ದೀಪಾವಳಿಯಲ್ಲಿ ನೀವು ಖರೀದಿಸಬಹುದಾದ 5 ಅತ್ಯುತ್ತಮ ಲ್ಯಾಪ್‌ಟಾಪ್‌ಗಳು!
ಭಾರತದ ಹಬ್ಬಗಳಲ್ಲಿ ದೀಪಾವಳಿ ಅತ್ಯಂತ ಜನಪ್ರಿಯ ಹಬ್ಬವಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರನ್ನ ಸೆಳೆಯುವುದಕ್ಕಾಗಿಯೇ ಇ-ಕಾಮರ್ಸ್ ತಾಣಗಳು ಸಾಕಷ್ಟು ಆಫರ್‌ಗಳನ್ನ ನೀಡುತ್ತಿವೆ. ಇನ್ನು ದೀಪಾವಳಿ ಸಮಯದಲ್ಲಿ ನೀವೇನಾದರು ಲ್ಯಾಪ್‌ಟಾಪ್ ಖರೀದಿಸುವುದಾದರೆ, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ಸಾಕಷ್ಟು ಲ್ಯಾಪ್‌ಟಾಪ್‌ಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ. ನೀವು ಇಂಟೆಲ್ ಕೋರ್ I5 ಪ್ರೊಸೆಸರ್ ಹೊಂದಿರುವ ಲ್ಯಾಪ್‌ಟಾಪ್ ಅನ್ನು ಹುಡುಕುತ್ತಿದ್ದರೆ ನೀವು ಅದನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ.

ಹೌದು, ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಹಲವು ಪ್ರಾಡಕ್ಟ್‌ಗಳ ಮೇಲೆ ಭಾರಿ ಡಿಸ್ಕೌಂಟ್ ದೊರೆಯುತ್ತಿದೆ. ಸ್ಮಾರ್ಟ್‌ಫೋನ್ ಮಾತ್ರವಲ್ಲದೆ ಲ್ಯಾಪ್‌ಟಾಪ್‌ಗಳ ಮೇಲೂ ಕೂಡ ನ ಹಲವು ಆಫರ್‌ಗಳು ಲಭ್ಯವಿವೆ. ಸದ್ಯ ಫ್ಲಿಪ್‌ಕಾರ್ಟ್, ಅಮೆಜಾನ್ ತಾಣಗಳು ನಿಮಗಾಗಿ ಹಲವು ಲ್ಯಾಪ್‌ಟಾಪ್‌ಗಳ ಮೇಲೆ ರಿಯಾಯಿತಿಯನ್ನ ನೀಡಿವೆ. ಹಾಗಾದ್ರೆ ದೀಪಾವಳಿಯಲ್ಲಿ ನೀವು ಖರೀದಿಸಬಹುದಾದ ಇತ್ತೀಚಿನ ಮತ್ತು ಅತ್ಯುತ್ತಮವಾದ ಐದು ಲ್ಯಾಪ್‌ಟಾಪ್‌ಗಳ ಬಗ್ಗೆ ತಿಳಿಸಿಕೊಡ್ತೀವಿ ಓದಿರಿ.

ಡೆಲ್ G3 3500
Dell G3 3500 ಲ್ಯಾಪ್‌ಟಾಪ್ ಪ್ರಸ್ತುತ ಅಮೆಜಾನ್.ಇನ್‌ನಲ್ಲಿ 72,990 ರೂ.ಬೆಲೆಗೆ ಮಾರಾಟವಾಗುತ್ತಿದೆ. ಅಲ್ಲದೆ ಹಳೆಯ ಲ್ಯಾಪ್‌ಟಾಪ್ ವಿನಿಮಯ ಮಾಡಿ ಖರೀದಿಸುವುದಾದರೆ 22,650 ರೂ.ಗಳ ವರೆಗೂ ಖರೀದಿಸಬಹುದಾಗಿದೆ. ಇದಲ್ಲದೆ ಈ ಲ್ಯಾಪ್‌ಟಾಪ್ ಅನ್ನು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ಇಎಂಐಗಳಲ್ಲಿ ನೀವು ಶೇಕಡಾ 10% ರಷ್ಟು ತ್ವರಿತ ರಿಯಾಯಿತಿ ಪಡೆಯಬಹುದು. ಇನ್ನು ಈ ಲ್ಯಾಪ್‌ಟಾಪ್ 15.6-ಇಂಚಿನ 120Hz FHD ಸ್ಕ್ರೀನ್, 10 ನೇ ತಲೆಮಾರಿನ ಇಂಟೆಲ್ ಕೋರ್ I5 ಪ್ರೊಸೆಸರ್ ಅನ್ನು ಹೊಂದಿದ್ದು, 4GB NVIDIA GTX 1650 ಗ್ರಾಫಿಕ್ ಕಾರ್ಡ್ ಅನ್ನು ಒಳಗೊಂಡಿದೆ.

ಶಿಯೋಮಿ ಮಿ ನೋಟ್‌ಬುಕ್ 14 ಹೊರೈಜನ್ ಆವೃತ್ತಿ
Xiaomi Mi Notebook 14 Horizon Edition ಲ್ಯಾಪ್‌ಟಾಪ್ ಅಮೆಜಾನ್ ಮತ್ತು ಮಿ.ಕಾಂನಲ್ಲಿ 51,999 ರೂ. ಬೆಲೆಯನ್ನು ಹೊಂದಿದೆ. ಈ ಬೆಲೆ 10 ನೇ ತಲೆಮಾರಿನ ಕೋರ್ I5 ಪ್ರೊಸೆಸರ್ ಮತ್ತು 8GB RAM + 512GB ಸ್ಟೋರೇಜ್ ಮಾದರಿಗೆ ಆಗಿದೆ. ಇನ್ನು ಅಮೆಜಾನ್ ನಲ್ಲಿ ಈ ಲ್ಯಾಪ್‌ಟಾಪ್ ಮೇಲೆ 19,200 ರೂ.ಗಳ ವಿನಿಮಯ ಕೊಡುಗೆಯನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಈ ಲ್ಯಾಪ್‌ಟಾಪ್ 14 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಮತ್ತು ಎನ್ವಿಡಿಯಾ ಜಿಫೋರ್ಸ್ ಎಮ್ಎಕ್ಸ್ 350GPU ಹೊಂದಿದೆ.

HP 15s
ಇನ್ನು 10 ನೇ ತಲೆಮಾರಿನ ಇಂಟೆಲ್ ಕೋರ್ I5 ಪ್ರೊಸೆಸರ್ ಹೊಂದಿರುವ HP 15s ಲ್ಯಾಪ್‌ಟಾಪ್ 4GB RAM + 512GB ಮಾದರಿಗೆ ಫ್ಲಿಪ್‌ಕಾರ್ಟ್‌ನಲ್ಲಿ 47,490 ರೂ.ಗಳಿಗೆ ಪಟ್ಟಿ ಮಾಡಲಾಗಿದೆ. ಜೊತೆಗೆ 8GB RAM ರೂಪಾಂತರವನ್ನು 59,500 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದಲ್ಲದೆ ಐಸಿಐಸಿಐ, ಸಿಟಿ ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳಲ್ಲಿ ನೀವು ಶೇಕಡಾ 10 ರಷ್ಟು ರಿಯಾಯಿತಿ ಪಡೆಯಬಹುದು. ಇನ್ನು ಈ ಲ್ಯಾಪ್‌ಟಾಪ್ 1920 x 1080 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ 15.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 720P HD ವೆಬ್‌ಕ್ಯಾಮ್ ಮತ್ತು ಇಂಟೆಲ್ ಇಂಟಿಗ್ರೇಟೆಡ್ UHD ಗ್ರಾಫಿಕ್ಸ್ ಅನ್ನು ಒಳಗೊಂಡಿದೆ.

ಲೆನೊವೊ ಐಡಿಯಾಪ್ಯಾಡ್ ಗೇಮಿಂಗ್ 3i
ದೀಪಾವಳಿ ಸಮಯದಲ್ಲಿ ಲೆನೊವೊ ಐಡಿಯಾಪ್ಯಾಡ್ ಗೇಮಿಂಗ್ 3i ಲ್ಯಾಪ್‌ಟಾಪ್ 63,990 ರೂಗಳಿಗೆ ಲಭ್ಯವಿದೆ. ನೀವು ಬ್ಯಾಂಕ್ ಕಾರ್ಡ್ ಕೊಡುಗೆಗಳನ್ನು ಪಡೆದರೆ ಮತ್ತು 20,000 ರೂ.ಗಳ ಎಕ್ಸ್‌ಚೇಂಜ್ ಆಫರ್ ಅನ್ನು ಕೂಡ ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ 4GB ಎನ್ವಿಡಿಯಾ ಜಿಫೋರ್ಸ್ ಜಿಟಿಎಕ್ಸ್ 1650T ಗ್ರಾಫಿಕ್ ಕಾರ್ಡ್, 60Hz ರಿಫ್ರೆಶ್ ರೇಟ್‌ನೊಂದಿಗೆ 15.6 ಇಂಚಿನ ಡಿಸ್‌ಪ್ಲೇ, ಇಂಟೆಲ್ ಕೋರ್ I5 10 ನೇ ಜನ್ ಪ್ರೊಸೆಸರ್ ಹೊಂದಿದೆ.

ಆಪಲ್ ಮ್ಯಾಕ್‌ಬುಕ್ ಏರ್
ಇನ್ನು ನೀವು ಆಪಲ್ ಮ್ಯಾಕ್‌ಬುಕ್ ಏರ್ ಖರೀದಿಸಲು ಬಯಸಿದರೆ, ನಿಮಗೆ 59,990 ರೂ. ಗಳಿಗೆ ಲಭ್ಯವಾಗಲಿದೆ. ಜೊತೆಗೆ ನೋ ಕಾಸ್ಟ್ ಇಎಂಐ ಆಯ್ಕೆಯು ಸಹ ಲಭ್ಯವಿದೆ ಇದು ತಿಂಗಳಿಗೆ 5,000 ರೂಗಳಿಂದ ಪ್ರಾರಂಭವಾಗುತ್ತದೆ. ಫ್ಲಿಪ್‌ಕಾರ್ಟ್ ಪ್ರಕಾರ ಎಚ್‌ಡಿಎಫ್‌ಸಿ ಪ್ರಿಪೇಯ್ಡ್ ವಹಿವಾಟಿನಲ್ಲಿ ಹೆಚ್ಚುವರಿ 3,000 ರೂ.ಗಳ ವರೆಗೆ ಲಭ್ಯವಾಗಲಿದೆ. ಅಲ್ಲದೆ ಐಸಿಐಸಿಐ, ಸಿಟಿ, ಆಕ್ಸಿಸ್ ಮತ್ತು ಕೊಟಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಿಗೆ 1,500 ರೂ. ರಿಯಾಯಿತಿ ದೊರೆಯಲಿದೆ. ಇನ್ನು ಈ ಡಿವೈಸ್ 13.3-ಇಂಚಿನ ಡಿಸ್‌ಪ್ಲೇ ಮತ್ತು ಇಂಟೆಲ್ ಕೋರ್ I5 ಪ್ರೊಸೆಸರ್ ಅನ್ನು ಒಳಗೊಂಡಿದೆ.


Click it and Unblock the Notifications








