ಸ್ಮಾರ್ಟ್‌ಫೋನಲ್ಲೇ ಮಗುವಿನ ಆರೋಗ್ಯ ಪರೀಕ್ಷಿಸಿ !
ಇನ್ನು ಮುಂದೆ ನಿಮ್ಮ ಸ್ಮಾರ್ಟ್‌ಫೋನ್‌ಲ್ಲೇ ನಿಖರವಾಗಿ ಮಲಗಿದ ಮಗುವಿನ ಹೃದಯದ ಬಡಿತ, ಆಮ್ಲಜನಕದ ಮಟ್ಟಗಳು, ಚರ್ಮದ ಉಷ್ಣತೆ ತಿಳಿಯಬಹುದು.
ಅಮೆರಿಕದ mimobaby ಕಂಪೆನಿ ಒಂದು ವರ್ಷದೊಳಗಡೆ ಇರುವ ಮಕ್ಕಳ ಆರೋಗ್ಯದ ಮಾಹಿತಿಯನ್ನು ತಿಳಿಸುವ ಹೊಸ ಸಾಧನವನ್ನು ಪರಿಚಯಿಸಿದೆ. ಈ ಸಾಧನಕ್ಕಾಗಿ ವಿಶೇಷವಾಗಿ ಹತ್ತಿಯ ಉಡುಪನ್ನು ಕಂಪೆನಿ ತಯಾರಿಸಿದೆ.ಈ ಬಟ್ಟೆಯನ್ನು ಮಗುವಿಗೆ ಹಾಕಿ ಅದರಲ್ಲಿ ಈ ಸಾಧನವನ್ನು ಇರಿಸಿದರೆ ಸ್ಮಾರ್ಟ್‌ಫೋನಲ್ಲೇ ಮಗುವಿನ ಆರೋಗ್ಯದ ಮಾಹಿತಿಯನ್ನು ಪಡೆಯಬಹುದು.
ನೋಡಲು ಎಸ್‌ಡಿ ಕಾರ್ಡ್‌ನಂತಿರುವ ಈ ಪುಟ್ಟ ಸಾಧನದಲ್ಲಿ ಕೆಲವು ಸೆನ್ಸರ್‌ಗಳಿದ್ದು ಈ ಸೆನ್ಸರ್‌ಗಳು ಮಗುವಿನ ದೇಹದ ಚಟುವಟಿಕೆಗಳನ್ನು ಗ್ರಹಿಸಿ ಈ ಸಾಧನದಲ್ಲಿರುವ ವೈಫೈ ಮೂಲಕ ಸ್ಮಾರ್ಟ್‌ಫೋನಿಗೆ ಮಾಹಿತಿ ಕಳುಹಿಸುತ್ತದೆ. ಈ ಸಾಧನಕ್ಕಾಗಿ ಆಂಡ್ರಾಯ್ಡ್ ಮತ್ತು ಐಓಎಸ್ ಆಪ್‌ಗಳನ್ನು ಕಂಪೆನಿ ತಯಾರಿಸಿದ್ದು 199 ಡಾಲರ್ (ಅಂದಾಜು12 ಸಾವಿರ ರೂಪಾಯಿ) ಬೆಲೆಯನ್ನು ನಿಗದಿ ಮಾಡಿದೆ.ಮಿಮೊ ಬೇಬಿಗ್ರೋ ಲಾಸ್‌ವೇಗಾಸ್‌ನಲ್ಲಿ ನಡೆಯುತ್ತಿರುವ ಸಿಇಎಸ್‌ನಲ್ಲಿ ಪ್ರದರ್ಶನಗೊಂಡಿದ್ದು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

1
ಅಪ್ಲಿಕೇಶನ್‌ಲ್ಲಿ ಮಿಮೊ ಬೇಬಿಗ್ರೋ ಮಾಹಿತಿ

2
ಮಿಮೊ ಬೇಬಿಗ್ರೋಸಾಧನ ಮತ್ತು ಉಡುಪು

3
ನೋಡಲು ಎಸ್‌ಡಿ ಕಾರ್ಡ್‌ನಂತಿರುವ ಈ ಪುಟ್ಟ ಸಾಧನದಲ್ಲಿ ಕೆಲವು ಸೆನ್ಸರ್‌ಗಳಿದ್ದು ಈ ಸೆನ್ಸರ್‌ಗಳು ಮಗುವಿನ ದೇಹದ ಚಟುವಟಿಕೆಗಳನ್ನು ಗ್ರಹಿಸಿ ಈ ಸಾಧನದಲ್ಲಿರುವ ವೈಫೈ ಮೂಲಕ ಸ್ಮಾರ್ಟ್‌ಫೋನಿಗೆ ಮಾಹಿತಿ ಕಳುಹಿಸುತ್ತದೆ.
4
ವಿಡಿಯೋ ವೀಕ್ಷಿಸಿ


Click it and Unblock the Notifications




