ಮುಂದೆ ಬರುವ ಐಫೋನ್‌ಗಳು ಹೊಸ ಬಣ್ಣಗಳಲ್ಲೂ ಲಭ್ಯ.!

By GizBot Bureau
|

ಈಗಾಗಲೇ ಮೊಬೈಲ್ ಕಂಪೆನಿಗಳು ಬಣ್ಣಬಣ್ಣದ ಮೊಬೈಲ್ ಗಳನ್ನು ಬಿಡುಗಡೆಗೊಳಸಲು ಪ್ರಯತ್ನಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ತಮಗಿಷ್ಟವಾದ ಬಣ್ಣದ ಮೊಬೈಲ್ ಗಳನ್ನು ಖರೀದಿಸಲು ಗ್ರಾಹಕರು ಇಚ್ಛೆ ಪಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಮೊಬೈಲ್ ಕಂಪೆನಿಗಳೂ ಕೂಡ ಪೂರೈಕೆ ಮಾಡಲು ಸನ್ನದ್ಧವಾಗುತ್ತಿದೆ.

ಈಗಾಗಲೇ ಒಂದಾನೊಂದು ಕಾಲದಲ್ಲಿ ಕಪ್ಪು ಬಣ್ಣಕ್ಕೆ ಮಾತ್ರ ಸೀಮಿತವಾಗಿದ್ದ ಮೊಬೈಲ್ ಗಳು ಬೇರೆಬೇರೆ ಬಣ್ಣದ ವೇರಿಯಂಟ್ ನಲ್ಲಿ ಲಭ್ಯವಾಗುತ್ತಿದೆ. ಒನ್ ಪ್ಲಸ್ ಅಂತೂ ಈಗಾಗಲೇ ಕೆಂಪು ಬಣ್ಣದ ಮೊಬೈಲ್ ನ್ನು ಬಿಡುಗಡೆಗೊಳಿಸಿದ್ದು, ಹಸಿರು ಮತ್ತು ಕೇಸರಿ ಬಣ್ಣದ ಮೊಬೈಲ್ ಬಿಡುಗಡೆಗೂ ತಯಾರಿ ನಡೆಸಿದೆ.

ಮುಂದೆ ಬರುವ ಐಫೋನ್‌ಗಳು ಹೊಸ ಬಣ್ಣಗಳಲ್ಲೂ ಲಭ್ಯ.!

ಹೀಗೆ ಬಣ್ಣದ ಮೊಬೈಲ್ ಗಳನ್ನ ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿರುವ ಕಂಪೆನಿಗಳ ಸಾಲಿಗೆ ಹೊಸ ಸೇರ್ಪಡೆ ಎಂದರೆ ಕ್ಯೂಪರ್ನಿಟೋ ಮೂಲದ ಆಪಲ್ ಸಂಸ್ಥೆ. ಹೌದು ಆಪಲ್ ನ ಮುಂದಿನ ಐಫೋನ್ ಗಳು ಹೊಸ ಬಣ್ಣಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆಯಂತೆ.

9ಟು5ಮ್ಯಾಕ್ ನ ವರದಿಯ ಅನ್ವಯ ಹೇಳುವುದಾದರೆ ಆಪಲ್ ಕಂಪೆನಿಯು ಅತೀ ಕಡಿಮೆ ಬೆಲೆಯ ಐಫೋನ್ ನ್ನು ಬೂದು, ಬಿಳಿ, ನೀಲಿ, ಕೆಂಪು ಮತ್ತು ಕೇಸರಿ ಬಣ್ಣಗಳಲ್ಲಿ ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆಯಂತೆ. ಆದರೆ ನಿಮ್ಮ ಗಮನದಲ್ಲಿರಬೇಕಾದ ಅಂಶವೇನೆಂದರೆ ಈ ಹಿಂದಿನ ವರದಿಯ ಪ್ರಕಾರ ಆಪಲ್ 6.1 ಇಂಚಿನ ಎಲ್ ಸಿಡಿ ಡಿಸ್ಪ್ಲೇ ಹೊಂದಿರುವ ಬಜೆಟ್ ಐಫೋನನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ ಮತ್ತು ಅದರ ಬೆಲೆ ಹೆಚ್ಚು ಕಡಿಮೆ $600 (Rs 40,300) ಯಿಂದ $700 (Rs 47,000) ಆಗಿರಲಿದೆ ಎಂದು ಹೇಳಲಾಗಿತ್ತು.

ಈ 6.5 ಇಂಚಿನ ಡಿಸ್ಪ್ಲೇಯ ಐಫೋನ್ ಕಪ್ಪು, ಬಿಳಿ ಮತ್ತು ಚಿನ್ನದ ಬಣ್ಣದಲ್ಲಿ (ಈಗ ಹೊಸ ಬಣ್ಣದ್ದೂ ಇರಬಹುದು) ಎಂದು ಹೇಳಲಾಗಿತ್ತು. ಈಗಾಗಲೇ ಬಂದಿರುವ ವರದಿಯಂತೆ 6.5 ಇಂಚಿನ ಡಿಸ್ಪ್ಲೇಯ ಐಫೋನ್ OLED ಸ್ಕ್ರೀನ್ ಹೊಂದಿರಲಿದೆ ಮತ್ತು ಬಹಳ ದುಬಾರಿಯಾಗಿರುವ ಫೋನ್ ಆಗಿರುತ್ತದೆ ಎಂದು ತಿಳಿಸಲಾಗಿತ್ತು. ಈಗಾಗಲೇ ಬಂದಿದ್ದ ಒಂದು ಮೂಲದ ಮಾಹಿತಿಯ ಪ್ರಕಾರ $900 (ಅಂದಾಜು 60,400ರುಪಾಯಿ) ಯಿಂದ $1000 (ಅಂದಾಜು 67,100 ರುಪಾಯಿ) ಎಂದು ಹೇಳಲಾಗುತ್ತಿತ್ತು.

ಆದರೆ ಈಗ ಬಂದಿರುವ ಹೊಸ ಮಾಹಿತಿಯೂ ಕೂಡ ಅದನ್ನೇ ಪುಷ್ಟೀಕರಿಸುತ್ತಿದ್ದು $1000 (ಅಂದಾಜು 67,100 ರುಪಾಯಿ) ಆಗಿರಲಿದೆ ಎಂದೇ ತಿಳಿಸುತ್ತಿದೆ ಜೊತೆಗೆ ಡುಯಲ್ ಸಿಮ್ ನ ಆಯ್ಕೆಯೂ ಇರಲಿದೆಯಂತೆ. ಒಂದು ವೇಳೆ ಇದು ನಿಜವಾಗಿದ್ದರೆ ಐಫೋನ್ ನಲ್ಲಿ ಇದು ಮೊದಲ ಬಾರಿಗೆ ನಡೆಯುತ್ತದೆ.

ಮುಂದೆ ಬರುವ ಐಫೋನ್‌ಗಳು ಹೊಸ ಬಣ್ಣಗಳಲ್ಲೂ ಲಭ್ಯ.!

2003 ರಲ್ಲಿ ಆಪಲ್ , ಐಫೋನ್ 5ಸಿಯಲ್ಲಿ ಪ್ರಮುಖ ಬಣ್ಣಗಳ ಆಯ್ಕೆಯನ್ನು ನೀಡಿತ್ತು. ನೀಲಿ, ಹಸಿರು, ಹಳದಿ, ಬಿಳಿ ಮತ್ತು ಗುಲಾಬಿ ಬಣ್ಣದ ಫೋನ್ ಗಳು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿತ್ತು.ಕುವೋ ಮಾಹಿತಿಯ ಪ್ರಕಾರ ಆಪಲ್ 5.8 ಇಂಚಿನ OLED ಡಿಸ್ಪ್ಲೇ ಇರುವ ಒಂದು ಫೋನನ್ನು ಕೂಡ ಬಿಡುಗಡೆಗೊಳಿಸಲಿದೆ. ಅದರ ಬೆಲೆ $800 (ಅಂದಾಜು Rs 53,700) ಮತ್ತು $900 (ಅಂದಾಜು Rs 60,400) ಎಂದು ಹೇಳಲಾಗಿದೆ.. ಇದು ಸದ್ಯದ ಐಫೋನ್ ಎಕ್ಸ್ ನ ಅಪ್ ಡೇಟೆಡ್ ಆವೃತ್ತಿ ಆಗಿರಲಿದೆಯಂತೆ.

ಕುವೋ ಮಾಹಿತಿಯ ಪ್ರಕಾರ ಹೊಸ ಐಫೋನ್ ಬಿಡುಗಡೆಯಾದ ನಂತರ, ಎಲ್ಸಿಡಿ ಐಫೋನ್ ಶೇಕಡಾ 55 ರಷ್ಟು ಮಾರಾಟಕ್ಕೆ ಕಾರಣವಾಗಬಹುದು ಮತ್ತು 2019 ಕ್ಕಿಂತ ಹೆಚ್ಚಿನ ಶೇರ್ ನ್ನು ಕೂಡ ಹೊಂದಬಹುದು. ಆಪಲ್ ನ ಒಟ್ಟಾರೆ ಬೆಳವಣಿಗೆಯು ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದೆ ಮತ್ತು ಕೇವಲ 2018 ರ ಒಂದು ತ್ರೈಮಾಸಿಕದಲ್ಲಿ ಬರೋಬ್ಬರಿ 70 ಮಿಲಿಯನ್ ಐಫೋನ್ ಗಳ ಮಾರಾಟವನ್ನು ಆಪಲ್ ಕಂಡಿದೆ.

ಹಾಗಾದರೆ ನೀವೇ ಅಂದಾಜಿಸಿಕೊಳ್ಳಿ ಆಪಲ್ ನ ನಿವ್ವಳ ಲಾಭ ಎಷ್ಟಿರಬಹುದು ಎಂದು.. ಆದರೆ ಮೊಬೈಲ್ ಇಲ್ಲದ ಪ್ರಪಂಚ ಈಗ ಇರೋಕೆ ಸಾಧ್ಯವಿಲ್ಲ , ಹಾಗಾಗಿ ಈ ಲಾಭ ನಿರೀಕ್ಷಿಸಿರುವುದೇ ಆಗಿದೆ.. ನೀವೇನಂತೀರಿ?

Best Mobiles in India

English summary
The 2018 iPhones may get these new colour Variants. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X