ವಾಟ್ಸಾಪ್‌ನಲ್ಲಿ ನೀವು ತಿಳಿದಿರಲೇಬೇಕಾದ ಪ್ರಮುಖ ಮೂರು ಫೀಚರ್ಸ್‌ಗಳು!
ವಾಟ್ಸಾಪ್ ವಿಶ್ವದಲ್ಲಿಯೇ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿದ್ದು, ಬಳಸಲು ಸಾಕಷ್ಟು ಅನುಕೂಲಕರವಾಗಿದೆ. ಈಗಾಗಲೇ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್ ಪರಿಚಯಿಸಿರುವ ವಾಟ್ಸಾಪ್ ಬಳಕೆದಾರರ ಸ್ನೇಹಿಯಾಗಿದೆ. ಅಲ್ಲದೆ ಫೇಸ್‌ಬುಕ್ ಒಡೆತನದ ಈ ಮೆಸೇಜಿಂಗ್ ಅಪ್ಲಿಕೇಶನ್ ಬಳಕೆದಾರರ ಅನುಭವವನ್ನು ಉತ್ತಮಗೊಳಿಸಲು ಇನ್ನು ಹೊಸ ಹೊಸ ಉಪಯುಕ್ತ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇನ್ನು ವಾಟ್ಸಾಪ್‌ನಲ್ಲಿ ಅನೇಕ ಫೀಚರ್ಸ್‌ಗಳಿದ್ದು, ವಾಟ್ಸಾಪ್ ಬಳಕೆಯನ್ನು ಸುಲಭಗೊಳಿಸಲು ಮತ್ತು ಹೆಚ್ಚು ಅನುಕೂಲಕರವಾಗಿಸಲು ನೀವು ತಿಳಿದಿರಲೇಬೇಕಾದ ಕೆಲವು ಫೀಚರ್ಸ್‌ಗಳ ಸಹ ಇವೆ.

ಹೌದು, ಜನಪ್ರಿಯ ಇನ್ಸಟಂಟ್ ಮೆಸೇಜಿಂಗ್ ಆಪ್ ವಾಟ್ಸಾಪ್ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಒಳಗೊಂಡಿದೆ. ಪ್ರತಿಯೊಂದು ಫೀಚರ್ಸ್ ಕೂಡ ಬಳಕೆದಾರನ ಅನುಭವವನ್ನು ಹೆಚ್ಚು ಹೆಚ್ಚು ಉತ್ತಮ ಪಡಿಸುತ್ತದೆ. ಇನ್ನು ಅನೇಕ ಫೀಚರ್ಸ್‌ಗಳ ಬಗ್ಗೆ ಬಳಕೆದಾರರಿಗೆ ತಿಳುವಳಿಕೆಯೇ ಇರುವುದಿಲ್ಲ. ಇನ್ನು ವಾಟ್ಸಾಪ್ ಬಳಸುವ ಪ್ರತಿಯೊಬ್ಬರು ತಿಳಿದಿರಲೇಬೇಕಾದ ಪ್ರಮುಖ ಮೂರು ಫೀಚರ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಮುಂದೆ ಓದಿರಿ.

ನಿಮ್ಮ ಪ್ರಮುಖ ಸಂದೇಶಗಳನ್ನ ಟ್ರ್ಯಾಕ್‌ನಲ್ಲಿ ಇರಿಸಿ.
ನಿಮ್ಮ ಮುಖ್ಯ ಮೆಸೇಜಿಂಗ್ ಅಪ್ಲಿಕೇಶನ್‌ನಂತೆ ನೀವು ವಾಟ್ಸಾಪ್ ಅನ್ನು ಬಳಸುತ್ತಿದ್ದರೆ, ಪ್ರತಿನಿತ್ಯ ಚಾಟ್ ಮಾಡುತ್ತಿದ್ದರೆ ನಿಮ್ಮ ಪ್ರಮುಖ ಮೆಸೇಜ್‌ಗಳನ್ನ ಟ್ರ್ಯಾಕ್ ಮಾಡಬಹುದಾಗಿದೆ. ವಾಟ್ಸಾಪ್ ಸ್ಟಾರ್ ಇರುವ ಮೆಸೇಜ್ ಫೀಚರ್ಸ್ ಅನ್ನು ಹೊಂದಿದ್ದು, ಇದರಿಂದ ನೀವು ಕೆಲವು ಸಂದೇಶಗಳನ್ನು ನಕ್ಷತ್ರಗಳೊಂದಿಗೆ ಗುರುತಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಇದರಿಂದ ನಿಮೆ ಪ್ರಮುಖವಾದ ಮೆಸೇಜ್‌ಗಳನ್ನ ಹುಡುಕುವಾಗ ಎಲ್ಲಾ ಚಾಟ್ ಗಳನ್ನ ಸ್ಕ್ರಾಲ್ ಮಾಡುವ ಬದಲು ಇವುಗಳನ್ನು ಸುಲಭವಾಗಿ ಹುಡುಕಲು ಇದು ನಿಮಗೆ ಸಹಾಯ ಮಾಡುತ್ತದೆ. ಸ್ಟಾರ್ ಹಾಕಿದ ಸಂದೇಶಗಳನ್ನು ಕಂಡುಹಿಡಿಯಲು ನೀವು ಅಪ್ಲಿಕೇಶನ್‌ನ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಬೇಕಾಗುತ್ತದೆ.

5MB ಗಿಂತ ದೊಡ್ಡದಾದ ಫೈಲ್‌ಗಳನ್ನು ಅಳಿಸುವುದು ಹೇಗೆ
ವಾಟ್ಸಾಪ್ ಫೈಲ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸಾಕಷ್ಟು ಜಾಗವನ್ನು ತೆಗೆದುಕೊಳ್ಳಬಹುದು, ಆದ್ದರಿಂದ 5MB ಗಿಂತ ದೊಡ್ಡದಾದ ಫೈಲ್‌ಗಳನ್ನು ತೆಗೆದುಹಾಕುವುದು ಉತ್ತಮ. ಇದಕ್ಕಾಗಿ, ನೀವು ಸೆಟ್ಟಿಂಗ್‌ಗಳಿಗೆ ಹೋಗಬೇಕು, ಸ್ಟೊರೇಜ್ ಮತ್ತು ಡೇಟಾವನ್ನು ಕ್ಲಿಕ್ ಮಾಡಿ, ನಂತರ ಸ್ಟೋರೇಜ್ ಮ್ಯಾನೇಜ್ ಕ್ಲಿಕ್ ಮಾಡಿ. ಇದರ ಅಡಿಯಲ್ಲಿ ನೀವು 5MB ಗಿಂತ ದೊಡ್ಡದಾದ ಫೈಲ್‌ಗಳನ್ನು ಆಯ್ಕೆ ಮಾಡುವ ಆಯ್ಕೆಯನ್ನು ನೋಡುತ್ತೀರಿ. ನೀವು ಇದನ್ನು ಟಚ್ ಮಾಡಿದಾಗ, ನೀವು ಎಲ್ಲಾ ದೊಡ್ಡ ಫೈಲ್‌ಗಳನ್ನು ನೋಡಲು ಸಾಧ್ಯವಾಗುತ್ತದೆ ಮತ್ತು ನೀವು ಎಲ್ಲವನ್ನೂ ಡಿಲೀಟ್ ಮಾಡಬಹುದಾಗಿದೆ. ಈ ಮೂಲಕ ಸ್ಟೋರೇಜ್ ಸ್ಪೇಸ್ ಅನ್ನು ವೇಗವಾಗಿ ಮುಕ್ತಗೊಳಿಸಲು ಇದು ಸಹಾಯಕವಾಗಲಿದೆ.

ಚಾಟ್ ಅನ್ನು ತೆರೆಯದೆ ವಾಟ್ಸಾಪ್ ವೆಬ್ ಸಂದೇಶಗಳನ್ನು ಹೇಗೆ ಓದುವುದು
ಇದಕ್ಕಾಗಿ ನೀವು ವೆಬ್‌ನಲ್ಲಿ ವಾಟ್ಸಾಪ್ ಅನ್ನು ಪ್ರವೇಶಿಸಬೇಕಾಗುತ್ತದೆ. ನೀವು ಸಂದೇಶವನ್ನು ಸ್ವೀಕರಿಸಿದರೆ ಮತ್ತು ಚಾಟ್ ತೆರೆಯಲು ಬಯಸದಿದ್ದರೆ, ನೀವು ಕರ್ಸರ್ ಅನ್ನು ಚಾಟ್‌ನಲ್ಲಿ ಇರಿಸಬೇಕು ಮತ್ತು ಅದರ ಮೇಲೆ ಕ್ಲಿಕ್ ಮಾಡಬಾರದು. ಕರ್ಸರ್ ಸಂದೇಶದಲ್ಲಿ ಸುಳಿದಾಡಲು ಅವಕಾಶ ನೀಡುವುದರಿಂದ ನಿಮಗೆ ಇತ್ತೀಚಿನ ಸಂದೇಶವನ್ನು ಸ್ವಲ್ಪ ಪಾಪ್-ಅಪ್ ಆಗಿ ತೋರಿಸುತ್ತದೆ ಮತ್ತು ಸಂದೇಶವನ್ನು ನಿಜವಾಗಿ ತೆರೆಯದೆಯೇ ನೀವು ವಿಷಯವನ್ನು ಓದಬಹುದು. ನೀವು ಪಠ್ಯವನ್ನು ಪರಿಶೀಲಿಸಿಲ್ಲ ಎಂದು ಸಂದೇಶ ಕಳುಹಿಸಿದ ವ್ಯಕ್ತಿಯು ತಿಳಿದುಕೊಳ್ಳಬೇಕು ಅಂದುಕೊಂಡವರಿಎ ಈ ಟ್ರಿಕ್ ತುಂಬಾ ಉಪಯುಕ್ತವಾಗಿದೆ.


Click it and Unblock the Notifications








