Home
ಸುದ್ದಿಜಾಲ

ಭಾರತದಲ್ಲಿ POCO M7 5G ಫೋನ್ ರಿಲೀಸ್ ಡೇಟ್ ಫಿಕ್ಸ್!..10 ಸಾವಿರಕ್ಕಿಂತ ಕಡಿಮೆ ಬೆಲೆ!

ಜನಪ್ರಿಯ ಪೊಕೊ ಕಂಪೆನಿಯ ಬಹುನಿರೀಕ್ಷಿತ POCO M7 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಇದೇ ಮಾರ್ಚ್ 3 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂಬ ಸಿಹಿಸುದ್ದಿ ದೊರೆತಿದೆ. 4nm ಕ್ವಾಲ್ಕಾಮ್ ಚಿಪ್, ಟರ್ಬೊ RAM ಮತ್ತು ಇತರ ವೈಶಿಷ್ಟ್ಯಗಳೊಂದಿಗೆ .10,000 ಕ್ಕಿಂತ ಕಡಿಮೆ ಬೆಲೆಯ ವಿಭಾಗದಲ್ಲಿ POCO M7 5G ಸ್ಮಾರ್ಟ್‌ಫೋನನ್ನು ಭಾರತದ ಮೊಬೈಲ್ ಮಾರುಕಟ್ಟೆಗೆ ಪರಿಚಯಿಸಲಾಗುತ್ತದೆ. ಮಾರ್ಚ್ 3, 2025 ರಂದು ಮಧ್ಯಾಹ್ನ 12 ಗಂಟೆಗೆ ದೇಶದಲ್ಲಿ POCO M7 5G ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ ಎಂಬುದು ಕಂಪೆನಿಯ ಟೀಸರ್ ವೀಡಿಯೋದಲ್ಲಿ ತಿಳಿಸಲಾಗಿದೆ. ಹಾಗಾದರೆ, ಮುಂಬರುವ ಬಹುನಿರೀಕ್ಷಿತ POCO M7 5G ಸ್ಮಾರ್ಟ್‌ಫೋನ್ ಹೇಗಿರಲಿದೆ ಎಂಬುದನ್ನು ನೋಡೋಣ ಬನ್ನಿ.

ಭಾರತದಲ್ಲಿ POCO M7 5G ರಿಲೀಸ್ ಡೇಟ್ ಫಿಕ್ಸ್!..10 ಸಾವಿರಕ್ಕಿಂತ ಕಡಿಮೆ ಬೆಲೆ!

ಹೇಗಿರಲಿದೆ POCO M7 5G ಸ್ಮಾರ್ಟ್‌ಫೋನ್?

ಇದೀಗ ಬಿಡುಗಡೆಯಾಗಿರುವ ಅಧಿಕೃತ ಟೀಸರ್‌ನಲ್ಲಿ ಬಹುನಿರೀಕ್ಷಿತ POCO M7 5G ಸ್ಮಾರ್ಟ್‌ಫೋನಿನ ಮೊದಲ ಲುಕ್ ಬಿಡುಗಡೆಯಾಗಿದೆ. ಇದರ ಹಿಂದಿನ ಸರಣಿ ಸ್ಮಾರ್ಟ್‌ಫೋನ್ POCO M6 5G ಸ್ಮಾರ್ಟ್‌ಫೋನಿಗೆ ಹೋಲಿಸಿದರೆ, ಈ ಹೊಸ ಸ್ಮಾರ್ಟ್‌ಫೋನ್ ಗಮನಾರ್ಹವಾಗಿ ಕಡಿಮೆಯಾದ ಬೆಜೆಲ್‌ಗಳನ್ನು ಹೊಂದಿರುವ ವಿನ್ಯಾಸವನ್ನು ಬಹಿರಂಗಪಡಿಸಿದೆ. ಅಂದರೆ, ಈ POCO M7 5G ಸ್ಮಾರ್ಟ್‌ಫೋನಿನ ಸ್ಕ್ರೀನ್ ಮತ್ತಷ್ಟು ವಿಶಾಲವಾಗಿ ಕಾಣಿಸುತ್ತದೆ. ಇನ್ನು ಈ ಸ್ಮಾರ್ಟ್‌ಫೋನಿನಲ್ಲಿ ಮುಂಭಾಗದ ಕ್ಯಾಮೆರಾವನ್ನು ಪಂಚ್-ಹೋಲ್ ಮಾದರಿಯಲ್ಲಿ ಇರಿಸಿದ್ದರೆ, ಹಿಂಭಾಗದಲ್ಲಿ ನಾವು ಎರಡು ಕ್ಯಾಮೆರಾಗಳನ್ನು ಹೊಂದಿರುವ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ನೋಡಬಹುದು.

ಈ ಹಿಂದೆ, POCO M7 5G ಸ್ಮಾರ್ಟ್‌ಫೋನ್ ಗೂಗಲ್ ಪ್ಲೇ ಕನ್ಸೋಲ್ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು, ಅಲ್ಲಿ ಬಹಿರಂಗವಾದ ಮಾಹಿತಿಯಂತೆ ಈ ಸ್ಮಾರ್ಟ್‌ಫೋನ್ 2.2GHz ಲ್ಲಿ ಎರಡು ಕಾರ್ಟೆಕ್ಸ್-A78 ಕೋರ್‌ಗಳು ಮತ್ತು 2.0GHz ನಲ್ಲಿ ಆರು ಕಾರ್ಟೆಕ್ಸ್-A55 ದಕ್ಷತೆಯ ಕೋರ್‌ಗಳನ್ನು ಹೊಂದಿರುವ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಮತ್ತು 6GB ವರೆಗಿನ RAM ನೊಂದಿಗೆ ಜೋಡಿಸಲ್ಪಟ್ಟಿದೆ ಎಂದು ಹೇಳಲಾಗಿದೆ. ಆದರೆ, ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಮೂಲಗಳು ಸೂಚಿಸುತ್ತವೆ. ಇದು ಸಾಧನದ ದೀರ್ಘಕಾಲೀನ ಸಾಫ್ಟ್‌ವೇರ್ ಬೆಂಬಲದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಬಹುದು.

Poco M7 ಸ್ಮಾರ್ಟ್‌ಫೋನ್ ಬೆಲೆ ವಿವರಗಳು

ಭಾರತದಲ್ಲಿ Poco M7 ಸ್ಮಾರ್ಟ್‌ಫೋನಿನ ಬಿಡುಗಡೆ ದಿನಾಂಕವನ್ನು ದೃಢಪಡಿಸಿದ್ದರೂ ಸಹ ಬೆಲೆ ವಿವರಗಳನ್ನು ಈವರೆಗೂ ಗೌಪ್ಯವಾಗಿಡಲಾಗಿದೆ. ಪೊಕೊ ಕಂಪನಿಯು ಯಾವಾಗಲೂ ತನ್ನ ಆಕ್ರಮಣಕಾರಿ ಬೆಲೆ ತಂತ್ರವನ್ನು ಕಾಯ್ದುಕೊಳ್ಳುತ್ತದೆ ಎಂದು ಉದ್ಯಮ ವೀಕ್ಷಕರು ನಿರೀಕ್ಷಿಸಿದ್ದು, ಬಿಡುಗಡೆಯ ಸಮಯದಲ್ಲಿ ಈ ಸ್ಮಾರ್ಟ್‌ಫೋನಿನ ಬೆಲೆಯು 10,000 ರೂ ಕ್ಕಿಂತ ಕಡಿಮೆ ಬೆಲೆಯಿರುತ್ತದೆ ಎಂದು ಅಂದಾಜಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಬಿಡುಗಡೆಗೂ ಮುನ್ನ, ಪೊಕೊ ಇಂಡಿಯಾದ ಮುಖ್ಯಸ್ಥ ಹಿಮಾಂಶು ಟಂಡನ್ ಅವರು, X ನಲ್ಲಿ ಒಂದು ಸಮೀಕ್ಷೆಯನ್ನು ನಡೆಸಿ 10K ಗಿಂತ ಕಡಿಮೆ ಬೆಲೆಯಲ್ಲಿ "ಸುಸಜ್ಜಿತ" ಸ್ಮಾರ್ಟ್‌ಫೋನ್ ಸಾಧ್ಯತೆಯೇ ಅಥವಾ ಪುರಾಣವೇ ಎಂದು ಕೇಳಿರುವುದು ಇದಕ್ಕೆ ಇಂಬು ನೀಡಿದೆ.

Best Mobiles in India

English summary
The Poco M7 is set to launch in India on March 3, with a confirmed price of under ₹10,000. Here’s everything we know so far.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+