Home
ಸುದ್ದಿಜಾಲ

ಬಹುನಿರೀಕ್ಷಿತ Samsung Galaxy Watch FE ಲಾಂಚ್; ಆರಂಭಿಕ ಬೆಲೆ 16,700 ರೂ. !

ಸ್ಯಾಮ್‌ಸಂಗ್ ಸಂಸ್ಥೆ ತನ್ನ ಬಹು ನಿರೀಕ್ಷಿತ Samsung Galaxy Watch FE ಯನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಇದು ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್‌ನ ಮೊದಲ 'ಫ್ಯಾನ್ ಆವೃತ್ತಿ' (FE) ಸ್ಮಾರ್ಟ್‌ವಾಚ್ ಆಗಿದೆ. ಸ್ಮಾರ್ಟ್ ವೇರಬಲ್ 1.2-ಇಂಚಿನ ಸೂಪರ್ AMOLED ಸ್ಕ್ರೀನ್, ಡ್ಯುಯಲ್ ಕೋರ್ Exynos W920 ಚಿಪ್‌ಸೆಟ್ ಮತ್ತು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಹೊಂದಿದೆ. ಹಾಗಿದ್ರೆ ಈ ಸ್ಮಾರ್ಟ್‌ವಾಚ್ ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

ಇದೀಗ ಸ್ಯಾಮ್‌ಸಂಗ್ ಲಾಂಚ್ ಮಾಡಿರುವ ವಾಚ್, ಹೃದಯ ಬಡಿತ, ಇಜಿಸಿ ಮತ್ತು ರಕ್ತದೊತ್ತಡ ಕಂಡುಹಿಡಿಯುವುದು ಸೇರಿದಂತೆ ಹಲವಾರು ಆರೋಗ್ಯ ಮತ್ತು ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುವ ಸೆನ್ಸಾರ್‌ ಅನ್ನು ಒಳಗೊಂಡಿದೆ. ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಕ್ಯಾಮೆರಾಗಳನ್ನು ನಿರ್ವಹಿಸಲು ಮತ್ತು ತಮ್ಮ ಡಿಜಿಟಲ್ ವ್ಯಾಲೆಟ್‌ಗಳನ್ನು ಪ್ರವೇಶಿಸಲು ಕೂಡ ಈ ಸ್ಮಾರ್ಟ್‌ವಾಚ್ ಬಳಸಬಹುದು.

ಬಹುನಿರೀಕ್ಷಿತ Samsung Galaxy Watch FE ಲಾಂಚ್; ಆರಂಭಿಕ ಬೆಲೆ 16,700 ರೂ. !

ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ ಎಫ್‌ಇ ಈ ಬೇಸಿಗೆಯಲ್ಲಿ ಜಾಗತಿಕವಾಗಿ ಖರೀದಿಗೆ ಲಭ್ಯವಿರುತ್ತದೆ ಎಂದು ಕಂಪನಿ ದೃಢಪಡಿಸಿದೆ ಆದರೆ ದಿನಾಂಕ ನಿಗದಿಪಡಿಸಿಲ್ಲ. ಸ್ಮಾರ್ಟ್ ವಾಚ್‌ನ ವಿವಿಧ ವೈಶಿಷ್ಟ್ಯಗಳು ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ವಾಚ್‌ನ ಅಲ್ಯೂಮಿನಿಯಂ ಬಾಡಿಗೆ ಕಪ್ಪು, ರೋಸ್ ಗೋಲ್ಡ್‌ ಮತ್ತು ಸಿಲ್ವರ್ ಈ ಮೂರು ಬಣ್ಣಗಳ ಆಯ್ಕೆ ನೀಡಲಾಗಿದೆ. ಹಾಗೂ ಎಲ್ಲಾ ಮೂರು ಕಲರ್ ವಾಚ್‌ಗಳು ಕೂಡ 40mm ಗಾತ್ರದ ಆಯ್ಕೆಯಲ್ಲಿರಲಿವೆ. ಜೊತೆಗೆ ಪರಸ್ಪರ ಬದಲಾಯಿಸಬಹುದಾದ ಒಂದು ಕ್ಲಿಕ್ ಬ್ಯಾಂಡ್‌ ಅನ್ನು ಸಹ ಹೊಂದಿವೆ.

Samsung Galaxy Watch FE ವೈಶಿಷ್ಟ್ಯಗಳು:
ಇದು 396 x 396 ಪಿಕ್ಸೆಲ್‌ಗಳ ರೆಸಲ್ಯೂಶನ್, ನೀಲಮಣಿ ಕ್ರಿಸ್ಟಲ್ ಗ್ಲಾಸ್ ಮತ್ತು ಸದಾಕಾಲ ಆನ್ ಇರುವ ಡಿಸ್‌ಪ್ಲೇ ವೈಶಿಷ್ಟ್ಯದ ಜೊತೆಗೆ 1.2-ಇಂಚಿನ ಸೂಪರ್ AMOLED ಡಿಸ್‌ಪ್ಲೇ ಹೊಂದಿದೆ. ಇದು ಡ್ಯುಯಲ್ ಕೋರ್ Exynos W920 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಮತ್ತು Wear OS ಬೆಂಬಲಿತ One UI 5 ವಾಚ್‌ನೊಂದಿಗೆ ರವಾನಿಸುತ್ತದೆ. ವಾಚ್ 1.5GB RAM ಮತ್ತು 16GB ಆನ್‌ಬೋರ್ಡ್ ಸ್ಟೋರೆಜ್ ಹೊಂದಿರಲಿದೆ.

Galaxy ಸ್ಮಾರ್ಟ್‌ವಾಚ್‌ನ ಫ್ಯಾನ್ ಆವೃತ್ತಿಯು ಹೃದಯ ಬಡಿತ ಸಂವೇದಕ ಸೇರಿದಂತೆ ಹಲವಾರು ಆರೋಗ್ಯ ಮತ್ತು ಕ್ಷೇಮ ಟ್ರ್ಯಾಕರ್‌ಗಳನ್ನು ಹೊಂದಿದೆ. HR ಎಚ್ಚರಿಕೆ ವೈಶಿಷ್ಟ್ಯವು ಅಸಹಜವಾಗಿ ಹೆಚ್ಚಿನ ಅಥವಾ ಕಡಿಮೆ ಹೃದಯ ಬಡಿತಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಇದು ಹೃದಯ ಅಸ್ವಸ್ಥತೆಯನ್ನು ಕೂಡ ಟ್ರ್ಯಾಕ್ ಮಾಡಲಿದೆ.

ಈ ವಾಚ್ 247mAh ಬ್ಯಾಟರಿ ಮತ್ತು WPC ಆಧಾರಿತ ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ. ಜೊತೆಗೆ LTE, ಬ್ಲೂಟೂತ್ 5.3, Wi-Fi, GPS, ಗ್ಲೋನಾಸ್, ಬೀಡೌ, ಗೆಲಿಲಿಯೋ ಮತ್ತು NFC ಕನೆಕ್ಟಿವಿಟಿ ಹೊಂದಿವೆ. ಇದು MIL-STD-810H ರೇಟೆಡ್ ಬಿಲ್ಡ್‌ನೊಂದಿಗೆ ಬರಲಿದೆ ಮತ್ತು 5ATM ನೀರಿನ ಪ್ರತಿರೋಧದ ರೇಟಿಂಗ್ ಜೊತೆಗೆ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಹೊಂದಿದೆ. ಗಡಿಯಾರವು 39.3 x 40.4 x 9.8mm ಗಾತ್ರವನ್ನು ಹೊಂದಿದೆ ಮತ್ತು 26.6g ತೂಗುತ್ತದೆ.

Samsung Galaxy Watch FE ನಿರೀಕ್ಷಿತ ಬೆಲೆ, ಲಭ್ಯತೆ:
ಇದರ ಬೆಲೆಯು ಈ ಹಿಂದೆ ಆಕಸ್ಮಿಕವಾಗಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿತ್ತು, 40mm ಸ್ಮಾರ್ಟ್‌ವಾಚ್‌ನ ಬ್ಲೂಟೂತ್ ಆವೃತ್ತಿಯು EUR 199 ಅಂದರೆ ಸುಮಾರು ರೂ. 16,600 ಹೊಂದಿರಲಿದೆ. The Verge ವರದಿಯ ಪ್ರಕಾರ, Samsung Galaxy Watch FE ನ ಬ್ಲೂಟೂತ್ ಆವೃತ್ತಿಯು ಜೂನ್ 24ರಿಂದ $199.99 ಅಂದರೆ ಸುಮಾರು ರೂ. 16,700 ಕ್ಕೆ ಖರೀದಿಗೆ ಲಭ್ಯವಿರುತ್ತದೆ. LTE ಆವೃತ್ತಿಯ ವಾಚ್‌ನ ಬೆಲೆ $249.99 ಅಂದರೆ ಸುಮಾರು 20,900 ರೂ. ಹೊಂದಿರಬಹುದು ಎಂದು ಹೇಳಲಾಗುತ್ತಿದೆ.

Best Mobiles in India

English summary
Samsung has unveiled its much-awaited Samsung Galaxy Watch FE globally. This is South Korean tech giant Samsung's first 'Fan Edition' (FE) smartwatch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+