ಜುಲೈ 10ಕ್ಕೆ Samsung Galaxy ಅಪ್‌ಪ್ಯಾಕ್ಡ್ ಈವೆಂಟ್! ಡಚ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ವರದಿಯಲ್ಲೇನಿದೆ ಗೊತ್ತಾ?
ಟೆಕ್ ದೈತ್ಯ ಸ್ಯಾಮ್‌ಸಂಗ್ (Samsung) ತನ್ನ ಮುಂಬರುವ ಅನ್‌ಪ್ಯಾಕ್ಡ್ ಈವೆಂಟ್ ಅನ್ನು ಶೀಘ್ರದಲ್ಲಿ ನಡೆಸಲಿದೆ ಎಂದು ಅನೇಕ ವದಂತಿಗಳು ಈಗಾಗಲೇ ಬಂದಿರುವುದನ್ನು ನಾವು ನೋಡಿದ್ದೇವೆ. ಅದರಲ್ಲೂ ಕೆಲವು ಪ್ರಮಾಣೀಕೃತ ವೆಬ್‌ಸೈಟ್‌ಗಳ ಪ್ರಕಾರ ಜೂನ್ 10 ರಂದು ಈ ಅನ್‌ಪ್ಯಾಕ್ಡ್ ಈವೆಂಟ್ ನಡೆಯಲಿದೆ ಎಂದು ಅನೇಕ ಪ್ರಮಾಣಿಕೃತ ವೆಬ್‌ಸೈಟ್‌ಗಳು ತಿಳಿಸಿವೆ. ಈ ನಡುವೆ ಇದೀಗ ಡಚ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ mobile.nl ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ ಜೂನ್ 10 ರಂದು ನಡೆಯಲಿದೆ ಎಂದು ವೆಬ್ ಬ್ಯಾನರ್‌ನಲ್ಲಿ ತಿಳಿಸಿದೆ.
ಈ ಕುರಿತು ಬ್ಯಾನರ್ ನಲ್ಲಿ ಮಾಹಿತಿ ನೀಡಿದ ತಕ್ಷಣ ಆ ಪುಟವನ್ನು ಡಿಲೀಟ್ ಮಾಡಿದೆ. ಹಾಗಿದ್ರೆ ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್‌ನಲ್ಲಿ ಏನೆಲ್ಲಾ ಹೊಸ ಪ್ರಾಡಕ್ಟ್‌ಗಳನ್ನು ಬಿಡುಗಡೆ ಮಾಡಲಿದೆ ಎಂಬುದರ ಕುರಿತು ಈ ಲೇಖನದಲ್ಲಿ ತಿಳಿಯಿರಿ.

Samsung Galaxy ಈ ಬಾರಿಯ ಅನ್‌ಪ್ಯಾಕ್ಡ್ ಈವೆಂಟ್ ಅನ್ನು ಹಿಂದಿನ ವರ್ಷಕ್ಕಿಂತ ಮೊದಲೇ ನಡೆಯಬಹುದು ಎನ್ನಲಾಗುತ್ತಿದೆ. ಹಿಂದಿನ ಸೋರಿಕೆಗಳು ಮತ್ತು ವದಂತಿಗಳಲ್ಲಿ ಅದರದಲ್ಲಿ ನೋಡುವುದಾದರೆ ಈ ಅನ್‌ಪ್ಯಾಕ್ಡ್ ಈವೆಂಟ್‌ನ ದಿನಾಂಕ ಮತ್ತು ಸ್ಥಳದ ಕುರಿತು ವದಂತಿಗಳು ಹರಡಿವೆ. ಇದರ ಹೊರತಾಗಿಯೂ ಇದೀಗ ಡಚ್ ಇ-ಕಾಮರ್ಸ್ ಆಕಸ್ಮಿಕವಾಗಿ ಗ್ಯಾಲಕ್ಸಿ ಅನ್‌ಪ್ಯಾಕ್ ಈವೆಂಟ್ ದಿನಾಂಕವನ್ನು ಬಹಿರಂಗಪಡಿಸಿದೆ. ಇದರ ಜೊತೆಗೆ Galaxy Z Flip 6 ಮತ್ತು Z Fold 6 ಗಳ ಪ್ರೀ ಬುಕಿಂಗ್ ಲಭ್ಯವಿರಲಿವೆ ಎಂದು ತಿಳಿಸಿದೆ.
Samsung Galaxy ಅನ್‌ಪ್ಯಾಕ್ಡ್ ನಿರೀಕ್ಷಿತ ದಿನಾಂಕ, ಸ್ಥಳ:
Mobiel.nl ಹೆಸರಿನ ದೇಶೀಯ ಚಿಲ್ಲರೆ ವ್ಯಾಪಾರದ ಬ್ಯಾನರ್ ಜಾಹೀರಾತಿನಲ್ಲಿ Galaxy ಅನ್‌ಪ್ಯಾಕ್ ದಿನಾಂಕವನ್ನು ಗುರುತಿಸಿದೆ ಎಂದು ಡಚ್ ಪ್ರಕಾಶನ tweakers.net ಬ್ಯಾನರ್ ನಲ್ಲಿ ತಿಳಿಸಿದೆ. Galaxy Unpacked ಜುಲೈ 10, 2024 ನಡೆಯಲಿದ್ದು ಇದು Samsung.com ನಲ್ಲಿ ಲೈವ್ ಇರಲಿದೆ ಎಂದು ಬರೆದುಕೊಂಡಿದೆ.
ಜುಲೈ 10ರಂದು Galaxy Unpacked ಈವೆಂಟ್ ನಡೆಯಲಿದೆ ಎಂದು ತಿಳಿಸಿದೆ. ಇದು ಈ ಹಿಂದಿನ ವದಂತಿಗಳನ್ನು ಬೆಂಬಲಿಸುತ್ತದೆ. ಈ ಸೋರಿಕೆಯು ಸ್ಥಳವನ್ನು ಬಹಿರಂಗಪಡಿಸದಿದ್ದರೂ, ಸ್ಯಾಮ್‌ಸಂಗ್ ಪ್ಯಾರಿಸ್‌ನಲ್ಲಿ ಈವೆಂಟ್ ಅನ್ನು ಆಯೋಜಿಸಬಹುದು ಎಂದು ವದಂತಿಗಳು ಸೂಚಿಸುತ್ತವೆ. Samsung ಸಂಸ್ಥೆ 2024 ರ ಬೇಸಿಗೆ ಒಲಿಂಪಿಕ್ಸ್‌ನ ಅಧಿಕೃತ ಪಾಲುದಾರ ಕೂಡ ಆಗಿದ್ದು, ಆದ್ದರಿಂದ ಈ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳಲು ಅದು ಪ್ರಯತ್ನಿಸುತ್ತದೆ ಎಂದು ಹೇಳಲಾಗುತ್ತಿದೆ.
ಕಂಪನಿಯು ಕೆಲವು ಉತ್ಪನ್ನಗಳ ಮುಂಗಡ ಕಾಯ್ದಿರಿಸುವಿಕೆಯನ್ನು ಘೋಷಿಸಲು ಪ್ರಾರಂಭಿಸಿರುವುದರಿಂದ ಯಾವುದೇ ದಿನ ಅಧಿಕೃತವಾಗಿ ಇವುಗಳನ್ನು ಲಾಂಚ್ ಮಾಡಬಹುದಾಗಿದೆ.
Samsung Galaxy Z Fold 6 ಮತ್ತು Z Flip 6 ಪ್ರೀ ಬುಕಿಂಗ್:
ಸ್ಯಾಮ್‌ಸಂಗ್ ಎಕ್ಸ್‌ಪೀರಿಯೆನ್ಸ್ ಸ್ಟೋರ್‌ನಿಂದ B6 ಮತ್ತು Q6 ಸ್ಮಾರ್ಟ್‌ಫೋನ್‌ಗಳು ಜೂನ್ 26 ರಂದು ಮುಂಗಡ ಬುಕಿಂಗ್ ಲಭ್ಯವಿರುತ್ತವೆ ಎಂಬ ಸಂದೇಶವನ್ನು ಸ್ಯಾಮ್‌ಸಂಗ್ ಹೇಳಿದೆ ಎಂದು ಹೇಳಿಕೊಂಡಿದೆ. ಇನ್ನೂ ಕೂಡ ಇವುಗಳ ಮುಂಗಡ ಬುಕಿಂಗ್ ಆರಂಭವಾಗಿಲ್ಲ B6 ಮತ್ತು Q6 ಗಳು ಕ್ರಮವಾಗಿ Galaxy Z Flip 6 ಮತ್ತು Galaxy Z Fold 6 ಗಳ ಸಂಕೇತಗಳಾಗಿವೆ ಎಂದು ಹೇಳಲಾಗಿದೆ.
ಈ ಎರಡು ಫೋಲ್ಡಿಂಗ್ ಫೋನ್‌ಗಳಲ್ಲದೆ ನಾವು Galaxy Ring, Galaxy Watch Ultra, Galaxy Watch 7, Galaxy Buds 3, Galaxy Buds 3 Pro, Galaxy Book4 Edge, ಮತ್ತು Galaxy Book4 Edge Pro ಅನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಸಮಾರಂಭದಲ್ಲಿ Samsung Galaxy Watch FE ಯ ಬೆಲೆ ಮತ್ತು ಲಭ್ಯತೆಯ ವಿವರಗಳನ್ನು ಸಹ ಬಹಿರಂಗಪಡಿಸಬಹುದು ಎಂದು ಹೇಳಲಾಗಿದೆ.


Click it and Unblock the Notifications








