಈ ಕಚೇರಿ ಹೊಂದಿದ್ದು ಅಡುಗೆ ಕೋಣೆ, ಬೆಂಚ್ ಸೀಟಿಂಗ್ ಮೊದಲಾದ ವ್ಯವಸ್ಥೆಗಳನ್ನು ಒಳಗೊಂಡಿದೆ.

  ರಾಬ್ ಡೈರಡಾಕ್ಸ್ ಫ್ಯಾಂಟಸಿ ಫ್ಯಾಕ್ಟ್ರಿ

  ಪೂರ್ಣ ಪ್ರಮಾಣದ ಸ್ಕೇಟ್ ಪಾರ್ಕ್ ಅನ್ನು ಇದು ಒಳಗೊಂಡಿದ್ದು, ಬಾಸ್ಕೆಟ್ ಬಾಲ್ ಕೋರ್ಟ್, ಟೆನ್ನೀಸ್ ಬಾಲ್ ಕೋರ್ಟ್ ಇಲ್ಲಿದೆ.

  ರೆಡ್ ಬುಲ್

  ಜಂಪ್ ಸ್ಟುಡಿಯೋ ಈ ಕಚೇರಿ ನಿರ್ಮಾಣವನ್ನು ಕೈಗೆತ್ತಿಕೊಂಡಿದ್ದು, ಬಾರ್, ಕೆಫೆ, ವೀಡಿಯೊ ವಾಲ್ ಇಲ್ಲಿದೆ.

  ಸೆಲೆಗಾಸ್ ಆರ್ಕಿಟೆಕ್ಚರ್

  ಗ್ಲಾಸ್‌ನಿಂದ ಆವೃತವಾದ ಈ ಕಚೇರಿ ಪೃಕೃತಿಗೆ ಉದ್ಯೋಗಿಗಳನ್ನು ಹತ್ತಿರವಾಗಿಸಿದೆ.

  ಡಿಟಿಎಸ್ ಎಚ್‌ಕ್ಯು

  ಪ್ಲೇ ಏಂಡ್ ಲರ್ನ್ ಎಂಬ ಸಿದ್ಧಾಂತಕ್ಕೆ ಅನುಸಾರವಾಗಿ ಈ ಕಂಪೆನಿ ತನ್ನ ಕಚೇರಿಯನ್ನು ನಿರ್ಮಿಸಿದೆ.

  ಮದರ್ ಲಂಡನ್

  ಕಿರಿಸ್ ವಿಕಿನ್‌ಸನ್ ವಿನ್ಯಾಸಕಾರರು ಈ ಕಚೇರಿಯನ್ನು ನಿರ್ಮಿಸಿದ್ದಾರೆ.

  ಗೂಗಲ್ ಕಂಪೆನಿ

  ಗೂಗಲ್‌ನ ಟೆಕ್ ಕಚೇರಿಗಳು ಯಾವಾಗಲೂ ಒಂದಿಲ್ಲೊಂದು ವಿಶೇಷತೆಗಳಿಂದ ಕೂಡಿದ್ದು, ನಿಜಕ್ಕೂ ಈ ಕಚೇರಿ ಕೆಲಸ ಮಾಡುವ ಉತ್ಸಾಹವನ್ನು ಹೆಚ್ಚಿಸುತ್ತದೆ.

  ಆಟದೊಂದಿಗೆ ಕೆಲಸ

  ಹೌದು ಆಟದೊಂದಿಗೆ ಕೆಲಸ ಎಂಬ ಸಿದ್ಧಾಂತ ಈ ಕಚೇರಿಯಲ್ಲಿ ನಮಗೆ ಕಾಣಬಹುದಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  It's no secret that we love a creative office environment, with companies like Google and Twitter often gracing our homepage for their innovative headquarter designs. Here, we've rounded up ten of what we believe to be the most impressive and desirable office environments worldwide.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more