Home
ಸುದ್ದಿಜಾಲ

ತಲೆತಿರುಗಿ ಬೀಳುವಂತಿದೆ ಭಾರತದಲ್ಲಿ ಬಿಟ್‌ಕಾಯಿನ್ ಖರೀದಿ ಮೊತ್ತ?

ಕಳೆದ 17 ತಿಂಗಳಲ್ಲಿ ರಾಷ್ಟ್ರವ್ಯಾಪಿ ನಡೆದಿರುವ ಡಿಜಿಟಲ್ ಕರೆನ್ಸಿ ವಹಿವಾಟುವನ ಮೊತ್ತ ಎಲ್ಲರನ್ನು ತಲೆತಿರುಗಿ ಬೀಳುವಂತೆ ಮಾಡಿದೆ.!

By Bhaskar N J

ಕಳೆದ 17 ತಿಂಗಳಲ್ಲಿ ರಾಷ್ಟ್ರವ್ಯಾಪಿ ನಡೆದಿರುವ ಡಿಜಿಟಲ್ ಕರೆನ್ಸಿ ವಹಿವಾಟುವನ ಮೊತ್ತ ಎಲ್ಲರನ್ನು ತಲೆತಿರುಗಿ ಬೀಳುವಂತೆ ಮಾಡಿದೆ.! ಬಿಟ್‌ ಕಾಯಿನ್‌ನಂತಹ ಡಿಜಿಟಲ್‌ ಕರೆನ್ಸಿಗಳ ವಹಿವಾಟಿನಲ್ಲಿ ಹಣ ತೊಡಗಿಸಿದವರಿಗೆ ಆದಾಯ ತೆರಿಗೆ ಇಲಾಖೆಯು ನೋಟಿಸ್ ಜಾರಿ ಮಾಡಿದ ನಂತರ ಪರ್ಯಾಯ ಕರೆನ್ಸಿಗಳಲ್ಲಿ ಹಣ ತೊಡಗಿಸಿರುವ ಮಾಹಿತಿ ಸಿಕ್ಕಿದೆ.!!

ಕಳೆದ ಹದಿನೇಳು ತಿಂಗಳ ಅವಧಿಯಲ್ಲಿ 22 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ಬಿಟ್‌ಕಾಯಿನ್ ವಹಿವಾಟು ನಡೆದಿರುವುದು ರಾಷ್ಟ್ರವ್ಯಾಪಿ ಸಮೀಕ್ಷೆ ಮೂಲಕ ತಿಳಿದು ಬಂದಿದೆ.! ಡಿಜಿಟಲ್ ಕರೆನ್ಸಿ ಭಾರಿ ನಷ್ಟಕ್ಕೆ ಎಡೆಮಾಡಿಕೊಡಲಿದೆ ಎಂದು ಕೇಂದ್ರ ಸರ್ಕಾರವು ಪದೇ ಪದೇ ಎಚ್ಚರಿಕೆ ನೀಡುತ್ತಲೇ ಇದ್ದರೂ ಜನರು ಬಿಟ್‌ಕಾಯಿನ್ ವ್ಯವಹರಿಸಿದ್ದಾರೆ.!!

ತಲೆತಿರುಗಿ ಬೀಳುವಂತಿದೆ ಭಾರತದಲ್ಲಿ ಬಿಟ್‌ಕಾಯಿನ್ ಖರೀದಿ ಮೊತ್ತ?

ರಿಯಲ್‌ ಎಸ್ಟೇಟ್‌ ವಹಿವಾಟುದಾರರು ಮತ್ತು ಚಿನ್ನಾಭರಣ ವರ್ತಕರು ಬಿಟ್‌ಕಾಯಿನ್‌ ಸೇರಿದಂತೆ ಇತರ ಪರ್ಯಾಯ ಕರೆನ್ಸಿಗಳಲ್ಲಿ ಹೆಚ್ಚು ಹಣ ತೊಡಗಿಸಿರು ಮಾಹಿತಿ ಸಿಕ್ಕಿದ್ದು, ಈ ಹೂಡಿಕೆಯನ್ನು ಆದಾಯ ಲೆಕ್ಕಕ್ಕೆ ಪರಿಗಣಿಸಲಾಗುವುದು ಎಂದು ಹೇಳಲಾಗಿದೆ.! ಹಾಗಾದರೆ, ಭಾರತದಲ್ಲಿ ಬಿಟ್‌ಕಾಯಿನ್ ವ್ಯವಹಾರ ಹೇಗಿದೆ ಎಂಬುದನ್ನು ಮುಂದೆ ತಿಳಿಯಿರಿ!!

ಬಿಟ್‌ ಕಾಯಿನ್  ಮೇಲೆ ತೆರಿಗೆ  !!

ಬಿಟ್‌ ಕಾಯಿನ್ ಮೇಲೆ ತೆರಿಗೆ !!

ಬಿಟ್‌ ಕಾಯಿನ್‌ಗಳನ್ನು ಅಕ್ರಮ ಚಟುವಟಿಕೆಗಳಿಗೆ ಬಳಕೆ ಮಾಡುತ್ತಿರುವುದು ಕೂಡ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿತ್ತು. ಸರ್ಕಾರಕ್ಕೆ ಸಲ್ಲಿಸಬೇಕಾದ ತೆರಿಗೆ ತಪ್ಪಿಸಲು ಜನರು ಬಿಟ್‌ ಕಾಯಿನ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದರು. ಆದರೆ, ಇದೀಗ ಬಿಟ್‌ಕಾಯಿನ್ ಆದಾಯ ಲೆಕ್ಕಕ್ಕೆ ಪರಿಗಣಿಸಲಾಗುವುದು ಎಂದು ತೆರಿಗೆ ಇಲಾಖೆ ತಿಳಿಸಿದೆ.!!

ಬಿಟ್‌ಕಾಯಿನ್ ಇ-ವಂಚನೆಯ ಸ್ಕೀಮ್?

ಬಿಟ್‌ಕಾಯಿನ್ ಇ-ವಂಚನೆಯ ಸ್ಕೀಮ್?

ಆದಾಯ ತೆರಿಗೆ ಇಲಾಖೆಯು ಬೆಂಗಳೂರು ಸೇರಿದಂತೆ ದೇಶದ ನಗರಗಳಲ್ಲಿ ಬುಧವಾರ ಬಿಟ್‌ಕಾಯಿನ್ ವಿನಿಮಯ ಕೇಂದ್ರಗಳ ಸಮೀಕ್ಷೆಯನ್ನು ನಡೆಸಿದ್ದು, ಬಿಟ್‌ ಕಾಯಿನ್‌ ದರ ಕ್ಷಣ ಕ್ಷಣಕ್ಕೂ ಭಾರಿ ಜಿಗಿಯುತ್ತಿರುವುದರಿಂದ ಇದು ಇ-ವಂಚನೆಯ ಸ್ಕೀಮ್‌ ಆಗಿ ಮಾರ್ಪಡುವ ಸಂಭವ ಇದೆ ಎಂಬ ಭೀತಿ ಉಂಟಾಗಿದೆ.

ಭಾರತದಲ್ಲಿ ಕಾನೂನು ಮಾನ್ಯವಲ್ಲ!!

ಭಾರತದಲ್ಲಿ ಕಾನೂನು ಮಾನ್ಯವಲ್ಲ!!

ಬಿಟ್‌ಕಾಯಿನ್ ಅಥವಾ ಆ ರೀತಿಯ ಯಾವುದೇ ಕ್ರಿಪ್ಟೋ ಕರೆನ್ಸಿಗಳು ಭಾರತದಲ್ಲಿ ಕಾನೂನು ಮಾನ್ಯವಲ್ಲ. ಹಾಗಾಗಿ, ಬಿಟ್‌ಕಾಯಿನ್ ವಿಷಯದ ಬಗ್ಗೆ ಪರಿಶೀಲನೆ ನಡೆಸಲು, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ಜೆಟ್ಲಿ ಹೇಳಿದ್ದಾರೆ.!!

ಬಿಟ್‌ಕಾಯಿನ್ ಆಸೆ ಬೇಡ!!

ಬಿಟ್‌ಕಾಯಿನ್ ಆಸೆ ಬೇಡ!!

ಕೇಲವೇ ತಿಂಗಳ ಹಿಂದಷ್ಟೆ 2 ಲಕ್ಷ ರೂಪಾಯಿಗಳ ಬೆಲೆ ಹೊಂದಿದ್ದ ಒಂದು ಬಿಟ್‌ಕಾಯಿನ್ ಬೆಲೆ ಇಂದು 13 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಿದೆ. ಸುಲಭವಾಗಿ ಹಣ ಸಂಪಾದನೆ ಮಾಡುವ ಆಸೆ ಹೊತ್ತು ಹೆಚ್ಚು ಜನರು ಬಿಟ್‌ಕಾಯಿನ್ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಆದರೆ, ಒಮ್ಮೆ ಮೋಸಹೋದರೆ ಏನಾಗಬಹುದು ಗೊತ್ತಲ್ವಾ?

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
ಕಂಪ್ಯೂಟರ್‌ ಪ್ರಪಂಚಕ್ಕೆ ಸೀಮಿತ!!

ಕಂಪ್ಯೂಟರ್‌ ಪ್ರಪಂಚಕ್ಕೆ ಸೀಮಿತ!!

ಅಂತರಜಾಲ ಲೋಕದಲ್ಲಿ ಬಳಕೆಗೆ ಬರುತ್ತಿರುವ ಗೂಚರಿಸದ ಹಣ ಈ ಬಿಟ್‌ಕಾಯಿನ್. ಭಾರತದಲ್ಲಿ ರೂಪಾಯಿ, ಅಮೆರಿಕದಲ್ಲಿ ಡಾಲರುಗಳೆಲ್ಲ ಇದ್ದ ಹಾಗೆ ಅಂತರಜಾಲದ ಹಣ ಬಿಟ್‌ಕಾಯಿನ್ ಅಂತರಜಾಲದಲ್ಲಿ ಚಲಾವಣೆಯಾಗುವ ಈ ಬಿಟ್‌ಕಾಯಿನ್ ಅಸ್ತಿತ್ವ ಕಂಪ್ಯೂಟರ್‌ ಪ್ರಪಂಚಕ್ಕೆ ಸೀಮಿತ.!!

Best Mobiles in India

English summary
The banks are scrutinising current accounts held by top Bitcoin exchanges. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+