Home
ಸುದ್ದಿಜಾಲ

ದೇಶವನ್ನೇ ಬೆಚ್ಚಿಬಿಳಿಸಿದ ಬಹುದೊಡ್ಡ 6 ಡೇಟಾ ಕಳವು ಪ್ರಕರಣಗಳಿವು!.ನಂಬಿದ ಕಂಪೆನಿಗಳೇ ಮೋಸ ಮಾಡಿದವು!!

ಪ್ರಪಂಚದಲ್ಲಿ ಹತ್ತಾರು ವರ್ಷಗಳಿಂದಲೂ ಆಗಾಗ ಡೇಟಾ ಬ್ರೀಚ್ ನಡೆಯುತ್ತಲೇ ಇದೆ. ತನ್ನ ಬಳಕೆದಾರರ ಖಾಸಗಿ ಸಂಗತಿಗಳನ್ನು ಸಂಪೂರ್ಣವಾಗಿ ರಕ್ಷಿಸುತ್ತೇನೆ ಎಂದು ಮಾತು ಕೊಟ್ಟ ಕಂಪೆನಿಗಳು ಮೋಸ ಮಾಡುತ್ತಲೇ ಇವೆ.!!

By Bhaskar N J

ಆಧುನಿಕ ಮಾಹಿತಿ ಯುಗದಲ್ಲಿ ಗ್ರಾಹಕನ ಖಾಸಗಿ ಸಂಗತಿಗಳನ್ನೆ ಹಣ ಎಂದು ಭಾವಿಸಿರುವು ವಿಷಯ ಈಗ ವಿಶ್ವದಲ್ಲಿ ಗುಟ್ಟಾಗಿ ಉಳಿದಿಲ್ಲ. ಪ್ರಪಂಚದಲ್ಲಿ ಹತ್ತಾರು ವರ್ಷಗಳಿಂದಲೂ ಆಗಾಗ ಡೇಟಾ ಬ್ರೀಚ್ ನಡೆಯುತ್ತಲೇ ಇದೆ. ತನ್ನ ಬಳಕೆದಾರರ ಖಾಸಗಿ ಸಂಗತಿಗಳನ್ನು ಸಂಪೂರ್ಣವಾಗಿ ರಕ್ಷಿಸುತ್ತೇನೆ ಎಂದು ಮಾತು ಕೊಟ್ಟ ಕಂಪೆನಿಗಳು ಮೋಸ ಮಾಡುತ್ತಲೇ ಇವೆ.!!

ಹೌದು, ಹೀಗೆ ಪ್ರತಿಬಾರಿ ಈ ಡೇಟಾ ಹ್ಯಾಕ್ ಆದಾಗಲೂ ವಿಶ್ವ ಜಾಲ ಸಮುದಾಯ ಬೆಚ್ಚಿಬಿಳುತ್ತದೆ. ಡೇಟಾ ಕಳುವು ವಿಶ್ವವ್ಯಾಪಿಯಾಗಿ ಸುದ್ದಿಯಾಗುತ್ತದೆ. ನಂತರ ಏನೂ ನಡೆದೆ ಇಲ್ಲದಂತೆ ಮುಚ್ಚಿಹೋಗುತ್ತದೆ.! ಎಲ್ಲರೂ ಆನ್‌ಲೈನ್‌ ಜೀವಿಗಳಾಗುತ್ತಿರುವ ಹೊತ್ತಿನಲ್ಲಿ, ಪ್ರತಿಯೊಂದು ಡೇಟಾ ಹ್ಯಾಕ್‌ ಪ್ರಕರಣ ಕೂಡ ಇಲ್ಲಿನ ಸುರಕ್ಷತೆಯ ಕೊರತೆಗೆ ಹಿಡಿದ ಕನ್ನಡಿಯಾಗಿದೆ.

ದೇಶವನ್ನೇ ಬೆಚ್ಚಿಬಿಳಿಸಿದ ಬಹುದೊಡ್ಡ 6 ಡೇಟಾ ಕಳವು ಪ್ರಕರಣಗಳಿವು!!

ಪ್ರಪಂಚದಲ್ಲಿ ಇಂತಹ ಹತ್ತಾರು ಪ್ರಕರಣಗಳು ನಮ್ಮ ಕಣ್ಣುಮುಂದೆಯೇ ನಡೆದರೂ ನಾವು ಏನು ಮಾಡಲು ಸಾಧ್ಯವಾಗದಿರುವುದು ಈ ಆಧುನಿಕ ಕಾಲದ ದುರಂತವೇ ಸರಿ.! ಹಾಗಾಗಿ, ಆನ್‌ಲೈನ್ ಪ್ರಪಂಚದಲ್ಲಿ ಭಾರತವನ್ನು ಒಂದು ಮಟ್ಟಿನ ಕಂಪನಕ್ಕೆ ತುತ್ತಾಗಿಸಿದ 6 ಡೇಟಾ ಉಲ್ಲಂಘನೆ ಪ್ರಕರಣಗಳು ಯಾವುವು ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಯಾಹೂ (2013)!!

ಯಾಹೂ (2013)!!

ಆನ್‌ಲೈನ್ ಪ್ರಪಂಚದಲ್ಲಿಯೇ ನಡೆದಿರುವ ಅತಿ ದೊಡ್ಡ ಪ್ರಮಾಣದ ಹ್ಯಾಕಿಂಗ್ ಎಂಬ ಕುಖ್ಯಾತಿಗೆ 2013ರಲ್ಲಿ ನಡೆದ ಯಾಹೂ ಘಟನೆ ಸಾಕ್ಷಿಯಾಗಿದೆ. ಯಾಹೂ ಮೇಲ್‌ ಬಳಸುತ್ತಿದ್ದ ಪ್ರತಿಯೊಬ್ಬ ಗ್ರಾಹಕನ ಮಾಹಿತಿ ಲೀಕ್ ಆಗಿರುವ ಬಗ್ಗೆ ಯಾಹೂ ಒಡೆತನದ ಕಂಪನಿ ವೆರಿಝಾನ್‌ ಕಳೆದ ಅಕ್ಟೋಬರ್‌ನಲ್ಲಿ ಮಾಹಿತಿ ನೀಡಿತು. ಈ ಘಟನೆಯಲ್ಲಿ ಸುಮಾರು 300 ಕೋಟಿ ಜನರ ಮಾಹಿತಿ ಲೀಕ್ ಆಗಿದ್ದವು ಎಂದು ನಂತರ ನಡೆದ ಅಧ್ಯಯನದ ಮೂಲಕ ತಿಳಿದುಬಂದಿತು.

ಲಿಂಕ್ಡ್‌ಇನ್‌ (2016)!!

ಲಿಂಕ್ಡ್‌ಇನ್‌ (2016)!!

ಗೂಗಲ್ ಒಡೆತನದ ವೃತ್ತಿಪರ ಸಾಮಾಜಿಕ ಜಾಲತಾಣ ಲಿಂಕ್ಡ್ ಇನ್‌ 2016ರಲ್ಲಿ ಹ್ಯಾಕ್ ಆಯಿತು. ಲಿಂಕ್ಡ್ ಇನ್ ಬಳಕೆದಾರರ 11.7 ಕೋಟಿ ಮಂದಿಯ ಅಕೌಂಟ್‌ಗಳ ಪಾಸ್‌ವರ್ಡ್‌ಗಳನ್ನು ಭೇದಿಸಿ, ಇಮೇಲ್‌ಗಳ ಒಳಹೊಕ್ಕು ಜಾಲಾಡಲಾಗಿತ್ತು. ನಂತರ ಲಿಂಕ್ಡ್ ಇನ್‌ ಬಳಕೆದಾರರ ಪಾಸ್‌ವರ್ಡ್‌ಗಳನ್ನು ರಿಸೆಟ್ ಮಾಡಿ ಅಕೌಂಟ್‌ಗಳನ್ನು ಭದ್ರ ಮಾಡಿಕೊಳ್ಳುವ ಅವಕಾಶವನ್ನಷ್ಟೇ ಕಂಪೆನಿ ತನ್ನ ಬಳಕೆದಾರರಿಗೆ ನೀಡಿತು.

ಫೇಸ್‌ಬುಕ್‌ (2018)!!

ಫೇಸ್‌ಬುಕ್‌ (2018)!!

ಬ್ರಿಟನ್‌ ಮೂಲದ ಕೇಂಬ್ರಿಜ್‌ ಅನಾಲಿಟಿಕಾ ಎಂಬ ಸಂಸ್ಥೆಯೊಂದಿಗೆ ತನ್ನ ಬಳಕೆದಾರರ ಮಾಹಿತಿಗಳನ್ನು ಫೇಸ್‌ಬುಕ್ ಹಂಚಿಕೊಂಡಿತು. ಚುನಾವಣೆಯಲ್ಲಿ ಮತದಾರರನ್ನು ಪ್ರಭಾವಿಸಲು ಕಾನೂನುಬಾಹಿರವಾಗಿ ಡೇಟಾವನ್ನು ಬಳಸಿಕೊಳ್ಳಲಾಯಿತು. ಫೇಸ್‌ಬುಕ್ ಹೇಳಿಕೊಂಡ ಪ್ರಕಾರ, ವಿಶ್ವದಲ್ಲಿ 8.7 ಕೋಟಿ ಜನರ ವೈಯಕ್ತಿಕ ಡೇಟಾ ದುರುಪಯೋಗವಾಯಿತು. ಭಾರತದಲ್ಲಿ ಸುಮಾರು 5.62 ಲಕ್ಷ ಮಂದಿ ಡೇಟಾ ದುರ್ಬಳಕೆಯಾಗಿರಬಹುದು ಎಂದು ಫೇಸ್‌ಬುಕ್ ಅಂದಾಜು ಮಾಡಿತು.

ಝೊಮಾಟೋ (2017)!!

ಝೊಮಾಟೋ (2017)!!

ರೆಸ್ಟೋರೆಂಟ್‌ಗೆ ಸಂಬಂಧಿಸಿದ ಭಾರತದ ಪ್ರಮುಖ ಆಪ್‌ ಆಗಿದ್ದ ಝೊಮಾಟೋ ಮೂಲಕ 1.7 ಕೋಟಿ ಗ್ರಾಹಕರ ಮಾಹಿತಿಯನ್ನು ಕದಿಯಲಾಯಿತು.ಹ್ಯಾಕರ್ ಓರ್ವ ಝೊಮಾಟೋ ಆಪ್‌ನ್ನು ಹ್ಯಾಕ್ ಮಾಡಿ, ಬಳಕೆದಾರರ ಮಾಹಿತಿಗಳನ್ನು ಕದ್ದು, ಅವುಗಳನ್ನು ಡಾರ್ಕ್‌ನೆಟ್‌ನಲ್ಲಿ ಮಾರಿಕೊಂಡಿದ್ದ. ಹೀಗೆ ಡೇಟಾ ಕಳವಾದದ್ದನ್ನು ಝೊಮಾಟೋ ಕಂಪನಿ ನಂತರ ಒಪ್ಪಿಕೊಂಡಿತ್ತು. ಆದರೆ, ಕ್ರೆಡಿಟ್‌- ಡೆಬಿಟ್ ಕಾರ್ಡ್‌ಗಳ ಡೇಟಾಗಳು ಕಳವಾಗಿಲ್ಲ ಎಂದು ಖಚಿತಪಡಿಸಿತ್ತು.

ಹಿಟಾಚಿ ಪೇಮೆಂಟ್ ಸರ್ವಿಸಸ್‌( 2016)

ಹಿಟಾಚಿ ಪೇಮೆಂಟ್ ಸರ್ವಿಸಸ್‌( 2016)

ಭಾರತದ ಹಲವಾರು ಬ್ಯಾಂಕ್‌ ಬಳಕೆದಾರರ ಡೆಬಿಟ್‌ ಕಾರ್ಡ್‌ಗಳ ಮಾಹಿತಿಗಳು ಸೋರಿಕೆಯಾದವು. ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್‌ಗಳು ಸೇರಿದಂತೆ, ಸುಮಾರು 32 ಲಕ್ಷ ಜನರ ಡೆಬಿಟ್ ಕಾರ್ಡ್‌ ಮಾಹಿತಿ ಲೀಕ್ ಆಗಿದ್ದವು. ಹಿಟಾಚಿ ಪೇಮೆಂಟ್ ಸರ್ವಿಸಸ್‌ ಒದಗಿಸಿದ ಪಾವತಿ ವ್ಯವಸ್ಥೆಯಲ್ಲಿ ತೂರಿಬಿಡಲಾದ ಮಾಲ್‌ವೇರ್‌ ಮೂಲಕ ಈ ಡೇಟಾ ಕದಿಯಲಾಗಿತ್ತು. ಡೆಬಿಟ್ ಕಾರ್ಡ್‌ ಮಾಹಿತಿ ಕಳೆದುಕೊಂಡವರ ಅಕೌಂಟ್‌ಗಳಿಂದ ನಗದು ಸಹ ಖಾಲಿಯಾಗಿತ್ತು.

How to Send a WhatsApp Message Without Saving the Contact in Your Phone - GIZBOT KANNADA
ವನ್ನಾ ಕ್ರೈ, ಪೆಟ್ಯಾ(2017)!!

ವನ್ನಾ ಕ್ರೈ, ಪೆಟ್ಯಾ(2017)!!

ರಾನ್ಸಮ್‌ವೇರ್‌ ಎಂಬ ವೈರಸ್ ಕಂಪ್ಯೂಟರ್‌ನ ಸಾಪ್ಟ್‌ವೇರ್‌ನೊಳಗೆ ನುಗ್ಗಿ, ಅದರ ಹಿಡಿತವನ್ನು ತಾನು ತೆಗೆದುಕೊಂಡುಬಿಟ್ಟಿದ್ದ ಘಟನೆ ಕಳೆದ ವರ್ಷ ನಡೆದಿತ್ತು. ಈ ವೈರಸ್ ಇದ್ದರೆ ಕಂಪ್ಯೂಟರ್ ನತೆರೆಯಲಾಗದಂತಹ ಪರಿಸ್ಥಿತಿ ಉಂಟಾಗಿತ್ತು. ಇದರಿಂದ ತಪ್ಪಿಸಿಕೊಳ್ಳಲು ಒತ್ತೆಹಣ ನೀಡಬೇಕಿತ್ತು. ಸೈಬರ್ ಸೆಕ್ಯುರಿಟಿ ಸಂಸ್ಥೆ ಸಿಮಾಂಟೆಕ್ ಹೇಳುವ ಪ್ರಕಾರ, ಏಷ್ಯಾ- ಪೆಸಿಫಿಕ್‌ ಪ್ರಾಂತ್ಯದಲ್ಲಿ ಈ ವೈರಸ್‌ನಿಂದ ಅತಿ ಹೆಚ್ಚು ಪೀಡೆಗೊಳಗಾದ ದೇಶವೆಂದರೆ ಭಾರತ.!

Best Mobiles in India

English summary
To learn that your company's data was stolen, not from any hacker, but from an employee is the nightmare scenario that no one wants to face. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+