ವಿಶ್ವ ಮಾರುಕಟ್ಟೆಗೆ 'ಒನ್‌ಪ್ಲಸ್ 6T' ಬಿಡುಗಡೆ!..ಆಂಡ್ರಾಯ್ಡ್ 'ಐಫೋನ್ ಎಕ್ಸ್' ಬೆಲೆ ಎಷ್ಟು ಗೊತ್ತಾ?

|

ವಿಶ್ವ ಮೊಬೈಲ್ ಜಗತ್ತು ಕುತೋಹಲದಿಂದ ಕಾಯುತ್ತಿದ್ದ 'ಒನ್‌ಪ್ಲಸ್ 6T' ಸ್ಮಾರ್ಟ್‌ಫೋನ್ ಮೊಬೈಲ್ ಮಾರುಕಟ್ಟೆಗೆ ಅಧಿಕೃತವಾಗಿ ನೆನ್ನೆ ಬಿಡುಗಡೆಯಾಗಿದೆ. ಒನ್‌ಪ್ಲಸ್ ಕಂಪೆನಿ ತನ್ನ ಅತ್ಯಾಧುನಿಕ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಅನ್ನು ಜಾಗತಿಕವಾಗಿ ಸೋಮವಾರ ರಾತ್ರಿ ನ್ಯೂಯಾರ್ಕ್‌ನಲ್ಲಿ ಅನಾವರಣಗೊಳಿಸಿದ್ದು, ಭಾರತದಲ್ಲಿ ಇಂದು (ಮಂಗಳವಾರ) ರಾತ್ರಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

ಈ ಮೊದಲೇ ಸ್ಮಾರ್ಟ್‌ಫೋನಿನ ಫೀಚರ್ಸ್ ಯಾವುವು ಎಂಬುದರ ಮಾಹಿತಿ ನೀಡಿದ್ದ ಒನ್‌ಪ್ಲಸ್ ಕಂಪೆನಿ ಈಗ ಸ್ಮಾರ್ಟ್‌ಫೋನ್ ಬೆಲೆ ಹಾಗೂ ಹೊಸ ಫೀಚರ್ಸ್ ಯಾವುವು ಎಂಬಭಾರೀ ಕುತೋಹಲಕ್ಕೆ ಕಾರಣವಾಗಿದ್ದ ಮಾಹಿತಿಗಳನ್ನು ಪ್ರಕಟಿಸಿದೆ. ಒನ್‌ಪ್ಲಸ್ 6T ಸ್ಮಾರ್ಟ್‌ಪೋನಿನ ಆರಂಭಿಕ ಆವೃತ್ತಿ ಬೆಲೆ 549 ಡಾಲರ್‌ಗಳಿಂದ ಶುರುವಾಗಿದ್ದು, ಭಾರತದ ರೂಪಾಯಿಗಳ ಲೆಕ್ಕದಲ್ಲಿ ಅಂದಾಜು 40,300 ರೂ.ಗಳಾಗುತ್ತವೆ.

ವಿಶ್ವ ಮಾರುಕಟ್ಟೆಗೆ 'ಒನ್‌ಪ್ಲಸ್ 6T' ಬಿಡುಗಡೆ!..ಬೆಲೆ ಎಷ್ಟು ಗೊತ್ತಾ?

ಇದೇ ಮೊದಲ ಬಾರಿಗೆ ಒನ್‌ಪ್ಲಸ್ ಫಿಂಗರ್‌ಪ್ರಿಂಟ್ ಫೀಚರ್ ಬದಲು ಸ್ಕ್ರೀನ್ ಮೇಲೆಯೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸ್ಕ್ರೀನ್ ಅನ್‌ಲಾಕಿಂಗ್‌ ವ್ಯವಸ್ಥೆ ತಂದಿದೆ. ಇಯರ್‌ಫೋನ್‌ಗೆ 3.5 ಎಂಎಂ ಜ್ಯಾಕ್ ಬದಲಾಗಿ, ಬುಲೆಟ್ ಟೈಪ್ ಸಿ ಪೋರ್ಟ್‌ಗೆ ಹೊಂದಿಕೆಯಾಗುವ ಪೋರ್ಟ್ ನೀಡಲಾಗಿದೆ. ಹಾಗಾದರೆ, ಐಫೋನ್ ಎಕ್ಸ್‌ಗೂ ಸೆಡ್ಡುಹೊಡೆಯುವ ಸಾಮರ್ಥ್ಯವನ್ನು ಹೊಂದಿರುವ ಒನ್‌ಪ್ಲಸ್ 6T ಸ್ಮಾರ್ಟ್‌ಫೋನಿನ ಎಲ್ಲಾ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಭಾರತದಲ್ಲಿ ಇಂದು ಬಿಡುಗಡೆ

ಭಾರತದಲ್ಲಿ ಇಂದು ಬಿಡುಗಡೆ

ಹೊಸದಿಲ್ಲಿಯ KDJW ಸ್ಟೇಡಿಯಂನಲ್ಲಿ ಅಕ್ಟೋಬರ್ 30ರ ರಾತ್ರಿ 8.30ರಿಂದ ಒನ್‌ಪ್ಲಸ್ 6ಟಿ ಬಿಡುಗಡೆಯಾಗಲಿದ್ದು, ಲಾಂಚ್ ಕಾರ್ಯಕ್ರಮದ ಲೈವ್ ಸ್ಟ್ರೀಮಿಂಗ್ ಅನ್ನು ಇಲ್ಲಿ ನೋಡಬಹುದು https://www.oneplus.in/6t/launch ನವೆಂಬರ್ 1ರಂದು ಒನ್‌ಪ್ಲಸ್ 6ಟಿ ಫೋನನ್ನು ಏಕಕಾಲದಲ್ಲಿ ಗರಿಷ್ಠ ಜನರು ಅನ್‌ಬಾಕ್ಸ್ ಮಾಡುವ ವಿಶ್ವದಾಖಲೆಯನ್ನೂ ಮಾಡುವ ಉದ್ದೇಶವನ್ನು ಕಂಪನಿ ಹೊಂದಿದೆ. ಇದಕ್ಕಾಗಿ ಅಮೆಜಾನ್ ಪ್ರೈಮ್ ನೌ ಸದಸ್ಯತ್ವದೊಂದಿಗೆ ಒನ್‌ಪ್ಲಸ್ ಅನ್ನು ಖರೀದಿಸಬೇಕಾಗುತ್ತದೆ. ಕಾರ್ಯಕ್ರಮವು ಮುಂಬಯಿಯಲ್ಲಿ ನಡೆಯಲಿದೆ.

ಬೆಂಗಳೂರಿನಲ್ಲಿ ಒನ್‌ಪ್ಲಸ್ 6ಟಿ

ಬೆಂಗಳೂರಿನಲ್ಲಿ ಒನ್‌ಪ್ಲಸ್ 6ಟಿ

ನವೆಂಬರ್ 2ರಂದು ಬೆಂಗಳೂರಿನಲ್ಲಿ ಒನ್‌ಪ್ಲಸ್ 6ಟಿ ಫೋನನ್ನು ಬ್ರಿಗೇಡ್ ರೋಡ್ ಹಾಗೂ ಜಯನಗರ 4ನೇ ಬ್ಲಾಕ್‌ನಲ್ಲಿರುವ ಒನ್‌ಪ್ಲಸ್ ಎಕ್ಸ್‌ಪೀರಿಯನ್ಸ್ ಸ್ಟೋರ್‌ನಲ್ಲಿ ನೋಡಿ ಖರೀದಿಸಬಹುದು. ಬುಕಿಂಗ್‌ಗೆ ಅದ್ಭುತ ಕೊಡುಗೆಗಳೂ ಇವೆ. ಮೊದಲ 5 ಖರೀದಿದಾರರಿಗೆ ಟ್ರಾವೆಲ್ ಬ್ಯಾಕ್‌ಪ್ಯಾಕ್, ಒನ್‌ಪ್ಲಸ್ 6ಟಿ ಕೇಸ್‌ಗಳು ಮತ್ತು ಸ್ಕೆಚ್ ಬುಕ್, ಮೊದಲ 50 ಖರೀದಿದಾರರಿಗೆ ಒನ್‌ಪ್ಲಸ್ ಸ್ಕೆಚ್ ಬುಕ್ ಮತ್ತು ಎನ್ಎಸ್ ಟಿ-ಶರ್ಟ್, ಮುಂದಿನ 50 ಖರೀದಿದಾರರಿಗೆ ಒನ್‌ಪ್ಲಸ್ ಸ್ಕೆಚ್ ಬುಕ್ ಹಾಗೂ ಒಂದು ಟೋಟ್ ಬ್ಯಾಗ್ ಸಿಗಲಿದೆ.

ಬದಲಾವಣೆಗಳು ಯಾವುವು?

ಬದಲಾವಣೆಗಳು ಯಾವುವು?

ಒನ್‌ಪ್ಲಸ್ 6ಟಿ ಸ್ಮಾರ್ಟ್‌ಫೋನಿನಲ್ಲಿ ಈ ಬಾರಿ ಸ್ಕ್ರೀನ್ ಮೇಲೆಯೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಹೆಚ್ಚು ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಒನ್‌ಪ್ಲಸ್ 6ನಲ್ಲಿ 3300 mAh ಬ್ಯಾಟರಿ ನೀಡಲಾಗಿದ್ದರೆ, ಒನ್‌ಪ್ಲಸ್ 6T ಸ್ಮಾರ್ಟ್‌ಫೋನಿನಲ್ಲಿ 3700mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಒನ್‌ಪ್ಲಸ್ 6ಟಿ ಕೂಡ 6 ಜಿಬಿ ಮತ್ತು 8 ಜಿಬಿ ಆವೃತ್ತಿಗಳಲ್ಲಿ ಲಭ್ಯವಿದ್ದು, ಆಂಡ್ರಾಯ್ಡ್‌ನ ಹೊಚ್ಚ ಹೊಸ ಅಂದರೆ ಪೈ (ಆಂಡ್ರಾಯ್ಡ್ ಪಿ ಅಥವಾ 9.0 ಆವೃತ್ತಿ) ಕಾರ್ಯಾಚರಣೆ ವ್ಯವಸ್ಥೆ ಇದೆ.

ಅತ್ಯಾಧುನಿಕ ಸ್ಕ್ರೀನ್ ಅನ್‌ಲಾಕ್‌

ಅತ್ಯಾಧುನಿಕ ಸ್ಕ್ರೀನ್ ಅನ್‌ಲಾಕ್‌

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಭವಿಷ್ಯದ ಸ್ಕ್ರೀನ್‌ ಅನ್‌ಲಾಕ್‌ ತಂತ್ರಜ್ಞಾನವನ್ನು ಹೊಂದಿದ್ದು, ಕಂಪೆನಿಯು ಬಹು ನಿರೀಕ್ಷಿತ ಹೊಸ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ನಲ್ಲಿ ಭವಿಷ್ಯದ ಸ್ಕ್ರೀನ್ ಅನ್‌ಲಾಕ್ ತಂತ್ರಜ್ಞಾನದ ಸುಳಿವು ನೀಡುವ ಸಣ್ಣ ವಿಡಿಯೋದ ಮಾಹಿತಿ ನಿಖರವಾಗಿದೆ. .ಈ ತಂತ್ರಜ್ಞಾನ ಸ್ಮಾರ್ಟ್‌ಫೋನ್‌ನ್ನು ಹೆಚ್ಚು ಸುರಕ್ಷಿತಗೊಳಿಸಿದೆ. ಒನ್‌ಪ್ಲಸ್‌ ಹಾರ್ಡ್‌ವೇರ್‌ ಮತ್ತು ಸ್ವಯಂ-ಕಲಿಕೆಯ ಕ್ರಮಾವಳಿಗಳನ್ನು ಸಂಯೋಜಿಸಿ ನಿಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ಪೂರ್ವಭಾವಿಯಾಗಿ ಲೋಡ್ ಮಾಡುವ ಸಾಮರ್ಥ್ಯ ಹೊಂದಿದೆ. ಇದರಿಂದ ನಿಮಗೆ ಝಿಪ್ಪಿ ಅನ್‌ಲಾಕ್‌ ಅನುಭವ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನಲ್ಲಿ ಸಿಗಲಿದೆ. ಒನ್‌ಪ್ಲಸ್‌ನಲ್ಲಿರುವ ಇಂಜಿನಿಯರ್‌ಗಳು ನಿಮ್ಮ ಫಿಂಗರ್‌ಪ್ರಿಂಟ್‌ ಮಾಹಿತಿ ಸಂಗ್ರಹಿಸಲು ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ 845ನಲ್ಲಿನ 'Trust Zone' ಬಳಸಿದ್ದಾರೆ. ಇದು ಗೌಪ್ಯತೆಗಾಗಿರುವ ಪ್ರತ್ಯೇಕ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ.

ವೇಗದ ಡ್ಯಾಶ್‌ ಚಾರ್ಜಿಂಗ್

ವೇಗದ ಡ್ಯಾಶ್‌ ಚಾರ್ಜಿಂಗ್

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಹಿಂದಿನ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಿಗಿಂತ ಉತ್ತಮ ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಕಂಪನಿಯ ಟ್ರಾಕ್‌ ರೆಕಾರ್ಡ್‌ನ್ನು ಗಮನಿಸಿದರೆ, ಒನ್‌ಪ್ಲಸ್‌ ಡಿವೈಸ್‌ಗಳು ಉತ್ತಮ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಈ ಬಾರಿಯ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚು ಸಮಯ ಬಳಸಲು ಭರವಸೆ ನೀಡುತ್ತದೆ. ಇದಕ್ಕೆಲ್ಲಕ್ಕಿಂತ ಹೆಚ್ಚಾಗಿ ಜನಪ್ರಿಯ ಡ್ಯಾಶ್ ಚಾರ್ಜ್‌ರ್‌ನ ಮುಂದುವರೆದ ಆವೃತ್ತಿಯನ್ನು ಒನ್‌ಪ್ಲಸ್‌ 6Tಯಲ್ಲಿ ತರಲಾಗಿದೆ. ಹೊಸ OnePlus 6T ಸ್ಮಾರ್ಟ್‌ಫೋನ್‌ನ್ನು ಕಂಪನಿಯ ಸುಧಾರಿತ ಡ್ಯಾಶ್ ಚಾರ್ಜಿಂಗ್ ತಂತ್ರಜ್ಞಾನದ ಮೂಲಕ ಬೆಂಬಲಿಸಲಾಗುತ್ತದೆ. ಇದರ ಅರ್ಥ ನಿಮಗೆ ಅಗತ್ಯವಿದ್ದ ಸಮಯದಲ್ಲಿ ಆದಷ್ಟು ಬೇಗ ಸ್ಮಾರ್ಟ್‌ಫೋನ್‌ನ್ನು ಚಾರ್ಜ್‌ ಮಾಡಬಹುದಾಗಿದೆ.

ಆಂಡ್ರಾಯ್ಡ್ ಪೈ ಔಟ್‌ ಆಫ್‌ ಬಾಕ್ಸ್‌

ಆಂಡ್ರಾಯ್ಡ್ ಪೈ ಔಟ್‌ ಆಫ್‌ ಬಾಕ್ಸ್‌

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಇತ್ತೀಚಿನ ಆಂಡ್ರಾಯ್ಡ್ ಪೈ ಒಎಸ್‌ನೊಂದಿಗೆ ಬಂದಿದೆ. ಭಾರತದಲ್ಲಿ ಗೂಗಲ್‌ ಪಿಕ್ಸೆಲ್‌ ಹೊರತುಪಡಿಸಿ ಆಂಡ್ರಾಯ್ಡ್ ಪೈ ಔಟ್‌ ಆಫ್‌ ಬಾಕ್ಸ್‌ ಒಎಸ್‌ನೊಂದಿಗೆ ಮಾರುಕಟ್ಟೆಗೆ ಬಂದಿರುವ ಮೊದಲ ಸ್ಮಾರ್ಟ್‌ಫೋನ್‌ ಆಗಿದೆ. Google I/O ದಲ್ಲಿ ಪರಿಚಯಿಸಲ್ಪಟ್ಟ ಗೂಗಲ್‌ನ ಗೆಸ್ಚರ್‌ ನ್ಯಾವಿಗೇಷನ್‌ ಫೀಚರ್‌ನ್ನುಆಂಡ್ರಾಯ್ಡ್‌ಪೈ ಬೆಂಬಲಿತ Oxyzen OS ಒನ್‌ಪ್ಲಸ್‌ನಲ್ಲಿ ಇದೆ. ಇದು ಹೊಸ ಬ್ಯಾಟರಿ ಫೀಚರ್ ಹೊಂದಿದ್ದು, ಈ ಆಪ್‌ ಮೊಬೈಲ್ ಬಳಕೆಯನ್ನು ವಿಶ್ಲೇಷಿಸಿ, ಬಳಕೆದಾರನ ಬಳಕೆಗೆ ತಕ್ಕಂತೆ ಬ್ಯಾಟರಿ ಸಾಮರ್ಥ್ಯವನ್ನು ವಿನಿಯೋಗಿಸುತ್ತದೆ. ಆಂಡ್ರಾಯ್ಡ್ ಪೈ ಆಧಾರಿತ OxygenOS 9.0 ಒಎಸ್‌ನ್ನು ಹಿಂದಿನ ಆವೃತ್ತಿ ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್‌ಗೂ ರೋಲ್‌ ಔಟ್‌ ಮಾಡುತ್ತಿದೆ.

ಬುಲೆಟ್‌ ವೈರ್‌ಲೆಸ್‌ ಹೆಡ್‌ಫೋನ್‌ಗಳು

ಬುಲೆಟ್‌ ವೈರ್‌ಲೆಸ್‌ ಹೆಡ್‌ಫೋನ್‌ಗಳು

ಒನ್‌ಪ್ಲಸ್‌ 6T ಬಿಡುಗಡೆ ಮಾಡುವುದರ ಜತೆ ಕಂಪನಿ ಗ್ರಾಹಕರಿಗೆ ಹೆಚ್ಚುವರಿಯಾಗಿ ಏನನ್ನಾದರೂ ನೀಡಬೇಕೆಂಬ ಉದ್ದೇಶದಿಂದ ಸ್ಮಾರ್ಟ್‌ಫೋನಿನಲ್ಲಿ ಟೈಪ್-ಸಿ ಜ್ಯಾಕ್ ಜತೆ ಬರುವ ಹೊಸ ಬುಲೆಟ್‌ ಇಯರ್‌ಫೋನ್‌ಗಳನ್ನು ನೀಡಿದೆ. ಲಾಂಚ್‌ ಆದಾಗಿನಿಂದ ಸ್ಮಾರ್ಟ್‌ಫೋನ್‌ ಆಸಕ್ತರ ಬಾಯಲ್ಲಿ ಹೆಚ್ಚು ಹರಿದಾಡುತ್ತಿರದ್ದ ಮಾತು ಈಗ ನಿಜವಾಗಿದೆ. ಯಾವುದೇ ಅಡೆತಡೆಯಿಲ್ಲದ, ಎಫೆಕ್ಟ್‌ಗಳನ್ನು ಕಳೆದುಕೊಳ್ಳದೆ ಧ್ವನಿ ಮತ್ತು ಸಂಗೀತದ ಅನುಭವವನ್ನು ಪಡೆಯಬೇಕೆನ್ನುವವರಿಗೆ ಈ ಹೆಡ್‌ಫೋನ್ ಹತ್ತಿರವಾಗಬಹುದು.

3700 mAh ಬ್ಯಾಟರಿ ಸಾಮರ್ಥ್ಯ

3700 mAh ಬ್ಯಾಟರಿ ಸಾಮರ್ಥ್ಯ

ಹೊಸ ಸ್ಮಾರ್ಟ್‌ಫೋನ್‌ನ ಬ್ಯಾಟರಿ 3700 mAh ಸಾಮರ್ಥ್ಯ ಹೊಂದಿದ್ದು, ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್‌ನ 3300 mAh ಬ್ಯಾಟರಿಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ನಿಮ್ಮ ಸ್ಮಾರ್ಟ್‌ಫೋನ್‌ನ ಹೆಚ್ಚು ಸಮಯ ಬಳಸಲು ಇದು ಭರವಸೆ ನೀಡುತ್ತದೆ. ಇದಕ್ಕೆಲ್ಲಕ್ಕಿಂತ ಹೆಚ್ಚಾಗಿ ಜನಪ್ರಿಯ ಡ್ಯಾಶ್ ಚಾರ್ಜ್‌ರ್‌ನ ಮುಂದುವರೆದ ಆವೃತ್ತಿಯನ್ನು ಒನ್‌ಪ್ಲಸ್‌ 6Tಯಲ್ಲಿ ತರಲಾಗಿದೆ. ಹೊಸ OnePlus 6T ಸ್ಮಾರ್ಟ್‌ಫೋನ್‌ನ್ನು ಕಂಪನಿಯ ಸುಧಾರಿತ ಡ್ಯಾಶ್ ಚಾರ್ಜಿಂಗ್ ತಂತ್ರಜ್ಞಾನದ ಮೂಲಕ ಬೆಂಬಲಿಸಲಾಗುತ್ತದೆ. ಇದರ ಅರ್ಥ ನಿಮಗೆ ಅಗತ್ಯವಿದ್ದ ಸಮಯದಲ್ಲಿ ಆದಷ್ಟು ಬೇಗ ಸ್ಮಾರ್ಟ್‌ಫೋನ್‌ನ್ನು ಚಾರ್ಜ್‌ ಮಾಡಬಹುದಾಗಿದೆ.

ದೊಡ್ಡ ಮತ್ತು ಉತ್ಕೃಷ್ಟ ಡಿಸ್‌ಪ್ಲೇ

ದೊಡ್ಡ ಮತ್ತು ಉತ್ಕೃಷ್ಟ ಡಿಸ್‌ಪ್ಲೇ

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ತನ್ನ ಬೆಲೆ ವರ್ಗದ ಇತರ ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚು ಆಕರ್ಷಕವಾದ ಮಲ್ಟಿಮೀಡಿಯಾ ಅನುಭವವನ್ನು ನೀಡುತ್ತದೆ. ದೊಡ್ದ್ ಡಿಸ್‌ಪ್ಲೇ ಹೊಂದಿದ್ದು, ಬೆಜೆಲ್‌ ಲೆಸ್‌ AMOLED ಡಿಸ್‌ಪ್ಲೇ ವಾಟರ್‌ ಡ್ರಾಪ್‌ ನೋಚ್‌ನೊಂದಿಗೆ ಅಳವಡಿಸಲಾಗಿದೆ. ಫ್ರಾಂಟ್ ಕ್ಯಾಮೆರಾವನ್ನು ಸಣ್ಣ ನೀರಿನ ಬಿಂದುವಿನಂತ ಜಾಗದಲ್ಲಿ ಅಳವಡಿಸಿದ್ದು, ಆಕರ್ಷಕವಾಗಿದೆ. ಎಡ್ಜ್‌-ಟು-ಎಡ್ಜ್‌ ಸ್ಕ್ರೀನ್ ವೀಕ್ಷಣೆ ಅನುಭವವನ್ನು ನೀಡುವ ಒನ್‌ಪ್ಲಸ್‌ 6T ಗೇಮಿಂಗ್ ಮತ್ತು ಮಲ್ಟಿಮೀಡಿಯಾ ಬಳಕೆಗೆ ಹೇಳಿ ಮಾಡಿಸಿದಂತಿದೆ.

ಅನುಭವಿಸಿ ನಂತರ ಖರೀದಿಸಿ!

ಅನುಭವಿಸಿ ನಂತರ ಖರೀದಿಸಿ!

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಬಿಡುಗಡೆಯಾದ ನಂತರ ನವೆಂಬರ್ 2, 2018 ರಂದು ದೇಶದ 12 ಸ್ಥಳಗಳಲ್ಲಿ 9 ನಗರಗಳಲ್ಲಿ ಸ್ಮಾರ್ಟ್‌ಪೋನ್ ಎಕ್ಸ್‌ಪೀರಿಯನ್ಸ್ ಶೋ ನಡೆಸುವುದಾಗಿ ಘೋಷಿಸಿದೆ. ಗ್ರಾಹಕರು ಹೊಸ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ ಅನ್ನು ಬಳಸಿದ ನಂತರ ನಿರ್ಧಾರ ತೆಗೆದುಕೊಳ್ಳಲು ಈ ಕಾರ್ಯಕ್ರಮ ಆಯೋಜನೆಯಾಗುತ್ತಿದೆ. ಬೆಂಗಳೂರು, ಮುಂಬೈ, ಪುಣೆ, ಕೊಲ್ಕತ್ತಾ, ದೆಹಲಿ, ಚೆನ್ನೈ, ಹೈದರಾಬಾದ್, ಅಹಮದಾಬಾದ್ ಮತ್ತು ಜೈಪುರ ಸೇರಿದಂತೆ 9 ನಗರಗಳಲ್ಲಿ ಬೆಳಗ್ಗೆ 11:00 ರಿಂದ ರಾತ್ರಿ 10:00 ರವರೆಗೆ ಒನ್‌ಪ್ಲಸ್‌ 6T ಎಕ್ಸ್‌ಪೀರಿಯನ್ಸ್ ಕಾರ್ಯಕ್ರಮದಲ್ಲಿ ಒನ್‌ಪ್ಲಸ್‌ 6T ಸಾಧನ ಪ್ರದರ್ಶನವಾಗಲಿದೆ.

ನ್ಯೂಯಾರ್ಕ್‌ನಲ್ಲಿ 'ಒನ್‌ಪ್ಲಸ್ 6T' ಸ್ಮಾರ್ಟ್‌ಪೋನ್ ಬೆಲೆಗಳು ಹೀಗಿದೆ:

ನ್ಯೂಯಾರ್ಕ್‌ನಲ್ಲಿ 'ಒನ್‌ಪ್ಲಸ್ 6T' ಸ್ಮಾರ್ಟ್‌ಪೋನ್ ಬೆಲೆಗಳು ಹೀಗಿದೆ:

6 GB+128 GB ಆವೃತ್ತಿಗೆ 549 ಡಾಲರ್ (ಅಂದಾಜು 40,300 ರೂ.)
8GB + 128 GB ಆವೃತ್ತಿಗೆ 579 ಡಾಲರ್ (ಅಂದಾಜು 42,500 ರೂ.)
8 GB+ 256 GB ಆವೃತ್ತಿಗೆ 629 ಡಾಲರ್ (ಅಂದಾಜು 46,200 ರೂ.)

Best Mobiles in India

English summary
Amazing tech isn’t the killer feature of the brand new OnePlus 6T, such as the in-display fingerprint sensor or the new Gorilla Glass 6 protection. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X