ಬೆಚ್ಚಿಬಿತ್ತು ಮೊಬೈಲ್ ಮಾರುಕಟ್ಟೆ!!.ಭಾರತದಲ್ಲಿಯೇ ಮೊದಲು "ರೆಡ್‌ಮಿ ನೋಟ್ 5" ಲಾಂಚ್ ಆಗಿದ್ದು ಏಕೆ!?
ಚೀನಾ ಹಾಗೂ ವಿಶ್ವ ಮಾರುಕಟ್ಟೆಗೂ ಮುನ್ನವೇ ಭಾರತದಲ್ಲಿ ಶಿಯೋಮಿ ಕಂಪೆನಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿರುವುದು ಎಲ್ಲರ ತಲೆಕೆಡಿಸಿದೆ.!!
ವಿಶ್ವ ಮೊಬೈಲ್ ಮಾರುಕಟ್ಟೆಯ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಶಿಯೋಮಿ ಭಾರತದಲ್ಲಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಪೋನ್ ಅನ್ನು ಮೊದಲು ಲಾಂಚ್ ಮಾಡಿದೆ.!! ಚೀನಾ ಹಾಗೂ ವಿಶ್ವ ಮಾರುಕಟ್ಟೆಗೂ ಮುನ್ನವೇ ಭಾರತದಲ್ಲಿ ಶಿಯೋಮಿ ಕಂಪೆನಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿರುವುದು ಎಲ್ಲರ ತಲೆಕೆಡಿಸಿದೆ.!!

ವಿಶ್ವ ಮೊಬೈಲ್ ಮಾರುಕಟ್ಟೆಯ ಜೊತೆಗೆ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿರುವುದು ಶಿಯೋಮಿ ಗ್ರಾಹಕರಿಗೂ ಸಹ ಶಾಕ್ ನೀಡಿದ್ದು, ಗ್ರಾಹಕರಿಗೇ ನಂಬಲೂ ಆಗದ ಸ್ಥಿತಿ ಎದುರಾಗಿದೆ.! ಹಾಗಾದರೆ, ಶಿಯೋಮಿ ವಿಶ್ವ ಮಾರುಕಟ್ಟೆ ಬಿಟ್ಟು ಭಾರತದಲ್ಲಿ "ರೆಡ್‌ಮಿ ನೋಟ್ 5" ಲಾಂಚ್ ಮಾಡಿದ್ದೇಕೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಭಾರತಕ್ಕೆ ತಲೆಬಾಗಿದೆ ಶಿಯೋಮಿ!!
ವಿಶ್ವದ ಎಲ್ಲಾ ಮೊಬೈಲ್ ಕಂಪೆನಿಗಳು ಮೊದಲು ಚೀನಾ ಅಥವಾ ಅಮೆರಿಕಾದಲ್ಲಿ ಮೊಬೈಲ್ ಲಾಂಚ್ ಮಾಡಿ ಗಮನ ಸೆಳೆಯುತ್ತಿದ್ದವು. ಅಲ್ಲಿ ಲಾಂಚ್ ಆದ ಎಷ್ಟೋ ದಿನಗಳ ನಂತರ ಆ ಫೋನ್‌ಗಳು ಭಾರತಕ್ಕೆ ಬರುತ್ತಿದ್ದವು.! ಆದರೆ, ಶಿಯೋಮಿ ಭಾರತೀಯರಿಗೆ ತಲೆಬಾಗಿ ಮೊದಲು ಭಾರತದಲ್ಲಿ ಫೋನ್ ರಿಲೀಸ್ ಮಾಡಿದೆ.!!

ರೆಡ್‌ಮಿ ನೋಟ್ 4 ಯಶಸ್ಸು!!
ಇಡೀ ವಿಶ್ವಕ್ಕೆ ಹೋಲಿಸಿದರೆ ರೆಡ್ ಮಿ ನೋಟ್ 4 ಸ್ಮಾರ್ಟ್‌ಫೋನ್ ಮಾರಾಟ ಭಾರತದಲ್ಲಿಯೇ ಹೆಚ್ಚಾಗಿದೆ. ಭಾರತದಲ್ಲಿಯೇ ಅತಿ ಹೆಚ್ಚು ಸೇಲ್ ಆದ ಸ್ಮಾರ್ಟ್‌ಪೋನ್ ಎಂಬ ಹೆಗ್ಗಳಿಕೆ ಹೊಂದಿರುವ ಶಿಯೋಮಿ ರೆಡ್ ಮಿ ನೋಟ್ 4 ಯಶಸ್ಸನ್ನು ಪಡೆಯಲು ಶಿಯೋಮಿ ಕಂಪೆನಿ ಮುಂದಾಗಿದೆ.!!

ನಂಬರ್ ಒನ್ ಮೊಬೈಲ್ ಬ್ರ್ಯಾಂಡ್!!
ಭಾರತದ ನಂಬರ್ ಒನ್ ಮೊಬೈಲ್ ಬ್ರ್ಯಾಂಡ್ ಎಂಬ ಪಟ್ಟವೇರಿರುವ ಶಿಯೋಮಿ ಭಾರತದ ಮಾರುಕಟ್ಟೆಯನ್ನೇ ಕೇಂದ್ರೀಕರಿಸಿದ್ದು, ಚೀನಾ ಮತ್ತು ವಿಶ್ವ ಮಾರುಕಟ್ಟೆಗಿಂತಲೂ ಹೆಚ್ಚು ಮಾರುಕಟ್ಟೆಯನ್ನು ಭಾರತದಲ್ಲಿ ಹೊಂದಿದೆ. ಹಾಗಾಗಿ, ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಮೊದಲು ಪರಿಚಯಿಸಿದೆ.!

ಶಿಯೋಮಿ ಆನ್‌ಲೈನ್ ಸೇಲ್!!
ಇತರೆ ಎಲ್ಲಾ ಮೊಬೈಲ್ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚು ಶಿಯೋಮಿ ಸ್ಮಾರ್ಟ್‌ಫೋನ್‌ಗಳು ಆನ್‌ಲೈನಿನಲ್ಲಿ ಮಾರಾಟವಾಗುತ್ತಿವೆ. ಆನ್‌ಲೈನಿನಲ್ಲಿ ಮಾರಾಟವಾಗುವ 10 ಫೋನ್‌ಗಳಲ್ಲಿ 6 ಶಿಯೋಮಿ ಫೋನುಗಳೇ ಇರುವುದರಿಂದ ಶಿಯೋಮಿ ಕಂಪೆನಿ ಭಾರತೀಯರ ಹಿಂದೆ ಬಿದ್ದಿದೆ.!!

ಶಿಯೋಮಿ ರೆಡ್ ಮಿ ನೋಟ್ 5
ಭಾರತದಲ್ಲಿಯೇ ಮೊದಲು ನೇರವಾಗಿ ಲಾಂಚ್ ಆದ ಮೊದಲ ಸ್ಮಾರ್ಟ್‌ಫೋನ್ ಶಿಯೋಮಿ ರೆಡ್ ಮಿ ನೋಟ್ 5 ಸ್ಮಾರ್ಟ್‌ಫೋನ್ ಇಂದು ಬಿಡುಗಡೆ ಮಾಡಿದ್ದು, ಹಾಗಾದರೆ, ರೆಡ್ ಮಿ ನೋಟ್ 5 ಫೋನ್ ಫೀಚರ್ಸ್ ಯಾವುವು? ಬೆಲೆ ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

5.99 ಇಂಚ್ ಫುಲ್ ಹೆಚ್‌ಡಿ ಡಿಸ್‌ಪ್ಲೇ!!
18:9 ಅನುಪಾತದಲ್ಲಿ 5.99 ಇಂಚ್ ಫುಲ್ ಹೆಚ್‌ಡಿ ಡಿಸ್‌ಪ್ಲೇ ಮೂಲಕ ರೆಡ್ ಮಿ ನೋಟ್ 5 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. 8.05mm ದಪ್ಪವಿರುವ ರೆಡ್ಮಿ ನೋಟ್ 5 ಸ್ಮಾರ್ಟ್‌ಫೋನ್ ಮೆಟಲ್ ಬಾಡಿ ಹಾಗೂ ಹಿಂಬಾಗದಲ್ಲಿ ಟ್ಯಾಪರೆಡ್ ಬ್ಯಾಕ್ ಕವರ್ ಹೊಂದಿದೆ.!!

ಸ್ನ್ಯಾಪ್‌ಡ್ರಾಗನ್ 625 ಪ್ರೊಸೆಸರ್!!
ಶಿಯೋಮಿ ರೆಡ್ ಮಿ ನೋಟ್ 5 ಸ್ಮಾರ್ಟ್‌ಫೋನಿನಲ್ಲಿ ಸ್ನ್ಯಾಪ್‌ಡ್ರಾಗನ್ 625 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಇನ್ನು ಸ್ಮಾರ್ಟ್‌ಫೋನ್ 3GB RAM ಮತ್ತು 32GB ಮೆಮೊರಿ ಹಾಗೂ 4GB ಮತ್ತು 64GB ಮೆಮೊರಿಯ ಎರಡು ವೆರಿಯಂಟ್‌ಗಳಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದೆ.!

4000mAh ಬ್ಯಾಟರಿ!!
ಶಿಯೋಮಿ ರೆಡ್ ಮಿ ನೋಟ್ 5 ಸ್ಮಾರ್ಟ್‌ಫೋನ್ 4000mAh ಬ್ಯಾಟರಿಯನ್ನು ಹೊಂದಿದೆ. 14 ಗಂಟೆಗಳ ವಿಡಿಯೋ ಪ್ಲೇಬ್ಯಾಕ್, 26 ಗಂಟೆಗಳ ಮ್ಯೂಸಿಕ್ ಪ್ಲೇ ಬ್ಯಾಕ್, 22 ಗಂಟೆಗಳು ಕಾಲ್ ಸ್ಟಾಂಡ್ ಬೈ ಶಕ್ತಿಯನ್ನು ಶಿಯೋಮಿ ರೆಡ್ ಮಿ ನೋಟ್ 5 ಫೋನ್ ಬ್ಯಾಟರಿ ಹೊಂದಿದೆ ಎಂದು ಶಿಯೋಮಿ ಕಂಪೆನಿ ತಿಳಿಸಿದೆ.!!

ನೋಟ್ 5 ಕ್ಯಾಮೆರಾ ಹೇಗಿದೆ?
ಶಿಯೋಮಿ ರೆಡ್ ಮಿ ನೋಟ್ 5 ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಹೊಂದಿರಲಿದೆ ಎಂಬ ನಿರೀಕ್ಷೆ ಸುಳ್ಳಾಗಿದೆ.! ರೆಡ್ ಮಿ ನೋಟ್ 5 ಪೋನ್ 12 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಜತೆಗೆ 1.5M ಲಾರ್ಜ್ ಪಿಕ್ಸೆಲ್ಸ್ ಅನ್ನು ನೀಡಲಾಗಿದೆ.! ಆದರೆ, ಸೆಲ್ಫಿ ಕ್ಯಾಮೆರಾದ ಬಗ್ಗೆ ಶಿಯೋಮಿ ಯಾವುದೇ ಮಾಹಿತಿ ನೀಡಿಲ್ಲ.!!

ಉಚಿತ ಮೊಬೈಲ್ ಕೇಸ್!!
ಶಿಯೋಮಿ ರೆಡ್ ಮಿ ನೋಟ್ 5 ಸ್ಮಾರ್ಟ್‌ಫೋನ್ ಜತಗೆ ಅಲ್ಟ್ರಾ ಸ್ಲಿಮ್ ಮೊಬೈಲ್ ಕೇಸ್ ಅನ್ನು ಶಿಯೋಮಿ ಕಂಪೆನಿ ಉಚಿತವಾಗಿ ನೀಡುತ್ತಿದೆ.! ಇತರ ಮೊಬೈಲ್ ಕೇಸ್‌ಗಳಿಂದ ಸ್ಮಾರ್ಟ್‌ಫೋನ್ ಬಿಸಿಯಾಗುವುದನ್ನು ತಪ್ಪಿಸಲು ಶಿಯೋಮಿ ಕಂಪೆನಿಯೇ ಅತ್ಯುತ್ತಮ ಮೊಬೈಲ್ ಕೇಸ್ ನೀಡುತ್ತಿದೆ ಎನ್ನಲಾಗಿದೆ.!!

ರೆಡ್ ಮಿ ನೋಟ್ 5 ಬೆಲೆ ಎಷ್ಟು?
ಶಿಯೋಮಿ ರೆಡ್ ಮಿ ನೋಟ್ 5 ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಕಾಲಿಟ್ಟಿದ್ದು, 3GB RAM ಮತ್ತು 32GB ಮೆಮೊರಿ ವೆರಿಯಂಟ್ ಫೋನ್ ಬೆಲೆ ಕೇವಲ 9,999 ರೂಪಾಯಿಗಳಾಗಿದೆ. ಇನ್ನು 4GB ಮತ್ತು 64GB ಮೆಮೊರಿಯಂಟ್ ರೆಡ್ ಮಿ ನೋಟ್ 5 ಬೆಲೆ 11,999 ರೂಪಾಯಿಗಳಿಗೆ ಬಿಡುಗಡೆಗೊಂಡಿದೆ.!!


Click it and Unblock the Notifications








