ಒಂದೇ ಕ್ಲಿಕ್‌ನಲ್ಲಿ ಪನೋರಮಾ ಫೋಟೋ!
ಕ್ಯಾಮೆರಾದಲ್ಲಿ ಪನೋರಮಾ ಶಾಟ್‌ಗಳನ್ನು ತೆಗೆಯಲು ಕಷ್ಟ ಎಂದು ಹೇಳುವ ಮಂದಿ ಇಲ್ಲಿದೆ ಒಂದು ಗುಡ್‌ನ್ಯೂಸ್. ಇನ್ನೂ ಮುಂದೆ ನಿಂತಲ್ಲೇ ನಿಂತು 360' ಡಿಗ್ರಿಯ ಪನೋರಮಾ ಚಿತ್ರವನ್ನು ಒಂದೇ ಕ್ಲಿಕ್‌ನಲ್ಲೆ ತೆಗೆಯಬಹುದು.
ಜಪಾನಿನ ರಿಕೋಹ್(Ricoh) ಕಂಪೆನಿ ಕೈಯಲ್ಲೇ ಪನೋರಮಾ ಫೋಟೋ ತೆಗೆಯಬಹುದಾದ ವಿಶ್ವದ ಪ್ರಪ್ರಥಮ ಹೊಸ ಗೋಲಾಕಾರದ ಕ್ಯಾಮೆರಾ(spherical camera) ರಿಕೋಹ್ ಥೆಹ್ಟಾವನ್ನು(Ricoh Theta) ಪರಿಚಯಿಸಿದೆ. ಈ ಕ್ಯಾಮೆರಾ ಎರಡು ಲೆನ್ಸ್ ಹೊಂದಿದ್ದು, ಫೋಟೋದ ಸುತ್ತಮುತ್ತ ಜೊತೆಗೆ ಮೇಲೆ ಕೆಳಗಿನ ದೃಶ್ಯವನ್ನು ಒಂದೇ ಕ್ಲಿಕ್‌ನಲ್ಲಿ ಸೆರೆಹಿಡಿಯುತ್ತದೆ.
ಬರ್ಲಿನ್‌ನಲ್ಲಿ ನಡೆಯುತ್ತಿರುವ ಐಎಫ್‌ಎ ಶೋನಲ್ಲಿ ಈ ಕ್ಯಾಮೆರಾ ಪ್ರದರ್ಶನಗೊಂಡಿದ್ದು ವೀಕ್ಷಕರ ಮೆಚ್ಚುಗಗೆ ಪಾತ್ರವಾಗಿದೆ. ಟಿ.ವಿ. ರಿಮೋಟ್‌ನಂತಿರುವ 95ಗ್ರಾ ತೂಕದ ಈ ಪುಟ್ಟ ಸಾಧನ ಬೆಲೆ 329 ಪೌಡ್( ಅಂದಾಜು 33,305 ರೂ).4 GB ಆಂತರಿಕ ಮೆಮೋರಿ, ಮೈಕ್ರೋಯುಎಸ್‌ಬಿ ಹೊಂದಿರುವ ಈ ಕ್ಯಾಮೆರಾ ಮುಂದಿನ ತಿಂಗಳಿನಲ್ಲಿ ಫ್ರಾನ್ಸ್,ಜರ್ಮನಿ,ಇಂಗ್ಲೆಂಡ್,ಅಮೆರಿಕದಲ್ಲಿ ಮಾರುಕಟ್ಟೆಗೆ ಬರಲಿದೆ.
ಹೀಗಾಗಿ ಈ ಕ್ಯಾಮೆರಾ ಹೇಗಿದೆ ಮತ್ತು ಇದರಲ್ಲಿ ಫೋಟೋ ತೆಗೆಯುವುದು ಹೇಗೆ ಎನ್ನುವುದಕ್ಕೆ ಇಲ್ಲಿ ಫೋಟೋ ಮತ್ತು ವೀಡಿಯೋವಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಒಂದೇ ಕ್ಲಿಕ್‌ನಲ್ಲಿ ಪನೋರಮಾ ಫೋಟೋ!
ರಿಕೋಹ್ ಥೆಹ್ಟಾ ಪನೋರಮಾ ಕ್ಯಾಮೆರಾ

ಒಂದೇ ಕ್ಲಿಕ್‌ನಲ್ಲಿ ಪನೋರಮಾ ಫೋಟೋ!
ರಿಕೋಹ್ ಥೆಹ್ಟಾ ಪನೋರಮಾ ಕ್ಯಾಮೆರಾ

ಒಂದೇ ಕ್ಲಿಕ್‌ನಲ್ಲಿ ಪನೋರಮಾ ಫೋಟೋ!
ರಿಕೋಹ್ ಥೆಹ್ಟಾ ಪನೋರಮಾ ಕ್ಯಾಮೆರಾ

ಒಂದೇ ಕ್ಲಿಕ್‌ನಲ್ಲಿ ಪನೋರಮಾ ಫೋಟೋ!
ರಿಕೋಹ್ ಥೆಹ್ಟಾ ಪನೋರಮಾ ಕ್ಯಾಮೆರಾ

ಒಂದೇ ಕ್ಲಿಕ್‌ನಲ್ಲಿ ಪನೋರಮಾ ಫೋಟೋ!
ರಿಕೋಹ್ ಥೆಹ್ಟಾ ಪನೋರಮಾ ಕ್ಯಾಮೆರಾ
ಒಂದೇ ಕ್ಲಿಕ್‌ನಲ್ಲಿ ಪನೋರಮಾ ಫೋಟೋ!
ರಿಕೋಹ್ ಥೆಹ್ಟಾ ಪನೋರಮಾ ಕ್ಯಾಮೆರಾ
ಒಂದೇ ಕ್ಲಿಕ್‌ನಲ್ಲಿ ಪನೋರಮಾ ಫೋಟೋ!
ರಿಕೋಹ್ ಥೆಹ್ಟಾ ಪನೋರಮಾ ಕ್ಯಾಮೆರಾ


Click it and Unblock the Notifications




