ಟೆಕ್ ಬ್ರೇಕಿಂಗ್!..ವಿಶ್ವದ ಮೊದಲ 'ಅನ್ ಹ್ಯಾಕಬಲ್' ಪ್ರೊಸೆಸರ್ ಅಭಿವೃದ್ಧಿ!
ಇತ್ತೀಚಿನ ವರದಿಗಳ ಪ್ರಕಾರ, ಅಮೆರಿಕಾದ ಮಿಚಿಗನ್ ವಿಶ್ವವಿದ್ಯಾಲಯದ ಸಂಶೋಧಕರ ಗುಂಪೊಂದು ವಿಶ್ವದ ಮೊದಲ 'ಅನ್ ಹ್ಯಾಕಬಲ್' ಪ್ರೊಸೆಸರ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿಕೊಂಡಿದೆ. ಟಾಡ್ ಆಸ್ಟಿನ್ ನೇತೃತ್ವದ ಮಿಚಿಗನ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು 'ಮೊರ್ಫೀಯಸ್ (MORPHEUS)' ಎಂದು ಕರೆಯಲ್ಪಡುವ ಹೊಸ ಹ್ಯಾಕ್ ಆಗದಂತಹ ಹೊದ ಪ್ರೊಸೆಸರ್ ಅಭಿವೃದ್ಧಿಪಡಿಸಿದ್ದು, ಇದು ಪ್ರಸ್ತುತ ಪ್ರೊಸೆಸರ್‌ಗಳ ರಕ್ಷಣಾ ಕಾರ್ಯವಿಧಾನಗಳಿಗಿಂತ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತದೆ ಎಂದು ತಿಳಿದುಬಂದಿದೆ.

ಹೌದು, ಟಾಡ್ ಆಸ್ಟಿನ್ ನೇತೃತ್ವದ ಮಿಚಿಗನ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು 'ಮೊರ್ಫೀಯಸ್' ಎಂದು ಕರೆಯಲ್ಪಡುವ ಪ್ರೊಸೆಸರ್‌ಗಳಿಗಾಗಿ ತನ್ನ ಹೊಸ ವಾಸ್ತುಶಿಲ್ಪವನ್ನು ಪ್ರಸ್ತುತಪಡಿಸಿದೆ. ಇದು ಅಳವಡಿಸಲಾಗಿರುವ ಸಾಧನಗಳ ಪ್ರೊಸೆಸರ್ ಮೇಲೆ ದಾಳಿಗಳನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದ್ದು, ಇದರ ಕ್ರಮಾವಳಿಗಳು ಹ್ಯಾಕರ್ ಅವರ ವಿರುದ್ಧ ಕಾರ್ಯನಿರ್ವಹಿಸಬಲ್ಲ ವೇಗಕ್ಕಿಂತ ವೇಗವಾಗಿ ಬದಲಾಗುತ್ತವೆ. ಆದ್ದರಿಂದ, ಈ ಪ್ರೊಸೆಸರ್ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
'ಮೊರ್ಫೀಯಸ್' ಎಂದು ಕರೆಯಲ್ಪಡುವ ಈ 'ಅನ್ ಹ್ಯಾಕಬಲ್' ಪ್ರೊಸೆಸರ್, ಡೇಟಾ ಎನ್‌ಕ್ರಿಪ್ಶನ್ ಕಾರ್ಯಾಚರಣೆಗಳನ್ನು ಹೆಚ್ಚು ವೇಗವಾಗಿ ಕಾರ್ಯಗತಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಕ್ರಮಾವಳಿಗಳು ಹ್ಯಾಕರ್ಗಳ ವಿರುದ್ಧ ಅವರರು ಕಾರ್ಯನಿರ್ವಹಿಸಬಹುದಾದ ವೇಗಕ್ಕಿಂತ ವೇಗವಾಗಿ ಬದಲಾಗುತ್ತವೆ. ಎಎಮ್‌ಡಿಯ ಪ್ರೊಸೆಸರ್‌ಗಳಲ್ಲಿ ಮತ್ತು ಅದರಲ್ಲೂ ವಿಶೇಷವಾಗಿ ಇಂಟೆಲ್‌ನಲ್ಲಿ ಪತ್ತೆಯಾದ ಅಪಾರ ಸಂಖ್ಯೆಯ ಗಂಭೀರ ದೋಷಗಳನ್ನು ಈ 'ಅನ್ ಹ್ಯಾಕಬಲ್' ಪ್ರೊಸೆಸರ್ ಪರಿಹರಿಸಲಿದೆ ಎಂದು ಹೇಳಲಾಗಿದೆ.

ಈ ಪ್ರೊಸೆಸರ್ ಹೊಂದಿರುವ ಸುರಕ್ಷತೆಯ ಕೀಲಿಯೆಂದರೆ, ಪ್ರೊಸೆಸರ್ ತನ್ನ ಕೋಡ್‌ನ ಕೆಲವು ಅಂಶಗಳನ್ನು "ಸ್ಪಷ್ಟೀಕರಿಸದ ಶಬ್ದಾರ್ಥ" (undefined semantics) ಎಂದು ಕರೆದಿದೆ. ಈ ಅಂಶವು ಪ್ರೋಗ್ರಾಂ ಕೋಡ್‌ನ ಸ್ಥಳ, ಗಾತ್ರ ಮತ್ತು ವಿಷಯವನ್ನು ಸರಳವಾಗಿ ಸೂಚಿಸುತ್ತದೆ. ಇದರಿಂದ ಯಾವುದೇ ಸಂದರ್ಭದಲ್ಲಿ, ಆಕ್ರಮಣಕಾರರು ಇದರಲ್ಲಿನ ಡೇಟಾವನ್ನು ಶಾಶ್ವತವಾಗಿ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಈ ಕೋಡ್‌ನ ಮರುಕ್ರಮಗೊಳಿಸುವಿಕೆ ಹ್ಯಾಕಿಂಗ್‌ನ ಆಧುನಿಕ ಮತ್ತು ಶಕ್ತಿಯುತ ತಂತ್ರಗಳಿಗಿಂತ ಹಲವಾರು ಪಟ್ಟು ಹೆಚ್ಚಾಗಿದೆ.
ಇನ್ನು ಈ ಪ್ರೊಸೆಸರ್ ವಿಶ್ವದ ಹ್ಯಾಕರ್ಸ್ ಬಳಸುವ ಅತ್ಯಂತ ಆಕ್ರಮಣಕಾರಿ ತಂತ್ರವನ್ನು ಸಹ ಜಯಿಸಿದೆ. ಆರ್ಐಎಸ್ಸಿ-ವಿ ಆರ್ಕಿಟೆಕ್ಚರ್ ಹೊಂದಿರುವ ಪ್ರೊಸೆಸರ್ನಲ್ಲಿ ಈ ಮಾರ್ಫಿಯಸ್ ಆರ್ಕಿಟೆಕ್ಚರ್ ಅನ್ನು ಸ್ಥಾಪಿಸಿ "ಕಂಟ್ರೋಲ್-ಫ್ಲೋ" ದಾಳಿಯ ಮೂಲಕ ಈ ಪ್ರೊಸೆಸರ್ ಅನ್ನು ಚೆಕ್ ಮಾಡಲಾಗಿದೆ. ಮಾರ್ಫಿಯಸ್ "ಕಂಟ್ರೋಲ್-ಫ್ಲೋ" ದಾಳಿಯನ್ನು ಸಂಪೂರ್ಣ ಯಶಸ್ಸಿನೊಂದಿಗೆ ಈ ಪ್ರೊಸೆಸರ್ ಜಯಿಸಿದೆ. ಅಂದಾದರೆ, ಇನ್ನು ಕೆಲವೇ ವರ್ಷಗಳಲ್ಲಿ ನಿಮ್ಮ ನಿಮ್ಮ ಸ್ಮಾರ್ಟ್ ಡಿವೈಸ್‌ಗಳು ಹ್ಯಾಕ್ ಆಗುವುದೇ ಇಲ್ಲ.


Click it and Unblock the Notifications








