Just In
Don't Miss
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Movies
Ramachari Serial: ವಿಹಾನ್ ಬಳಿ ಸತ್ಯ ಹೇಳಿಬಿಟ್ಟ ಚಾರು!
- Sports
ಈ ಭಾರತೀಯ ತಾನು ಎದುರಿಸಿದ 'ಅತ್ಯಂತ ಅಪಾಯಕಾರಿ ಬೌಲರ್' ಎಂದ ಜೋಸ್ ಬಟ್ಲರ್
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಹುವಾವೆ ಪಿ30 ಪ್ರೊ' ಫೋನ್ ಖರೀದಿಗೆ ಭಾರತೀಯರು ಮುಗಿಬೀಳುತ್ತಿರುವುದು ಏಕೆ?
ಭಾರತದಲ್ಲಿ ಇದೇ ಏಪ್ರಿಲ್ 15 ರಿಂದ ಮೊದಲ ಸೇಲ್‌ಗೆ ಬಂದಿದ್ದ ಪ್ರೀಮಿಯಂ ಸ್ಮಾರ್ಟ್‌ಫೋನ್ 'ಹುವಾವೆ ಪಿ30 ಪ್ರೊ' ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸುತ್ತಿದೆ. ತನ್ನ ಮೊದಲೆರಡು ಫ್ಲಾಶ್‌ಸೇಲ್‌ಗಳಲ್ಲೂ ಭರ್ಜರಿ ಮಾರಾಟವಾಗಿರುವ ವಿಶ್ವದ ಮೊದಲ ಅಡ್ವಾನ್ಸ್ ಕ್ಯಾಮೆರಾ ಸ್ಮಾರ್ಟ್‌ಫೋನ್ 'ಹುವಾವೆ ಪಿ30 ಪ್ರೊ' ಇದೀಗ ದೇಶದ ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹಾಟ್ ಕೇಕ್‌ನಂತೆ ಮಾರಾಟವಾಗುತ್ತಿದೆ. ಅಂದರೆ ಹುವಾವೆ ಪಿ30 ಪ್ರೊ' ಸ್ಮಾರ್ಟ್‌ಫೋನ್ ಭಾರತೀಯರನ್ನು ಬಹುವಾಗಿ ಆಕರ್ಷಿಸುತ್ತಿದೆ.
ಹೌದು, ದೇಶದ ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 'ಹುವಾವೆ ಪಿ30' ಸ್ಮಾರ್ಟ್‌ಫೋನ್ ಹೊಸ ಅಲೆಯನ್ನೇ ಎಬ್ಬಿಸುತ್ತಿದ್ದು, 8 ಜಿಬಿ RAM ಮತ್ತು 256 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಈ ಸ್ಮಾರ್ಟ್‌ಫೋನ್ ಖರೀದಿಗೆ ಸ್ಮಾರ್ಟ್‌ಫೋನ್ ಪ್ರಿಯರು ಒಲವು ತೋರುತ್ತಿದ್ದಾರೆ. ಅಮೆಜಾನ್‌ನಲ್ಲಿ ಎಸ್‌ಕ್ಲೂಸಿವ್ ಆಗಿ ಮಾರಾಟವಾಗುತ್ತಿರುವ ಈ ಸ್ಮಾರ್ಟ್‌ಫೋನ್ ಭರ್ಜರಿ ಮಾರಾಟ ಕಾಣುತ್ತಿದ್ದು, ಈಗಾಗಲೇ ಮೊಬೈಲ್ ಖರೀದಿಸಿರುವ ಬಳಕೆದಾರರು ಈ ಫೋನಿಗೆ 5 ಸ್ಟಾರ್ ರೇಟಿಂಗ್‌ಗೆ 5 ಸ್ಟಾರ್ ಅಂಕಗಳನ್ನು ನೀಡಿದ್ದಾರೆ.

ವಿಶ್ವ ಮಾರುಕಟ್ಟೆಯಲ್ಲಿ ಹೈ ಎಂಡ್ ಪ್ರೀಮಿಯಮ್ ವಿನ್ಯಾಸದ ಚೀನಾ ಕಂಪೆನಿಯ ಸ್ಮಾರ್ಟ್‌ಫೋನ್ ಆಗಿರುವುದರಿಂದ ಈ ಸ್ಮಾರ್ಟ್‌ಫೋನ್ ಬೆಲೆಯಲ್ಲಿಯೂ ಗ್ರಾಹಕರಿಗೆ ತೃಪ್ತಿ ಇದೆ. ಹಾಗಾದರೆ, 20MP ಅಲ್ಟ್ರಾ-ವೈಡ್, 40MP ವಿಶಾಲ ಕೋನ, 8MP 5X ಟೆಲಿಫೋಟೋ ಸೆನ್ಸಾರ್‌ಗಳನ್ನು ಹೊತ್ತು ವಿಶ್ವ ಮೊಬೈಲ್ ಉದ್ಯಮದ ಮೊದಲ ಅಡ್ವಾನ್ಸ್ ಕ್ಯಾಮೆರಾ ಸ್ಮಾರ್ಟ್‌ಪೋನ್ ಆಗಿ ರೂಪತವಾಗಿರುವ ಹುವಾವೆ P30 ಪ್ರೊ ಹೇಗಿದೆ?, ಸ್ಮಾರ್ಟ್‌ಫೋನಿನ ಫೋನಿನ ಫೀಚರ್ಸ್ ಯಾವುವು?, ಬೆಲೆಗಳು ಎಷ್ಟು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹುವಾವೆ P30 ಪ್ರೊ ವಿನ್ಯಾಸ
ಹುವಾವೆ P30 ಪ್ರೊ ಇದೇ ಮೊದಲ ಬಾರಿಗೆ ವಿಶ್ವ ಮಾರುಕಟ್ಟೆಯಲ್ಲಿ ಹೈ ಎಂಡ್ ಪ್ರೀಮಿಯಮ್ ವಿನ್ಯಾಸದ ಚೀನಾ ಕಂಪೆನಿಯ ಸ್ಮಾರ್ಟ್‌ಫೋನ್ ಆಗಿದೆ. ವಿಶ್ವ ಮೊಬೈಲ್ ಉದ್ಯಮದ ಮೊಟ್ಟ ಮೊದಲ ಹೈ ಅಡ್ವಾನ್ಸ್ ಕ್ಯಾಮೆರಾ ಸ್ಮಾರ್ಟ್‌ಪೋನ್ ಇದಾಗಿರುವುರಿಂದ ಹುವಾವೆ P30 ಪ್ರೊ ಸ್ಮಾರ್ಟ್‌ಫೋನ್ ಅತ್ಯಂತ ಪ್ರೀಮಿಯಮ್ ಆಗಿ ವಿನ್ಯಾಸಗೊಂಡಿದೆ. ಬಾಗಿದ ಅಂಚುಗಳ ವಿನ್ಯಾಸದಲ್ಲಿ ಫುಲ್‌ಸ್ಕ್ರೀನ್ ಡಿಸ್‌ಪ್ಲೇ ಮೂಲಕ ಕಂದೊಳಿಸುತ್ತಿರುವ ಈ ಫೋನ್ ವಾಟರ್ ಡ್ರಾಪ್ ನೋಚ್ ಹೊಂದಿರುವುದು ಮೊಬೈಲ್ ಪ್ರಿಯರ ಪ್ರಮುಖ ಆಕರ್ಷಣೆಯಲ್ಲಿ ಒಂದು.

ಹುವಾವೆ P30 ಪ್ರೊ ಡಿಸ್‌ಪ್ಲೇ
ವಿನ್ಯಾಸವೇ ಹಾಗಿರುವಾಗ ಹುವಾವೆ P30 ಪ್ರೊ ಸ್ಮಾರ್ಟ್‌ಪೋನ್ ಡಿಸ್‌ಪ್ಲೇ ಕೂಡ ಅದ್ಬುತವಾಗಿರಲಿದೆ ಎಂದು ನೀವು ಸುಲಭವಾಗಿ ಊಹಿಸಬಹುದು. ಬಾಗಿದ ಅಂಚುಗಳು ಮತ್ತು "ವಾಟರ್-ಡ್ರಾಪ್" ದರ್ಜೆಯೊಂದಿಗೆ 6.47-ಇಂಚಿನ ಪೂರ್ಣ ಹೆಚ್‌ಡಿ+ OLED ಡಿಸ್‌ಪ್ಲೇಯನ್ನು ಹುವಾವೆ P30 ಪ್ರೊ ಹೊಂದಿದೆ. ಈ ಪೋನ್ 19.5: 9 ರ ಆಕಾರ ಅನುಪಾತದಲ್ಲಿರುವ ಡಿಸ್‌ಪ್ಲೇ 1080x2340 ಪಿಕ್ಸೆಲ್‌ಗಳ ಸಾಮರ್ಥ್ಯವನ್ನು ಹೊಂದಿರುವುದು ಮಲ್ಟಿಮೀಡಿಯಾ ಪ್ರಿಯರಿಗೆ ನಂ.1 ಆಯ್ಕೆಯ ಸ್ಮಾರ್ಟ್‌ಪೋನ್ ಆಗಬಹುದು.

ಹುವಾವೆ P30 ಪ್ರೊ ಪ್ರೊಸೆಸರ್!
ಹುವಾವೇ P30 ಪ್ರೊ ಸ್ಮಾರ್ಟ್‌ಫೋನ್ 2.6GHzನಲ್ಲಿ 2 ಕೋರ್‌ಗಳನ್ನು ಹೊಂದಿದೆ. 2 ಕೋರ್‌ಗಳು 1.92GHz ಮತ್ತು 1.8GHz ನಲ್ಲಿ ದೊರೆಯುತ್ತದೆ. ಜೊತೆಗೆ 4 ಕೋರ್‌ಗಳನ್ನು ಹೊಂದಿರುವ 2.6GHz ಆಕ್ಟಾ ಕೋರ್ HiSilicon Kirin 980 ಪ್ರೊಸೆಸರ್ ಹೊತ್ತು ಬಿಡುಗಡೆಯಾದ ಮೊಟ್ಟಮೊದಲ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಆಗಿ ಹುವಾವೇ P30 ಪ್ರೊ ಹೆಸರುಗಳಿಸಿದೆ. ಸಾಮಾನ್ಯ ಕಂಪ್ಯೂಟರ್‌ಗಿಂತಲೂ ಹೆಚ್ಚು ಕಾರ್ಯನಿರ್ವಹಣೆ ನೀಡುವ ಈ ಸ್ಮಾರ್ಟ್‌ಫೋನಿನಲ್ಲಿ 8GB RAM ನೀಡಿರುವುದನ್ನು ನೀವು ನೋಡಬಹುದು.

ಹುವಾವೆ P30 ಪ್ರೊ ಮೆಮೊರಿ
ಹುವಾವೆ P30 ಪ್ರೊ ಸ್ಮಾರ್ಟ್‌ಪೋನ್ ಆಂಡ್ರಾಯ್ಡ್ 9 ಆಧಾರಿತ EMUI 9.1 ಮೂಲಕ ರನ್ ಆಗಲಿದ್ದು, 8GB RAM ಜೊತೆಗೆ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದಾದ 128GB ಆಂತರಿಕ ಮೆಮೊರಿಯನ್ನು ಹೊಂದಿದೆ. ಡ್ಯುಯಲ್-ಸಿಮ್ (ಜಿಎಸ್ಎಂ ಮತ್ತು ಜಿಎಸ್ಎಂ) ಸ್ಮಾರ್ಟ್‌ಫೋನ್ ಇದಾಗಿದ್ದು, ಫೋನ್ ನ್ಯಾನೋ ಸಿಮ್ ಮತ್ತು ನ್ಯಾನೋ-ಸಿಮ್ ಕಾರ್ಡ್ಗಳನ್ನು ಸ್ವೀಕರಿಸುತ್ತದೆ.

ಹುವಾವೆ P30 ಪ್ರೊ ಕ್ಯಾಮೆರಾ
ಮೊದಲೇ ಹೇಳಿದಂತೆ, 40MP ವಿಶಾಲ ಕೋನ, 8MP 5X ಟೆಲಿಫೋಟೋ ಸೇರಿದಂತೆ 5x ಪರಿದರ್ಶಕ-ರೀತಿಯ ಆಪ್ಟಿಕಲ್ ಝೂಮ್ ಮತ್ತು ಹಿಂದೆ ನಾಲ್ಕು ಕ್ಯಾಮರಾಗಳನ್ನು ಹೊಂದಿರುವ ವಿಶ್ವದ ಮೊದಲ ಫೋನ್ ಆಗಿ ಹುವಾವೇ P30 ಪ್ರೊ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಎಫ್ / 2.0 ಅಪಾರ್ಚರ್ ಜೊತೆಗೆ 32 ಮೆಗಾಪಿಕ್ಸೆಲ್ ಕ್ಯಾಮರಾ ಸೆಲ್ಫೀ ಕ್ಯಾಮೆರಾವನ್ನು ನಿಡಲಾಗಿದೆ.

ಹುವಾವೆ P30 ಪ್ರೊ ಇತರೆ ಫೀಚರ್ಸ್
ಹುವಾವೆ P30 ಪ್ರೊ 4,200 mAh ಸಾಮರ್ಥ್ಯದ ಶಕ್ತಿಶಾಲಿ ಬ್ಯಾಟರಿಯಿಂದ ಚಾಲಿತವಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ವೈರ್ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. LTE ಬಳಸುವ ಬ್ಯಾಂಡ್ 40 ಬೆಂಬಲ, Wi-Fi 802.11 ಬ್ಲೂಟೂತ್ v5.00, NFC, ಇನ್ಫ್ರಾರೆಡ್, ಯುಎಸ್ಬಿ ಟೈಪ್-ಸಿ ಮತ್ತು 4ಜಿ ಒಳಗೊಂಡಂತೆ, ಹುವಾವೆ P30 ಪ್ರೊ ಫೇಸ್ ಅನ್ಲಾಕ್ ಅನ್ನು ಬೆಂಬಲಿಸುತ್ತದೆ.

ಹುವಾವೆ P30 ಪ್ರೊ ಬೆಲೆ ಮತ್ತು ಆಫರ್ಸ್
ಹುವಾವೆ ಪಿ30 ಪ್ರೊ ಸ್ಮಾರ್ಟ್‌ಫೋನ್ ಅರೋರಾ ಮತ್ತು ಬ್ರೀಥಿಂಗ್ ಕ್ರಿಸ್ಟ್ ಬಣ್ಣದಲ್ಲಿ ಲಭ್ಯವಾಗುತ್ತಿದ್ದು, 8 ಜಿಬಿ RAM ಮತ್ತು 256 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಈ ಸ್ಮಾರ್ಟ್‌ಪೋನ್ 71,990 ರೂಪಾಯಿ ಬೆಲೆಗೆ ಲಭ್ಯವಾಗುತ್ತಿದೆ. ಆಫರ್‌ನ ಭಾಗವಾಗ, ಈ ಫೋನ್ ಮೇಲೆ 2000 ರೂಪಾಯಿ ರಿಯಾಯಿತಿ ಹಾಗೂ ಆಫರ್ ಬೆಲೆಯಲ್ಲಿ ಹುವಾವೆ ಸ್ಮಾರ್ಟ್‌ವಾಚ್ ಕೂಡ ಲಭ್ಯವಾಗಲಿದೆ. ಈ ವಾಚ್‌ನ ಮೂಲ ಬೆಲೆ 15,990 ರೂಪಾಯಿ ಆಗಿದ್ದು, ಇದನ್ನು ಫೋನ್ ಜೊತೆ ಕೇವಲ 2000ಕ್ಕೆ ಖರೀದಿಸಬಹುದಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470