Home
ಸುದ್ದಿಜಾಲ

ಮುಂಬರುವ ಐಫೋನ್‌ಗಳ ಜೊತೆಗೆ ಬರುತ್ತಿದೆ ಕಡಿಮೆ ಬೆಲೆಯ iPhone 17 Air!

ಟೆಕ್ ದೈತ್ಯ Apple ಕಂಪನಿಯು ತನ್ನ ಜನಪ್ರಿಯ ಐಫೋನ್ ಸರಣಿಗೆ ಮತ್ತೊಂದು ಆಕರ್ಷಕ ಮಾದರಿಯ ಸ್ಮಾರ್ಟ್‌ಫೋನನ್ನು ಸೇರಿಸಲು ಸಿದ್ಧವಾಗುತ್ತಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಆಪಲ್ ತನ್ನ ಮುಂಬರುವ iPhone 17, iPhone 17 Pro ಮತ್ತು iPhone 17 Pro Max ಸಾಧನಗಳ ಜೊತೆಗೆ, iPhone 17 Air ಎಂಬ ಹೊಚ್ಚ ಹೊಸ ಮಾದರಿಯ ಸ್ಮಾರ್ಟ್‌ಫೋನನ್ನು 2025 ರಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಅಧಿಕೃತ ಪ್ರಕಟಣೆಗೆ ಇನ್ನೂ ಸಮಯವಿದ್ದರೂ, ಈಗಾಗಲೇ ಹರಿದಾಡುತ್ತಿರುವ ಮಾಹಿತಿಗಳು ಈ ಹೊಸ iPhone 17 Air ಸ್ಮಾರ್ಟ್‌ಫೋನಿನ ವಿಶಿಷ್ಟತೆಗಳ ಬಗ್ಗೆ ಕುತೂಹಲ ಕೆರಳಿಸಿವೆ.

ಹಲವಾರು ಸೋರಿಕೆಗಳು ಮತ್ತು ಆನ್‌ಲೈನ್ ವರದಿಗಳ ಪ್ರಕಾರ, iPhone Mini ಮತ್ತು iPhone Plus ನಂತಹ ಹಿಂದಿನ ಪ್ರಯತ್ನಗಳಂತೆಯೇ ಈ ಬಾರಿ iPhone 17 Air ಎಂಬ ಹೊಚ್ಚ ಹೊಸ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲಾಗುತ್ತದೆ. ಇದಕ್ಕಿಂತಲೂ ವಿಶೇಷ ಸುದ್ದಿ ಎಂದರೆ, ಈ iPhone 17 Air ಸ್ಮಾರ್ಟ್‌ಫೋನ್ Apple ಇದುವರೆಗೆ ನಿರ್ಮಿಸಿದ ಅತ್ಯಂತ ತೆಳುವಾದ ಐಫೋನ್ ಆಗಿರಲಿದೆ. ಈ ಸಾಧನವು ಕೇವಲ 5.5mm ನಿಂದ 6mm ರವರೆಗೆ ಇರಬಹುದೆಂದು ಅಂದಾಜಿಸಲಾಗಿದ್ದು, ಒಂದು ವೇಳೆ ಇದು ನಿಜವಾದರೆ iPhone 17 Air ಸ್ಮಾರ್ಟ್‌ಫೋನ್ ತನ್ನ ತೆಳುವಾದ ವಿನ್ಯಾಸದಿಂದ ಗಮನ ಸೆಳೆಯಲಿದೆ.

ಇದೀಗ ಸೋರಿಕೆಯ ಮಾಹಿತಿಯ ಪ್ರಕಾರ, iPhone 17 Air ಸ್ಮಾರ್ಟ್‌ಫೋನಿನ ತೆಳುವಾದ ವಿನ್ಯಾಸವು ಕೆಲವು ಹೊಂದಾಣಿಕೆಗಳನ್ನು ಬಯಸಬಹುದು. ಇದು ಕೇವಲ ಒಂದು 48-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿರಬಹುದು. ಇದರಲ್ಲಿ ಆಪ್ಟಿಕಲ್ ಜೂಮ್ ಇರುವುದಿಲ್ಲ ಮತ್ತು ಇದರ ಸ್ಪೀಕರ್ ಹಾಗೂ ಮುಂಭಾಗದ ಕ್ಯಾಮೆರಾದ ಗುಣಮಟ್ಟವು ಪ್ರೀಮಿಯಂ ಮಾದರಿಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆ ಇರಬಹುದು. ಕ್ಯಾಮೆರಾವನ್ನು ಹಿಂಭಾಗದಲ್ಲಿ ಅಗಲವಾದ ಆಯತಾಕಾರದ ವಿನ್ಯಾಸದಲ್ಲಿ ಇರಿಸಲಾಗುವುದು ಎಂದು ಹೇಳಲಾಗುತ್ತಿದೆ, ಇದು Apple ನ ಸಾಂಪ್ರದಾಯಿಕ ವಿನ್ಯಾಸ ಶೈಲಿಯಿಂದ ಭಿನ್ನವಾಗಿದೆ.

ಇಷ್ಟೇ ಅಲ್ಲದೆ, iPhone 17 Air ಸ್ಮಾರ್ಟ್‌ಫೋನ್ 6.6-ಇಂಚಿನಿಂದ 6.7-ಇಂಚಿನ ಡಿಸ್ಪ್ಲೇಯನ್ನು ಹೊಂದಿರಬಹುದೆಂದು ವರದಿಯಾಗಿದೆ. ಇದು ನಿರೀಕ್ಷಿತ 6.3-ಇಂಚಿನ iPhone 17 ಗಿಂತ ದೊಡ್ಡದಾಗಿದೆ ಮತ್ತು 6.9-ಇಂಚಿನ ಪ್ರೊ ಮ್ಯಾಕ್ಸ್ ಗಿಂತ ಸ್ವಲ್ಪ ಚಿಕ್ಕದಾಗಿದೆ. ಇದರರ್ಥ ದೊಡ್ಡದಾದ ಪರದೆಯನ್ನು ಬಯಸುವ ಆದರೆ ಅತಿಯಾದ ಗಾತ್ರವನ್ನು ಇಷ್ಟಪಡದ ಬಳಕೆದಾರರನ್ನು Apple ಗುರಿಯಾಗಿಸಿಕೊಂಡಿರಬಹುದು. ಕುತೂಹಲಕಾರಿಯಾಗಿ, ಈ ಸ್ಮಾರ್ಟ್‌ಫೋನಿನ ಹೊಸ ಕ್ಯಾಮೆರಾ ವಿನ್ಯಾಸವು ಈ ಹಿಂದೆ ಕೇಳಿಬಂದಿದ್ದ ಉನ್ನತ-ಕೇಂದ್ರಿತ ಕ್ಯಾಮೆರಾ ವಿನ್ಯಾಸದ ವರದಿಗಳಿಗೆ ವಿರುದ್ಧವಾಗಿದೆ ಎಂದು ಸಹ ಹೇಳಲಾಗಿದೆ.

ಮುಂಬರುವ ಐಫೋನ್‌ಗಳ ಜೊತೆಗೆ ಬರುತ್ತಿದೆ ಕಡಿಮೆ ಬೆಲೆಯ iPhone 17 Air!

ಕಾರ್ಯಕ್ಷಮತೆಯ ವಿಷಯಕ್ಕೆ ಬಂದರೆ, iPhone 17 Air ಸ್ಮಾರ್ಟ್‌ಫೋನ್ ಸ್ಟ್ಯಾಂಡರ್ಡ್ A19 ಚಿಪ್‌ನೊಂದಿಗೆ ಬರಬಹುದೆಂದು ನಿರೀಕ್ಷಿಸಲಾಗಿದೆ. ಅದೇ A19 ಪ್ರೊ ಚಿಪ್ ಅನ್ನು ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾದರಿಗಳಲ್ಲಿ ಬಳಸಲಾಗುವುದು ಎಂದು ಹೇಳಲಾಗುತ್ತಿದೆ. ಈ ವ್ಯತ್ಯಾಸವು Apple ಏರ್ ಮಾದರಿಯನ್ನು ಮಧ್ಯಮ ಶ್ರೇಣಿಯ ವಿಶೇಷಣಗಳೊಂದಿಗೆ, ಕೈಗೆಟುಕುವ ಬೆಲೆಯಲ್ಲಿ ಮತ್ತು ವಿನ್ಯಾಸಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವ ಫೋನ್ ಆಗಿ ಮಾಡಲು ಸಹಾಯ ಮಾಡುತ್ತದೆ. ಒಂದು ವೇಳೆ ಈ ಸ್ಮಾರ್ಟ್‌ಫೋನ್ A19 ಪ್ರೊ ಚಿಪ್ ಹೊಂದಿದ್ದರೆ ಮೊಬೈಲ್ ಉದ್ಯಮದಲ್ಲಿ ಹೊಸ ಸಂಚಲನ ಮೂಡಿಸಲು ಸಹ ಸಾಧ್ಯವಿದೆ

Apple ಸಾಮಾನ್ಯವಾಗಿ ತನ್ನ ವಾರ್ಷಿಕ ಕಾರ್ಯಕ್ರಮದಲ್ಲಿ ಹೊಸ ಐಫೋನ್ ಸರಣಿಯನ್ನು ಅನಾವರಣಗೊಳಿಸುತ್ತದೆ. ಅದರಂತೆ, iPhone 17 ಸರಣಿಯು ಸೆಪ್ಟೆಂಬರ್ 2025 ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಅಲ್ಲಿಯವರೆಗೆ, ಈ ಎಲ್ಲಾ ಮಾಹಿತಿಯನ್ನು ಕೇವಲ ಊಹೆಗಳೆಂದು ಪರಿಗಣಿಸುವುದು ಸೂಕ್ತ. ಆದರೆ, iPhone 17 Air ವದಂತಿಗಳಂತೆ ನಿಜವಾಗಿಯೂ ಮಾರುಕಟ್ಟೆಗೆ ಬಂದರೆ, ಅದು ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾಗುವ ಅತ್ಯಂತ ವಿಶಿಷ್ಟವಾದ ಐಫೋನ್‌ಗಳಲ್ಲಿ ಒಂದಾಗುವುದರಲ್ಲಿ ಸಂಶಯವಿಲ್ಲ. ಮತ್ತು Apple ಅಂತಿಮವಾಗಿ ಯಾವ ವಿನ್ಯಾಸವನ್ನು ಅಳವಡಿಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Best Mobiles in India

English summary
Apple is said to be developing a new model for its iPhone lineup — the iPhone 17 Air. It is expected to be revealed in 2025, alongside the iPhone 17, 17 Pro, and 17 Pro Max. Here are rumored features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+