Home
ಸುದ್ದಿಜಾಲ

Realme: ಭಾರತದಲ್ಲಿ ರಿಯಲ್‌ಮಿ ಜಿಟಿ 7 Pro ಬಿಡುಗಡೆ ಖಚಿತಪಡಿಸಿದ ಸಂಸ್ಥೆ; ಏನೆಲ್ಲಾ ಫೀಚರ್ಸ್ ಇರಲಿವೆ !

ಕಡಿಮೆ ಬೆಲೆಯಲ್ಲಿ ಆಕರ್ಷಕ ಫೀಚರ್ಸ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಗೊಳಿಸುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆ ಹೊಂದಿರುವ ರಿಯಲ್‌ಮಿ (Realme) ಸಂಸ್ಥೆ ಇದೀಗ ನೂತನ ಮೊಬೈಲ್ ಒಂದನ್ನು ಭಾರತದ ಮಾರುಕಟ್ಟೆಗೆ ಬಿಡುಗಡಗೊಳಿಸಲಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಹೌದು, ಮುಂದಿನ ದಿನಗಳಲ್ಲಿ ರಿಯಲ್‌ಮಿ ಜಿಟಿ 7 Pro (Realme GT 7 Pro) ಹೆಸರಿನ ನೂತನ ಮೊಬೈಲ್‌ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲಿದೆ ಎಂಬ ಅಂಶ ಬೆಳಕಿಗೆ ಬಂದಿದೆ, ಇತ್ತೀಚೆಗೆ ರಿಯಲ್‌ಮಿ GT 6T ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆಗೊಳಿಸಿರುವ ಸಂಸ್ಥೆ ಇದೀಗ ಜಿಟಿ ಸರಣಿಯ 7 Pro ಮೊಬೈಲ್‌ ಬಿಡುಗಡೆ ಮಾಡಲು ಮುಂದಾಗಿದೆ. ಹಾಗಿದ್ರೆ ಈ ಮೊಬೈಲ್‌ ಕುರಿತಾದ ಪೂರ್ಣ ವಿವರಗಳಿಗಾಗಿ ಈ ಲೇಖನ ಪೂರ್ತಿ ಓದಿ.

Realme: ಭಾರತದಲ್ಲಿ ರಿಯಲ್‌ಮಿ ಜಿಟಿ 7 Pro ಬಿಡುಗಡೆ ಖಚಿತಪಡಿಸಿದ ಸಂಸ್ಥೆ

ರಿಯಲ್‌ಮಿ GT 6T ವೇರಿಯಂಟ್ ಮೊಬೈಲ್ ಕಳೆದ ವಾರ ಭಾರತದಲ್ಲಿ 4nm ಸ್ನಾಪ್‌ಡ್ರಾಗನ್ 7+ ಜೆನ್ 3 ಚಿಪ್‌ನೊಂದಿಗೆ ಬಿಡುಗಡೆ ಮಾಡಲಾಗಿತ್ತು. ಈ ಮೊಬೈಲ್‌ ಬಿಡುಗಡೆಯಾಗಿ ಕೆಲವೇ ದಿನದ ಬಳಿಕ ದೇಶದಲ್ಲಿ ಜಿಟಿ ಸರಣಿಯ ಪುನರಾಗಮನವನ್ನು ರಿಯಲ್‌ಮಿ ಸಂಸ್ಥೆ ದೃಢಪಡಿಸಿದೆ. ರಿಯಲ್‌ಮಿ ಸಂಸ್ಥೆಯ ಉಪಾಧ್ಯಕ್ಷರಾಗಿರುವ ಚೇಸ್ ಕ್ಸು ಭಾರತೀಯ ಮಾರುಕಟ್ಟೆಯಲ್ಲಿ ರಿಯಲ್‌ಮಿ ಜಿಟಿ 7 Pro ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದು ರಿಯಲ್‌ಮಿ ಜಿಟಿ 5 Proಗಿಂತ ಅಪ್ಡೇಟೆಡ್ ವರ್ಶನ್ ಆಗಿರಲಿದೆ. ಈ ವೇರಿಯಂಟ್ ಕಳೆದ ವರ್ಷದ ಕೊನೆಯಲ್ಲಿ ಚೀನಾದಲ್ಲಿ ಲಾಂಚ್ ಆಗಿತ್ತು, ಆದರೆ ಈ ಪ್ರಮುಖ ಸ್ಮಾರ್ಟ್‌ಫೋನ್ ಭಾರತದಲ್ಲಿ ಲಾಂಚ್ ಆಗಿರಲಿಲ್ಲ.

ಕಂಪನಿಯು ಭಾರತದಲ್ಲಿ ರಿಯಲ್‌ಮಿ ಜಿಟಿ 5 ಪ್ರೊ ಅನ್ನು ಏಕೆ ಬಿಡುಗಡೆ ಮಾಡಲಿಲ್ಲ ಎಂಬ ಬಳಕೆದಾರರ ಪ್ರಶ್ನೆಗೆ ಉತ್ತರಿಸಿದ ಚೇಸ್ ಕ್ಸು ಅವರು ರಿಯಲ್‌ಮಿ ಈ ವರ್ಷ ಭಾರತದಲ್ಲಿ ಜಿಟಿ 7 ಪ್ರೊ ಅನ್ನು ಬಿಡುಗಡೆ ಮಾಡಲಿದೆ ಎಂದು ಖಚಿತಪಡಿಸಿದ್ದಾರೆ. ಆದರೆ ಅವರು ನಿಖರವಾದ ಬಿಡುಗಡೆ ದಿನಾಂಕ ಅಥವ ಯಾವುದೇ ಫೀಚರ್ಸ್‌ಗಳ ಕುರಿತು ಬಹಿರಂಗಪಡಿಸಿಲ್ಲ.

ರಿಯಲ್‌ಮಿ ಜಿಟಿ 5 Pro ಸ್ಮಾರ್ಟ್‌ಫೋನ್‌ ಅನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಲಾಯಿತು. ಇದು ಸ್ನಾಪ್‌ಡ್ರಾಗನ್ 8 ಜೆನ್ 3 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರ ಆಧಾರದ ಮೇಲೆ ಮುಂದಿನ ಜನರೇಶನ್‌ ಆಗಿರುವ ಸ್ನಾಪ್‌ಡ್ರಾಗನ್ 8 ಜೆನ್ 4 SoC ಯೊಂದಿಗೆ ಈ ವರ್ಷದ ಅಂತ್ಯದೊಳಗೆ ನಾವು ರಿಯಲ್‌ಮಿ ಜಿಟಿ 7 Pro ಮೊಬೈಲ್‌ ಅನ್ನು ಕಾಣಬಹುದಾಗಿದೆ ಎಂದು ಊಹಿಸಲಾಗಿದೆ. ಸಂಸ್ಥೆ ಜಿಟಿ ಸರಣಿಯ ರಿಯಲ್‌ಮಿ ಜಿಟಿ 6 ಅನ್ನು ಜೂನ್‌ ತಿಂಗಳಿನಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.

ರಿಯಲ್‌ಮಿ ಜಿಟಿ 5 Pro ಇದು 12GB RAM + 256GB ಸ್ಟೋರೇಜ್ ಸಾಮರ್ಥ್ಯದ ವೇರಿಯಂಟ್ ಸಿಎನ್‌ವೈ 3,298 ಅಂದರೆ ಸುಮಾರು ರೂ. 40,000 ಆರಂಭಿಕ ಬೆಲೆಯನ್ನು ಹೊಂದಿದೆ. ಇದು 6.78 ಇಂಚಿನ 1.5K (1,264x2,780 ಪಿಕ್ಸೆಲ್‌) ಅಮೋಲ್ಡ್‌ ಡಿಸ್‌ಪ್ಲೇ, 144Hz ರಿಫ್ರೆಶ್ ರೇಟ್‌ ಮತ್ತು 4,500 nits ವರೆಗಿನ ಗರಿಷ್ಠ ಬ್ರೈಟ್‌ನೆಸ್‌ ಸಾಮಾರ್ಥ್ಯ ಹೊಂದಿದೆ.

ಇದು 16GB RAM ಮತ್ತು 1TB ವರೆಗೆ ಸಂಗ್ರಹಣೆ ಸಾಮರ್ಥ್ಯವನ್ನು ಹೊಂದಿದ್ದು, ಫೋನ್ ಟ್ರಿಪಲ್ ಬ್ಯಾಕ್ ಕ್ಯಾಮೆರಾ ಘಟಕ ಹೊಂದಿದೆ, 50 ಮೆಗಾಪಿಕ್ಸೆಲ್ ಸೋನಿ LYT-808 ಸೆನ್ಸಾರ್ ಹೊಂದಿದ್ದು, ಸೆಲ್ಫಿಗಳಿಗಾಗಿ 32 ಮೆಗಾಪಿಕ್ಸೆಲ್‌ ಸೋನಿ IMX615 ಕ್ಯಾಮೆರಾವನ್ನು ಹೊಂದಿದೆ.

ರಿಯಲ್‌ಮಿ ಜಿಟಿ 5 Pro ಇದು 100W ವೈಯರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದ ಜೊತೆಗೆ 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಹಾಗೂ 5,400mAh ಬ್ಯಾಟರಿ ಹೊಂದಿದೆ. ಮುಂದಿನ ದಿನಗಳಲ್ಲಿ ರಿಯಲ್‌ಮಿ ಜಿಟಿ 7 Pro ಕುರಿತು ಹೆಚ್ಚಿನ ಮಾಹಿತಿ ತಿಳಿಯಬಹುದಾಗಿದೆ.

Best Mobiles in India

English summary
Responding to a user query on why the company didn't launch the Realme GT5 Pro in India, Chase Xu confirmed that Realme will launch the GT7 Pro in India this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+