ಇದು ವಿಶ್ವದಲ್ಲೇ ಅತಿ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌!

|

ಇದು ಡಿಜಿಟಲ್‌ ಯುಗ, ತಂತ್ರಜ್ಞಾನ ಮುಂದುವರೆದಂತೆ ಎಲ್ಲವೂ ಸ್ಮಾರ್ಟ್‌ ಆಗುತ್ತಿದೆ. ಸದ್ಯ ಟೆಕ್‌ಲೋಕದಲ್ಲಿ ವಿಭಿನ್ನ ಬಗೆಯ ಸ್ಮಾರ್ಟ್ಫೋನ್‌ಗಳ ಭರಾಟೆ ನಡೆಯುತ್ತಿದೆ. ಅಷ್ಟೇ ಯಾಕೆ ಸ್ಮಾರ್ಟ್‌ವಾಚ್‌ಗಳು ಕೂಡ ಸಿಕ್ಕಾಪಟ್ಟೆ ಸೌಂಡ್‌ ಮಾಡ್ತಿವೆ. ಸದ್ಯ ಇದೀಗ ಸ್ಮಾಟ್‌f ಮಾರುಕಟ್ಟೆಗೆ ಸ್ಮಾರ್ಟ್‌ವಾಚ್‌ ಒಂದು ಲಾಂಚ್‌ ಆಗಿದೆ. ಆದರೆ ಇದು ಸ್ಮಾರ್ಟ್ ವಾಚ್‌ ಕೂಡ ಹೌದು ಹಾಗೇಯೇ ವಿಶ್ವದ ಅತಿ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಕೂಡ.

ಹೌದು

ಹೌದು, ಇದನ್ನು ನೀವು ಸುಲಭವಾಗಿ ನಂಬಲು ಸಾಧ್ಯವಿಲ್ಲ, ಆದ್ರೆ ಇದನ್ ನಾವು ನಿವೆಲ್ಲಾ ನಂಬಲೇ ಬೇಕು ಯಾಕಂದ್ರೆ ಇದು ಹೇಳಿಕೇಳಿ ಡಿಜಿಟಲ್‌ ಜಮಾನ, ಇಲ್ಲಿ ಎಲ್ವೂ ಸಾಧ್ಯ ಹಾಗೇಯೆ ಯಾವುದೂ ಅಸಾಧ್ಯವಲ್ಲ. ಸದ್ಯ LEEHUR ಕಂಪೆನಿ ತನ್ನ ಸ್ಮಾರ್ಟ್‌ವಾಚ್‌ ಅನ್ನ ಮಾರುಕಟ್ಟೆಗೆ ಲಾಂಚ್‌ ಮಾಡಿದೆ. ಆದ್ರೆ ಇದು ಸ್ಮಾರ್ಟ್‌ ವಾಚ್‌ ಅನ್ನುವುದಕ್ಕಿಂತ ಸ್ಮಾರ್ಟ್‌ಫೋನ್‌ ಥರಾನೇ ಕಾರ್ಯನಿರ್ವಹಿಸಲಿದೆ ಅನ್ನೊದು ಕುತೂಹಲಕ್ಕೆ ಕಾರಣವಾಗಿದೆ.

ಸದ್ಯ

ಸದ್ಯ ಈ ಸ್ಮಾಟ್‌ವಾಚ್‌ ಅರ್ಥಾತ್‌ ಸ್ಮಾರ್ಟ್‌ಫೋನ್‌ ವಿಶ್ವದ ಅತಿ ಚಿಕ್ಕ ಸ್ಮಾರ್ಟ್‌ಫೋನ್‌ ಆಗಿದೆ ಅಂತಾನೆ ಹೇಳಬಹುದು. ಈ ಸ್ಮಾರ್ಟ್‌ವಾಚ್‌ನಿಂದ ಕರೆ ಮಾಡಬಹುದು, ಅಲ್ಲದೆ ವಾಟ್ಸಾಪ್‌ ಅನ್ನು ಸಹ ಬಳಸಬಹುದು, ಎಲ್ಲದಕ್ಕಿಂತ ಹೆಚ್ಚಾಗಿ ಈ ಸ್ಮಾರ್ಟ್‌ವಾಚ್‌ಗೆ ಸಿಮ್‌ಕಾರ್ಡ್‌ ಅನ್ನ ಸಹ ಅಳವಡಿಸಬಹುದಾಗಿದೆ. ಅಲ್ಲದೆ ಬ್ಲೂಟೂತ್ ಕನೆಕ್ಟಿವಿಟಿ ಕೂಡ ಇದೆ. ಇದೇ ಕಾರಣಕ್ಕೆ ಇದನ್ನ ಸ್ಮಾರ್ಟ್‌ವಾಚ್‌ ಅನ್ನುವುದಕ್ಕಿಂತ ಸ್ಮಾರ್ಟ್‌ಪೋನ್‌ ಅನ್ನಬಹುದಾಗಿದೆ.

ಮೇಲೆ

ಕೈ ಮೇಲೆ ಧರಿಸಬಹುದಾದ ಈ ಸ್ಮಾರ್ಟ್‌ವಾಚ್‌ ಕ್ಯಾಮೆರಾ ಕೂಡ ಹೊಂದಿದ್ದು, ಮಿನಿ ಕಂಪ್ಯೂಟರ್, ವೆಬ್ ಬ್ರೌಸ್ ಮಾಡುವ ಸಾಮರ್ಥ್ಯವನ್ನು ಸಹ ಒಳಗೊಂಡಿದೆ. ಹಾಗಂತ ಇದರ ಬೆಲೆ ದುಬಾರಿ ಏನಲ್ಲ ಇದು ಕೇವಲ ಎಂಟು ಡಾಲರ್‌ ಮಾತ್ರ ಅಂದರೆ $ 8.99(ಅಂದಾಜು 638ರೂ) ಆಗಿದೆ. ಇಷ್ಟು ಕಡಿಮೆ ಬೆಲೆಯಲ್ಲಿ ಈ ಸ್ಮಾರ್ಟ್‌ವಾಚ್‌ ದೊರೆಯಲಿದ್ದು, ಉತ್ತಮ ತಂತ್ರಜ್ಞಾನವನ್ನ ಒಳಗೊಂಡಿರುವ ಸ್ಮಾರ್ಟ್‌ವಾಚ್‌ ಇದಾಗಿದೆ.

ಇನ್ನು

ಇನ್ನು ಈ ಸ್ಮಾರ್ಟ್‌ವಾಚ್‌ 64MB RAM ಮತ್ತು 128MB ಸಂಗ್ರಹ ಸಾಮರ್ಥ್ಯವನ್ನ ಒಳಗೊಂಡಿದ್ದು 32GB ಸಾಮರ್ಥ್ಯದ ಮೈಕ್ರೊ ಎಸ್ಡಿ ಕಾರ್ಡ್ ಅನ್ನು ಕೂಡ ಸೇರಿಸಬಹುದಾಗಿದೆ. ಇನ್ನು ಇದು 240 x 240 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 1.22-ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನ ಒಳಗೊಂಡಿದೆ. ಸದ್ಯ ಲೀಹರ್ ವಿ8 ಬ್ಲೂಟೂತ್ 3.0 ಕನೆಕ್ಟಿವಿಟಿಯನ್ನ ಹೊಂದಿದ್ದು, ಫ್ರಂಟ್‌ ಕ್ಯಾಮೆರಾ 1.3 ಮೆಗಾಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ.

ಲೀಹರ್‌

ಸದ್ಯ ಲೀಹರ್‌ ವಿ8 ಸ್ಮಾರ್ಟ್‌ವಾಚ್‌ 380 ಎಮ್ಎಹೆಚ್ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಸ್ಟೇನ್ಲೆಸ್ ಸ್ಟೀಲ್ ಚಾಸಿಸ್ ಹೊಂದಿದೆ. ಇನ್ನು ಆಶ್ವರ್ಯಕರವೆಂದರೆ ಈ ಸ್ಮಾರ್ಟ್‌ವಾಚ್‌ GPRS / 2g ವೇಗದಲ್ಲಿ ಕಾರ್ಯನಿರ್ವಹಿಸುವ ಸ್ಮಾರ್ಟ್‌ ಫೋನ್‌ ಆಗಿದೆ. ಏನೇ ಆಗಲಿ ಇದು 2G ವೇಗದಲ್ಲಿ ಕಾರ್ಯನಿರ್ವಹಿಸಲಿದ್ದು 3G ವೇಗದಲ್ಲಿ ಕಾರ್ಯನಿರ್ವಹಿಸುವುದಿಲ್ಲ ನಿಜ ಆದ್ರೆ ಇಂತಹದೊಂದು ಸಾಧನ ಉತ್ತನ್ನ ಸಾಧ್ಯವಿದೆ ಅನ್ನೊದನ್ನ ಇಂದಿನ ತಂತ್ರಜ್ಞಾನ ಜಗತ್ತಿಗೆ ತೋರಿಸಿಕೊಟ್ಟಿದೆ.

Most Read Articles
Best Mobiles in India

Read more about:
English summary
Think about a phone or a mobile handset and the first thing that often comes to mind is a slab of glass, not a watch. Well, turns out that a smartwatch may now be the cheapest way to make a phone call - and we’re not talking about bluetoothing your way to a proper handset.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X