Home
ಸುದ್ದಿಜಾಲ

ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಆಗಮಿಸಲಿದೆ moto g85 ಸ್ಮಾರ್ಟ್‌ಫೋನ್! ಬೆಲೆ, ಫೀಚರ್ಸ್‌ ತಿಳಿಯಿರಿ

ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಮೊಟೊರೊಲಾ (Motorola) ಸಂಸ್ಥೆಯ ಮೊಬೈಲ್‌ಗಳಿಗೆ ಭಾರೀ ಬೇಡಿಕೆ ಇದೆ. ತನ್ನ ವಿಭಿನ್ನ ಹಾಗೂ ವಿಶೇಷ ಫೀಚರ್ಸ್‌ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಈ ಸ್ಮಾರ್ಟ್‌ಫೋನ್‌ಗಳು ಯಶಸ್ವಿಯಾಗಿವೆ. ಮೊಟೊರೊಲಾ ಕಂಪನಿಯು ಇತ್ತೀಚಿನ ಮಧ್ಯಮ ಶ್ರೇಣಿಯ 5G ಸ್ಮಾರ್ಟ್‌ಫೋನ್ ಮತ್ತು ಯುರೋಪ್‌ನಲ್ಲಿ ಕಳೆದ ವರ್ಷ ಬಿಡುಗಡೆ ಮಾಡಿದ್ದ moto g84 ನ ಉತ್ತರಾಧಿಕಾರಿಯಾಗಿ g85 5G ಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಚೀನಾದಲ್ಲಿ S50 ನಿಯೋ ಎಂದು ಪರಿಚಯಿಸಿದೆ. Moto g85 5G ಸ್ಮಾರ್ಟ್‌ಫೋನ್ ಕುರಿತು ಹೆಚ್ಚುವರಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

Moto g85 5G ಈ ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ HD+ 120Hz ಪೋಲ್‌ಡ್ (pOled) ಡಿಸ್‌ಪ್ಲೇಯನ್ನು ಪ್ಯಾಕ್ ಮಾಡುತ್ತದೆ. ಇತ್ತೀಚಿನ ಸ್ನಾಪ್‌ಡ್ರಾಗನ್ 6s Gen 3 SoC ಯಿಂದ 2GB RAM ಜೊತೆಗೆ ಚಾಲಿತವಾಗಿದೆ ಮತ್ತು 50MP ಮುಖ್ಯ + 8MP ಅಲ್ಟ್ರಾ ವೈಡ್ ಕ್ಯಾಮೆರಾ ಜೊತೆಗೆ ಮ್ಯಾಕ್ರೋ ಆಯ್ಕೆಯನ್ನು ಹೊಂದಿದೆ.

ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಆಗಮಿಸಲಿದೆ moto g85 ಸ್ಮಾರ್ಟ್‌ಫೋನ್!

ಈ ಸ್ಮಾರ್ಟ್‌ಫೋನ್‌ 32MP ಫ್ರಂಟ್ ಕ್ಯಾಮೆರಾ ಹೊಂದಿದೆ. ಹಿಂಭಾಗದ ಕವರ್ ಐಚ್ಛಿಕ ಪ್ಯಾಂಟೋನ್ ಬಣ್ಣ ಹೊಂದಾಣಿಕೆ ಮತ್ತು ಎಂಡ್‌ ಇಲ್ಲದ ಅಂಚಿನ ವಿನ್ಯಾಸದೊಂದಿಗೆ ತಾಂತ್ರಿಕ ನ್ಯಾನೊ ಲೆದರ್ ಹೊಂದಿದೆ. ಇದು 30W ವೇಗದ ಚಾರ್ಜಿಂಗ್‌ ಜೊತಗೆ 5000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.

moto g85 5G ವಿಶೇಷತೆಗಳು:
ಈ ಸ್ಮಾರ್ಟ್‌ಫೋನ್ 6.67 ಇಂಚಿನ (2400×1080 ಪಿಕ್ಸೆಲ್‌ಗಳ) ಫುಲ್ HD+ 10 ಬಿಟ್ ಪೋಲ್ಡ್ ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್, 360Hz ಟಚ್ ಸ್ಯಾಂಪ್ಲಿಂಗ್ ರೇಟ್, 1600 ನಿಟ್ಸ್ ವರೆಗಿನ ಬ್ರೈಟ್‌ನೆಸ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಹೊಂದಿದೆ.

* Adreno 619 GPU ಜೊತೆಗೆ Qualcomm Snapdragon 6s Gen 3 6nm 5G SoC ಯಿಂದ ರನ್ ಆಗಲಿದೆ.
* 12GB LPDDR4x RAM, 256GB (UFS 2.2) ಸಂಗ್ರಹಣೆ, ಮೈಕ್ರೊ SD ಮೂಲಕ 1TB ವರೆಗೂ ವಿಸ್ತರಿಸಬಹುದಾದ ಮೆಮೊರಿ ಸಾಮರ್ಥ್ಯ ಹೊಂದಿದೆ.
* ಡ್ಯುಯಲ್ ಸಿಮ್ (ನ್ಯಾನೋ + eSIM) ಅನ್ನು ಹೊಂದಿದೆ
* MY UX ಜೊತೆಗೆ Android 14 ಹೊಂದಿದೆ

ಕ್ಯಾಮೆರಾ:
1/1.95 ಸೋನಿ LYT-600 ಸೆನ್ಸಾರ್‌ ಕ್ಯಾಮೆರಾ ಜೊತೆಗೆ 50MP ಹಿಂಬದಿಯ ಕ್ಯಾಮರಾ, f/1.8 ದ್ಯುತಿರಂಧ್ರ, OIS, LED ಫ್ಲ್ಯಾಷ್, 8MP 118° ಅಲ್ಟ್ರಾ-ವೈಡ್/ಮ್ಯಾಕ್ರೋ ಕ್ಯಾಮೆರಾ ಜೊತೆಗೆ f/2.2 ಅಪರ್ಚರ್ ಹೊಂದಿದೆ. ಸೆಲ್ಫಿಗಾಗಿ f/2.45 ದ್ಯುತಿರಂಧ್ರದ ಜೊತೆಗೆ 32MP ಮುಂಭಾಗದ ಕ್ಯಾಮೆರಾ ಹೊಂದಿದೆ.

*ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, USB ಟೈಪ್-ಸಿ ಆಡಿಯೋ, ಸ್ಟೀರಿಯೋ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್, ಡ್ಯುಯಲ್ ಮೈಕ್ರೊ ಫೋನ್‌ಗಳನ್ನು ಹೊಂದಿದೆ.
*ನೀರಿನಿಂದ ರಕ್ಷಣೆಗಾಗಿ IP54 ತಂತ್ರಜ್ಞಾನ ಹೊಂದಿದೆ.

ಆಯಾಮಗಳು: 161.91 x 74.06 x 7.59mm ಸುತ್ತಳತೆ, 171 ಗ್ರಾಂ (ವೇಗಾನ್ ಲೆದರ್) ತೂಕ, ಹಾಗೂ 173g (PMMA) ತೂಕ ಹೊಂದಿದೆ

* 5G SA/NSA, ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz), ಬ್ಲೂಟೂತ್ 5.1, GPS/ GLONASS/ ಬೀಡೌ, USB ಟೈಪ್-C, NFC ಕನೆಕ್ಟಿವಿಟಿ ಆಯ್ಕೆ ಹೊಂದಿದೆ.
*30W ಟರ್ಬೋ ಚಾರ್ಜಿಂಗ್ ಜೊತೆಗೆ 5000mAh ಬ್ಯಾಟರಿ ಹೊಂದಿದೆ.

ಬೆಲೆ ಮತ್ತು ವಿಶೇಷತೆಗಳು:
moto g85 5G ಇದು ಆಲಿವ್ ಗ್ರೀನ್, ಕೋಬಾಲ್ಟ್ ಬ್ಲೂ ಮತ್ತು ಅರ್ಬನ್ ಗ್ರೇ ಬಣ್ಣಗಳಲ್ಲಿ ಬರುತ್ತದೆ ಮತ್ತು ಈಗಾಗಲೇ ಆಯ್ದ ಯುರೋಪಿಯನ್ ದೇಶಗಳಲ್ಲಿ ಒಂದೇ ವೇರಿಯಂಟ್‌ 12GB + 256GB ಗಾಗಿ 349.99 ಯುರೋಗಳಲ್ಲಿ ಲಭ್ಯವಿದೆ (USD 374 / ಅಂದಾಜು 31,275 ಮೌಲ್ಯ ಹೊಂದಿದೆ). ಫೋನ್ ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರ 8GB + 256GB ಮಾದರಿಗೆ ಸುಮಾರು 20,000 ರೂ. ಬೆಲೆ ಹೊಂದಿರಲಿದೆ.

Best Mobiles in India

English summary
The Moto g85 5G smartphone packs a 6.67-inch Full HD+ 120Hz Polarized (pOled) display. Powered by the latest Snapdragon 6s Gen 3 SoC coupled with 2GB of RAM
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+