Subscribe to Gizbot

ಪ್ರಪಂಚದ ಅದ್ಭುತ ಸೋಲಾರ್‌ ಫಾರ್ಮ್‌ಗಳು: ನೀವೆಂದು ನೋಡಿಲ್ಲ

Written By:

ಇಂದು ನೈಸರ್ಗಿಕ ಸಂಪನ್ಮೂಲ ದಿನದಿಂದ ದಿನಕ್ಕೆ ಬರಿದಾಗುತ್ತಾ ಇದೆ. ಸಾಮಾನ್ಯಬಾಗಿ ಪ್ರತಿ ಬೇಸಿಕೆ ಸಮಯದಲ್ಲಿ ಎದುರಿಸುವ ದೊಡ್ಡ ಸಮಸ್ಯೆ ಎಂದರೆ ಅದು ವಿದ್ಯುತ್‌ ಸಮಸ್ಯೆ. ಕೃಷಿ ಕ್ಷೇತ್ರಕ್ಕೆ, ಗೃಹ ಬಳಕೆಯಲ್ಲಿ, ಕಾರ್ಖಾನೆಗಳಲ್ಲಿ ವಿದ್ಯುತ್‌ ಇಲ್ಲದೇ ಯಾವ ಕೆಲಸವು ನೆಡೆಯುವುದಿಲ್ಲಾ. ಎಲ್ಲಾ ನೀರಿನ ಮೂಲಗಳು ಸಹ ಬತ್ತಿಹೋಗುವುದರಿಂದ ವಿದ್ಯುತ್‌ ಸಮಸ್ಯೆ ಪ್ರತಿ ಬೇಸಿಗೆಯಲ್ಲೂ ಸಹ ಉಂಟಾಗುವ ಸಮಸ್ಯೆ. ಈ ಕಾರಣದಿಂದಲೇ ಟೆಕ್ನಾಲಜಿ ಕ್ಷೇತ್ರದ ದಿಗ್ಗಜ ವಿಜ್ಞಾನಿಗಳು ಹಲವು ದಶಕಗಳ ಹಿಂದೆಯೇ ನವೀಕರಿಸಬಹುದಾದ ಸಂಪನ್ಮೂಲ ಬಳಕೆಗಳಲ್ಲಿ ಹಲವು ಮಾರ್ಗಗಳನ್ನು ಅಭಿವೃದ್ದಿಪಡಿಸಿದ್ದಾರೆ. ವಿಶೇಷ ಅಂದ್ರೆ ಭಾರತದಲ್ಲಿ ಮೊದಲ ಬಾರಿಗೆ ಕೊಚ್ಚಿನ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಸೋಲಾರ್‌ ಪವರ್‌ ಆಧಾರಿತವಾಗಿದೆ.

ವಿದ್ಯುತ್‌ ಸಮಸ್ಯೆ ನೀಗಿಸಲು ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ದಿ ಪಡಿಸಿದ ಮಾರ್ಗಗಳೆಂದರೆ ಸೋಲಾರ್‌ ಪ್ಯಾನೆಲ್, ಪವನ ಶಕ್ತಿ. ಇವೆರಡು ಸಹ ನವೀಕರಿಸಬಹುದಾದ ಇಂಧನ ಮೂಲಗಳು. ಇಂದು ವಿದ್ಯುತ್‌ ಸಮಸ್ಯೆಗೆ ಪರಿಹಾರವಾಗಿ ಪ್ರಪಂಚದಾದ್ಯಂತ ಸೋಲಾರ್‌ ಪ್ಯಾನೆಲ್‌ಗಳನ್ನು ಬಳಸಲಾಗುತ್ತಿದೆ. ಸೂರ್ಯನ ಶಾಖದಿಂದ ಶಕ್ತಿ ಪಡೆಯುವ ಈ ಮಾರ್ಗ ದೀರ್ಘಕಾಲ ವಿದ್ಯುತ್‌ ಸಮಸ್ಯೆಯಿಂದ ಪಾರಾಗಲು ಇರುವ ಉತ್ತಮ ಮಾರ್ಗವಾಗಿದೆ. ಅಂದಹಾಗೆ ಸೋಲಾರ್‌ ಪ್ಯಾನೆಲ್ಸ್‌ ಬಗ್ಗೆ ಇಷ್ಟೊಂದು ಮಾಹಿತಿ ಹೇಳಲು ಕಾರಣವೆಂದರೆ ಇಂದು ಸೋಲಾರ್ ಪ್ಯಾನೆಲ್‌ ಅಳವಡಿಸಿ ಹಲವು ಕಂಪನಿಗಳು ಸೋಲಾರ್‌ ಕೃಷಿಯನ್ನೇ ಪ್ರಾರಂಭಿಸಿವೆ. ಸೋಲಾರ್‌ ಕೃಷಿಯು ಸಹ ಒಂದು ಉದ್ಯಮ ರೀತಿಯಲ್ಲಿ ಹಲವು ಕಡೆ ಅಭಿವೃದ್ದಿ ಗೊಳ್ಳುತ್ತಿದೆ. ಅದಕ್ಕೆ ಉದಾಹರಣೆಯಾಗಿ ಇಂದಿನ ಲೇಖನದಲ್ಲಿ ಪ್ರಪಂಚದಾದ್ಯಂತ ಇರುವ ಪ್ರಖ್ಯಾತ ಸುಂದರವಾದ ಸೋಲಾರ್‌ ಕೃಷಿಗಳು ಹೇಗಿದೆ ಎಂಬುದನ್ನು ನಿಮಗೆ ತಿಳಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಕಾಟ್‌ಲ್ಯಾಂಡ್‌ನ

1

ಪ್ರಪಂಚದಲ್ಲೇ ಅತ್ಯಂತ ಸುಂದರವಾಗಿರುವ ಸೋಲಾರ್‌ ಫಾರ್ಮ್‌ ಎಂದರೆ ಸ್ಕಾಟ್‌ಲ್ಯಾಂಡ್‌ನಲ್ಲಿನ "MW 2" ಸೋಲಾರ್‌ ಫಾರ್ಮ್‌. ಇದು ವಿಶಾಲ ದ್ವೀಪದಲ್ಲಿ ಹೃದಯಾಕಾರದಲ್ಲಿ ವಿನ್ಯಾಸ ಹೊಂದಿ ನಿರ್ಮಾಣಗೊಂಡಿದೆ. ಇದನ್ನು ನಿರ್ಮಾಣ ಮಾಡಿದಾಗ 750 ಮನೆಗಳಿಗೆ ವಿದ್ಯುತ್‌ ನೀಡಲು ಯೋಜಿಸಲಾಗಿತ್ತು. ಆದರೇ ಈಗ ಅಧಿಕ ವಿದ್ಯುತ್‌ ರವಾನೆ ಮಾಡಲಾಗುತ್ತಿದೆ.

 ನೆವೆಡಾದಲ್ಲಿರುವ

2

ನೆವೆಡಾ'ದಲ್ಲಿರುವ ಬೃಹತ್‌ 'ಕ್ರೆಸೆಂಟ್‌ ಡನ್ಸ್‌" ಅನ್ನು ಲಾಸ್‌ ವೆಗಾಸ್‌'ನ ಮರುಭೂಮಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದನ್ನು 2014'ರಲ್ಲಿ ನಿರ್ಮಾಣ ಮಾಡಲಾಗಿದೆ. ಇದರ ಮೊದಲ ಪ್ರಯೋಗದಲ್ಲೇ ಗಾಳಿಯಲ್ಲಿ 130 ಪಕ್ಷಿಗಳು ಅಘಾತಕ್ಕೆ ಒಳಗಾಗಿದ್ದವು. ನಂತರ ಸಂಶೋಧಕರು ಸಮಸ್ಯೆ ಬಗೆಹರಿಸಿದರು.

ಸೋಲಾರ್‌ ಫಾರ್ಮ್‌ ಇನ್‌ ಸ್ಪೇನ್‌

3

ಚಿತ್ರದಲ್ಲಿ ಕುತೂಹಲ ವಿನ್ಯಾಸ ಹೊಂದಿರುವ ಸ್ಪ್ಯಾನಿಶ್‌ ಸೋಲಾರ್‌ ಪ್ಲಾಂಟ್‌ 20 MW ಪವರ್‌ ಉತ್ಪಾದಿಸುತ್ತದೆ. ಇದು 2009 ರಲ್ಲಿ ನಿರ್ಮಾಣವಾಗಿದೆ. 10,000 ಮನೆಗಳಿಗೆ ವಿದ್ಯುತ್‌ ನೀಡುವ ಸಾಮರ್ಥ್ಯ ಹೊಂದಿದೆ.

ಫೋಟೋವೋಲ್ಟಿಕ್‌ ಪ್ಲಾಂಟ್‌- ಕ್ಯಾಲಿಫೋರ್ನಿಯಾ

4

ಕ್ಯಾಲಿಫೋರ್ನಿಯಾದಲ್ಲಿನ ಈ ಟೊಪಜ್‌ ಸೋಲಾರ್ ಫಾರ್ಮ್‌ ಅನ್ನು ಪ್ಲೇನ್‌ ಕ್ಯಾರಿಸಿಯಲ್ಲಿ ನಿರ್ಮಾಣ ಮಾಡಲಾಗಿದೆ. 550 ಮೆಗಾ ವ್ಯಾಟ್‌ ಪವರ್ ಉತ್ಪಾದಿಸಲಿದ್ದು, 180,000 ಮನೆಗಳಿಗೆ ವಿದ್ಯುತ್‌ ನೀಡಬಲ್ಲದು.

ಡಿಸ್ನಿ ಸೋಲಾರ್‌ ಫಾರ್ಮ್‌

5

ಅಂದಹಾಗೆ ಡಿಸ್ನಿಯ ಈ ಸೋಲಾರ್‌ ಫಾರ್ಮ್‌ ಇನ್ನೂ ಸಹ ನಿರ್ಮಾಣ ಹಂತದಲ್ಲಿದೆ. ಇದನ್ನು ಫ್ಲೊರಿಡಾದ '' ವಾಲ್ಟ್ ಡಿಸ್ನಿ ವರ್ಲ್ಡ್‌'' ರೆಸಾರ್ಟ್‌ ಹತ್ತಿರ ನಿರ್ಮಿಸಲಾಗುತ್ತಿದೆ. ಇದು 48,000 ಸೋಲಾರ್‌ ಪ್ಯಾನೆಲ್‌ಗಳನ್ನು ಹೊಂದಿದೆ.

 ಟೆನ್ನೆಸ್ಸಿಯ ಸೋಲಾರ್‌ ಫಾರ್ಮ್‌

6

ದಕ್ಷಿಣ ಟೆನ್ನೆಸ್ಸಿಯ ಛತ್ತಗೂನ ವಿಮಾನ ನಿಲ್ದಾಣದಲ್ಲಿ ಈ ಸೋಲಾರ್ ಫಾರ್ಮ್‌ ಅಳವಡಿಸಲಾಗಿದೆ. ಈ ಪ್ರದೇಶದಲ್ಲಿ ಒಟ್ಟಾರೆ ಎರಡು ಹಂತದಲ್ಲಿ 7000 ಕ್ಕಿಂತ ಅಧಕ ಸೋಲಾರ್‌ ಪ್ಯಾನೆಲ್‌ಗಳನ್ನು ಅಳವಡಿಸಲಾಗಿದೆ. ಇಲ್ಲಿ ಒಟ್ಟಾರೆ 535 ವ್ಯಾಟ್‌ ವಿದ್ಯುತ್‌ ಉತ್ಪಾದಿಸಲಾಗುತ್ತದೆ.

 ಕೊಚ್ಚಿನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

7

ಅಂದಹಾಗೆ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಕೊಚ್ಚಿನ್‌'ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಸೋಲಾರ್‌ ಪ್ಯಾನೆಲ್‌ ಆಧಾರಿತವಾಗಿದೆ.

ಕೊಚ್ಚಿನ್‌ ಸೋಲಾರ್ ಪವರ್‌ ಆಧಾರಿತ ವಿಮಾನ ನಿಲ್ದಾಣ

8

ಸುತ್ತಲು ಹಸಿರಾಗಿರುವ ಸ್ವಚ್ಛ ಪರಿಸರದಲ್ಲಿ 46,000 ಸೋಲಾರ್‌ ಪ್ಯಾನೆಲ್‌ ಅಳವಡಿಸಿ ವಿದ್ಯುತ್‌ ಅನ್ನು ಪಡೆಯಲಾಗುತ್ತಿದೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಅಂತು ಇಂತು ಬಂತು ಸೋಲಾರ್‌ ಬೈಕ್: ಚಾಲನೆಗೆ ಪೆಟ್ರೋಲ್‌ ಬೇಕಿಲ್ಲ

ಭಾರತದ ಸೋಲಾರ್ ವಿಮಾನ ನಿಲ್ದಾಣ ವಿಶ್ವದಲ್ಲೇ ಪ್ರಥಮ

ಶಾಲೆ ಬಿಟ್ಟು ವಿದ್ಯುತ್‌ ರಹಿತ ಮಣ್ಣಿನ ಫ್ರಿಜ್ ತಯಾರಿಸಿದ ಭಾರತೀಯ

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
THE MOST BEAUTIFUL SOLAR FARMS IN THE WORLD. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot