Subscribe to Gizbot

ಆಧಾರ್-ಪಾನ್ ಜೋಡಿಸಲು ಮತ್ತೆ ಅವಕಾಶ!..ಆನ್‌ಲೈನ್‌ನಲ್ಲಿ ಹೀಗೆ ಲಿಂಕ್ ಮಾಡಿ!!

Written By:

ಆಧಾರ್‌ನೊಂದಿಗೆ ಪಾನ್‌ಕಾರ್ಡ್‌ ಜೋಡಿಸಲು ನಿಗದಿಪಡಿಸಿದ್ದ ದಿನಾಂಕವನ್ನು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಮುಂದಕ್ಕೆಹಾಕಿದೆ.!! ಈ ಮೊದಲು ಜುಲೈ 31 ರ ಒಳಗಾಗಿ ಆಧಾರ್‌ನೊಂದಿಗೆ ಪಾನ್‌ಕಾರ್ಡ್‌ ಲಿಂಕ್ ಮಾಡಬೇಕಿತ್ತು.!!

ಇದೀಗ ಧಾರ್‌-ಪಾನ್‌ ಜೋಡಣೆಗೆ ಆ.31ರ ವರೆಗೂ ಅವಕಾಶ ನೀಡಿದೆ.ಮತ್ತು ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಕೆಗೆ ಜುಲೈ.31 ಕೊನೆಯ ದಿನವಾದ್ದರಿಂದ ಹೆಚ್ಚಿನ ಅರ್ಜಿಗಳು ಒಂದೇ ದಿನದಲ್ಲಿ ಸಲ್ಲಿಕೆಯಾಗಿ ಆನ್‌ಲೈನ್‌ ಸರ್ವರ್‌ ಅಡಚಣೆ ಉಂಟಾಗಿದೆ. ಹಾಗಾಗಿ, ಆದಾಯ ತೆರಿಗೆ ಇಲಾಖೆ ಐ.ಟಿ ರಿಟರ್ನ್ಸ್‌ ಸಲ್ಲಿಕೆ ಅವಧಿಯನ್ನು ಆಗಸ್ಟ್ 5 ರವರೆಗೆ ವಿಸ್ತರಿಸಿದೆ.

ಇನ್ನು ಆನ್‌ಲೈನ್‌ನಲ್ಲಿಯೇ ಸುಲಭವಾಗಿ ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ ಮೂಲಕ ಆಧಾರ್ ಮತ್ತು ಪಾನ್ ಕಾರ್ಡ್‌ ಹೇಗೆ ಸಂಪರ್ಕಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ. ಕೆಳಗಿನ ಸ್ಲೈಡರ್‌ಗಳಲ್ಲಿ ಪೂರ್ಣ ಮಾಹಿತಿಯನ್ನು ಪಡೆಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ.

ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ.

ಆದಾಯ ತೆರಿಗೆ ಇಲಾಖೆಯ ಅಫಿಶಿಯಲ್ ವೆಬ್‌ಸೈಟ್‌ ತೆರೆಯಿರಿ. ನಂತರ ನಿಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ನೀಡಿ ಲಾಗಿನ್ ಆಗಿರಿ.( ರಿಜಿಸ್ಟರ್ ಆಗಿಲ್ಲದಿದ್ದರೆ ರಿಜಿಸ್ಟರ್ ಆಗಬೇಕಿದೆ. ಹಾಗಾಗಿ, ಮಾಹಿತಿ ಭರ್ತಿ ಮಾಡಿ ರಿಜಿಸ್ಟರ್ ಆಗಿರಿ.) ವೆಬ್‌ಸೈಟ್‌ ತೆರೆಯಲಿ ಈ ಲಿಂಕ್ ಕ್ಲಿಕ್ ಮಾಡಿ ( https://incometaxindiaefiling.gov.in/)

Aadhaar card Number link to PAN card !! ಆಧಾರ್ ಅನ್ನು ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡಲು ಸೆಂಕೆಡ್ ಸಾಕು!!
ಲಾಗಿನ್ ಆದ ನಂತರ ಏನು ಮಾಡಬೇಕು?

ಲಾಗಿನ್ ಆದ ನಂತರ ಏನು ಮಾಡಬೇಕು?

ಆದಾಯ ತೆರಿಗೆ ಇಲಾಖೆಯ ಅಫಿಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆದ ನಂತರ ಹೆಸರು, ಜನ್ಮ ದಿನಾಂಕ ವಿವರಗಳನ್ನು ಪರಿಶೀಲಿಸಿ ಆದಾಯ ತೆರಿಗೆ ಇಲಾಖೆ ನಿಮ್ಮ ಎಲ್ಲಾ ವಿವರಗಳನ್ನು ಮೌಲ್ಯೀಕರಿಸುತ್ತದೆ.

 ಕ್ಯಾಪ್ಚಾ ಕೋಡ್ ನಮೂದಿಸಿ

ಕ್ಯಾಪ್ಚಾ ಕೋಡ್ ನಮೂದಿಸಿ

ಎಲ್ಲಾ ಅಂಶಗಳನ್ನು ಪರಿಶೀಲಿಸಿದ ನಂತರ ನಿಮ್ಮ ನಂಬರ್ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ ಪಾನ್‌ಕಾರ್ಡ್‌ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ವೆಬ್‌ಸೈಟ್‌ ಕೇಳುತ್ತದೆ. ನಿಮ್ಮೆಲ್ಲಾ ಮಾಹಿತಿಗಳು ಆಗಲೆ ಪಾನ್‌ಕಾರ್ಡ್ ದಾಖಲೆಯಲ್ಲಿ ಇರುವುದರಿಂದ ನೀವು ಕೇವಲ ನಿಮ್ಮ ಆಧಾರ್ ಕಾರ್ಡ್ ನಂಬರ್ ತುಂಬಿ.!!

ಪಾನ್‌ಕಾರ್ಡ್‌ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ.!!

ಪಾನ್‌ಕಾರ್ಡ್‌ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ.!!

ಆದಾಯ ತೆರಿಗೆ ಇಲಾಖೆಯ ಅಫಿಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ ನಿಮ್ಮ 12 ಅಂಕಿಗಳ ಆಧಾರ್ ನಂಬರ್ ತುಂಬಿದ ನಂತರ ಪಾನ್‌ಕಾರ್ಡ್‌ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬಗ್ಗೆ ನಿಮಗೆ ದೃಡಿಕೃತವಾಗಲಿದೆ. ಜೊತೆಗೆ ನಿಮ್ಮ ಪಾನ್‌ಕಾರ್ಡ್ ಸಹ ಸೇಫ್ ಆಗಿರಲಿದೆ. ಈ ಮಾಹಿತಿಯನ್ನು ಇತರರಿಗೂ ತಿಳಿಸಲು ಈ ಲೇಖನವನ್ನು ಶೇರ್ ಮಾಡಿ

ಓದಿರಿ:ಆಧಾರ್ ಇದ್ದರೆ 5 ನಿಮಿಷದಲ್ಲಿ ATMನಲ್ಲಿಯೇ ಬ್ಯಾಂಕ್ ಅಕೌಂಟ್ ಓಪನ್, ಡೆಬಿಟ್ ಕಾರ್ಡ್ ಲಭ್ಯ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
IT's time to link PAN and aadhaar.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot