ಗೂಗಲ್‌ಗೂ ಗೊತ್ತಿಲ್ಲದ ಮಾಹಿತಿ ಇಲ್ಲಿರುತ್ತೆ..! ಮಾಸ್ಕ್ ಹಾಕಿ ಹುಡುಕಿದ್ರೆ ಮಾತ್ರ..!
ಇಂದಿನ ದಿನದಲ್ಲಿ ನಾವು ಅಂತರ್ಜಾಲದಲ್ಲಿ ಹುಡುಕಬೇಕಾದ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೂಗಲ್ ಮೂಲಕವೇ ಹುಡುಕುತ್ತವೆ. ಎಲ್ಲಿಯೂ ಸಾವಿರದಲ್ಲಿ ಒಬ್ಬರು ಯಾಹೂ ಇಲ್ಲವೇ ಬೇರೆ ಸರ್ಚ್ ಇಂಜಿನ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆದರೆ ಇಂದು ನಾವು ಸಾಮಾನ್ಯ ಇಂಟರ್ನೆಟ್‌ನಲ್ಲಿ ನೋಡುತ್ತಿರುವ ಮಾಹಿತಿಯೂ ಕೇವಲ ಶೇ.1 % ಎಂದರೇ ನೀವು ನಂಬಲೇ ಬೇಕು ನೀವು ನೋಡದೆ ಇರುವ ಇನ್ನೊಂದು ಡೀಪ್ ವೆಬ್ ಸಹ ಕಾರ್ಯನಿರ್ವಹಿಸುತ್ತಿದೆ.

ನಮಗೆ ಬೇಕಾದ ವಿಷಯಕ್ಕೆ ಗೂಗಲ್ ನಲ್ಲಿ ಹುಡುಕುವ ಮಾದರಿಯಲ್ಲಿ ಅಲ್ಲಿ ದೊರೆಯುವ ಉತ್ತರದ 500 ಪಟ್ಟು ಅಧಿಕವಾಗಿ ಮಾಹಿತಿ ಮತ್ತು ವಿಷಯಗಳು ಡೀಪ್ ವೆಬ್‌ನಲ್ಲಿ ಲಭ್ಯವಿದೆ ಎಂದರೆ ನೀವು ನಂಬಲೇ ಬೇಕು. ಗೂಗಲ್‌ನಲ್ಲಿ ದೊರೆಯುವುದಕ್ಕಿಂತ ಎಷ್ಟೋ ಪಟ್ಟು ಅಧಿಕ ಮಾಹಿತಿ ಮತ್ತು ಗೂಗಲ್‌ಗೂ ತಿಳಿಯದ ಮಾಹಿತಿಯನ್ನು ನಾವು ಡೀಪ್ ವೆಬ್‌ನಲ್ಲಿ ಹುಡುಕಬಹುದಾಗಿದೆ.

ಸರ್ಚ್ ಇಂಜಿನ್‌ನಲ್ಲಿ ದೊರೆಯುವುದಿಲ್ಲ:
ಡೀಪ್ ವೆಬ್‌ನಲ್ಲಿರುವ ಮಾಹಿತಿಗಳು ಸಾಮಾನ್ಯ ಸರ್ಚ್ ಇಂಜಿನ್‌ಗಳಲ್ಲಿ ದೊರೆಯುವುದಿಲ್ಲ. ಇದಕ್ಕಾಗಿ ನೀವು ಡಾರ್ಕ್ ಸರ್ಚ್ ಇಂಜಿನ್‌ಗಳನ್ನು ಬಳಕೆ ಮಾಡಿಕೊಳ್ಳಬೇಕಾಗಿದೆ. ಸಾಮಾನ್ಯ ಸರ್ಚ್ ಇಂಜಿನಲ್ಲಿ ಲಭ್ಯವಿಲ್ಲದ್ದ ಮಾಹಿತಿಯೂ ಸುಲಭವಾಗಿ ನಿಮಗೆ ಡೀಪ್‌ನಲ್ಲಿ ಲಭ್ಯವಿರಲಿದೆ. ಕೆಲವು ಮಂದಿ ಮಾತ್ರವೇ ಇದನ್ನು ಬಳಕೆ ಮಾಡಿಕೊಳ್ಳೂವುದನ್ನು ತಿಳಿದಿರುತ್ತಾರೆ.

ಮಾಸ್ಕ್:
ಡೀಪ್ ವೆಬ್‌ನಲ್ಲಿ ಕಾರ್ಯನಿರ್ವಹಿಸುವ ಬಹುತೇಕರು ಮಾಸ್ಕ್ ಹಾಕಿಕೊಂಡು ಕಾರ್ಯನಿರ್ವಹಿಸುತ್ತಾರೆ. ಕಾರಣ ಇಲ್ಲಿ ಯಾರು ಸಹ ತಮ್ಮ ಗುರುತನ್ನು ಬಿಟ್ಟುಕೊಡಲು ಸಿದ್ಧವಿರುವುದಿಲ್ಲ. ಇದರಿಂದಾಗಿ ತಮ್ಮ DNS ಮತ್ತು IP ಆಡ್ರಸ್ ಅನ್ನು ಮರೆ ಮಾಚಿರುತ್ತಾರೆ. ಅಲ್ಲದೇ ಎನ್‌ಸ್ಕ್ರಿಪ್‌ಟೆಡ್ ಸಾಫ್ಟ್‌ವೇರ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಾರೆ ಎನ್ನಲಾಗಿದೆ.

ಎಲ್ಲಾವೂ ಕಪ್ಪು ಮಾರುಕಟ್ಟೆ:
ಡೀಪ್ ವೆಬ್‌ನಲ್ಲಿ ಹೆಚ್ಚಿನ ಪ್ರಮಾಣದಲಲ್ಇ ದೊರೆಯುವುದು ಇಲೀಗಲ್ ಸೇವೆಗಳು ಮತ್ತು ಸರಕುಗಳು. ಇಲ್ಲಿ ನಿಮಗೆ ಬೇಕಾಗಿರುವ ಎಲ್ಲಾ ವಸ್ತುಗಳು ದೊರೆಯುತ್ತವೆ. ಸಾಮಾನ್ಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗದ ವಸ್ತುಗಳು ಇಲ್ಲಿ ರಾಜರೋಷವಾಗಿ ಮಾರಾಟ ಮಾಡುತ್ತವೆ.

ಒಳ್ಳೆಯದು ಇದೆ:
ಇದೇ ಮಾದರಿಯಲ್ಲಿ ಉತ್ತಮ ಕಾರ್ಯಗಳಿಗೂ ಡೀಪ್ ವೆಬ್ ಅನ್ನು ಬಳೆಕೆ ಮಾಡಿಕೊಳ್ಳಬಹುದಾಗಿದೆ. ಮಾಹಿತಿ ವಿನಿಮಯಕ್ಕೆ ಸೇರಿದಂತೆ ಹಲವು ವಿಷಯಗಳಿಗೆ ಬಳಕೆ ಮಾಡಿಕೊಳ್ಳುತ್ತಾರೆ. ತಮ್ಮ ಗುರುತನ್ನು ಇಂಟರ್ನೆಟ್‌ನಲ್ಲಿ ಬಿಡಬಾರದು ಎಂದುಕೊಂಡವರಿಗೆ ಇದು ಉತ್ತಮ ಆಯ್ಕೆಯಾಗಿದೆ.

ಎಚ್ಚರ ಅಗತ್ಯ:
ನೀವು ಡೀಪ್ ವೆಬ್ ಅನ್ನು ಪ್ರವೇಶಿಸ ಬೇಕಾದರೆ ಎಚ್ಚರವಾಗಿರುವುದು ಅಗತ್ಯ. ಒಮ್ಮೆ ಅಲ್ಲಿ ನಿಮ್ಮ ಮಾಹಿತಿಯನ್ನು ಬಿಟ್ಟು ಕೊಟ್ಟರೆ ಹ್ಯಾಕರ್‌ಗಳು ನಿಮ್ಮನ್ನು ಆವರಿಸುವುದು ಖಂಡಿತ ನಿಮ್ಮ ಡಿವೈಸ್‌ನಲ್ಲಿರುವ ಎಲ್ಲಾ ಮಾಹಿತಿಯನ್ನು ಕೆಲವೇ ಕ್ಷಣಗಳಲ್ಲಿ ಅಪಹರಿಸುವುದು ಖಂಡಿತ.


Click it and Unblock the Notifications








