ಜುಲೈ 4ರಂದು ಭಾರತಕ್ಕೆ ಎಂಟ್ರಿ ಕೊಡಲಿದೆ motorola razr 50 ultra ಸ್ಮಾರ್ಟ್‌ಫೋನ್: ಬೆಲೆ ಎಷ್ಟು ಗೊತ್ತಾ?
ಮೊಟೊರೊಲಾ (Motorola) ಮೊಬೈಲ್‌ಗಳು ತನ್ನ ಅತ್ಯಾಕರ್ಷಕ ಫೀಚರ್ಸ್ ಮೂಲಕ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ. ಇತ್ತೀಚಿನ ದಿನಗಳಲ್ಲಿ ಉನ್ನತ ಬ್ರಾಂಡ್‌ನ ಮೊಬೈಲ್‌ಗಳಿಗೆ ಭರ್ಜರಿ ಪೈಪೋಟಿ ನೀಡುವಲ್ಲಿ ಈ ಸಂಸ್ಥೆಯ ಮೊಬೈಲ್‌ಗಳು ಯಶಸ್ವಿಯಾಗಿವೆ. ಇತ್ತೀಚಿಗೆ ವಿಭಿನ್ನ ತಂತ್ರಜ್ಞಾನ ಹೊಂದಿರುವ ವಿವಿಧ ಸರಣಿಯ ಅನೇಕ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿದೆ. ಇತ್ತೀಚೆಗೆ ಚೀನಾದಲ್ಲಿ Motorola razr 50 ಮತ್ತು razr 50 Ultra ಬಿಡುಗಡೆ ಮಾಡಿತ್ತು. ಜೂನ್ 25ರಂದು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ಅಂದರೆ ಜುಲೈ 4 ರಂದು ತನ್ನ ಬಹುನಿರೀಕ್ಷಿತ ಮೊಬೈಲ್‌ಗಳನ್ನು ಭಾರತದಲ್ಲಿ ಪರಿಚಯಿಸಲು ಸಿದ್ದವಾಗಿದೆ.
ಮೊಟೊರೊಲಾದ ಈ ಸ್ಮಾರ್ಟ್‌ಫೋನ್ 1-165Hz ರಿಫ್ರೆಶ್ ರೇಟ್ ಜೊತೆಗೆ 6.9 ಇಂಚಿನ ಫುಲ್ HD+ ಆಂತರಿಕ ಫೋಲ್ಡಬಲ್ LTPO ಫೋಲ್ಡ್ ಡಿಸ್‌ಪ್ಲೇ ಹೊಂದಿದೆ. 4 ಇಂಚಿನ ಹೊರ Poled 1-165Hz LPTO ಸ್ಕ್ರೀನ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆ, ಸ್ನಾಪ್‌ಡ್ರಾಗನ್ 8s Gen 3 GBPDR125X, 4.0 ಸ್ಟೋರೇಜ್, 50MP ಮುಖ್ಯ ಕ್ಯಾಮರಾ ಜೊತೆಗೆ OIS + 50MP 2x ಟೆಲಿಫೋಟೋ ಕ್ಯಾಮೆರಾ, 32MP ಮುಂಭಾಗದ ಕ್ಯಾಮರಾ ಮತ್ತು 4000mAh ಬ್ಯಾಟರಿ ಜೊತೆಗೆ 45W ವೈರ್ಡ್ ಫಾಸ್ಟ್ ಚಾರ್ಜಿಂಗ್, ಮತ್ತು 15W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲದ ಜೊತೆಗೆ ಬರಲಿದೆ.

ಹೈಲೆಟ್ಸ್:
* ಜುಲೈ 4ರಂದು ಭಾರತದಲ್ಲಿ Motorola razr 50 ಮತ್ತು razr 50 Ultra ಫೋಲ್ಡಬಲ್ ಸ್ಮಾರ್ಟ್‌ಫೋನ್ ಲಾಂಚ್
* ಜುಲೈ 25ರಂದು ಜಾಗತಿಕ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಾಗಿದೆ.
* ಜಾಗತಿಕವಾಗಿ ಸ್ಪ್ರಿಂಗ್ ಗ್ರೀನ್, ಪೀಚ್ ಫಜ್ ಮತ್ತು ಮಿಡ್‌ನೈಟ್ ಬ್ಲೂ ಬಣ್ಣಗಳಲ್ಲಿ ಈ ಸ್ಮಾರ್ಟ್‌ಫೋನ್‌ಗಳು ಲಭ್ಯವಿರಲಿದೆ
ಮೋಟೋ ಐ, ಗೂಗಲ್ ಜೆಮಿನಿ ಇಂಟಿಗ್ರೇಶನ್ ಹೊಂದಿದೆ ಮತ್ತು ಈ ಸ್ಮಾರ್ಟ್‌ಫೋನ್ ಸ್ಪ್ರಿಂಗ್ ಗ್ರೀನ್, ಪೀಚ್ ಫಜ್ ಮತ್ತು ಮಿಡ್‌ನೈಟ್ ಬ್ಲೂ ಬಣ್ಣಗಳಲ್ಲಿ ಬರಲಿದೆ.
ಜಾಗತಿಕವಾಗಿ ಬೆಲೆ ಮತ್ತು ರೋಲ್ ಔಟ್ ವಿವರ:
ಯುರೋಪ್ ಮತ್ತು LATAM ದೇಶಗಳಲ್ಲಿ Motorola razr 50 ಇದು MSRP 1,199.99 ಯುರೋಸ್ ಬೆಲೆ ಹೊಂದಿದೆ (USD 1285 ಅಥವಾ ರೂ. 1,07,250 ಅಂದಾಜು) ಬೆಲೆ ಹೊಂದಿದೆ. ಸಾಧನವು ಮುಂದಿನ ವಾರಗಳಲ್ಲಿ ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಏಷ್ಯಾ ಪೆಸಿಫಿಕ್‌ನ ಆಯ್ದ ಕೆಲವು ಮಾರುಕಟ್ಟೆಗಳಲ್ಲಿ ಲಭ್ಯವಿರಲಿದೆ.
Motorola razr 50+ ಇದು 2024 ರಲ್ಲಿ ಬಿಡುಗಡೆಯಾದ ಸ್ಮಾರ್ಟ್‌ಫೋನ್‌ನಂತೆಯೆ ಯುಎಸ್ ನಲ್ಲಿ ಈ ಫೋನ್ MSRP USD 999.99 ಅಂದರೆ ಸುಮಾರು 83,440 ರೂ. ಬೆಲೆಯಲ್ಲಿ ಲಾಂಚ್ ಆಗಲಿದೆ.
ಯುನೈಟೆಡ್ ಸ್ಟೇಟ್ಸ್‌ನಲ್ಲಿ ಈ ಹೊಸ Motorola razr 50+ ಇದೇ ವರ್ಷದ ಜುಲೈ 10 ರಂದು T-Mobile, AT ಅಂಡ್ T ಮತ್ತು motorola.com, Amazon.com ಮತ್ತು Best Buy ನಲ್ಲಿ ಪ್ರೀ ಬುಕಿಂಗ್ ಲಭ್ಯವಿರಲಿದೆ.
ಸಾಧನವು T ಮೊಬೈಲ್ ನಲ್ಲಿ ಮಾರಾಟವಾಗಲಿದ್ದು, ಜುಲೈ 24 ರಂದು motorola.com, Amazon.com ಮತ್ತು Best Buy ನಲ್ಲಿ AT ಅಂಡ್ T ನಲ್ಲಿ ಜಾಗತಿಕವಾಗಿ ಲಭ್ಯವಿರಲಿದೆ.
ಜಾಗತಿಕ ಮಾರುಕಟ್ಟೆಗೆ ಹೋಲಿಸಿದರೆ ಚೀನಾದಲ್ಲಿ 12GB + 512GB ಮಾದರಿಗೆ ಸ್ಮಾರ್ಟ್‌ಫೋನ್‌ನ ಬೆಲೆ 6199 ಯುವಾನ್ (USD 853 ಅಥವಾ 71,220 ರೂ ಅಂದಾಜು ಬೆಲೆ ಹೊಂದಿರಲಿದೆ). ಭಾರತದಲ್ಲಿ ಈ ಸ್ಮಾರ್ಟ್‌ಫೋನ್ Amazon.in, motorola.com ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಾಂಚ್ ದಿನವಾದ ಜುಲೈ 4 ರಿಂದ ಲಭ್ಯವಿರಲಿದೆ.


Click it and Unblock the Notifications








