ಜಾಗತಿಕ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಇದು ಸಂಕಷ್ಟ ಕಾಲ!

|

ಕಳೆದ ಕೆಲ ವರ್ಷಗಳಿಂದ ಬೆಳವಣಿಗೆಯನ್ನೇ ದಾಖಲಿಸಿಕೊಂಡು ಬಂದಿರುವ ವಿಶ್ವ ಮೊಬೈಲ್ ಮಾರುಕಟ್ಟೆಗೆ 2019ನೇ ವರ್ಷ ಅತ್ಯಂತ ಕೆಟ್ಟ ವರ್ಷವಾಗಲಿದೆ ಎನ್ನಲಾಗಿದೆ. 2019ನೇ ವರ್ಷದಲ್ಲಿ ವಿಶ್ವದಾದ್ಯಂತ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಭಾರಿ ಕುಸಿತವಾಗುತ್ತದೆ. ಈ ವರ್ಷ ಶೇ.2.5ರಷ್ಟು ಇಳಿಕೆಯಾಗಬಹುದು ಎಂದು ಗಾರ್ಟನರ್ ಇಂಕ್‌ ಸಿದ್ಧಪಡಿಸಿದ ವರದಿಯಲ್ಲಿ ತಿಳಿಸಲಾಗಿದೆ.

ಜಾಗತಿಕ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಇದು ಸಂಕಷ್ಟ ಕಾಲ!

ಹೌದು, ಜಾಗತಿಕ ಸ್ಮಾರ್ಟ್‌ಫೋನ್ ಮಾರಾಟವು 2019 ರ ಮೊದಲ ತ್ರೈಮಾಸಿಕದಲ್ಲಿ 2.7% ನಷ್ಟು ಕುಸಿದಿದೆ. 2019ರ ಅಂತ್ಯದವರೆಗೆ ನಾವು ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ (ಶೇ 2,5%)ನಷ್ಟು ಕುಸಿತವನ್ನು ನಿರೀಕ್ಷಿಸಬಹುದು ಮತ್ತು ಸ್ಯಾಮ್‌ಸಂಗ್ ಮತ್ತು ಆಪಲ್‌ ಬ್ರಾಂಡ್‌ಗಳ ಮೇಲೆ ಇದು ಹೆಚ್ಚು ಪರಿಣಾಮ ಬೀರಬಹುದು ಎಂದು ಗಾರ್ಟನರ್ ಅಭಿಪ್ರಾಯಪಟ್ಟಿದೆ.

ಗಾರ್ಟನರ್ ಇಂಕ್ ವರದಿಯ ಪ್ರಕಾರ, 2019ರ ಮೊದಲ ತ್ರೈಮಾಸಿಕದಲ್ಲಿ ಅತಿದೊಡ್ಡ ಮೊಬೈಲ್ ಕಂಪೆನಿಗಳು ತಮ್ಮ ಮಾರಾಟದಲ್ಲಿ ಕುಸಿತವನ್ನು ವರದಿ ಮಾಡಿವೆ. ಈ ತ್ರೈಮಾಸಿಕದಲ್ಲಿ ಸ್ಯಾಮ್ಸಂಗ್ ಮತ್ತು ಆಪಲ್ ಕಂಪೆನಿಗಳು ಕ್ರಮವಾಗಿ 8,8% ಮತ್ತು 17.6% ಕುಸಿತ ಕಂಡಿವೆ. ಇದರಿಂದ ಭವಿಷ್ಯದ ಮಾರುಕಟ್ಟೆ ಅತ್ಯಂತ ಕೆಟ್ಟ ಪರಿಸ್ಥಿತಿ ತಲುಪುವ ಸಾಧ್ಯತೆ ಎಂದು ಹೇಳಿದೆ.

ಜಾಗತಿಕ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಇದು ಸಂಕಷ್ಟ ಕಾಲ!

ಪ್ರಸ್ತುತ 2.2 ಶತಕೋಟಿ ಕಂಪ್ಯೂಟರ್‌, ಟ್ಯಾಬ್ಲೆಟ್‌ ಮತ್ತು ಮೊಬೈಲ್‌ ಫೋನ್‌ಗಳು ಯುನಿಟ್‌ಗಳಿದ್ದು, ಇವುಗಳಲ್ಲಿ ವರ್ಷದಿಂದ ವರ್ಷಕ್ಕೆ ಶೇ.3.3ರಷ್ಟು ಇಳಿಕೆಯಾಗುತ್ತಿದೆ. 2015ರಲ್ಲಿ ಒಟ್ಟು 1.9 ಯುನಿಟ್‌ ಹೊಂದಿದ್ದ ಮೊಬೈಲ್‌ ಮಾರುಕಟ್ಟೆ ಪ್ರಸಕ್ತ ವರ್ಷ ಅದು 1.7 ಶತಕೋಟಿಗೆ ಇಳಿಕೆಯಾಗಿದೆ. ಇದು ಮತ್ತಷ್ಟು ಕುಸಿತ ಕಾಣಬಹುದಾಗಿದೆ ಎಂದು ಗಾರ್ಟನರ್ ವರದಿಯಲ್ಲಿ ತಿಳಿಸಿದೆ.

64 ಎಂಪಿ ಕ್ಯಾಮೆರಾ ಫೋನ್ 'ರೆಡ್‌ಮಿ ನೋಟ್ 8' ಬರ್ತಿದೆ ದಾರಿ ಬಿಡಿ!64 ಎಂಪಿ ಕ್ಯಾಮೆರಾ ಫೋನ್ 'ರೆಡ್‌ಮಿ ನೋಟ್ 8' ಬರ್ತಿದೆ ದಾರಿ ಬಿಡಿ!

ಮೊಬೈಲ್ ಫೋನ್‌ಗಳು ಗಮನಾರ್ಹವಾದ ಹೊಸ ಉಪಯುಕ್ತ ದಕ್ಷತೆ ಅಥವಾ ಅನುಭವಗಳನ್ನು ಒದಗಿಸದಿದ್ದರೆ ಬಳಕೆದಾರರು ಅವುಗಳನ್ನು ಅಪ್‌ಗ್ರೇಡ್ ಮಾಡುವುದಿಲ್ಲ. ಇದು ಹೀಗೆಯೇ ಮುಂದುವರಿದರೆ ಮೊಬೈಲ್‌ ಮಾರುಕಟ್ಟೆಯು ಇನ್ನೂ ಹೆಚ್ಚಿನ ಕೆಟ್ಟ ದಿನಗಳನ್ನು ಕಾಣಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಗಾರ್ಟನರ್ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

ಸಿಕ್ಕಿದ್ರೆ ಇಂತಹ ಬಾಸ್‌ಗಳ ಕೈಕೆಳಗೆ ಕೆಲಸ ಸಿಗ್ಬೇಕು!..ಏಕೆ ಗೊತ್ತಾ?ಸಿಕ್ಕಿದ್ರೆ ಇಂತಹ ಬಾಸ್‌ಗಳ ಕೈಕೆಳಗೆ ಕೆಲಸ ಸಿಗ್ಬೇಕು!..ಏಕೆ ಗೊತ್ತಾ?

ಇನ್ನು ಪ್ರೀಮಿಯಂ ಫೋನ್‌ಗಳ ಬೇಡಿಕೆ ಮೂಲ ಫೋನ್‌ಗಳಿಗಿಂತ ಕಡಿಮೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದು ಉನ್ನತ ಮಟ್ಟದ ಸ್ಮಾರ್ಟ್‌ಫೋನ್‌ಗಳಲ್ಲಿ ಗಮನಾರ್ಹ ಪಾಲನ್ನು ಹೊಂದಿರುವ ಸ್ಯಾಮ್‌ಸಂಗ್ ಮತ್ತು ಆಪಲ್‌ನಂತಹ ಬ್ರಾಂಡ್‌ಗಳ ಮೇಲೆ ಪರಿಣಾಮ ಬೀರಬಹುದು ಎಂದು ಗಾರ್ಟನರ್‌ನ ಹಿರಿಯ ಸಂಶೋಧನಾ ನಿರ್ದೇಶಕ ಅನ್ಶುಲ್ ಗುಪ್ತಾ ಹೇಳಿದ್ದಾರೆ.

Best Mobiles in India

English summary
Till the end of 2019 we can expect the biggest smartphone sales decline -2,5%. Global sales of smartphones to end users declined 2.7% in the first quarter of 2019, totaling 373 million units, according to Gartner, Inc. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X