Home
ಸುದ್ದಿಜಾಲ

ಚಕ್ರಾಧಿಪತಿ 'ಗೂಗಲ್' ಕಂಪೆನಿ ಕಥೆ ಗೊತ್ತಾ?

ಗೂಗಲ್‌ ಕಂಪೆನಿ ಇಂದು ಇಡೀ ಜಗತ್ತಿನ ಜನರಿಗೆ ಏನುಬೇಕು ಬೇಡಗಳೆಲ್ಲವನ್ನೂ ಅರಿತುಕೊಂಡಿದೆ. ಏನೇ ಗೊತ್ತಿಲ್ಲದಿದ್ದರೂ ಗೂಗಲ್ ಮಾಡಿ ಎಂಬ ನಾಣ್ಣುಡಿ ಈಗ ಸಾಮಾನ್ಯವಾಗಿದೆ. ಎರಡು ದಶಕಗಳ ಹಿಂದೆ ಆರಂಭವಾದ ಗೂಗಲ್ ಕಂಪೆನಿ ಇಂದು ವಿಶ್ವದ ದೈತ್ಯ ಸರ್ಚ್​ ಇಂಜಿನ್ ಆಗಿ ಬೆಳೆದಿದ್ದು, ಸದ್ಯ 150 ಭಾಷೆಗಳಲ್ಲಿ 190 ದೇಶಗಳಲ್ಲಿ ಗೂಗಲ್ ಬಳಕೆಯಾಗುತ್ತಿದೆ. ಈ ಸ್ವಲ್ಪ ಕಾಲದಲ್ಲಿಯೇ ಮಾನವನ ಬದುಕಿನ ಅವಿಭಾಜ್ಯ ಅಂಗವಾಗಿ ನೆಲೆಯೂರಿದೆ.

ಭಾರತವು ಅಂತರಾಷ್ಟ್ರೀಯ ಪ್ರಪಂಚಕ್ಕೆ ತೆರೆದುಕೊಂಡ ನಂತರ ಗೂಗಲ್ ಸೇವೆಯನ್ನು ಹೆಚ್ಚಾಗಿಯೇ ಬಳಸಿಕೊಂಡಿದೆ. ಇದಕ್ಕೆ ಪ್ರತಿಫಲವಾಗಿ ಗೂಗಲ್ ಕೂಡ ಸಾವಿರಾರು ಕೊಟಿಗಳಷ್ಟು ಹಣವನ್ನು ಭಾರತಿಯರಿಂದ ದುಡಿದುಕೊಂಡಿದೆ. ಭಾರತದಲ್ಲಿ 2004ರಿಂದ ಕಾರ್ಯನಿರ್ವಹಿಸುತ್ತಿರುವ ಗೂಗಲ್ ಭಾರತ ಸರ್ಕಾರದೊಂದಿಗೆ ಸಾಮರಸ್ಯ ಕಾಪಾಡಿಕೊಂಡು ಬಂದಿರುವುದರಿಂದ ಇಲ್ಲಿ ತನ್ನ ಏಕಸ್ವಾಮ್ಯಕ್ಕೆ ಧಕ್ಕೆ ತಂದುಕೊಳ್ಳದೇ ತನ್ನ ಜಾಲವನ್ನು ವಿಸ್ತರಿಸಿಕೊಳ್ಳುತ್ತಾ ಬಂದಿದೆ.

ಚಕ್ರಾಧಿಪತಿ 'ಗೂಗಲ್' ಕಂಪೆನಿ ಕಥೆ ಗೊತ್ತಾ?

ನಾವಿಂದು ಈ ಇಪ್ಪತ್ತು ವರ್ಷಗಳ ಹಾದಿಯಲ್ಲಿ ಗೂಗಲ್‌ ಜಗತ್ತಿನ ಒಂದು ಸಣ್ಣ ಇತಿಹಾಸ ಮತ್ತು ಬೆಳವಣಿಗೆಗೆಗಳ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಇಂಟರ್ನೆಟ್ ಎಂಬ ಜಗದ್‌ವ್ಯಾಪಿ ಜಾಲದಲ್ಲಿ ಗೂಗಲ್ ಎಂಬ ಕಂಪೆನಿ ಈ ವರೆಗಿನ ಹಾದಿಯನ್ನು ಹೇಗೆ ಸಾಗಿತು? ಮಾರುಕಟ್ಟೆಯಲ್ಲಿ ಚಕ್ರಾಧಿಪತ್ಯವನ್ನು ಹೇಗೆ ಸಾಧಿಸಿತು? ಗೂಗಲ್ ಭವಿಷ್ಯದಲ್ಲಿ ಏನೆಲ್ಲಾ ಗುರಿಗಳನ್ನು ಹೊಂದಿದೆ ಎಂಬ ಕುತೋಹಲ ಅಂಶಗಳನ್ನು ಇಂದಿನ ಲೇಖನದಲ್ಲಿ ತಿಳಿಯೋಣ.

ಗೂಗಲ್ ಹುಟ್ಟಿದ್ದು ಹೇಗೆ?

ಗೂಗಲ್ ಹುಟ್ಟಿದ್ದು ಹೇಗೆ?

ಅಮೆರಿಕದ ಪ್ರತಿಷ್ಠಿತ ಸ್ಟಾನ್‌ಫೋರ್ಡ್‌ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳಾಗಿದ್ದ ಲ್ಯಾರಿ ಪೇಜ್‌ ಹಾಗೂ ಸೆರ್ಗಿ ಬ್ರಿನ್‌ ಅವರು ಗೂಗಲ್ ಎಂಬ ಮಾಯೆಯನ್ನು ಸೆಪ್ಟೆಂಬರ್ 4 1998 ರಂದು ಹುಟ್ಟುಹಾಕಿದರು. ಇಂಟರ್ನೆಟ್ ಜಾಲದಲ್ಲಿನ ಮಾಹಿತಿಯನ್ನು ಸುಲಭವಾಗಿ ವರ್ಗೀಕರಿಸಿಕೊಳ್ಳುವ ಸೌಲಭ್ಯ ನಿರ್ಮಿಸುವ ಹಂಬಲದೊಂದಿಗೆ ಗೂಗಲ್ ಜನ್ಮತಾಳಿತ್ತು. "ಗೂಗಲ್‌' ಎಂದು ಪ್ರಖ್ಯಾತವಾಗುವ ಮುನ್ನ 'ಬ್ಯಾಕ್‌ ರಬ್' ಎಂಬ ವ್ಯವಸ್ಥೆ ಗೂಗಲ್‌ನ ಮೂಲಾಧಾರವಾಗಿತ್ತು.

ಗೂಗಲ್ ಎಂಬ ಹೆಸರೇಕೆ ಬಂತು?

ಗೂಗಲ್ ಎಂಬ ಹೆಸರೇಕೆ ಬಂತು?

ನಿಮಗೆ ಅಕ್ಷಯಪಾತ್ರಯಲ್ಲಿ ಎಂದಿಗೂ ಮುಗಿಯದೇ ಇರುವ ಇಂಕನ್ನು ಕೊಟ್ಟು, ಅಪರಿಮಿತ ಶಕ್ತಿ, ಆಯುಷ್ಯಗಳೆಲ್ಲವನ್ನು ವರವನ್ನು ನೀಡಿ ಸಾಮಾನ್ಯ ಸಂಖ್ಯೆ 1ರ ಮುಂದೆ ಎಷ್ಟು ಸೊನ್ನೆಯಗಳನ್ನು ಬರೆಯುತ್ತಿದ್ದರೆ, ಅಂದರೆ ನಮ್ಮ ಬ್ರಹ್ಮಾಂಡ ಹುಟ್ಟಿ ಸಾಯುವವರೆಗೂ ಬರೆದರೂ ಅದಕ್ಕಿಂತಲೂ ಹೆಚ್ಚು ಪಟ್ಟನ್ನು ಗೂಗಲ್ ಎನ್ನುತ್ತಾರೆ. ಸಿಂಪಲ್ ಆಗಿ `1' ರ ನಂತರ ಸೊನ್ನೆಗಳನ್ನು ಹಾಕುತ್ತಲೇ ಹೋದರೆ ಯಾವ ಸಂಖ್ಯೆ ಸಿಗುತ್ತದೆ? ಇಷ್ಟು ದೊಡ್ಡ ಸಂಖ್ಯೆಗೆ ಹೆಸರಿದೆಯೆ ಎನ್ನುತ್ತೀರಾ? ಇದೆ. ಅದೇ `ಗೂಗಲ್'!

ಭವಿಷ್ಯಗಳ ಜನಕ ಗೂಗಲ್!

ಭವಿಷ್ಯಗಳ ಜನಕ ಗೂಗಲ್!

ಮಾನವನಿಗೆ ಭವಿಷ್ಯದಲ್ಲಿ ಏನು ಬೇಕು ಎಂದು ಯಾವಾಗಲೂ ಹುಡುಕುವ ಯತ್ನದಲ್ಲಿಯೇ ಗೂಗಲ್ ಗಮನಹರಿಸುತ್ತಿದೆ. ಗೂಗಲ್‌ ಮ್ಯಾಪ್ಸ್, ಗೂಗಲ್ ಕ್ಲೌಡ್, ಗೂಗಲ್ ಡಾಕ್ಟ್, ಜಿಮೇಲ್, ಗೂಗಲ್ ತೇಜ್, ಗೂಗಲ್ ಹೋಸ್ಟ್, ಗೂಗಲ್, ಗೂಗಲ್ ಪ್ಲೇ, ಯೂಟ್ಯೂಬ್, ಗೂಗಲ್ ಡ್ರೈವ್...ಹೀಗೆ ಹತ್ತಾರು ಭವಿಷ್ಯದ ಸೇವೆಗಳನ್ನು ಗೂಗಲ್ ಒದಗಿತ್ತಿದೆ. ಪ್ರಯಾಣಿಸುವ ಸಮಯದಲ್ಲಿ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಇದೆ ಎಂದು ಹೇಳುವಷ್ಟು ಗೂಗಲ್ ಬೆಳೆದುನಿಂತಿದೆ. ನಿಮಗೆ ಬೇಕಾದ ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ಒದಗಿಸುತ್ತಿದೆ.

ಗೂಗಲ್ ಶಕ್ತಿಯೇ ಅದರ ಬುದ್ದಿವಂತಿಕೆ.!

ಗೂಗಲ್ ಶಕ್ತಿಯೇ ಅದರ ಬುದ್ದಿವಂತಿಕೆ.!

ಇಂದು ನಾವೆಲ್ಲಾ ಕೇಳುತ್ತಿರುವ ಕೃತಕಬುದ್ದಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂಬ ಪ್ರಪಂಚಕ್ಕೆ ಗೂಗಲ್ ಹತ್ತಾರು ವರ್ಷಗಳ ಹಿಂದೆಯೇ ಕಾಲಿಟ್ಟಿದೆ. ಹುಡುಕಾಟಕ್ಕೆಂದೇ ನಿರ್ಮಿತವಾದ ವಿಶೇಷ ಆಲ್ಗಾರಿದಮ್ ಅನ್ನು ಗೂಗಲ್ ಹೊಂದಿದೆ. ಈ ವಿಶೇಷ ಆಲ್ಗಾರಿದಮ್ ಗೂಗಲ್‌ನ ಮೆದುಳಾಗಿದ್ದು, ಈ ಮಾಹಿತಿಯನ್ನು ಗೂಗಲ್ ಯಾವುದೇ ಕಾರಣಕ್ಕೂ ಇತರರಿಗೆ ಬಿಟ್ಟುಕೊಡುವುದಿಲ್ಲ. ಇದು ಯಕ್ಷಗುಟ್ಟಾಗಿದ್ದು, ಇದೇ ಇದರ ಶಕ್ತಿ. ಇಂತಹ ಕೃತಕ ಬುದ್ಧಿಮತ್ತೆ ಪ್ರೋಗ್ರಾಮ್‌ಗಳೇ ಜನರ ಬೇಡಿಕೆಯನ್ನು ಸರಾಗವಾಗಿ ಪೂರೈಸುತ್ತಿವೆ.

ಇಂದು ವಿಶ್ವ ದಿಗ್ಗಜ ಗೂಗಲ್!

ಇಂದು ವಿಶ್ವ ದಿಗ್ಗಜ ಗೂಗಲ್!

ಬ್ರ್ಯಾಂಡ್ ಫೈನಾನ್ಸ್ ಎಂಬ ಫೈನಾನ್ಸ್ ಕನ್ಸಲ್ಟೆನ್ಸಿ ನೀಡಿರುವ ವರದಿ ಪ್ರಕಾರ ಇಂದು ಗೂಗಲ್ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಬೆಲೆಯನ್ನು ಹೊಂದಿರುವ ಮೂರನೇ ಅತಿದೊಡ್ಡ ಕಂಪೆನಿಯಾಗಿದೆ. ಅಂದಾಜೂ $ 120.9 ಬಿಲಿಯನ್‌ಗಿಂತಲೂ ಹೆಚ್ಚು ಒಟ್ಟು ಮೌಲ್ಯವನ್ನು ಗೂಗಲ್ ಒಡೆತನದ ಆಲ್ಫಾಬೀಟ್ ಸಂಸ್ಥೆ ಹೊಂದಿದೆ. ಕೇವಲ 20 ವರ್ಷಗಳಲ್ಲಿಯೇ ವಿಶ್ವದ ಇತರೆ ಕಂಪೆನಿಗಳನ್ನು ಮೀರಿ ಬೆಳೆದ ಗೂಗಲ್ ಭವಿಷ್ಯದಲ್ಲಿ ನಂ.1 ಟೆಕ್ ಕಂಪೆನಿಯಾಗುವುದರಲ್ಲಿ ಎರಡು ಮಾತಿಲ್ಲ.

ಆಗಲೇ ಮಾರಾಟಕ್ಕಿತ್ತು ಗೂಗಲ್!

ಆಗಲೇ ಮಾರಾಟಕ್ಕಿತ್ತು ಗೂಗಲ್!

ಗೂಗಲ್ ಹುಟ್ಟಿ ಸ್ವಲ್ಪ ಮುನ್ನೆಲೆಗೆ ಬರುತ್ತಿರುವ ಸಮಯದಲ್ಲಿಯೇ ಗೂಗಲ್ ಅನ್ನು ಮಾರಾಟಕ್ಕೆ ಇಡಲಾಗಿತ್ತು. ಆದರೆ, ಗೂಗಲ್ ಬೆಲೆಯನ್ನು ಯಾಹೂ ತಿಳಿಯಲಿಲ್ಲ. 2002ರಲ್ಲಿ ಗೂಗಲ್ ಅನ್ನು ಯಾಹೂ ಖರೀದಿಸಲು ಪ್ರಯತ್ನಿಸಿದಾಗ, ಯಾಹೂ 20ಸಾವಿರ ಕೋಟಿ ರೂಪಾಯಿಗಳ ಪ್ರಸ್ತಾಪನೆ ಇಟ್ಟಿತ್ತು. ಆದರೆ ಗೂಗಲ್ ಕೇವಲ 33ಸಾವಿರ ಕೋಟಿ ರೂಪಾಯಿಗಳ ಬೇಡಿಕೆ ಇಟ್ಟಿತ್ತು. ನಿಮಗೆ ತಿಳಿದಿರಲಿ. ಒಂದು ಕಾಲದ ದಿಗ್ಗಜ ಯಾಹೂ 2018ರಲ್ಲಿ ಮಾರಾಟವಾಗಿದ್ದು, ಕೇವಲ 20ಸಾವಿರ ಕೋಟಿಗೆ.!

ಗೂಗಲ್‌ ದಿಗ್ಗಜನಾಗಲು ಕಾರಣವೇನು?

ಗೂಗಲ್‌ ದಿಗ್ಗಜನಾಗಲು ಕಾರಣವೇನು?

ಆಗ ಇದ್ದ ಸರ್ಚ್ ಎಂಜಿನ್‌ಗಳು ಕೇವಲ ಪಠ್ಯ ಪುಟಗಳನ್ನಷ್ಟೇ ನೀಡುತ್ತಿದ್ದ ಸಂದರ್ಭದಲ್ಲಿ, ಗೂಗಲ್‌ ಹೆಚ್ಚಿನದನ್ನು ನೀಡಿತು, ನಕಾಶೆಗಳು, ಸುದ್ದಿ ಲೇಖನಗಳು, ಪುಸ್ತಕಗಳಲ್ಲಿನ ಉಲ್ಲೇಖಗಳು, ವಿಡಿಯೋಗಳು, ಪ್ರಬಂಧಗಳು, ಬ್ಲಾಗ್‌ ಬರಹಗಳು, ಆಂಡ್ರಾಯ್ಡ್ ಹೀಗೆ ಹತ್ತಾರು ಸೇವೆಗಳನ್ನು ನೀಡಿತು. ಆಂಡ್ರಾಯ್ಡ್ ಮೂಲಕ ಮಾರುಕಟ್ಟೆ ತಂತ್ರವನ್ನು ಹೆಣೆದು ಪ್ರತಿಯೋರ್ವರ ಕೈಯಲ್ಲೂ ಸೇರಿಕೊಂಡಿತು. ಜಿಮೇಲ್, ಮ್ಯಾಪ್ಸ್, ಯೂಟ್ಯೂಬ್ ಮೂಲಕ ಜನರ ಅವಿಭಾಜ್ಯ ಅಂಗವಾಗಿ, ಅಂತರ್ಜಾಲ ಜಗತ್ತಿನ ದಿಗ್ಗಜನಾಗಿ ಬೆಳೆದುನಿಂತಿತು.

ಹಣ ಗಳಿಕೆಯಲ್ಲೂ ಮುಂದು ಗೂಗಲ್!

ಹಣ ಗಳಿಕೆಯಲ್ಲೂ ಮುಂದು ಗೂಗಲ್!

ಬಹುತೇಕ ತನ್ನೆಲ್ಲಾ ಸೇವೆ, ಸೌಲಭ್ಯಗಳನ್ನು ಉಚಿತವಾಗಿ ನೀಡುವ ಗೂಗಲ್‌ ಹಣವನ್ನು ಹೇಗೆ ಗಳಿಸುತ್ತದೆ ಎಂದು ಈವರೆಗೂ ಹಲವರಿಗೆ ತಿಳಿದಿಲ್ಲ. ತನ್ನ ಸೇವೆಗಳಲ್ಲಿ ಪ್ರೀಮಿಯಂ ಸೇವೆಗಳನ್ನು ಬಳಕೆ ಮಾಡಲು ಗೂಗಲ್ ಶುಲ್ಕ ವಿಧಿಸುತ್ತದೆ. ಇದು ಸಾಮಾನ್ಯರಿಗೆ ಹೊರೆಯಾಗುವುದಿಲ್ಲ. ಆದರೆ, ಸಾಮಾನ್ಯರಿಗೆ ಜಾಹಿರಾತುಗಳನ್ನು ತೋರಿಸುವ ಮೂಲಕ ಗೂಗಲ್ ಹಣಗಳಿಸುತ್ತದೆ. ಅದು ಕೂಡ ಸಾಮಾನ್ಯರಿಗೆ ಏನು ಬೇಕಾಗಿದೆಯೋ ಅದೇ ಜಾಹಿರಾತನ್ನು ಗೂಗಲ್ ಅವರಿಗೆ ತೋರಿಸುತ್ತದೆ. ಇವೆಲ್ಲವೂ ಸಾಮಾನ್ಯ ವಿಷಯಗಳಲ್ಲ.

ಭಾರತದಲ್ಲಿ ಗೂಗಲ್!

ಭಾರತದಲ್ಲಿ ಗೂಗಲ್!

ಭಾರತವು ಅಂತರಾಷ್ಟ್ರೀಯ ಪ್ರಪಂಚಕ್ಕೆ ತೆರೆದುಕೊಂಡ ನಂತರ ಗೂಗಲ್ ಸೇವೆಯನ್ನು ಹೆಚ್ಚಾಗಿಯೇ ಬಳಸಿಕೊಂಡಿದೆ. ಇದಕ್ಕೆ ಪ್ರತಿಫಲವಾಗಿ ಗೂಗಲ್ ಕೂಡ ಸಾವಿರಾರು ಕೊಟಿಗಳಷ್ಟು ಹಣವನ್ನು ದುಡಿದುಕೊಂಡಿದೆ. ಭಾರತದಲ್ಲಿ 2004ರಿಂದ ಕಾರ್ಯನಿರ್ವಹಿಸುತ್ತಿರುವ ಗೂಗಲ್ ಭಾರತ ಸರ್ಕಾರದೊಂದಿಗೆ ಸಾಮರಸ್ಯ ಕಾಪಾಡಿಕೊಂಡು ಬಂದಿದೆ. ಭಾರತದಲ್ಲಿ ಸ್ಥಳೀಯತೆಯನ್ನು ಮುಖ್ಯವಾಹಿನಿಗೆ ತರುವ ಮೂಲಕ ಗೂಗಲ್ ನಮ್ಮವನೇನೋ ಎಂಬಷ್ಟು ನಮಗೆ ಹತ್ತಿರವಾಗಿದೆ. ಇದಕ್ಕೆ ಪ್ರತಿಫಲವಾಗಿ ಗೂಗಲ್ ಕೂಡ ಸಾವಿರಾರು ಕೊಟಿಗಳಷ್ಟು ಹಣವನ್ನು ದುಡಿದುಕೊಂಡಿದೆ.

ಗೂಗಲ್ ಮೇಲೆ ಅಪನಂಬಿಕೆ ಸಹ ಇದೆ.!

ಗೂಗಲ್ ಮೇಲೆ ಅಪನಂಬಿಕೆ ಸಹ ಇದೆ.!

ಗೂಗಲ್ ತನ್ನ ಸರ್ಚ್ ಎಂಜಿನ್ ಸೇವೆ ಬಳಸಿದವರ ಅನುಭವವನ್ನು ನೆನಪಿಟ್ಟುಕೊಂಡು ಎಲ್ಲಾ ಮಾಹಿತಿಯನ್ನು ಶೇಖರಿಸಿಟ್ಟುಕೊಂಡಿರುತ್ತದೆ. ಅದರ ಆಧಾರದ ಮೇಲೆ ಪ್ರತೀ ಬಾರಿ ಸುಧಾರಿತ ಫ‌ಲಿತಾಂಶವನ್ನು ಗೂಗಲ್‌ಗೆ ನೀಡಲು ಸಾಧ್ಯವಾಗುತ್ತದೆ ಎನ್ನಲಾಗುತ್ತದೆ. ಆದರೆ, ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಗೂಗಲ್ ಅವರ ಒಪ್ಪಿಗೆ ಇಲ್ಲದಿದ್ದರೂ ಪಡೆದುಕೊಳ್ಳುತ್ತದೆ ಮತ್ತು ಗೂಗಲ್ ಜಾಹಿರಾತುಗಳನ್ನು ತೋರಿಸುವಾಗ ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿದೆ ಎನ್ನುವ ಮಾತುಗಳಿವೆ. ಇವು ಸಾಬೀತಾಗಿವೆ ಕೂಡ.

Best Mobiles in India

English summary
A look at the history of Google and how it was founded. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+