ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಬ್ಲೂಟೂತ್ ಇಯರ್‌ಫೋನ್‌ಗಳು!
ಸ್ಮಾರ್ಟ್‌ಫೋನ್‌ಗಳ ಜೊತೆಗೆ ಇಯರ್‌ಫೋನ್ ನೀಡುವ ಕಾಲ ಮುಗಿದು ಹೋಗಿದೆ. ಈಗ ಏನಿದ್ದರೂ ಗ್ರಾಹಕರೇ ತಮಗೆ ಬೇಕಾದ ಬ್ರ್ಯಾಂಡ್‌ನ ಇಯರ್‌ಫೋನ್‌ಗಳನ್ನ ಕೊಳ್ಳುವ ಕಾಲ. ಈಗಾಗ್ಲೆ ಮಾರುಕಟ್ಟೆಯಲ್ಲಿ ಸಾಕಷ್ಟು ಕಂಪೆನಿಗಳ ಇಯರ್‌ಫೋನ್‌ಗಳು ಲಭ್ಯವಿವೆ. ಆಕರ್ಷಕ ಫೀಚರ್ಸ್‌ಗಳ ಇಯರ್‌ಫೋನ್‌ಗಳು ಲಭ್ಯವಿದ್ದರೂ ಉತ್ತಮ ಬ್ರ್ಯಾಂಡ್ ಕಂಪೆನಿಗಳ ಇಯರ್‌ಫೋನ್‌ಗಳನ್ನೇ ಗ್ರಾಹಕರು ಆಯ್ಕೆ ಮಾಡಿಕೊಳ್ಳುತ್ತಾರೆ.

ಹೌದು, ಮಾರುಕಟ್ಟೆಯಲ್ಲಿ ಇಂದು ಸಾಕಷ್ಟು ನವೀನ ಮಾದರಿಯ ಇಯರ್‌ಫೋನ್‌ಗಳು ಲಭ್ಯವಿದ್ದರೂ ಸಹ ಬ್ರ್ಯಾಂಡ್ ಕಂಪೆನಿಗಳ ಇಯರ್‌ಫೋನ್‌ಗಳಿಗೆ ಮೊದಲ ಆದ್ಯತೆಯನ್ನ ಗ್ರಾಹಕರು ನೀಡುತ್ತಾರೆ. ಆದರೆ ಇದೀಗ ಸಾಕಷ್ಟು ಬ್ರ್ಯಾಂಡ್ ಕಂಪೆನಿಗಳು ಸಹ ಇಯರ್‌ಫೋನ್‌ಗಳನ್ನ ಪರಿಚಯಿಸಿರೊದ್ರಿಂದ ಯಾವ ಕಂಪೆನಿಯ ಇಯರ್‌ಫೋನ್ ಉತ್ತಮ ಅನ್ನೊ ಗೊಂದಲ ಇದ್ದೇ ಇರುತ್ತೆ. ಈ ಗೊಂದಲಕ್ಕೆ ಪರಿಹಾರವನ್ನ ನಾವು ನೀಡ್ತೇವೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಇಯರ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ.

ಕ್ರಾಸ್‌ಬೀಟ್ಸ್ ವೇವ್ ಇಯರ್‌ಫೋನ್‌ಗಳು
ಕ್ರಾಸ್ ಬೀಟ್ಸ್ ಕಂಪೆನಿಯ ಇಯರ್‌ಫೋನ್‌ಗಳು ಅತ್ಯುತ್ತಮ ಇಯರ್‌ಫೋನ್‌ಗಳಲ್ಲಿ ಒಂದಾಗಿದ್ದು, ಕ್ರಾಸ್ ಬೀಟ್ಸ್ ವೇವ್ ಟ್ರೂಲಿ ಎಚ್‌ಡಿ ವೈರ್‌ಲೆಸ್ ಇಯರ್‌ಫೋನ್ V4.1 + EDR ಬ್ಲೂಟೂತ್ ಆವೃತ್ತಿಯನ್ನು 10 ಮೀ ರೇಂಜ್‌ನಲ್ಲಿ ಬೆಂಬಲಿಸಲಿದೆ. ಇದಲ್ಲದೆ, ಇದು ಬಳಕೆದಾರರಿಗೆ ಉತ್ತಮವಾದ ಅನುಭವ ನೀಡಲಿದೆ. ಅಲ್ಲದೆ ಇಂಟರ್ ಬಿಲ್ಟ್ ಮೈಕ್ ಮತ್ತು ಕ್ಲಿಪ್ ಅನ್ನು ಹೊಂದಿದೆ. ಇನ್ನು ಈ ಇಯರ್‌ಫೋನ್ 8 ಗಂಟೆಗಳ ಮ್ಯೂಸಿಕ್ ಟೈಂ ಅನ್ನು ನೀಡಲಿದ್ದು, ಒಂದೇ ಚಾರ್ಜ್‌ನೊಂದಿಗೆ 240 ಗಂಟೆಗಳವರೆಗೆ ಸ್ಟ್ಯಾಂಡ್‌ಬೈ ನೀಡಲಿದೆ. ಇದರ ಬೆಲೆ 2499 ರೂ,ಆಗಿದೆ.

ಬೋಟ್ ರಾಕರ್ಜ್ 255 ಸ್ಪೋರ್ಟ್ಸ
ಜನಪ್ರಿಯ ಇಯರ್‌ಫೋನ್‌ಗಳಲ್ಲಿ ಬೋಟ್ ರಾಕರ್ಸ್ ವೈರ್‌ಲೆಸ್ ಇಯರ್‌ಫೋನ್‌ಗಳು ಕೂಡ ಒಂದಾಗಿದೆ. ಈ ಇಯರ್‌ಫೋನ್ ಕ್ವಾಲ್ಕಾಮ್ CSR 8635 ಪ್ರೊಸೆಸರ್ ಅನ್ನು ಒಳಗೊಂಡಿದೆ. ಅಲ್ಲದೆ ಇದು 4.1 ಬ್ಲೂಟೂತ್ ಅನ್ನು ಬೆಂಬಲಿಸಲಿದ್ದು, 110 mAHಸಾಮರ್ಥ್ಯದ ಪಾಲಿಮರ್ ಬ್ಯಾಟರಿ ಪ್ಯಾಕ್‌ಆಪ್ ಅನ್ನು ಹೊಂದಿದೆ. ಅಲ್ಲದೆ ಇದು 45 ನಿಮಿಷಗಳ ಪ್ಲೇಬ್ಯಾಕ್ ಟೈ ಅನ್ನು ನೀಡುತ್ತದೆ. ಇದು IPX -4 ರೇಟಿಂಗ್ ವಾಟರ್ ಪ್ರೂಪ್ ಫೀಚರ್ಸ್ ಅನ್ನು ಒಳಗೊಂಡಿದ್ದು ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ. ಇನ್ನು ಈ ಇಯರ್‌ಫೋನ್ ಆಕ್ಟಿವ್ ಬ್ಲ್ಯಾಕ್, ನಿಯಾನ್ ಮತ್ತು ರೇಜಿಂಗ್ ರೆಡ್ ಕಲರ್‌ಗಳಲ್ಲಿ ಲಭ್ಯವಿದ್ದು, 1,299ರೂ ಬೆಲೆಯನ್ನ ಹೊಂದಿದೆ.

ಟ್ಯಾಗ್ ಇನ್‌ಫರ್ನೊ ಇಯರ್‌ಫೋನ್
ಇನ್ನು ಟ್ಯಾಗ್ ಇನ್‌ಫರ್ನೊ ವೈರ್‌ಲೆಸ್ ಇಯರ್‌ಫೋನ್ ಬ್ಲೂಟೂತ್ 4.1 CSR ಟೆಕ್ನಾಲಜಿಯನ್ನ ಹೊಂದಿದ್ದು ಬಳಕೆದಾರರಿಗೆ ಅತ್ಯುತ್ತಮ ಅನುಭವವನ್ನು ನೀಡಲಿದೆ. ಅಲ್ಲದೆ ಈ ಇಯರ್‌ಫೋನ್‌ನಲ್ಲಿ ಆಫ್ಟಿಎಕ್ಸ್ ಯೂನಿಟ್ ನೀಡಲಾಗಿದ್ದು, ಇದು ಬೆವರು ಮತ್ತು ಸ್ಪ್ಲಾಶ್-ಪ್ರೂಫ್ ವಿನ್ಯಾಸವನ್ನು ಹೊಂದಿದೆ. ಇದಲ್ಲದೆ ಈ ಇಯರ್‌ಫೋನ್‌ನಿಂದ ನಾಯಿಸ್ ಕ್ಯಾನ್ಸೆಲೇಶನ್ ಅನ್ನು ಹೊಂದಿದ್ದು ಉತ್ತಮ ಆಡಿಯೋ ಅನುಭವವನ್ನು ಆನಂದಿಸಲು ನಿಮಗೆ ಅವಕಾಶ ಕಲ್ಪಿಸುತ್ತದೆ. ಇನ್ನು ಈ ವೈರ್‌ಲೆಸ್ ಇಯರ್‌ಫೋನ್‌ಗಳು 100mAh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ಇದು 7 ಗಂಟೆಗಳ ಮ್ಯೂಸಿಕ್ ಟೈಂ ಅನ್ನು ನೀಡಲಿದೆ. ಅಲ್ಲದೆ 180 ಗಂಟೆಗಳವರೆಗೆ ಸ್ಟ್ಯಾಂಡ್‌ಬೈ ಟೈಂ ಅನ್ನು ಒದಗಿಸುತ್ತದೆ. ಇದರ ಬೆಲೆ 1,999 ರೂ ಆಗಿದೆ.

ಸೋನಿ - C 400 ಇಯರ್ ಹೆಡ್‌ಫೋನ್
ಇನ್ನು ಸೋನಿ C 400 ವೈರ್‌ಲೆಸ್ ಇಯರ್‌ಫೋನ್ ಅತ್ಯುತ್ತಮ ಇಯರ್‌ಫೋನ್‌ಗಳಲ್ಲಿ ಒಂದಾಗಿದ್ದು, ಇದು ಬ್ಲೂಟೂತ್ 4.2 ಆವೃತ್ತಿ ಯನ್ನು ಬೆಂಬಲಿಸಲಿದೆ. ಅಲ್ಲದೆ ಈ ಇಯರ್ ಫೋನ್‌ಗಳು ನಿಯರ್ ಫೀಲ್ಡ್ ಕಮ್ಯುನಿಕೇಷನ್ ಮತ್ತು ಬ್ಲೂಟೂತ್ ಟೆಕ್ನಾಲಜಿಯನ್ನು ಹೊಂದಿದ್ದು ಅದು ಇನ್ಸಟಂಟ್ ಕನೆಕ್ಟಿವಿಟಿಗಾಗಿ ಒಂದು ಟಚ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಅಲ್ಲದೆ 4.5 ಗಂಟೆಗಳ ಚಾರ್ಜ್‌ನಲ್ಲಿ 20 ಗಂಟೆಗಳ ಬ್ಯಾಟರಿ ಬಾಳಿಕೆ ಬರಲಿದ್ದು, ಇದು ಒಂದು ವರ್ಷದ ವಾರೆಂಟಿಯನ್ನು ನೀಡುತ್ತದೆ. ಇದರ ಬೆಲೆ 3,248 ರೂ ಆಗಿದೆ.

ಸ್ಕಲ್‌ಕ್ಯಾಂಡಿ S2SSW-M003
ಸ್ಕಲ್‌ಕ್ಯಾಂಡಿ ಇಯರ್‌ಫೋನ್‌ಗಳು, ಪ್ರೀಮಿಯಂ ಗುಣಮಟ್ಟವನ್ನು ಹೊಂದಿರುವ ಇಯರ್‌ಗಳಿಗೆ ಹೆಸರುವಾಸಿಯಾಗಿದೆ. ಈ ಇಯರ್‌ಫೋನ್ ಓವರ್-ಇಯರ್ ಹೆಡ್‌ಫೋನ್ ವೈರ್ಡ್ ಮಾದರಿಯಲ್ಲಿ ದೊರೆಯಲಿದೆ. ಇನ್ನು ಈ ಇಯರ್‌ಫೋನ್ ಬ್ಲೂಟೂತ್ ಕನೆಕ್ಟಿವಿಟಿ ಆಯ್ಕೆಯನ್ನು ಹೊಂದಿದ್ದು, ಒಂದು ವರ್ಷದ ವಾರೆಂಟೆಯನ್ನು ಸಹ ಹೊಂದಿದೆ. ಇದಲ್ಲದೆ ಈ ಇಯರ್‌ಫೋನ್ ಬಳಕೆದಾರರ ಕಿವಿಗೆ ತಕ್ಕಂತೆ ಹೊಂದಿಕೊಳ್ಳುವ ವಿನ್ಯಾಸವನ್ನು ಸಹ ಒಳಗೊಂಡಿದೆ. ಅಲ್ಲದೆ ಉತ್ತಮ ಬ್ಯಾಟರಿ ಪ್ಯಾಕ್‌ಆಪ್ ಅನ್ನು ಹೊಂದಿದ್ದು, 16 ಗಂಟೆಗಳ ಪ್ಲೇಬ್ಯಾಕ್ ಟೈಂ ಅನ್ನು ನೀಡಲಿದೆ.


Click it and Unblock the Notifications








