ನಿಮ್ಮ ಸ್ಮಾರ್ಟ್‌ಫೋನ್ ಜೊತೆ ನೀವು ಮಾಡುತ್ತಿರುವ ಅತಿ ಕೆಟ್ಟ 5 ತಪ್ಪುಗಳು!
ಕರಿದ ತಿಂಡಿ ದೇಹಕ್ಕೆ ಒಳ್ಳೆಯದಲ್ಲ, ಸಿಗರೆಟ್ ಸೇದಿದರೆ ಆರೋಗ್ಯ ಕೆಡುತ್ತದೆ ಎಂಬತಹ ವಿಚಾರಗಳು ಗೊತ್ತಿದ್ದರೂ, ನಾವೆಲ್ಲರೂ ಅದನ್ನು ಮಾಡುತ್ತಿದ್ದೇವಲ್ಲ, ಹಾಗೆಯೇ ಸ್ಮಾರ್ಟ್‌ಫೋನ್‌ಗಳ ಬಳಕೆಯಲ್ಲೂ ನಾವು ತಪ್ಪು ಮಾಡುತ್ತಿದ್ದೇವೆ. ಈ ಸ್ಮಾರ್ಟ್‌ಪೋನ್‌ಗಳಿಂದ ಉಪಯೋಗಗಳು ಇವೆಯಾದರೂ, ಹೆಚ್ಚಿನವರು ಅವುಗಳಲ್ಲಿ ಮಾಡಬಾರದ ಕೆಲಸವನ್ನು ಮಾಡುತ್ತಲೇ ಇರುತ್ತಾರೆ!
ಬಹಳಷ್ಟು ಜನ ಪ್ರತಿ ದಿನದಲ್ಲಿ ಸಾಕಷ್ಟು ಗಂಗಳ ಕಾಲ ಸ್ಮಾರ್ಟ್‌ಫೋನಿನಲ್ಲೇ ಕಾಲ ಕಳೆಯುತ್ತಿದ್ದರೆ, ಕೆಲವು ಜನರಂತೂ ಅದರಲ್ಲೇ ಮುಳುಗಿಹೋಗಿರುತ್ತಾರೆ. ಅತಿಯಾದರೆ ಅಮೃತವೂ ವಿಷ ಆಗುತ್ತೆ ಎನ್ನುವುಂತೆ ಸ್ಮಾರ್ಟ್‌ಫೋನ್ ಬಳಕೆ ಈಗ ಮಾನವನ ಬುಡಕ್ಕೆ ಬಂದಿದೆ. ಆರೋಗ್ಯ ಹಾಳುಮಾಡಿಕೊಳ್ಳುವವರ ಜೊತೆಗೆ ಹಣವನ್ನು ಹಾಳುಮಾಡಿಕೊಳ್ಳುವವರ ಸಂಖ್ಯೆಯೇ ಹೆಚ್ಚಿದೆ.

ರಾತ್ರಿ ಮಲಗುವಾಗ ಸ್ಮಾರ್ಟ್‌ಫೋನ್ ಅನ್ನು ತಲೆಯ ಹತ್ತಿರ ಇಟ್ಟುಕೊಳ್ಳುವ ಅಭ್ಯಾಸ ಕೆಲವರಿಗಿದ್ದರೆ, ಕಾರಿನ ಡ್ಯಾಶ್‌ಬೋರ್ಡಿನಲ್ಲಿ ಸ್ಮಾರ್ಟ್‌ಫೋನನ್ನು ದೀರ್ಘಕಾಲ ಇಡುವುದು ಸಮಾನ್ಯವಾಗಿದೆ, ಹಾಗಾಗಿ, ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನಿನಲ್ಲಿ ನೀವು ಮಾಡಲೇ ಬಾರದ ಪ್ರಮುಖ ಕೆಲಸಗಳು ಯಾವುವು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಮಲಗುವಾಗ ಸ್ಮಾರ್ಟ್‌ಫೋನ್ ಬೇಡ!
ರಾತ್ರಿ ಮಲಗುವಾಗ ಸ್ಮಾರ್ಟ್‌ಫೋನ್ ಅನ್ನು ತಲೆಯ ಹತ್ತಿರ ಇಟ್ಟುಕೊಳ್ಳುವ ಅಭ್ಯಾಸ ಇದೆಯೆ? ಖಂಡಿತವಾಗಿ, ಆ ಅಭ್ಯಾಸವನ್ನು ತಕ್ಷಣ ಬಿಟ್ಟುಬಿಡಿ. ಸ್ಮಾರ್ಟ್‌ಫೋನ್ ಅನ್ನು ತಲೆಯ ಹತ್ತಿರ ಇಟ್ಟುಕೊಳ್ಳುವುದರಿಂದ ಮೆದುಳು ಮತ್ತು ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಇನ್ನು ಸ್ಮಾರ್ಟ್‌ಪೋನ್ ಒಂದು ವಿಕಿರಣ ಸೂಸುವ ವಸ್ತುವಾಗಿರುವುದರಿಂದ ಸುರಕ್ಷತೆ ದೃಷ್ಟಿಯಿಂದ, ಅದನ್ನು ತಲೆಯ ಹತ್ತಿರ ಇಟ್ಟುಕೊಂಡು ನಿದ್ದೆಹೋಗಬೇಡಿ.

ಕಣ್ಣುಗಳಿಗೆ ವಿಶ್ರಾಂತಿ ನೀಡಿ
ಸ್ಮಾರ್ಟ್‌ಫೋನನ್ನು ಜಾಸ್ತಿ ಬಳಸುವವರನ್ನು ಕಾಡುವ ಇನ್ನೊಂದು ಸಮಸ್ಯೆ ಎಂದರೆ, ಕಣ್ಣಿನ ಬಳಲಿಕೆ. ಈಗಿನ ಸ್ಮಾರ್ಟ್‌ಫೋನ್‌ಗಳ ಬೆಳಕಿನ ತೀವ್ರತೆ, ಪ್ರಖರತೆ ಜಾಸ್ತಿ. ಕಣ್ಣುಗಳನ್ನು ಕೀಲಿಸಿಕೊಂಡು ದೀರ್ಘ ಕಾಲ ಬಳಸುವುದರಿಂದ ಕಣ್ಣಿನ ನರಗಳು ದುರ್ಬಲವಾಗುತ್ತವೆ ಎಂದು ತಜ್ಞರು ಎಚ್ಚರಿಸುತ್ತಲೇ ಇದ್ದಾರೆ. ಆದ್ದರಿಂದ ಪದೇ ಪದೇ ಮತ್ತು ದೀರ್ಘಕಾಲ ಸ್ಮಾರ್ಟ್‌ಫೋನ್ ನೋಡುವವರು ಆಗಾಗ ಕಣ್ಣುಗಳಿಗೆ ವಿಶ್ರಾಂತಿ ನೀಡುವುದು ಅಗತ್ಯ.

ರಕ್ಷಣಾ ಕವಚ ಒಳ್ಳೆಯದಲ್ಲ.!
ಸ್ಮಾರ್ಟ್‌ಫೋನ್ ಬಾಳಿಕೆ ಹೆಚ್ಚಿಸಲು ಅದಕ್ಕೊಂದು ರಕ್ಷಣಾ ಕವಚವನ್ನು ಹಾಕಿಕೊಳ್ಳುವ ಅಭ್ಯಾಸ ಎಲ್ಲರಿಗೂ ಇದೆ. ಆದರೆ, ಚಾರ್ಜ್ ಮಾಡುವಾಗ ಆ ಬ್ಯಾಕ್ ಕವರ್ ಅನ್ನು ತೆಗೆದಿಟ್ಟು ಚಾರ್ಜ್ ಮಾಡಿದರೆ ಒಳ್ಳೆಯದು. ಚಾರ್ಜ್ ಮಾಡುವಾಗ ಮೊಬೈಲ್ ಫೋನ್ ಸ್ವಲ್ಪ ಬಿಸಿಯಾಗುತ್ತದೆ. ಒಂದೊಮ್ಮೆ ದಪ್ಪದಾದ ಬ್ಯಾಕ್ ಕವರ್ ಇದ್ದರೆ ಸ್ಮಾರ್ಟ್‌ಫೋನ್ ತಣ್ಣಗಾಗುವ ಕ್ರಿಯೆಗೆ ತೊಡಕು ಉಂಟಾಗುತ್ತದೆ. ಇದು ಮೊಬೈಲ್ ಸ್ಪೋಟಕ್ಕೂ ಕಾರಣ.

ಡ್ಯಾಶ್‌ಬೋರ್ಡಿನಲ್ಲಿ ಫೋನ್ ಇಡಬೇಡಿ!
ಕಾರಿನ ಡ್ಯಾಶ್‌ಬೋರ್ಡಿನಲ್ಲಿ ಸ್ಮಾರ್ಟ್‌ಫೋನನ್ನು ದೀರ್ಘಕಾಲ ಇಡುವುದು ಒಳ್ಳೆಯದಲ್ಲ. ಇದರಿಂದಾಗಿ ಅದು ಬಿಸಿಯಾಗುತ್ತಾ ಹೋಗುತ್ತದೆ ಮತ್ತು ಕ್ರಮೇಣ ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತದೆ.ಇದೇ ರೀತಿಯಲ್ಲಿ ಬಿಸಿಲಿನಲ್ಲಿ ಅಥವಾ ಸೂರ್ಯನ ಕಿರಣಗಳಿಗೆ ಎದುರಾಗಿ ಸ್ಮಾರ್ಟ್‌ಫೋನ್ ಅನ್ನು ಇಡಬೇಡಿ. ಇದು ಕೂಡ ಸ್ಮಾರ್ಟ್‌ಪೋನ್ ಬಿಸಿಯನ್ನು ಹೆಚ್ಚಿಸುತ್ತದೆ ಎಂಬುದನ್ನು ಮರೆಯಬೇಡಿ.

ಗಂಟೆಗಟ್ಟಲೆ ಚಾರ್ಜ್ ಮಾಡಬೇಡಿ!
ಕೆಲವರಿಗೆ ತಮ್ಮ ಸ್ಮಾರ್ಟ್‌ಫೋನನ್ನು ರಾತ್ರಿ ಚಾರ್ಜಿಗೆ ಹಾಕುವ ಅಭ್ಯಾಸ ಇದೆ. ಆದರೆ ಮೊಬೈಲ್‌ಫೋನನ್ನು ಯಾವುದೇ ಕಾರಣಕ್ಕೂ ಗಂಟೆಗಟ್ಟಲೆ ಚಾರ್ಜ್ ಮಾಡಬಾರದು. ಓವರ್‌ಚಾರ್ಜ್ ಮಾಡಿದರೆ ಬ್ಯಾಟರಿ ಬಾಳಿಕೆ ಕಡಿಮೆಯಾಗುವುದಲ್ಲದೆ, ಸ್ಮಾರ್ಟ್‌ಫೋನ್ ಅನವಶ್ಯಕವಾಗಿ ಬಿಸಿಯಾಗುತ್ತದೆ. ಎಕಲ್ಲದಕ್ಕಿಂತ ಮುಖ್ಯವಾಗಿ ಸ್ಮಾರ್ಟ್‌ಫೋನ್ ಜೊತೆಗೆ ನೀಡಿರುವ ಕಂಪೆನಿ ಚಾರ್ಜರ್ ಅನ್ನೇ ಉಪಯೋಗಿಸುವುದು ಬಹಳ ಮುಖ್ಯ.

ಆಂಡ್ರಾಯ್ಡ್ ಪೋನ್ ಬಳಕೆದಾರರು ಈಗಲೂ ಮಾಡುತ್ತಿರುವ 10 ಗಂಭೀರ ತಪ್ಪುಗಳು!!
ನೀವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಬಳಸುತ್ತಿದ್ದೀರಿ ಎಂದರೆ, ನಿಮ್ಮ ಸ್ಮಾರ್ಟ್‌ಫೋನಿನ ಬಗ್ಗೆ ನೀವು ತುಂಬಾ ಎಚ್ಚರಿಕೆಯನ್ನು ಹೊಂದಿರಬೇಕು. ಏಕೆಂದರೆ, ನಿಮ್ಮ ಸ್ಮಾರ್ಟ್‌ಫೋನ್‌ಗೆ ನೀವು ಸೂಕ್ತ ರಕ್ಷಣೆಯನ್ನು ನೀಡದೇ ಹೋದರೆ, ಈಗ ನಿಮ್ಮ ಆಪ್ತ ಗೆಳೆಯನಾಗಿರುವ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್ ನಿಮ್ಮ ಶತ್ರುವಾಗಿಯೂ ಬದಲಾಗಬಹುದು.
ಹೌದು, ನಮ್ಮಲ್ಲಿ ಹಲವರು ಸ್ಮಾರ್ಟ್‌ಫೋನ್ ಅನ್ನು ಜಾಗರೂಕತೆಯಿಂದ ಕಾಪಾಡುವುದಿಲ್ಲ, ನಮ್ಮ ಸ್ಮಾರ್ಟ್‌ಪೋನ್ ಸುರಕ್ಷತೆಯಾಗಲಿ, ಮೊಬೈಲ್‌ನಲ್ಲಿರುವ ಅವರ ಡೇಟಾ ಬಗ್ಗೆಯಾಗಲಿ, ಸ್ಮಾರ್ಟ್‌ಫೋನ್ ಖರೀದಿಯ ಬಗ್ಗೆಯಾಗಲಿ ಅವರು ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ, ಒಂದು ದಿನ ಈ ಎಲ್ಲಾ ತಪ್ಪುಗಳು ಅವರಿಗೆ ಗಂಭೀರವಾದ ಹಾನಿಯನ್ನು ಉಂಟುಮಾಡುತ್ತೇವೆ.

ಹಾಗಾಗಿ, ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ನೀವು ಮಾಡಬಾರದ ತಪ್ಪುಗಳನ್ನು ನಾವಿಲ್ಲಿ ಪಟ್ಟಿ ಮಾಡುತ್ತಿದ್ದೇವೆ. ಈ ಕೆಳಗಿನ ಕೆಲವು ತಪ್ಪುಗಳನ್ನು ನೀವು ಮಾಡುತ್ತಿದ್ದರೆ ಬಹುಬೇಗ ಅಂತಹ ತಪ್ಪುಗಳನ್ನು ಸರಿಪಡಿಸಿಕೊಳ್ಳಿ. ಹಾಗಾದರೆ, ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ನೀವು ಮಾಡಬಾರದ ತಪ್ಪುಗಳು ಯಾವುವು ಎಂಬ ವಿಷಯಗಳನ್ನು ಮುಂದೆ ತಿಳಿಯಿರಿ.

ವಿಪರೀತ ಅಪ್ಲಿಕೇಶನ್ ಇನ್‌ಸ್ಟಾಲ್ ಬೇಡ
ನಿಮ್ಮ ಫೋನ್‌ಗೆ ಪರವಾನಗಿ ಇಲ್ಲದ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳದಿರಿ. ಇಂತಹ ಕಾರ್ಯಗಳನ್ನು ಮಾಡುವಾಗ ಆದಷ್ಟು ಜಾಗರೂಕರಾಗಿರಿ. ಅಪ್ಲಿಕೇಶನ್‌ಗಳ ಸುರಿಮಳೆ ನಿಮ್ಮ ಫೋನ್‌ನ ಜೀವಿತವನ್ನು ಹಾಳುಗೆಡವಬಹುದು.

ಆಗಾಗ್ಗೆ ಅಪ್‌ಡೇಟ್ ಮಾಡುತ್ತಿರಿ
ಗೂಗಲ್ ಪ್ಲೇನಲ್ಲಿ ನಿಮಗೆ ಆಂಡ್ರಾಯ್ಡ್‌ನ ಹೊಸ ಹೊಸ ನವೀಕರಣಗಳು ದೊರೆಯುತ್ತಿರುತ್ತವೆ. ಆದ್ದರಿಂದ ನಿಮ್ಮ ಫೋನ್ ಅನ್ನು ಆಗಾಗ್ಗೆ ಅಪ್‌ಡೇಟ್ ಮಾಡುತ್ತಿರಿ.

ಇಎಮ್‌ಐ ಆಯ್ಕೆ ಕಡಿಮೆ ಮಾಡಿ
ಫೋನ್ ಅನ್ನು ಇಎಮ್‌ಐ ಆಯ್ಕೆಯನ್ನು ಬಳಸಿ ಖರೀದಿಸುವುದನ್ನು ನಿಲ್ಲಿಸಿ. ದಿನಕ್ಕೊಂದು ಫೋನ್‌ಗಳು ಲಾಂಚ್ ಆಗಿ ಕೆಲವು ತಿಂಗಳುಗಳ ಅತ್ಯಂತ ಕಡಿಮೆ ಬೆಲೆಗೆ ಇಳಿಯುತ್ತವೆ. ಈ ಸಂದರ್ಭವನ್ನು ಬಳಸಿಕೊಂಡು ಫೋನ್ ಖರೀದಿಸಿ.

ಒದ್ದೆಯಾಗುವುದರಿಂದ ರಕ್ಷಿಸಿ
ನಿಮ್ಮ ಫೋನ್ ಜಲಪ್ರತಿರೋಧಕ ಶಕ್ತಿಯನ್ನು ಹೊಂದಿಲ್ಲ ಎಂದಾದಲ್ಲಿ ಫೋನ್ ಹಾಳಾಗುವುದ ಖಚಿತ.ಇನ್ನು ಒದ್ದೆಯಾಗಿರುವ ಸ್ಥಳಗಳಲ್ಲಿಯೂ ಸಹ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಇಡಬೇಡಿ. ಇದರಿಂದ ನಿಮ್ಮ ಸ್ಮಾರ್ಟ್‌ಪೋನ್ ಹಾಳಾಗಬಹುದು.!

ಪರದೆಗೆ ಸುರಕ್ಷತೆ ಇರಲಿ
ಗೋರಿಲ್ಲಾ ಗ್ಲಾಸ್ ಅತ್ಯುತ್ತಮ ಆದರೆ ಇದಕ್ಕೆ ಸರಿಯಾದ ರಕ್ಷಣೆಯನ್ನು ನೀವು ಮಾಡಿಲ್ಲ ಎಂದಾದಲ್ಲಿ ನಿಮ್ಮ ಫೋನ್‌ನ ಪರದೆಯನ್ನು ಆಗಾಗ್ಗೆ ರಿಪೇರಿ ಮಾಡಿಸುವುದೇ ಕೆಲಸವಾಗಿಬಿಡುತ್ತದೆ.

ಹೆಚ್ಚು ಬಿಸಿ ಮಾಡದಿರಿ
ನಿಮ್ಮ ಫೋನ್ ಅನ್ನು ಹೆಚ್ಚು ಕಾಲ ಚಾರ್ಜ್ ಮಾಡುವುದು ಫೋನ್‌ನ ಬಿಸಿಯನ್ನು ಏರಿಸಬಹುದು. ಸೊನ್ನೆಯ ತನಕ ಫೋನ್ ಬ್ಯಾಟರಿಯನ್ನು ಖಾಲಿಯಾಗಿಸುವುದು ಇಲ್ಲವೇ ಪೂರ್ಣ ಚಾರ್ಜ್ ಆದ ನಂತರ ಕೂಡ ಸಾಕೆಟ್‌ನಿಂದ ಫೋನ್ ಅನ್ನು ಬೇರ್ಪಡಿಸದೇ ಇರುವುದು ಫೋನ್‌ನ ಜೀವನವನ್ನು ನಾಶಪಡಿಸಬಹುದು.

ಆನ್‌ಲೈನ್‌ನಲ್ಲಿ ಸಂಗ್ರಹಿಸದಿರಿ
ನಿಮಗೆ ತಿಳಿಯದ ಕ್ಲೌಡ್ ಪ್ರೊವೈಡರ್‌ಗೆ ಏನಾದರೂ ಸಂಭವಿಸಿದಲ್ಲಿ ನಿಮ್ಮ ಡೇಟಾದ ಗತಿ ಏನಾಗಬಹುದು ಎಂಬುದನ್ನು ಯೋಚಿಸಿದ್ದೀರಾ? ಆದ್ದರಿಂದ ಆನ್‌ಲೈನ್‌ನಲ್ಲಿ ಸಂಗ್ರಹಿಸುವಾಗ ಹೆಚ್ಚಿನ ಮುತುವರ್ಜಿಯನ್ನು ಕಾಪಾಡಿಕೊಳ್ಳಿ.

ಬ್ಯಾಕಪ್ ಮಾಡಲು ಮರೆಯದಿರಿ
ನಿಮ್ಮ ಜೀವನ ನಿಮ್ಮ ಫೋನ್‌ನಲ್ಲಿದೆ. ನಿಮ್ಮ ಅತ್ಯಮೂಲ್ಯ ಫೋಟೋಗಳು, ರಹಸ್ಯವಾದ ದಾಖಲೆಗಳುಳ್ಳ ಫೋನ್ ಅನ್ನು ನೀವು ಕಳೆದುಕೊಂಡಿರಿ ಎಂದಲ್ಲಿ ಅದು ನಿಮ್ಮ ಜೀವನದ ಪ್ರಮುಖ ಸೋಲಾಗುತ್ತದೆ. ಆದ್ದರಿಂದ ಫೋನ್‌ನಲ್ಲಿರುವ ದಾಖಲೆಗಳನ್ನು ಬ್ಯಾಕಪ್ ಮಾಡಲು ಮರೆಯದಿರಿ.

ಯುಎಸ್‌ಬಿ ಮೂಲಕ ಚಾರ್ಜ್ ಮಾಡದಿರಿ
ಕಂಪ್ಯೂಟರ್‌ನ ಯುಎಸ್‌ಬಿ ಪೋರ್ಟ್‌ಗೆ ನಿಮ್ಮ ಫೋನ್‌ನ ಚಾರ್ಜರ್ ಅನ್ನು ಅಳವಡಿಸುವುದು ಚಾರ್ಜಿಂಗ್‌ನ ಸರಿಯಾದ ವಿಧಾನವಲ್ಲ ಎಂಬುದನ್ನು ಅರಿತುಕೊಳ್ಳಿ.

ಸ್ಕ್ರೀನ್ ಲಾಕ್ ಮಾಡಲು ಮರೆಯದಿರಿ
ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಜಾಗರೂಕೆತಯಿಂದ ನೋಡಿಕೊಳ್ಳಲು ಇರುವ ಒಂದು ವಿಧಾನವೆಂದರೆ ಅದನ್ನು ಲಾಕ್ ಮಾಡುವುದಾಗಿದೆ. ಆಂಡ್ರಾಯ್ಡ್‌ನಲ್ಲಿ ನಿಮ್ಮ ಫೋನ್ ಅನ್ನು ಲಾಕ್ ಮಾಡುವ ಅತ್ಯುತ್ತಮ ಅಪ್ಲಿಕೇಶನ್‌ಗಳಿಗೆ ಏನೂ ಭರವಿಲ್ಲ, ಈ ಉತ್ತಮ ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ಗೆ ಉತ್ತಮ ಭದ್ರತೆಯನ್ನು ಒದಗಿಸುತ್ತದೆ.


Click it and Unblock the Notifications