ಆಪಲ್ ಭಾರತದಲ್ಲಿ ಯಾಕೆ ಪ್ರಸಿದ್ಧಿಯಾಗುತ್ತಿಲ್ಲ?

|

ಕ್ಯೂಪರ್ಟಿನೋ ಮೂಲದ ಆಪಲ್ ಸಂಸ್ಥೆಯ ಪ್ರಮುಖ ಮಾರುಕಟ್ಟೆ ಅಂದರೆ ಅದು ಚೀನಾ ಮತ್ತು ಭಾರತ. ಆದರೆ ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಆಪಲ್ ಗೆ ಅಷ್ಟೇನು ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿಲ್ಲ. ಅದರಲ್ಲೂ 2018 ಆಪಲ್ ಮಟ್ಟಿಗೆ ಭಾರತದಲ್ಲಿ ಕೆಟ್ಟ ವರ್ಷವೇ ಆಗಿತ್ತು ಎಂದರೆ ತಪ್ಪಲ್ಲ. ಹಾಗಾದ್ರೆ ಯಾಕೆ ಆಪಲ್ ದಿನೇದಿನೇ ತನ್ನ ಪ್ರಸಿದ್ಧಿಯನ್ನು ಭಾರತದಲ್ಲಿ ಕಳೆದುಕೊಳ್ಳುತ್ತಿದೆ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಸಾಗಿದಾಗ ನಮಗೆ ಕೆಲವು ಪ್ರಮುಖ ಕಾರಣಗಳು ಸಿಕ್ಕಿವೆ. ಆ ಪಟ್ಟಿಯನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ. ಮುಂದೆ ಓದಿ.

ವರುಷದ ಮಾರಾಟದಲ್ಲಿ ಕುಸಿತ

ಬೆಲೆಯ ಬಗ್ಗೆ ಹೆಚ್ಚು ಸೂಕ್ಷ್ಮವಾಗಿ ಯೋಚಿಸುವ ಗ್ರಾಹಕರಿರುವ ಮಾರುಕಟ್ಟೆಯಲ್ಲಿ 1 ಲಕ್ಷ ಫೋನ್ ಗಳನ್ನು ಮಾರಾಟ ಮಾಡುವುದು ಒಂದು ಕಠಿಣ ಸವಾಲು. ಐಫೋನ್ ಎಕ್ಸ್ಎಸ್,ಎಕ್ಸ್ಎಸ್ ಮ್ಯಾಕ್ಸ್ ಮತ್ತು ಕೈಗೆಟುಕುವ ಬೆಲೆಯ ಫೋನ್ ಎಂದು ಕರೆಯಲಾಗುವ ಐಫೋನ್ ಎಕ್ಸ್ಆರ್ ಕೂಡ ಭಾರತೀಯ ಗ್ರಾಹಕರಿಗೆ ಉತ್ತಮ ಬೆಲೆಯ ಫೋನ್ ಎಂದು ಅನ್ನಿಸಲೇ ಇಲ್ಲ.

ಭಾರತೀಯ ಬೆಲೆ

ಕಳೆದ ವರ್ಷಕ್ಕೆ ಹೋಲಿಸಿದರೆ ಅರ್ಧದಷ್ಟು ಐಫೋನ್ ಗಳು ಮಾರಾಟಮ ಐಫೋನ್ ಗಳ ಮಾರಾಟದಲ್ಲಿ ದೊಡ್ಡ ಮಟ್ಟದ ಇಳಿಕೆಯನ್ನು ವಿಶ್ಲೇಷಕರು ಗಮನಿಸಿದ್ದಾರೆ. ಕೌಂಟರ್ ಪಾಯಿಂಟ್ ವರದಿಯ ಪ್ರಕಾರ 2018 ರಲ್ಲಿ ಆಪಲ್ ಶಿಪ್ ಮೆಂಟ್ 1.7 ಮಿಲಿಯನ್ ಯುನಿಟ್ಸ್ ಗಳು. ಅದೇ 2017 ರಲ್ಲಿ ಆಪಲ್ ಅಂದಾಜು 3.2 ಮಿಲಿಯನ್ ಯುನಿಟ್ ಗಳು ಶಿಪ್ ಮೆಂಟ್ ಮಾಡಿತ್ತು.

ಈ ವರ್ಷ ಐಫೋನ್ ಗೆ ದೊಡ್ಡ ಹೊಡೆದ ನೀಡಿರುವುದೇ ಬೆಲೆ. ದುಬಾರಿ ಐಫೋನಿನ ಬೆಲೆಯು 70 ಶೇಕಡಾ ಅಧಿಕವೆನಿಸುತ್ತದೆ.

400,000 ಯುನಿಟ್ ಐಫೋನ್ ಗಳು ಕಳೆದ ತ್ರೈಮಾಸಿಕದಲ್ಲಿ ಮಾರಾಟವಾದವು

ಕಳೆದ ತ್ರೈಮಾಸಿಕದಲ್ಲಿ ಸುಮಾರು 400,000 ಐಫೋನ್ ಗಳನ್ನು ಭಾರತದಲ್ಲಿ ಆಪಲ್ ಮಾರಾಟ ಮಾಡಿದೆ.

ಒನ್ ಪ್ಲಸ್ ಫ್ಯಾಕ್ಟರ್:

ಪ್ರೀಮಿಯಂ ಫೋನ್ಸ್ ಗಳ ವಿಚಾರದಲ್ಲಿ ಭಾರತದಲ್ಲಿ ಒನ್ ಪ್ಲಸ್ ಟಾಪ್ 1 ಸ್ಥಾನದಲ್ಲಿದೆ. ಸುಮಾರು 500,000 ಯುನಿಟ್ಸ್ ನ್ನು ಒನ್ ಪ್ಲಸ್ ಸಂಸ್ಥೆ ಭಾರತದಲ್ಲಿ ಕಳೆದ ತ್ರೈಮಾಸಿಕದಲ್ಲಿ ಮಾರಾಟ ಮಾಡಿದೆ.

ಶಿಪ್ ಮೆಂಟ್ ನಲ್ಲಿ ಇಲ್ಲದ ಏರಿಕೆ:

ಶಿಪ್ ಮೆಂಟ್ ನಲ್ಲಿ ಮೂರು ವರ್ಷದಿಂದ ಏರಿಕೆ ಇಲ್ಲ. ಮೂರು ವರ್ಷದಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಐಫೋನ್ ಶಿಪ್ ಮೆಂಟ್ ಅಭಿವೃದ್ಧಿ ಹೊಂದಿಲ್ಲ. 2014-15 ನೇ ಸಾಲಿನಿಂದ ಇದುವರೆಗೂ ಕೂಡ ಆಪಲ್ ನ ಶಿಪ್ ಮೆಂಟ್ ಈ ವರ್ಷದ ವರೆಗೂ ಕೂಡ ಅಧಿಕಗೊಂಡಿಲ್ಲ.

ಮಾರುಕಟ್ಟೆ ಅಸಮಾನತೆ:

ಆಪಲ್ ಬೆಳವಣಿಗೆ ಮತ್ತು ಮಾರುಕಟ್ಟೆ ಬೆಳವಣಿಗೆ ಸರಿಸಮನಾಗಿಲ್ಲ. ಭಾರತೀಯ ಸ್ಮಾರ್ಟ್ ಫೋನ್ ಮಾರುಕಟ್ಟೆ ದುಪ್ಪಟ್ಟಾಗಿದೆ. 2014 ರಲ್ಲಿ 80 ಮಿಲಿಯನ್ ಇತ್ತು ಮತ್ತು 2018 ರಲ್ಲಿ 150 ಮಿಲಿಯನ್ ಇತ್ತು. ಈ ಸಮಯದಲ್ಲಿ ಆಪಲ್ ಅಷ್ಟೇನು ಅಭಿವೃದ್ಧಿಯನ್ನು ತೋರಿಸಲಿಲ್ಲ.

ಚಿಲ್ಲರೆ ವ್ಯಾಪಾರ:

ಭಾರತದಲ್ಲಿರುವ ಚಿಲ್ಲರೆ ವ್ಯಾಪಾರವು ಆಪಲ್ ಗೆ ನೋವುಂಟು ಮಾಡುತ್ತಿದೆ. ಭಾರತದಲ್ಲಿ ಯಾವುದೇ ಆಪಲ್ ಸ್ಟೋರ್ ಗಳಿಲ್ಲ, ಆಪಲ್ ನ ಚಿಲ್ಲರೆ ವ್ಯಾಪಾರದ ತಂತ್ರಗಾರಿಕೆಯು ಬೇರೆ ದೇಶಗಳಲ್ಲಿರುವುದಕ್ಕಿಂತ ಭಿನ್ನವಾಗಿದೆ.ಸಾಂಪ್ರದಾಯಿಕವಾಗಿ ನಿರೀಕ್ಷಿತ ಗ್ರಾಹಕರ ಖರೀದಿ ವಿಚಾರದಲ್ಲಿ ಆಪಲ್ ಸ್ಟೋರ್ ಗಳು ದೊಡ್ಡ ಪ್ರಭಾವವನ್ನು ಬೀರುತ್ತದೆ.

ಭಾರತದಲ್ಲಿ ಹೊಸ ಐಫೋನ್ ತಯಾರಿಸಿಲ್ಲ

ಬೆಂಗಳೂರಿನಲ್ಲಿ ವಿಸ್ಟ್ರಾಲ್ ಫೆಸಿಲಿಟಿಯಲ್ಲಿ ಐಫೋನ್ ಎಸ್ ಇ ಯನ್ನು ಮಾತ್ರವೇ ಆಪಲ್ ತಯಾರಿಸುತ್ತದೆ. ಇದು ಹಳೆಯ ಮಾಡೆಲ್ ಆಗಿದೆ. ಯಾವುದೇ ಹೊಸ ಐಫೋನ್ ನ್ನು ಭಾರತದಲ್ಲಿ ತಯಾರಿಸಲಾಗಿಲ್ಲ.

ಭಾರತದಲ್ಲಿ ತಯಾರಿಕಾ ಸಾಮರ್ಥ್ಯವನ್ನು ಆಪಲ್ ಅಧಿಕಗೊಳಿಸಿಕೊಳ್ಳಬೇಕಾಗಿದೆ. ಕಾಮರ್ಸ್ ಮತ್ತು ಇಂಡಸ್ಟ್ರಿ ಮಿನಿಸ್ಟರ್ ಆಗಿರುವ ಸುರೇಶ್ ಪ್ರಭು ಆಪಲ್ ಜೊತೆಗೆ ಸದ್ಯದಲ್ಲಿ ಅಧಿಕೃತ ಮೀಟಿಂಗ್ ನಡೆಸುವ ಬಗ್ಗೆ ತಿಳಿಸಿದ್ದರು. ಭಾರತದಲ್ಲಿ ಆಪಲ್ ಫೋನ್ ತಯಾರಿಕೆಯನ್ನು ಅಧಿಕಗೊಳಿಸುವ ನಿಟ್ಟಿನಲ್ಲಿ ಏನು ಮಾಡಬಹುದೆಂದು ಚರ್ಚಿಸುವ ನಿಟ್ಟಿನಲ್ಲಿ ಈ ಮೀಟಿಂಗ್ ನ್ನು ತೀರ್ಮಾನಿಸಲಾಗಿದೆ.

ಸರ್ಕಾರದಿಂದ ಕೆಲವು ವಿನಾಯಿತಿಯನ್ನು ಬಯಸಿದೆ, ಅದನ್ನು ತಿರಸ್ಕರಿಸಲಾಗಿದೆ.ಕಾಂಪೋನೆಂಟ್ಸ್ ಮತ್ತು ಇಕ್ವಿಪ್ಮೆಂಟ್ ಗಳಿಗಾಗಿ 15 ವರ್ಷಗಳ ಡ್ಯೂಟಿ ವಿನಾಯಿತಿಯನ್ನು ಆಪಲ್ ಸಂಸ್ಥೆ ಬೇಡುತ್ತಿದೆ.

ಕಸ್ಟಮ್ ಡ್ಯೂಟಿಗಳಲ್ಲಿ ವಿನಾಯಿತಿಯನ್ನು ಕೂಡ ಆಪಲ್ ಬಯಸುತ್ತಿದೆ

ಭಾರತದಲ್ಲಿ ತಯಾರಿಸಬೇಕಾಗಿರುವ ಸಾಧನಗಳಿಗೆ ಸಂಪೂರ್ಣ ನಾಕ್-ಡೌನ್ ಮತ್ತು ಸೆಮಿ-ನಾಕ್-ಡೌನ್ ನ್ನು ಅಂದರೆ ಕಸ್ಟಮ್ ಡ್ಯೂಟಿಗಳಲ್ಲಿ ಕಡಿಮೆಗೊಳಿಸುವಿಕೆಯನ್ನು ಬಯಸುತ್ತಿದೆ.ಸದ್ಯ 30% ಸ್ಥಲೀಯ ಸೋರ್ಸಿಂಗ್ ಗಳಿಗೆ ಡ್ಯೂಟಿ ಇದೆ.

Best Mobiles in India

Read more about:
English summary
The great India problem: 12 things to know about why 2018 was the 'worst' year for Apple

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more