ಇಂಟರ್‌ನೆಟ್‌ನಿಂದಲೇ ವಿಶ್ವದ ಅತ್ಯಂತ ಶ್ರೀಮಂತರಾದ ದಿಗ್ಗಜರು ಇವರು!!
ನೀವೇನಾದರೂ ಈ ಜಗತ್ತಿನ ಅತ್ಯಂತ ಶ್ರೀಮಂತರು ಯಾರು ಎಂಬ ಪಟ್ಟಿಯನ್ನು ಹುಡುಕಿದರೆ, ಆ ಪಟ್ಟಿಯಲ್ಲಿ ಹೆಚ್ಚಿನ ಶ್ರೀಮಂತರ ಸಂಪತ್ತಿನ ಮೂಲವು ತಂತ್ರಜ್ಞಾನ ಸಂಸ್ಥೆಯಾಗಿರುತ್ತದೆ ಎಂಬುದನ್ನು ನೀವು ಗಮನಿಸಿರಬಹುದು. ನೀವು ನೋಡುವ ಟಾಪ್ 10 ಪಟ್ಟಿಯಲ್ಲಿ ಕನಿಷ್ಠ 5 ಜನರು ಇಂಟರ್‌ನೆಟ್‌ನಿಂದಲೇ ಶ್ರೀಮಂತರಾಗಿತ್ತಾರೆ.!
ಕಳೆದ ಕೆಲ ವರ್ಷಗಳಿದಲೂ ತಂತ್ರಜ್ಞಾನ ಸಂಸ್ಥೆಯನ್ನು ಹೊಂದಿರುವ ಶ್ರೀಮಂತರ ಸಂಪತ್ತಿನ ನಿವ್ವಳ ಮೌಲ್ಯ ವೇಗವಾಗಿ ಬೆಳೆಯುತ್ತಿರುವುದನ್ನು ನಾವು ನೋಡಬಹುದು. ಉದಾಹರಣೆಗೆ ಪ್ರಖ್ಯಾತ ಇ ಕಾಮರ್ಸ್ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೊಸ್ ಪ್ರಪಂಚದ ಅತ್ಯಂತ ಶ್ರೀಮಂತನಾಗಿದ್ದರೆ, ಫೇಸ್‌ಬುಕ್ ಸಂಸ್ಥಾಪಕ ಜುಕರ್‌ಬರ್ಗ್ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿ.!

ಹಾಗಾಗಿ, ಇಂಟರ್‌ನೆಟ್ ಆಧಾರಿತ ಇ-ಕಾಮರ್ಸ್ ಮತ್ತು ಸೋಷಿಯಲ್ ನೆಟ್ವರ್ಕಿಂಗ್ ಉದ್ಯಮವು ಇಂಟರ್ನೆಟ್ ಉದ್ಯಮವನ್ನು ಅಭಿವೃದ್ಧಿಪಡಿಸುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಾದರೆ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಾಗಿರುವ ತಂತ್ರಜ್ಞಾನ ಸಂಸ್ಥೆಯ ಒಡೆಯರು ಯಾರು ಅವರ ಆಸ್ತಿ ಮೌಲ್ಯ ಎಷ್ಟಿದೆ ಎಂಬ ಕುತೋಹಲದ ಮಾಹಿತಿಯನ್ನು ಮುಂದೆ ತಿಳಿಯಿರಿ.

1. ಜೆಫ್ ಬೆಜೊಸ್ ($ 100 ಬಿಲಿಯನ್)
ಪ್ರಪಂಚದ ಅತಿದೊಡ್ಡ ಅಂತರ್ಜಾಲ ಆದಾಯ ಕಂಪೆನಿ ಅಮೆಜಾನ್ ಒಡೆಯ ಜೆಫ್ ಬೆಜೊಸ್ ಇಂದು ವಿಶ್ವದ ನಂಬರ್ ಒನ್ ಶ್ರೀಮಂತ. 1994 ರಲ್ಲಿ ಅಮೆಜಾನ್ ಎಂಬ ಚಿಲ್ಲರೆ ಆನ್ಲೈನ್ ಶಾಪಿಂಗ್ ತಾಣವನ್ನು ಸ್ಥಾಪಿಸಿದ ಜೆಫ್ ಬೆಜೊಸ್ ಇಂದು 100 ಬಿಲಿಯನ್ ಡಾಲರ್ ಒಡೆಯನಾಗಿದ್ದಾರೆ. ಬೆಜೊಸ್ ಬ್ಲೂ ಒರಿಜಿನ್ ಮತ್ತು ಬೆಜೊಸ್ ಎಕ್ಸ್ಪೆಡಿಶನ್ಸ್ ಎಂಬ ಎರಡು ಕಂಪನಿಗಳನ್ನು ಸಹ ಸ್ಥಾಪಿಸಿದ್ದಾರೆ.

2 ಮಾರ್ಕ್ ಜುಕರ್‌ಬರ್ಗ್ ($ 75 ಶತಕೋಟಿ)
ಪ್ರಪಂಚದ ಅತಿದೊಡ್ಡ ಸಾಮಾಜಿಕ ನೆಟ್ವರ್ಕಿಂಗ್ ಜಾಲತಾಣ ಆಗಿರುವ ಫೇಸ್‌ಬುಕ್ ಸಹ-ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ತನ್ನ ಕಾಲೇಜು ಗೆಳೆಯರೊಂದಿಗೆ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಫೇಸ್‌ಬುಕ್ ಅನ್ನು ಪ್ರಾರಂಭಿಸಿದ ಜುಕರ್‌ಬರ್ಗ್ ಜಗತ್ತಿನಲ್ಲಿ ಕಿರಿಯ ಅತ್ಯಂತ ಶ್ರೀಮಂತ ಇಂಟರ್ನೆಟ್ ಉದ್ಯಮಿಯಾಗಿದ್ದಾರೆ.

3 ಲ್ಯಾರಿ ಪೇಜ್ ($ 53.3 ಶತಕೋಟಿ)
ಗೂಗಲ್ ಸಹ ಸಂಸ್ಥಾಪಕ ಮತ್ತು ಆಲ್ಫಾಬೆಟ್ ಇಂಕ್ ಕಂಪೆನಿಯ ಸಿಇಒ ಆಗಿರುವ ಲ್ಯಾರಿ ಪೇಜ್ 53 ಬಿಲಿಯನ್ ಡಾಲರ್ ಆಸ್ತಿಯನ್ನು ಸಂಪಾದಿಸಿದ್ದಾರೆ. ಗೂಗಲ್‌ನ ಉತ್ಪನ್ನಗಳು ಮತ್ತು ಸೇವೆಗಳು ಇಂಟರ್ನೆಟ್ ಆಧರಿಸಿವೆ, ಕಂಪನಿಯ ಪ್ರಮುಖ ಆದಾಯದ ಮೂಲವು ಆನ್ಲೈನ್ ಜಾಹೀರಾತಿನ ಮೂಲಕ ಬರುತ್ತಿದೆ.

4. ಸರ್ಜೆ ಬ್ರಿನ್ ($ 51.1 ಶತಕೋಟಿ)
ಗೂಗಲ್‌ನ ಮತ್ತೋರ್ವ ಸಹ-ಸಂಸ್ಥಾಪಕ ಮತ್ತು ಆಲ್ಫಾಬೆಟ್ ಇಂಕ್ ಕಂಪೆನಿಯ ಅಧ್ಯಕ್ಷರಾಗಿರುವ ಸೆರ್ಗೆ ಬ್ರಿನ್ಸ ಅವರ ಒಟ್ಟು ಆಸ್ತಿ ಮೌಲ್ಯ ಒಟ್ಟು 51.1 ಬಿಲಿಯನ್ ಡಾಲರ್‌ಗಳಾಗಿವೆ. ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಲ್ಯಾರಿ ಪೇಜ್ ಮತ್ತು ಸರ್ಜೆ ಬ್ರಿನ್ ಅವರು ಹುಟ್ಟಿಹಾಕಿದ ಗೂಗಲ್ ಕಂಪೆನಿ ಈಗ ವಿಶ್ವದ ಅತ್ಯಂತ ಜನಪ್ರಿಯ ವೆಬ್ ಹುಡುಕಾಟ ಎಂಜಿನ್ ಆಗಿದೆ.


4. ಜಾಕ್ ಮಾ ($ 43.5 ಶತಕೋಟಿ)
ಚೀನಾದ ನಂಬರ್ ಒನ್ ಶ್ರೀಮಂತ ಜಾಕ್ ಮಾ ಅವರು ಚೀನಾದ ಪ್ರಖ್ಯಾತ ಇ ಕಾಮರ್ಸ್ ಜಾಲತಾಣ ಆಲಿಬಾಬ ಕಂಪೆನಿಯ ಸಂಸ್ಥಾಪಕರು. ಒಂದು ಕಾಲದಲ್ಲಿ ಬೀದಿಯಲ್ಲಿ ಪುಸ್ತಕ ಮಾರುತ್ತಿದ್ದ ಜಾಕ್ ಮಾ ಅವರು ಇಂದು 43.5 ಬಿಲಿಯನ್ ಡಾಲರ್ ಒಡೆಯರಾಗಿದ್ದಾರೆ. ಇಂಟರ್‌ನೆಟ್‌ನಿಂದ ಇವರು ಗಳಿಸಿಕೊಂಡಿದ್ದು ಅಪಾರ.!


Click it and Unblock the Notifications








