Home
ಸುದ್ದಿಜಾಲ

Smartphones: ಇನ್ನೊಂದೇ ವಾರದಲ್ಲಿ ಲಾಂಚ್ ಆಗಲಿವೆ ಈ ಪ್ರಮುಖ ಬ್ರಾಂಡ್‌ನ ಸ್ಮಾರ್ಟ್‌ಫೋನ್‌ಗಳು; Motorola, Realme, OnePlus

ವಿವಿಧ ಸ್ಮಾರ್ಟ್‌ಫೋನ್‌ ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ಮೊಬೈಲ್‌ ಮಾರುಕಟ್ಟೆಗೆ ವಿವಿಧ ಕಂಪನಿಗಳ ತಮ್ಮ ಹೊಸ ಹೊಸ ಸರಣಿಯ ಪ್ರಮುಖ ಸ್ಮಾರ್ಟ್‌ಫೋನ್‌ಗಳು (Smartphones) ಲಾಂಚ್ ಮಾಡುತ್ತಾ ಇರುವುದನ್ನು ಗಮನಿಸಿದ್ದೇವೆ. ಅದರಂತೆ ಜೂನ್ ತಿಂಗಳಿನಲ್ಲಿಯೂ ಕೂಡ ಕೆಲವು ಸಂಸ್ಥೆಗಳು ತಮ್ಮ ಪ್ರಮುಖ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಕುರಿತು ಮಾಹಿತಿ ನೀಡಿವೆ. ಅದರಲ್ಲಿ ಪ್ರಮುಖವಾಗಿ ಮೊಟೊರೊಲಾ, ಒನ್‌ಪ್ಲಸ್, ರಿಯಲ್‌ಮಿ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಹಾಗಿದ್ರೆ ಈ ತಿಂಗಳು ಬಿಡುಗಡೆಯಾಗಲಿರುವ ಸ್ಮಾರ್ಟ್‌ಫೋನ್‌ಗಳ ಕುರಿತು ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಯೋಣ.

ಈ ವಾರ ಅಂದರೆ ಜೂನ್ 17 ರಿಂದ 23 ರ ನಡುವೆ ಕೆಲವು ದೊಡ್ಡ ದೊಡ್ಡ ಕಂಪನಿಗಳ ಬಹುನಿರೀಕ್ಷಿತ ಹೊಸ ಸರಣಿಯ ಮೊಬೈಲ್‌ಗಳು ಬಿಡುಗಡೆಯಾಗಲಿವೆ. ನೀವೇನಾದರು ಪ್ರಮುಖ ಬ್ರಾಂಡ್‌ನ ಹೊಸ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಹುಡುಕುತ್ತಿದ್ದರೆ ನೀವು ಶೀಘ್ರದಲ್ಲೇ ಅವುಗಳನ್ನು ಖರೀದಿಸಬಹುದಾಗಿದೆ.

ಜೂನ್‌ ತಿಂಗಳಿನಲ್ಲಿ ಲಾಂಚ್ ಆಗಲಿವೆ ಈ ಪ್ರಮುಖ ಬ್ರಾಂಡ್‌ನ ಸ್ಮಾರ್ಟ್‌ಫೋನ್‌ಗಳು

Motorola, OnePlus ಮತ್ತು Realme ಯಂತಹ ಬ್ರ್ಯಾಂಡ್‌ಗಳ ಮುಂಬರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳು:
ಇದೇ ವಾರದಲ್ಲಿ ಅಂದರೆ ಜೂನ್ 17 ರಿಂದ 23 ರ ನಡುವೆ OnePlus ಸಂಸ್ಥೆ ತನ್ನ ಬಹು ನಿರೀಕ್ಷಿತ Nord CE 4 Lite ಅನ್ನು ಭಾರತೀಯ ಮಾರುಕಟ್ಟೆಗೆ ತರಲು ಸಿದ್ಧವಾಗಿದೆ ಎಂದು ಹೇಳಲಾಗುತ್ತಿ. ಮತ್ತೊಂದೆಡೆ ಟೆಕ್‌ ದೈತ್ಯ Motorola ತನ್ನ Motorola Edge 50 Ultra ಮತ್ತು Realme ಸಂಸ್ಥೆ ತನ್ನ Realme GT 6 ಮೊಬೈಲ್‌ ಅನ್ನು ಲಾಂಚ್ ಮಾಡಲಿವೆ. ನೀವೇನಾದರೂ ಈ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಬಯಿಸಿದ್ದರೆ ಒನ್ನೊಂದೇ ವಾರದಲ್ಲಿ ಖರೀದಿಸಬಹುದಾಗಿದೆ.

OnePlus Nord CE 4 Lite: ಇದು ಜೂನ್ 18 ರಂದು ಭಾರತದಲ್ಲಿ ಬಿಡುಗಡೆ ಮಾಡಲು ಸಂಸ್ಥೆ ನಿರ್ಧರಿಸಿದೆ. ಇದು ಮಧ್ಯಮ ಶ್ರೇಣಿಯ ಪ್ರಮುಖ ಸ್ಮಾರ್ಟ್‌ಫೋನ್ ಆಗಿದ್ದು ಸಂಸ್ಥೆ ಹಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ಈ ಸ್ಮಾರ್ಟ್‌ಫೋನ್‌ 20,000 ರೂ. ಒಳಗಿನ ಬೆಲೆ ಹೊಂದಿರಬಹುದು ಎಂದು ಹೇಳಲಾಗುತ್ತಿದೆ. ಈ ಸಾಧನವು ಸ್ನಾಪ್‌ಡ್ರಾಗನ್ 6 ಜನ್ 1 ಪ್ರೊಸೆಸರ್ ಮತ್ತು 8GB RAM ನಿಂದ ಚಾಲಿತವಾಗುವ ನಿರೀಕ್ಷೆಯಿದೆ. ಸಾಧನವು ಸೂಪರ್ ಫಾಸ್ಟ್ ಚಾರ್ಜಿಂಗ್ (ಸುಮಾರು 80W) ಜೊತೆಗೆ 5500mAh ಬ್ಯಾಟರಿಯನ್ನು ಹೊಂದಿರಬಹುದು ಎಂದು ಹೇಳಲಾಗುತ್ತಿದೆ.

Motorola Edge 50 Ultra: ಈ ಮೊಬೈಲ್ ಅನ್ನು ಕೂಡ ಭಾರತದಲ್ಲಿ ಜೂನ್ 18 ರಂದು ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಮೊಟೊರೊಲಾ ಒಂದೇ ದಿನ ತನ್ನ ಎರಡು ಡಿವೈಸ್‌ಗಳನ್ನು ಬಿಡುಗಡೆ ಮಾಡಲಿದೆ. ಇದು ಪ್ರಮುಖ ಸಾಧನವಾಗಿದೆ. ಇದನ್ನು ಕಂಪನಿಯು 50,000 ಬಜೆಟ್‌ನಲ್ಲಿ ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ.

ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8s Gen 3 ಪ್ರೊಸೆಸರ್‌ನಿಂದ ಚಾಲಿತವಾಗಲಿದೆ ಎಂದು ನಿರೀಕ್ಷಿಸಬಹುದು. ಛಾಯಾಗ್ರಹಣಕ್ಕಾಗಿ ಇದು 50MP ಪ್ರಾಥಮಿಕ ಶೂಟರ್ ಅನ್ನು ಪಡೆಯಬಹುದು ಮತ್ತು ಡಿಸ್‌ಪ್ಲೇ 144Hz ನ ರಿಫ್ರೆಶ್ ರೇಟ್ ಹೊಂದಿರುವ ಸಾಧ್ಯತೆ ಇದೆ. ಈ ಮೊಬೈಲ್ 4500mAh ಬ್ಯಾಟರಿಯೊಂದಿಗೆ 125W ವೇಗದ ಚಾರ್ಜಿಂಗ್ ಬೆಂಬಲ ಪಡೆಯಲಿದೆ.

Realme GT 6: ಪ್ರಸಿದ್ದ ಸ್ಮಾರ್ಟ್‌ಫೋನ್‌ ತಯಾರಕ ಸಂಸ್ಥೆಯಾಗಿರುವ Realme ತನ್ನ ಬಹುನಿರೀಕ್ಷಿತ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಜೂನ್ 20 ರಂದು ಭಾರತದಲ್ಲಿ ಪರಿಚಯಿಸಲಿದೆ. ಗೇಮಿಂಗ್ ಸಾಮರ್ಥ್ಯದೊಂದಿಗೆ realme GT 6 ಹೆಸರಿನ ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಲು ಸಿದ್ಧವಾಗಿದೆ. ಈ ಹ್ಯಾಂಡ್‌ಸೆಟ್ Qualcomm Snapdragon 8s Gen 3 ಪ್ರೊಸೆಸರ್‌ನಲ್ಲಿ ಚಾಲನೆಯಾಗಲಿದೆ ಎಂದು ಹೇಳಲಾಗುತ್ತಿದ್ದು, ಪ್ರಯಾಣದಲ್ಲಿರುವಾಗ ಆಟವಾಡಲು ಸಾಕಷ್ಟು ಪವರ್ ನೀಡುವ ಸಾಧ್ಯತೆ ಇದೆ.

ಮೊಬೈಲ್ ಫೋಟೋಗ್ರಫಿಗಾಗಿ ಈ ಸಾಧನವು ಮುಂಭಾಗದಲ್ಲಿ 50MP ಪ್ರಾಥಮಿಕ ಶೂಟರ್ ಜೊತೆಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ, ಸೆಲ್ಫಿಗಾಗಿ 32 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿರಲಿದೆ. ಜೊತೆಗೆ 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5500mAh ಬ್ಯಾಟರಿ ಹೊಂದಿರಬಹುದು ಎಂದು ಹೇಳಲಾಗುತ್ತಿದೆ.

Best Mobiles in India

English summary
Between June 17th and 23rd, the much awaited new series of mobiles from some of the biggest companies will be launched. If you are looking for a new series of smartphones from a leading brand, you will soon be able to buy them.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+