'ATM'ಗೆ ಗುಡ್‌ಬೈ!..ಭವಿಷ್ಯದ ಬ್ಯಾಂಕ್ 'ITM' ಮಷಿನ್ ಬರಲಿದೆ ಶೀಘ್ರದಲ್ಲಿ!!.ಎಲ್ಲರೂ ತಿಳಿಯಬೇಕು!?
ಎಟಿಎಂಗಳಿಗೆ ಬದಲಾಗಿ ಐಟಿಎಂ ಮಷಿನ್‌ಗಳ ಮೂಲಕ ದಿನದ 24 ಗಂಟೆಯೂ ಶೇ 90ರಷ್ಟು ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಮುಂದೆ ಬಂದಿವೆ.!
ಬ್ಯಾಂಕಿಗ್ ಕ್ಷೇತ್ರವನ್ನು 24 ಗಂಟೆಯೂ ತೆರೆದಿರಲು ಒದಗಿಸುವ ವಿನೂತನ ಪ್ರಯತ್ನವನ್ನು ಅಳವಡಿಸಿಕೊಳ್ಳಲು ಬ್ಯಾಂಕ್‌ಗಳು ಚಿಂತನೆ ನಡೆಸಿದ್ದು, ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ಇಂಟರ್ಯಾಕ್ಟೀವ್ ಟೆಲ್ಲರ್ ಮಷಿನ್‌ಗಳನ್ನು (ಐಟಿಎಂ) ಅಳವಡಿಸಿಕೊಳ್ಳಲು ಬ್ಯಾಂಕ್‌ಗಳು ಮುಂದಾಗಿವೆ.!!
ಹೌದು, ಬ್ಯಾಂಕಿಂಗ್ ಕ್ಷೇತ್ರ ಕೂಡ ಡಿಜಿಟಲ್ ಯುಗಕ್ಕೆ ತೆರೆದುಕೊಳ್ಳುತ್ತಿದ್ದು, ಎಟಿಎಂಗಳಿಗೆ ಬದಲಾಗಿ ಐಟಿಎಂ ಮಷಿನ್‌ಗಳ ಮೂಲಕ ದಿನದ 24 ಗಂಟೆಯೂ ಶೇ 90ರಷ್ಟು ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಮುಂದೆ ಬಂದಿವೆ.!! ಹಾಗಾದರೆ, ಏನಿದು ಐಟಿಎಂ ಮಷಿನ್? ಹೇಗೆ ಕಾರ್ಯನಿರ್ವಹಿಸುತ್ತದೆ? ಮತ್ತು ಇದರ ಉಪಯೋಗಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಏನಿದು ಐಟಿಎಂ ಮಷಿನ್?
ಪ್ರಸ್ತುತ ಇರುವ ಎಟಿಎಂಗಳ ಬದಲಾಗಿ ಬ್ಯಾಂಕ್ ಸಿಬ್ಬಂದಿ ಜೊತೆ ನೇರವಾಗಿ ವಿಡಿಯೊ ಸಂಪರ್ಕ ಸಾಧಿಸಬಹುದಾದ ಮತ್ತು ಫೋನ್ ಮೂಲಕವೂ ಮಾತನಾಡಿಸಿ ಸಮಸ್ಯೆಗಳು, ಸಂದೇಹಗಳಿಗೆ ಪರಿಹಾರ ಕಂಡುಕೊಳ್ಳಬಹುದಾದ ಫೀಚರ್ಸ್ ಹೊಂದಿರುವ ಈ ಮಷಿನ್‌ಗೆ ಇಂಟರ್ಯಾಕ್ಟೀವ್ ಟೆಲ್ಲರ್ ಮಷಿನ್ (ಐಟಿಎಂ) ಎಂದು ಹೆಸರಿಟ್ಟಿದ್ದಾರೆ.!!

ಭವಿಷ್ಯದ ಬ್ಯಾಂಕ್!!
ಬ್ಯಾಂಕ್‌ಗಳು ಪರಿಚಯಿಸುತ್ತಿರುವ ಈ ಐಟಿಎಂಗನ್ನು ಭವಿಷ್ಯದ ಬ್ಯಾಂಕ್‌ಗಳೆಂದೇ ಬಿಂಬಿಸಲಾಗುತ್ತಿದ್ದು, ಮೊಬೈಲ್ ವಹಿವಾಟುಗಳಿಗೂ ನೆರವಾಗುವಂಥ ಕ್ಯೂಆರ್ ಕೋಡ್ ಸೌಲಭ್ಯವೂ ಸಹ ಇದರಲ್ಲಿದೆ. ಇಷ್ಟು ಮಾತ್ರವಲ್ಲದೆ, ಬಯೊಮೆಟ್ರಿಕ್ ತಂತ್ರಜ್ಞಾನವನ್ನೂ ಅಳವಡಿಸಿರುವುದರಿಂದ ಬ್ಯಾಂಕ್‌ಗಳು ಗ್ರಾಹಕರನ್ನು ಸುಲಭವಾಗಿ ಗುರುತಿಸಲು ಸಾಧ್ಯವಿದೆ.!!

ಬ್ಯಾಂಕ್‌ಗೆ ಹೋಗಬೇಕಿಲ್ಲ.!!
ಐಟಿಎಂಗಳು ಬಳಕೆಗೆ ಬಂದರೆ, ಬ್ಯಾಂಕ್ ಖಾತೆ ಜೊತೆಗೆ ಸಂಪರ್ಕ ಕಲ್ಪಿಸಿರುವ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಇತ್ಯಾದಿ ದಾಖಲೆಗಳನ್ನು ಒದಗಿಸಿ ಕೂಡಲೇ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ವಿಡಿಯೊ ಮಾನಿಟರ್ ಮುಂದೆ ನಿಮ್ಮ ದಾಖಲೆಗಳನ್ನು ಪ್ರದರ್ಶಿಸಿದರೆ ಸಾಕು ಬ್ಯಾಂಕ್ ಸಿಬ್ಬಂದಿ ಎಲ್ಲವನ್ನು ಪರಿಶೀಲಿಸಿ ನಿಮ್ಮ ಸಮಸ್ಯೆ ಪರಿಹರಿಸುತ್ತಾರೆ.!!

ಶೀಘ್ರ ವಹಿವಾಟು!!
ಭವಿಷ್ಯದ ಬ್ಯಾಂಕ್ ಎಂದು ಹೆಸರಾಗಿರುವ ಐಟಿಎಂಗಳ ಮುಖ್ಯ ಉಪಯೋಗವೆಂದರೆ ಬ್ಯಾಂಕ್ ವ್ಯವಹಾರಗಳ ಶೀಘ್ರ ವಹಿವಾಟು.!! ಬ್ಯಾಂಕ್ ಶಾಖೆಗಳಲ್ಲಿ ಕಾಯುವಷ್ಟು ಹೊತ್ತು ಇಲ್ಲಿ ಕಾಯುವ ಅಗತ್ಯವಿರುವುದಿಲ್ಲ. ಚೆಕ್, ನಗದು ಪಾವತಿ, ಹಿಂಪಡೆಯುವಿಕೆ ಇತ್ಯಾದಿ ಕೆಲಸಗಳನ್ನು ಬೇಗ ಮುಗಿಸಿಕೊಳ್ಳಬಹುದು. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಕಳೆದರೆ ತಕ್ಷಣವೇ ಪರಿಹಾರ ಲಭ್ಯ.!!

ಕನ್ನಹಾಕಲು ಸಾಧ್ಯವಿಲ್ಲ!!
ಐಟಿಎಂ ಕೇಂದ್ರಗಳ ಜೊತೆ ಬ್ಯಾಂಕ್ ಸಿಬ್ಬಂದಿ ಸದಾ ಸಂಪರ್ಕದಲ್ಲಿ ಇರುವುದರಿಂದ ಇಲ್ಲಿರುವ ಹಣ ಹೆಚ್ಚು ಸುರಕ್ಷಿತವಾಗಿರುತ್ತದೆ. ಹಾಗಾಗಿ, ಎಟಿಎಂಗಳಿಗೆ ಕನ್ನ ಹಾಕುವಂತೆ ಐಟಿಎಂಗಳಿಗೆ ಕನ್ನ ಹಾಕಲು ಸಾಧ್ಯವಿಲ್ಲ ಎನ್ನಲಾಗಿದೆ.!! ಇದಲ್ಲದೆ, ಐಟಿಎಂಗಳಿಂದ ಬ್ಯಾಂಕ್‌ಗಳ ನಿರ್ವಹಣಾ ವೆಚ್ಚ ಕಡಿಮೆಯಾಗಿ ಗುಣಮಟ್ಟದ ಸೇವೆ ಒದಗಿಸಲು ನೆರವಾಗಲಿವೆ ಎಂದು ಹೇಳಲಾಗುತ್ತಿದೆ.!!


Click it and Unblock the Notifications








