ಕಡಿಮೆ ಬೆಲೆಯ ಸ್ಮಾರ್ಟ್‌ಪೋನ್ ಅನ್ನು ಏಕೆ ಖರೀದಿಸಲೇಬಾರದು?.5 ಕಾರಣಗಳು!!
ಕೇವಲ 500 ರೂಪಾಯಿಗಳಿಂದ 1000 ರೂಪಾಯಿಗಳಿದ್ದರೆ ಒಂದು ಸ್ಮಾರ್ಟ್‌ಫೋನ್ ಅನ್ನು ಮನೆಗೆ ಕೊಂಡೊಯ್ಯಬಹುದು ಎನ್ನುವಷ್ಟು ಈಗ ಸ್ಮಾರ್ಟ್‌ಪೋನ್ ಖರೀದಿ ಸುಲಭವಾಗಿದೆ.!!
ಬೇಸಿಕ್ ಮೊಬೈಲ್‌ಗಳಿಗಿಂತಲೂ ಕಡಿಮೆ ಬೆಲೆಗೆ ಇಂದು ಸ್ಮಾರ್ಟ್‌ಫೋನ್‌ಗಳು ಸಿಗುತ್ತಿರುವುದರಿಂದ ಈಗೇನಿದ್ದರೂ ಸ್ಮಾರ್ಟ್‌ಫೋನ್‌ಗಳ ಕಾಲ ಎನ್ನಬಹುದು.! ಕೇವಲ 500 ರೂಪಾಯಿಗಳಿಂದ 1000 ರೂಪಾಯಿಗಳಿದ್ದರೆ ಒಂದು ಸ್ಮಾರ್ಟ್‌ಫೋನ್ ಅನ್ನು ಮನೆಗೆ ಕೊಂಡೊಯ್ಯಬಹುದು ಎನ್ನುವಷ್ಟು ಈಗ ಸ್ಮಾರ್ಟ್‌ಪೋನ್ ಖರೀದಿ ಸುಲಭವಾಗಿದೆ.!!
ಹಾಗಾಗಿಯೇ, ಇಂದು ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವವರ ಪ್ರಮಾಣವೂ ಹೆಚ್ಚಾಗುತ್ತಿದೆ. ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳ ಹಿಂದೆ ಜನರು ಓಡುತ್ತಿದ್ದಾರೆ.! ದಾಖಲೆಗಳ ಪ್ರಕಾರ ಭಾರತದಲ್ಲಿ ಮಾರಾಟವಾಗುವ ಮೂರು ಸ್ಮಾರ್ಟ್‌ಫೋನ್‌ಗಳ ಪೈಕಿ ಎರಡು ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಾಗಿರುತ್ತವಂತೆ.!!

ಈ ಎಲ್ಲಾ ಅಂಕಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಇಂದಿನ ಲೇಖನದಲ್ಲಿ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಖರೀದಿಯಿಂದ ಆಗುತ್ತಿರುವ ತೊಂದರೆಗಳನ್ನು ವಿವರಿಸಿದ್ದೇವೆ! ಕಡಿಮೆ ಬೆಲೆಯ ಸ್ಮಾರ್ಟ್‌ಪೋನ್ ಅನ್ನು ಏಕೆ ಖರೀದಿಸಬಾರದು? ಮತ್ತು ಖರೀದಿಸಲು ಅಡ್ಡಿಪಡಿಸುವ ನಕಾರಾತ್ಮಕ ಅಂಶಗಳು ಯಾವುವು? ಎಂಬುದನ್ನು ಮುಂದೆ ತಿಳಿಯಿರಿ.!!

ಪ್ರೊಸೆಸರ್ ವೇಗ ಕಡಿಮೆ ಇರುತ್ತದೆ!!
ಕಡಿಮೆ ಬೆಲೆಯ ಸ್ಮಾರ್ಟ್‌ಪೋನುಗಳಲ್ಲಿ ಸ್ಮಾರ್ಟ್‌ಫೋನಿನ ಪ್ರೊಸೆಸರ್ ವೇಗವಾಗಿ ಕಾರ್ಯ ನಿರ್ವಹಿಸುವುದಿಲ್ಲ. ಹೀಗಾಗಿ ಗ್ರಾಫಿಕ್ಸ್ ಒಳಗೊಂಡ ಗೇಮ್ಸ್ ಆಡಲು ಆಗುವುದಿಲ್ಲ. ಕೆಲವೊಂದು ಆಪ್‌ಗಳು ಸಪೋರ್ಟ್ ಆಗದೇ ಇರುವುದರಿಂದ ಸ್ಮಾರ್ಟ್‌ಪೋನಿನ ಬಳಕೆಯ ಉತ್ತಮ ಅನುಭವ ನಿಮಗೆ ಸಿಗುವುದಿಲ್ಲ.!!

ಗುಣಮಟ್ಟದ ಕ್ಯಾಮೆರಾ?
ಕಡಿಮೆ ಬೆಲೆಯ ಸ್ಮಾರ್ಟ್‌ಪೋನುಗಳಲ್ಲಿ ಗುಣಮಟ್ಟದ ಕ್ಯಾಮೆರಾ ಬಗ್ಗೆ ಮಾತನಾಡುವಂತಿಲ್ಲ. ಕ್ಯಾಮೆರಾ ಕಾರ್ಯಕ್ಷಮತೆಯೂ ವೇಗವಾಗಿರುವುದಿಲ್ಲ ಮತ್ತು ಚಿತ್ರಗಳು ಸ್ಪಷ್ಟವಾಗಿ ಇರುವುದಿಲ್ಲ. ಕಡಿಮೆ ಬೆಳಕಿನಲ್ಲಿ ಚಿತ್ರ ಸೆರೆ ಹಿಡಿಯುವುದು ಬಿಡಿ ಬೆಳಕಿದ್ದಾಗಲೇ ಕೆಲವು ಮೊಬೈಲ್‌ಗಳ ಚಿತ್ರ ಉತ್ತಮವಾಗಿ ಇರುವುದಿಲ್ಲ.!!

ಅಪ್‌ಡೇಟ್ ಮಾದರಿ ಸಿಗುವುದಿಲ್ಲ.!!
ಸ್ಮಾರ್ಟ್‌ಪೋನ್ ಹೊಸ ಫೀಚರ್ಸ್ ಮತ್ತು ಫೋನ್ ಭದ್ರತೆಗಾಗಿ ಸ್ಮಾರ್ಟ್‌ಪೋನ್ ಕಂಪರನಿಗಳು ಅಪ್‌ಡೇಟ್ ಸಾಫ್ಟ್‌ವೇರ್‌ಗಳನ್ನು ಬಿಡುಗಡೆ ಮಾಡುತ್ತವೆ. ಆದರೆ, ಕಾಲಕಾಲಕ್ಕೆ ಬದಲಾಗುವ ವಿವಿಧ ಸಾಫ್ಟ್‌ವೇರ್‌ಗಳ ಅಪ್‌ಡೇಟ್ ಮಾದರಿ ಸಿಗುವುದಿಲ್ಲ.ಒಂದು ಮುಖ್ಯ ಸಾಫ್ಟ್‌ವೇರ್ ಮಾತ್ರ ಕಡಿಮೆ ಬೆಲೆಯ ಆಂಡ್ರಾಯ್ಡ್ ಫೋನ್‌ನಲ್ಲಿ ಇರುತ್ತದೆಯಷ್ಟೆ.!!

ಒಎಲ್ಇಡಿ ಡಿಸ್‌ಪ್ಲೇ ಇದೆಯಾ?
ಕಡಿಮೆ ಬೆಲೆಯ ಸ್ಮಾರ್ಟ್‌ಪೋನುಗಳ ಡಿಸ್‌ಪ್ಲೇ ದೊಡ್ಡದಾಗಿರುವುದಿಲ್ಲ ಮತ್ತು ಆಕರ್ಷಕವಾಗಿರುವುದಿಲ್ಲ. ಇತ್ತೀಚಿನ ಸ್ಮಾರ್ಟ್‌ಪೋನುಗಳಂತೆ. ಆರ್ಗ್ಯಾನಿಕ ಲೈಟ್ ಎಮಿಟಿಂಗ್ ಡಯೋಡ್ (ಒಎಲ್‌ಇಡಿ) ಸ್ಕ್ರೀನ್ ಎಲ್ಲವನ್ನು ಕಡಿಮೆ ಬೆಲೆಯ ಸ್ಮಾರ್ಟ್‌ಪೋನುಗಳು ಹೊಂದಿರುವುದಿಲ್ಲ. ಇದರಿಂದ ಡಿಸ್‌ಪ್ಲೇ ಬಣ್ಣಗಳ ಗುಣಮಟ್ಟ ಕೇಳುವಂತಿಲ್ಲ.!!


ಸೆನ್ಸರ್‌ಗಳು ಇರುವುದಿಲ್ಲ.!!
ಕಡಿಮೆ ಬೆಲೆಯ ಸ್ಮಾರ್ಟ್‌ಪೋನುಗಳಳು ಆಧುನಿಕ ಸೆನ್ಸರ್‌ಗಳನ್ನು ಒಳಗೊಂಡಿರುವುದಿಲ್ಲ. ಇನ್‌ಫ್ರಾರೆಡ್ ಫೇಸ್ ರೆಕಗ್ನಿಷನ್‌ವ್ಯವಸ್ಥೆ, ಫಿಂಗರ್‌ಪ್ರಿಂಟ್ ಫೀಚರ್, ಆಧುನಿಕ ಬ್ಲೂಟೂತ್ ಎಲ್ಲವನ್ನು ನೀಡಿರುವುದಿಲ್ಲ. ಹಾಗಾಗಿ, ನೀವು ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಾಗಿ ಸ್ವಲ್ಪ ಹೆಚ್ಚು ವ್ಯಯಿಸಿದರೆ ಒಳ್ಳೆಯದು ಎನ್ನಬಹುದು.!!


Click it and Unblock the Notifications








