ಬರಾಕ್ ಒಬಾಮಾರ ಫೋನ್ ವಿಶ್ವದಲ್ಲೇ ಅದ್ವಿತೀಯ

By Shwetha
|

ಅಮೇರಿಕಾ ಅಧ್ಯಕ್ಷರಾದ ಬರಾಕ್ ಒಬಾಮಾರ ಸೆಲ್‌ ಫೋನ್ ವಿಶ್ವದಲ್ಲ ಹೆಚ್ಚು ಸುಭದ್ರವಾದುದು ಎಂಬ ಖ್ಯಾತಿಗೆ ಪಾತ್ರವಾಗಿದೆಯಂತೆ. ಹೌದು ಒಬಾಮಾ ಬಳಸುತ್ತಿರುವ ಡಿವೈಸ್ ಬ್ಲ್ಯಾಕ್‌ಬೆರ್ರಿಯಾಗಿದ್ದು ಅದು ಕೆಲವೊಂದು ವಿಶೇಷತೆಗಳನ್ನು ಪಡೆದುಕೊಂಡು ವಿಶ್ವದ ಸುಭದ್ರ ಫೋನ್ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಅಂದರೆ ಇಡಿಯ ಜಗತ್ತಿನಲ್ಲೇ ಒಬಾಮಾ ಹೆಚ್ಚು ಸುರಕ್ಷಿತರು ಎಂಬುದನ್ನು ನಾವು ಅಂಗೀಕರಿಸಲೇಬೇಕು.

ಫೋನ್‌ನಲ್ಲಿರುವ ಭದ್ರತಾ ವ್ಯವಸ್ಥೆಗಳೇನು? ನಮ್ಮ ಇತರ ಫೋನ್‌ಗಳಿಗಿಂತ ಇದು ಹೇಗೆ ಭಿನ್ನ ಎಂಬುದನ್ನು ತಿಳಿಯುವ ಆಸಕ್ತಿ ನಿಮಗಿದೆಯೇ ಹಾಗಿದ್ದರೆ ಅದರ ಕುರಿತಾದ ಕೂಲಂಕುಷ ಮಾಹಿತಿಯನ್ನು ನಾವು ಇಂದು ನೀಡುತ್ತಿದ್ದೇವೆ.

ಭದ್ರತೆ

ಭದ್ರತೆ

ವಿಶ್ವದ ಹೆಚ್ಚು ಶಕ್ತಿಶಾಲಿ ಮನುಷ್ಯನಿಗಾಗಿ ಭದ್ರತೆ ಹೆಚ್ಚು ಮುಖ್ಯವಾಗಿರುವಂಥದ್ದಾಗಿದೆ ಅದರಲ್ಲಿ ಯಾವುದೇ ಲೋಪದೋಷಗಳಿರಬಾರದು ಅಲ್ಲವೇ? ಪಿನ್‌ಕೋಡ್, ಪ್ಯಾಟ್ರನ್ ಇಲ್ಲವೇ ಫಿಂಗರ್ ಪ್ರಿಂಟ್ ಅಲ್ಲದೆಯೇ ವಿಶೇಷವಾದ ಭದ್ರತಾ ವ್ಯವಸ್ಥೆಯನ್ನು ಒಬಾಮಾ ತಮ್ಮ ಬ್ಲ್ಯಾಕ್‌ಬೆರ್ರಿಯಲ್ಲಿ ಹೊಂದಿದ್ದಾರೆ.

ಬ್ಲ್ಯಾಕ್‌ಬೆರ್ರಿ ಮಾಡೆಲ್

ಬ್ಲ್ಯಾಕ್‌ಬೆರ್ರಿ ಮಾಡೆಲ್

ಕಳೆದ ಹತ್ತು ವರ್ಷಗಳಿಂದ ಒಬಾಮಾ ಬ್ಲ್ಯಾಕ್‌ಬೆರ್ರಿ ಬಳಕೆದಾರರಾಗಿದ್ದು ವಿಶೇಷ ಸೆಕ್ಯುರಿಟಿ ಏಜೆನ್ಸಿ (ಎನ್‌ಎಸ್‌ಎ) ತಯಾರು ಮಾಡಿದ ಸೆಕ್ಟೆರಾ ಎಡ್ಜ್ ಫೋನ್ ಅನ್ನು ಇವರು ಬಳಸುತ್ತಿದ್ದಾರೆ. ಇದರಲ್ಲಿ ವಿಶೇಷ ಭದ್ರತಾ ಸಾಫ್ಟ್‌ವೇರ್ ಆದ ಸೆಕ್ಯೂರ್ ವಾಯ್ಸ್ ಅನ್ನು ಅಳವಡಿಸಲಾಗಿದೆ. ಎನ್‌ಎಸ್‌ಎ ಪಾಲುದಾರಿಕೆಯೊಂದಿಗೆ ಇದನ್ನು ಸಿದ್ಧಪಡಿಸಲಾಗಿದೆ.

ವಾಟ್ಸಾಪ್, ಸೆಲ್ಫಿ ಕ್ಯಾಮೆರಾ ಇಲ್ಲ

ವಾಟ್ಸಾಪ್, ಸೆಲ್ಫಿ ಕ್ಯಾಮೆರಾ ಇಲ್ಲ

ಇವು ಕಸ್ಟಮೈಸ್ಡ್ ಬ್ಲ್ಯಾಕ್‌ಬೆರ್ರಿ ಹೆಚ್ಚು ಸುಭದ್ರ ಅಳವಡಿಕೆಯನ್ನು ಒಳಗೊಂಡಿದ್ದು ಹ್ಯಾಕರ್‌ಗಳ ಕರಿನೆರಳು ಇದರ ಮೇಲೆ ಬೀಳದಂತೆ ವಿಶೇಷವಾಗಿ ಸಿದ್ಧಪಡಿಸಲಾಗಿದೆ. ಯಾವುದೇ ಗೇಮ್ಸ್‌ಗಳಿಲ್ಲ, ಸೆಲ್ಫಿ ಕ್ಯಾಮೆರಾ ಇಲ್ಲ ವಾಟ್ಸಾಪ್ ಮತ್ತು ಟೆಕ್ಸ್ಟಿಂಗ್ ಫೀಚರ್ ಅನ್ನು ಇದು ಒಳಗೊಂಡಿಲ್ಲ. ವಿಶ್ವದ ಅತ್ಯುತ್ತಮ ಎನ್‌ಕ್ರಿಪ್ಶನ್ ಫೀಚರ್‌ಗಳನ್ನೊಳಗೊಂಡಿದೆ.

ಬರೇ 10 ಜನರ ಸಂಪರ್ಕ

ಬರೇ 10 ಜನರ ಸಂಪರ್ಕ

ಇನ್ನು ಒಬಾಮಾರನ್ನು ಮೂರ್ಖರನ್ನಾಗಿಸಲು ಖಂಡಿತ ಸಾಧ್ಯವಿಲ್ಲ. ಇದನ್ನು ಬಳಸಿ ಬರೇ 10 ಜನರಿಗೆ ಕರೆಮಾಡಬಹುದಾಗಿದೆ. ಅದು ಕೂಡ ಇದೇ ರೀತಿಯ ಎನ್‌ಕ್ರಿಪ್ಶನ್ ಅನ್ನು ಹೊಂದಿರುವವರಿಗೆ ಮಾತ್ರ.

ಹೆಚ್ಚುವರಿ ಭದ್ರತೆ

ಹೆಚ್ಚುವರಿ ಭದ್ರತೆ

ಒಬಾಮಾರ ಬ್ಲ್ಯಾಕ್‌ಬೆರ್ರಿ ಸೆಕ್ಯೂರ್ ಬೇಸ್ ಸ್ಟೇಶನ್‌ಗೆ ಮಾತ್ರ ಸಂಪರ್ಕವನ್ನು ಹೊಂದಬಹುದಾಗಿದೆ. ಮರೆಮಾಡಲಾದ IMEI ಸಂಖ್ಯೆಯನ್ನು ಈ ಡಿವೈಸ್ ಬಳಸುತ್ತಿದ್ದು ಟ್ರ್ಯಾಕ್ ಮಾಡುವುದರಿಂದ ಇದನ್ನು ತಡೆಯುತ್ತದೆ. ವೈಟ್ ಹೌಸ್ ಕಮ್ಯುನಿಕೇಶನ್ ಏಜೆನ್ಸಿ ಅಧ್ಯಕ್ಷರು ಹೋದಲ್ಲೆಲ್ಲಾ ಅವರನ್ನು ಹಿಂಬಾಲಿಸುತ್ತದೆ.

ಸೆಕ್ಯೂರ್ ಬೇಸ್ ಸ್ಟೇಶನ್

ಸೆಕ್ಯೂರ್ ಬೇಸ್ ಸ್ಟೇಶನ್

ಸೆಕ್ಯೂರ್ ಬೇಸ್ ಸ್ಟೇಶನ್ ಸುಭದ್ರ ಸ್ಯಾಟಲೈಟ್ ಲಿಂಕ್ ಅನ್ನು ವಾಶಿಂಗ್ಟನ್‌ನೊಂದಿಗೆ ಹೊಂದಿದೆ. ಏರ್‌ಫೋರ್ಸ್‌ನಲ್ಲೂ ಇದು ಒಳಗೊಂಡಿದೆ.

ಸೆಲ್‌ಫೋನ್ ಆಯ್ಕೆ

ಸೆಲ್‌ಫೋನ್ ಆಯ್ಕೆ

ಓಬಾಮಾರ ಸೆಲ್‌ಫೋನ್ ಆಯ್ಕೆಯು ಎನ್‌ಎಸ್‌ಎ ಬಿಟ್ಟಿದ್ದಾಗಿದೆ. ಈ ಪೋನ್‌ನಲ್ಲಿ ಎನ್‌ಎಸ್‌ಎ ಕಾರ್ಯನಿರ್ವಹಿಸುತ್ತಿದ್ದು ಇದು ರಿವರ್ಸ್ ಇಂಜಿನಿಯರಿಂಗ್ ಅನ್ನು ಮಾಡುತ್ತದೆ ಅಂದರೆ ಬಾಹ್ಯ ಮತ್ತು ಆಂತರಿಕ ಭದ್ರತಾ ದಾಳಿಗಳನ್ನು ಇದು ನಿವಾರಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಪ್ರತ್ಯೇಕ ಲ್ಯಾಬ್

ಪ್ರತ್ಯೇಕ ಲ್ಯಾಬ್

ಎನ್‌ಎಸ್‌ಎ ಪ್ರತ್ಯೇಕ ಲ್ಯಾಬ್ ಅನ್ನು ಹೊಂದಿಸಿದ್ದು ಭದ್ರ ಫೋನ್‌ನ ತಯಾರಿಗಾಗಿ ಇದು ಕಾರ್ಯನಿರ್ವಹಿಸುತ್ತಿರುತ್ತದೆ. ಇದು ಎಲ್ಲಾ ರೀತಿಯ ಅಪಾಯಗಳನ್ನು ನಿವಾರಿಸುವ ತಂತ್ರಜ್ಞಾನವನ್ನು ಒಳಗೊಂಡಿದೆ.

 ಭದ್ರತೆಯೇ ಮುಖ್ಯ

ಭದ್ರತೆಯೇ ಮುಖ್ಯ

ಇಂದಿನ ಕಾಲದಲ್ಲಿ ದೊರೆಯುತ್ತಿರುವ ಉತ್ತಮ ಎನ್‌ಕ್ರಿಪ್ಶನ್ ವ್ಯವಸ್ಥೆಯನ್ನು ಈ ಫೋನ್ ಒಳಗೊಂಡಿದೆ ಎಂಬುದು ಸತ್ಯ. ಒಂದೇ ವಿಧದ ಎನ್‌ಕ್ರಿಪ್ಶನ್ ಸಂಖ್ಯೆಯಿಂದ ಮಾತ್ರವೇ ಒಬಾಮಾ ಕರೆಗಳನ್ನು ಸ್ವೀಕರಿಸಬಹುದಾಗಿದ್ದು ಸೆಕ್ಯೂರ್ ವಾಯ್ಸ್ ಅಪ್ಲಿಕೇಶನ್ ಇದರಲ್ಲಿದೆ.

ಎರಡು ವಿಧದ ಭದ್ರತೆ

ಎರಡು ವಿಧದ ಭದ್ರತೆ

ಇದು ಎರಡು ವಿಧದ ಭದ್ರತೆಯನ್ನೊಳಗೊಂಡು ಬಂದಿದೆ. ಫೋನ್ ಟು ಫೋನ್ ಮತ್ತು ಫೋನ್ ಟು ಸರ್ವರ್.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಹಣ ಉಳಿಸುವ 5 ಐಫೋನ್ ಬಜೆಟ್‌ ಆಪ್‌ಗಳು</a><br />ಓದಿರಿ:<a href=ನೀವು ತಿಳಿದುಕೊಳ್ಳಲೇಬೇಕಾದ ಗ್ಯಾಜೆಟ್‌ ಪ್ರಥಮ ಚಿಕಿತ್ಸೆ
ಓದಿರಿ:ಸ್ಮಾರ್ಟ್‌ಫೋನ್ ಸ್ಫೋಟಕ್ಕೆ ಕಾರಣವಾಗಿರುವ ಅಂಶಗಳಿವು
ಓದಿರಿ:8 ಗಂಟೆ ಬೆಳಕು ನೀಡುವ ಉಪ್ಪುನೀರಿನ ಲ್ಯಾಂಪ್ ಆವಿಷ್ಕಾರ" title="ಹಣ ಉಳಿಸುವ 5 ಐಫೋನ್ ಬಜೆಟ್‌ ಆಪ್‌ಗಳು
ಓದಿರಿ:ನೀವು ತಿಳಿದುಕೊಳ್ಳಲೇಬೇಕಾದ ಗ್ಯಾಜೆಟ್‌ ಪ್ರಥಮ ಚಿಕಿತ್ಸೆ
ಓದಿರಿ:ಸ್ಮಾರ್ಟ್‌ಫೋನ್ ಸ್ಫೋಟಕ್ಕೆ ಕಾರಣವಾಗಿರುವ ಅಂಶಗಳಿವು
ಓದಿರಿ:8 ಗಂಟೆ ಬೆಳಕು ನೀಡುವ ಉಪ್ಪುನೀರಿನ ಲ್ಯಾಂಪ್ ಆವಿಷ್ಕಾರ" loading="lazy" width="100" height="56" />ಹಣ ಉಳಿಸುವ 5 ಐಫೋನ್ ಬಜೆಟ್‌ ಆಪ್‌ಗಳು
ಓದಿರಿ:ನೀವು ತಿಳಿದುಕೊಳ್ಳಲೇಬೇಕಾದ ಗ್ಯಾಜೆಟ್‌ ಪ್ರಥಮ ಚಿಕಿತ್ಸೆ
ಓದಿರಿ:ಸ್ಮಾರ್ಟ್‌ಫೋನ್ ಸ್ಫೋಟಕ್ಕೆ ಕಾರಣವಾಗಿರುವ ಅಂಶಗಳಿವು
ಓದಿರಿ:8 ಗಂಟೆ ಬೆಳಕು ನೀಡುವ ಉಪ್ಪುನೀರಿನ ಲ್ಯಾಂಪ್ ಆವಿಷ್ಕಾರ

Best Mobiles in India

English summary
Smartphones have become a necessity, but when you are the President of a world super-power, you don’t really have the option of going smartphone shopping at the drop of a hat.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X