ವಿಶ್ವದ ಅತ್ಯಂತ ಶಕ್ತಿಶಾಲಿ ಸೂಪರ್ ಕಂಪ್ಯೂಟರ್ ಯಾವುದು ಗೊತ್ತಾ..?

By GizBot Bureau

  ನಮಗೆಲ್ಲರಿಗೂ ತಿಳಿದಿರುವಂತೆ ಸೂಪರ್ ಕಂಪ್ಯೂಟರ್ ಗಳು ಮನುಷ್ಯನಿಂದ ಕಠಿಣವಾಗುವ ಮತ್ತು ಅಸಾಧ್ಯವೆನಿಸುವಂತ ಲೆಕ್ಕಾಚಾರಗಳನ್ನು ಮಾಡಲು ಬಳಸುವು ಒಂದು ಅದ್ಭುತ ಸಲಕರಣೆ. ಇತ್ತೀಚೆಗೆ ಬಂದ ವರದಿಗಳ ಪ್ರಕಾರ ಯುಎಸ್ ಮತ್ತೆ ವಿಶ್ವದ ಅತ್ಯಂತ ಶಕ್ತಿಯುತ ಸೂಪರ್ ಕಂಪ್ಯೂಟರ್ ನ್ನು ತಯಾರಿಸಿ ಗೆದ್ದು ಬೀಗುತ್ತಿದೆ.

  ಜಿಯೋ ಎದುರು ಮತ್ತೊಂದು ಬಿಗ್ ಆಫರ್ ಘೋಷಿಸಿದ ಬಿಎಸ್ಎನ್ಎಲ್...ಮೊಬೈಲ್ ನಲ್ಲಿಯೇ ಪುಟ್ಬಾಲ್ ನೋಡಿ..!

  ಸಮಯ ಹಿಡಿಯುವ ಲೆಕ್ಕಾಚಾರಗಳು ಮತ್ತು ಕಠಿಣವಾದ ಸಮಸ್ಯೆಗಳ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸೂಪರ್ ಕಂಪ್ಯೂಟರ್ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಇನ್ನಷ್ಟು ಎಂಬಂತೆ ಪ್ರಸಿದ್ಧಿಯಾಗುತ್ತಿದೆ ಮತ್ತು ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹೊರಬರುತ್ತಿದೆ.

  ವಿಶ್ವದ ಅತ್ಯಂತ ಶಕ್ತಿಶಾಲಿ ಸೂಪರ್ ಕಂಪ್ಯೂಟರ್ ಯಾವುದು ಗೊತ್ತಾ..?

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಸುಮಿತ್ ನ್ಯೂ ಸೂಪರ್ ಕಂಪ್ಯೂಟರ್

  ಇದುವರೆಗೂ ವಿಶ್ವದ ಅತೀ ವೇಗದ ಮತ್ತು ಶಕ್ತಿಯಾಲಿಯಾದ ಸೂಪರ್ ಕಂಪ್ಯೂಟರ್ ತಯಾರಿಕೆ ಮಾಡಿದ ಹೆಗ್ಗಳಿಕೆ ಚೀನಾ ದೇಶಕ್ಕೆ ಇತ್ತು. ಆದರೆ ಈಗ ಹೊಸ ನಾಯಕನೊಬ್ಬ ಹೊರ ಹೊಮ್ಮಿದ್ದಾನೆ.ಅದುವೇ "ಸುಮಿತ್". ವಿಶ್ವದ ಅತ್ಯಂತ ಶಕ್ತಿಶಾಲಿಯಾದ ಮತ್ತು ವೇಗವಾದ ಸೂಪರ್ ಕಂಪ್ಯೂಟರ್ ಇದಾಗಿದೆ. ಐಬಿಎಮ್ ಮತ್ತು ಯುಸ್ ನ ಶಕ್ತಿ ಕೇಂದ್ರ ORNL (Oak Ridge National Laboratory) ಸಹಯೋಗದೊಂದಿಗೆ ಈ ವಾರ " ಸುಮಿತ್" ಅನ್ನು ಅನಾವರಣಗೊಳಿಸಲಾಗಿದೆ.

  ಅತ್ಯಂತ ವೇಗವಾದ ಸೂಪರ್ ಕಂಪ್ಯೂಟರ್ ಇದು..

  ಇದರ ಲೆಕ್ಕಾಚಾರ ಮಾಡುವ ಶಕ್ತಿ ಅದೆಷ್ಟು ಬಲಶಾಲಿಯಾಗಿದೆ ಎಂದರೆ ಕಳೆದ ಬಾರಿಯ 500 ಶಕ್ತಿಯುತ ಸೂಪರ್ ಕಂಪ್ಯೂಟರ್ ಗಿಂತ ಎರಡು ಪಟ್ಟು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ. ಐಬಿಎಮ್ ಮತ್ತು ORNL ತಿಳಿಸುವಂತೆ ಸುಮಿತ್ ಸೂಪರ್ ಕಂಪ್ಯೂಟರ್ 200 ಕ್ವಾಡ್ರಿಲಿಯನ್ (200 ರ ಮುಂದೆ 15 ಸೊನ್ನೆಗಳನ್ನು ಹಾಕಿದರೆ ಎಷ್ಟೋ ಅಷ್ಟು) ಲೆಕ್ಕವನ್ನು ಕೇವಲ ಒಂದು ಸೆಕೆಂಡ್ ನಲ್ಲಿ ಮಾಡುವ ತಾಕತ್ತನ್ನು ಈ ಸೂಪರ್ ಕಂಪ್ಯೂಟರ್ ಹೊಂದಿದೆಯಂತೆ.
  ಇದರ ನಿಮ್ರಾತೃಗಳು ತಿಳಿಸುವಂತೆ, ಈ ಎಲ್ಲಾ ಕಂಪ್ಯೂಟರ್ ನ ಶಕ್ತಿಯನ್ನು ನಮ್ಮ ನಿತ್ಯ ಜೀವನದ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಟೆಕ್ನಿಕ್ ಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಡೆವಲಪ್ ಮಾಡಲಾಗಿದೆಯಂತೆ.

  ಕನಸಿನ ಹಾರ್ಡ್ ವೇರ್ ಈ ಸೂಪರ್ ಮೆಷಿನ್ ನಲ್ಲಿದೆ

  ಇಷ್ಟೊಂದು ದೊಡ್ಡ ಮಟ್ಟದ ತಾಕತ್ತು ಈ ಸೂಪರ್ ಕಂಪ್ಯೂಟರ್ ಗೆ ಬಂದಿರುವುದಾದರೂ ಎಲ್ಲಿಂದ ಎಂದು ಯೋಚಿಸಿದರೆ ಅದಕ್ಕಿರುವ ಹಾರ್ಡ್ ವೇರ್ ಗಳೇ ಕಾರಣ. ಸುಮಿತ್ 4608 ಸರ್ವರ್ ಗಳನ್ನು ಹೊಂದಿದ್ದು, ಪ್ರತಿಯೊಂದು 2 IBM Power9 ಪ್ರೊಸೆಸರ್ ಗಳು ಮತ್ತು ಪ್ರತಿಯೊಂದು 22 ಕ್ರೋರ್ಸ್ ಮತ್ತು 6 Nvidia Tesla V100 GPUs ನ್ನು ಹೊಂದಿದೆ. ಇದೆಲ್ಲವೂ ಒಟ್ಟು ಸೇರಿ, ಇದಕ್ಕೆ 10 ಪೆಟಾಬೈಟ್ ನಷ್ಟು ಮೆಮೊರಿ ಇದೆ.
  ಇದರ ಕಾರ್ಯಗಳಿಗಾಗಿ ಸುಮಿತ್ 15 ಸಾವಿರ ಲೀಟರ್ ನಷ್ಟು ನೀರನ್ನು ಪ್ರತಿಗಂಟೆಗೆ ಬಳಕೆ ಮಾಡುತ್ತೆ. ಆ ಮೂಲಕ ಇದು ತಣ್ಣಗಾಗುತ್ತೆ. ಇದರ ಒಟ್ಟು ಸಿಸ್ಟಮ್ ಎರಡು ಟೆನ್ನಿಸ್ ಕೋರ್ಟ್ ನಷ್ಟು ಜಾಗವನ್ನು ಒಳಗೊಂಡಿದೆ.

  ಯುಎಸ್ ಗೆ ಒಲಿದು ಬಂತು ಟಾಪ್ ಸೂಪರ್ ಕಂಪ್ಯೂಟರ್ ಹೊಂದಿರುವ ಪಟ್ಟ

  ಅಧಿಕೃತವಾಗಿ ಅಲ್ಲದಿದ್ದರೂ, ಸುಮಿತ್ ಸದ್ಯ ಟಾಪ್ 500 ಸೂಪರ್ ಕಂಪ್ಯೂಟರ್ ಗಳಿಗೆ ಹೊಸ ನಾಯಕನಾಗಲಿದ್ದಾನೆ. ವೈಜ್ಞಾನಿಕ ಕಂಪ್ಯೂಟಿಂಗ್ ನಲ್ಲಿ ಅಮೇರಿಕಾಕ್ಕೆ ತನ್ನ ಮೊದಲಿನ ಸ್ಥಾನವನ್ನು ಇದು ತಂದುಕೊಡಲಿದೆ.ಕಳೆದ 2012 ರಿಂದ ಈ ಪಟ್ಟವನ್ನು ಚೈನೀಸ್ ಸಿಸ್ಟಮ್ ಗಳು ಮತ್ತು ಏಷಿಯನ್ ದೇಶಗಳು ಪಡೆದುಕೊಂಡಿದ್ದವು.
  ಇದೊಂದು ಮಹತ್ವದ ಬೆಳವಣಿಗೆಯಾಗಿದ್ದು, ಮುಂದಿನ ದಿನಗಳಲ್ಲಿ ಕಂಪ್ಯೂಟಿಂಗ್ ಕೆಪಾಸಿಟಿಯು ಜಗತ್ತಿನಲ್ಲಿ ಇನ್ನಷ್ಟು ಹೆಚ್ಚಲಿದೆ ಎಂಬುದರ ಸೂಚ್ಯಂಕವಾಗಿದೆ. ನೀವೇನಂತೀರಿ. ನಿಮ್ಮ ಅಭಿಪ್ರಾಯಗಳನ್ನೂ ಕಮೆಂಟ್ ಮಾಡಿ ಹಂಚಿಕೊಳ್ಳಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  The World’s Most Powerful Supercomputer Is An Pure Beast. To know more this visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more