"ಮೈ ಏರ್‌ಟೆಲ್" ಆಪ್‌ನಿಂದ ಇಷ್ಟೊಂದು ಅನುಕೂಲ ಅಂತ ಇವತ್ತೆ ಗೊತ್ತಾಗಿದ್ದು!!
ಡಿಜಿಟಲ್ ಪಾವತಿ ವ್ಯವಸ್ಥೆ ಬಳಕೆ ಏನೊ ಸುಲಭವೇ. ಆದರೆ, ಈ ಎಲ್ಲಾ ಸೇವೆಗಳನ್ನು ಬಳಸಲು ನಿಮಗೆ ಒಂದು ನಂಬಿಕಸ್ಥ ಆಪ್ ಎಂಬುದು ಬೇಕಲ್ಲವೇ?
ಶಾಪಿಂಗ್, ಮೂವಿ ಟಿಕೆಟ್, ವಿದ್ಯುತ್ ಬಿಲ್, ಮೊಬೈಲ್ ಬಿಲ್ ಮತ್ತು ಹಣ ವ್ಯವಹಾರ ಹೀಗೆ ಎಲ್ಲವೂ ಮೊಬೈಲ್ ಮೂಲಕವೇ ನಡೆಯುತ್ತಿರುವುದರಿಂದ ಇಂದು ಡಿಜಿಟಲ್ ಪಾವತಿ ವ್ಯವಸ್ಥೆ ನಮ್ಮ ಜೀವನವನ್ನು ಸಾಕಷ್ಟು ಸುಲಭಗೊಳಿಸಿದೆ. ಹಾಗಾಗಿಯೇ, ಇತ್ತೀಚಿಗೆ ಮಾರುಕಟ್ಟೆಗೆ ಹತ್ತಾರು ಡಿಜಿಟಲ್ ಪಾವತಿ ಆಪ್‌ಗಳು ಕಾಲಿಡುತ್ತಿವೆ.!!
ಡಿಜಿಟಲ್ ಪಾವತಿ ವ್ಯವಸ್ಥೆ ಬಳಕೆ ಏನೊ ಸುಲಭವೇ. ಆದರೆ, ಈ ಎಲ್ಲಾ ಸೇವೆಗಳನ್ನು ಬಳಸಲು ನಿಮಗೆ ಒಂದು ನಂಬಿಕಸ್ಥ ಆಪ್ ಎಂಬುದು ಬೇಕಲ್ಲವೇ? ಮಾರುಕಟ್ಟೆಯಲ್ಲಿರುವ ಹತ್ತಾರು ಡಿಜಿಟಲ್ ಪಾವತಿ ಆಪ್‌ಗಳಲ್ಲಿ ನಂಬಿಕಸ್ಥ ಹಾಗೂ ವಿಶೇಷ ಸೇವೆಗಳನ್ನು ಒದಗಿಸುವ ಆಪ್ ಯಾವುದು ಎಂದು ತಿಳಿಯುವುದು ಕಷ್ಟವೇ ಸರಿ.!!

ಆದರೆ, ಈ ಎಲ್ಲಾ ಸಮಸ್ಯೆಗಳಿಗೆ "ಮೈ ಏರ್‌ಟೆಲ್" ಆಪ್ ನಿಮಗೆ ಪರಿಹಾರವನ್ನು ಒದಗಿಸಬಹುದು.! ಮೊಬೈಲ್ ಬಿಲ್ ಮಾತ್ರವಲ್ಲದೇ, ನಿಮ್ಮ ಖರ್ಚುಗಳನ್ನು ಒಂದು ಸುವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸುವುದು ಸೇರಿದಂತೆ ಹತ್ತಾರು ಸೇವೆಗಳನ್ನು "ಮೈ ಏರ್‌ಟೆಲ್" ಆಪ್ ಒದಗಿಸುತ್ತಿದೆ. ಹಾಗಾಗಿ, ಮೈ ಏರ್‌ಟೆಲ್ ಆಪ್ ಇದ್ದರೆ ಏನೆಲ್ಲಾ ಲಾಭ ಎಂದು ಮುಂದೆ ತಿಳಿಯಿರಿ.!!

ಪ್ರೀಪೇಡ್ ರೀಚಾರ್ಜ್ ಸೇವೆಗಳು!!
"ಮೈ ಏರ್‌ಟೆಲ್" ಆಪ್ ಪ್ರಮುಖವಾಗಿ ಟೆಲಿಕಾಂ ದಿಗ್ಗಜ ಕಂಪೆನಿ ಭಾರತಿ ಏರ್‌ಟೆಲ್ ಕಂಪೆನಿಗೆ ಸೇರಿದಿರುವುದರಿಂದ ನೀವು ಈ ಆಪ್ ಅನ್ನು ಪ್ರೀಪೇಡ್ ಮತ್ತು ಪೋಸ್ಟ್‌ಪೇಡ್ ರೀಚಾರ್ಜ್ ಸೇವೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ.! ಮೊಬೈಲ್ ಬ್ಯಾಲೆನ್ಸ್, ಇಂಟರ್‌ನೆಟ್ ಬ್ಯಾಲೆನ್ಸ್ ಪರಿಶೀಲನೆ ಮತ್ತು ರೀಚಾರ್ಜ್ ಮಾಡಬಹುದಾದ ಆಯ್ಕೆ ಆಪ್‌ನಲ್ಲಿದೆ.!!

ಡಿಟಿಎಚ್ ಸೇವೆಗಳು!!
ಮೈ ಏರ್‌ಟೆಲ್ ಅಪ್ಲಿಕೇಶನ್ ಮೂಲಕ ನೀವು ಡಿಟಿಎಚ್ ಮತ್ತು ಡಾಟಾ ಕಾರ್ಡ್ ಸೇವೆಗಳನ್ನು ಸಹ ನಿರ್ವಹಿಸಬಹುದು. ಯಾವುದೇ ತೊಂದರೆ ಇಲ್ಲದೆ ನಿಮ್ಮ ಮೊಬೈಲ್ ಮೂಲಕವೇ ಡಿಟಿಎಚ್ ರೀಚಾರ್ಜ್ ಅನ್ನು ಪುನರಾವರ್ತಿಸಬಹುದು. ಇಷ್ಟು ಮಾತ್ರವಲ್ಲದೇ ಆಪ್ ಮೂಲಕ ವ್ಯವಹರಿಸುವುದರಿಂದ ವಿಶೇಷ ಡಿಟಿಹೆಚ್ ಕೊಡುಗೆಗಳನ್ನು ಸಹ ಪಡೆದುಕೊಳ್ಳಬಹುದು.!!

ನೆಟ್ ಬ್ಯಾಂಕಿಂಗ್ ಸೌಲಭ್ಯ!!
ಡೆಬಿಟ್ ಕಾರ್ಡುಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿಕೊಂಡು ಆನ್ಲೈನ್ ಪಾವತಿಸಲು ಮೈ ಏರ್‌ಟೆಲ್ ಅಪ್ಲಿಕೇಶನ್ ನಿಮಗೆ ಅನುಕೂಲ ಮಾಡಿಕೊಡುತ್ತದೆ. ಆನ್ಲೈನ್ ಪಾವತಿ ಸೇವೆಯು ಬಹಳ ಸುಲಭ ಮತ್ತು ಸುರಕ್ಷಿತವಾಗಿದೆ ಎಂದು ಏರ್‌ಟೆಲ್ ಕಂಪೆನಿ ಸ್ಪಷ್ಟಪಡಿಸಿದೆ.!!

ಮನರಂಜನೆಗೆ ಆಪ್!!
ಮೈ ಏರ್‌ಟೆಲ್ ಆಪ್ ಮೂಲಕ ಈಗ ಮನರಂಜನೆಯ ಆಪ್ ಆಗಿಯೂ ಬದಲಾಗಿದೆ. ಈ ಆಪ್‌ನಲ್ಲಿ ಚಲನಚಿತ್ರಗಳು, ಟಿವಿ ಪ್ರದರ್ಶನಗಳು ಮತ್ತು ಲೈವ್ ಟಿವಿಗಳನ್ನು ವೀಕ್ಷಿಸಲು ನಿಮಗೆ ಅನುಮತಿಸುವ ಆಯ್ಕೆ ಇದೆ. ಒಂದು ವರ್ಷದವರೆಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಿಮ್ಮ ಏರ್‌ಟೆಲ್ ಯೋಜನೆಯಲ್ಲಿ 1 ವರ್ಷದ ಅಮೆಜಾನ್ ಪ್ರೈಮ್ ಸಹ ಕೊಡುಗೆಯನ್ನು ಸಹ ನೀಡಲಾಗಿದೆ.!!

ಡಿಎಸ್ಎಲ್ ಮತ್ತು ಬ್ರಾಡ್ಬ್ಯಾಂಡ್ ಸೇವೆಗಳು!!
ನಿಮ್ಮ ಮೊಬೈಲ್‌ನಿಂದ ನಿಮ್ಮ ಡಿಎಸ್ಎಲ್ ಮತ್ತು ಬ್ರಾಡ್ಬ್ಯಾಂಡ್ ಸೇವೆಗಳನ್ನು ಪ್ರವೇಶಿಸಲು ಮತ್ತು ನಿರ್ವಹಿಸಲು ಮೈ ಏರ್‌ಟೆಲ್ ಅಪ್ಲಿಕೇಶನ್ ನಿಮಗೆ ಅವಕಾಶ ಮಾಡಿಕೊಡುತ್ತದೆ ನಿಮ್ಮ ಎಲ್ಲಾ ಬ್ರಾಡ್ಬ್ಯಾಂಡ್ ಬಿಲ್ ಪಾವತಿಗಳಲ್ಲಿ ನೀವು 100% ಸುರಕ್ಷಿತ ವಹಿವಾಟುಗಳನ್ನು ಆನಂದಿಸಬಹುದು ಮತ್ತು ಬ್ರಾಡ್ಬ್ಯಾಂಡ್ ಯೋಜನೆಗಳನ್ನು ವೀಕ್ಷಿಸಬಹುದು. ಜೊತೆಗೆ ಡೇಟಾವನ್ನು ಪರಿಶೀಲಿಸಲು ಅಪ್ಲಿಕೇಶನ್ ನಿಮಗೆ ಅನುಮತಿಸುತ್ತದೆ.


ನಿಮ್ಮ ಫೋನ್ ಅನ್ನು ಬ್ಯಾಂಕ್ ಮಾಡಿ!!
ಮೈ ಏರ್‌ಟೆಲ್ ಅಪ್ಲಿಕೇಶನ್ ಏರ್‌ಟೆಲ್ ಬ್ಯಾಂಕ್ ಸೌಲಭ್ಯವನ್ನು ಹೊಂದಿದೆ. ಏರ್‌ಟೆಲ್ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯದಿಂದ ನಿಮ್ಮ ಉಳಿತಾಯ ಖಾತೆಗಳಲ್ಲಿ 5.5% ಬಡ್ಡಿ ದರ ನಿಮಗೆ ಸಿಗಲಿದೆ. ಜೊತೆಗೆ ನೀವು 1ಲಕ್ಷ ರೂ. ಉಚಿತ ವೈಯಕ್ತಿಕ ಅಪಘಾತ ವಿಮೆಯನ್ನು ಪಡೆಯುತ್ತೀರಾ. ಹಾಗೂ ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ ಆಗುತ್ತದೆ.!!


Click it and Unblock the Notifications








